UP Horror: ಸರ್ಕಾರಿ ನೌಕರಿ ಆಸೆಗೆ ಗೆಳೆಯನ ಜೊತೆ ಸೇರಿ ಪತಿಯನ್ನೇ ಕೊಂದ ಪತ್ನಿ!
ಮೀರತ್ ಹತ್ಯೆ ಪಕ್ರರಣ ಮಾಸುವ ಮುನ್ನವೇ ಅಂತಹುದೇ ಪ್ರಕರಣ ಬೆಳಕಿಗೆ ಬಂದಿದೆ. ಬಿಜ್ನೋರ್‌ನಲ್ಲಿ ನಡೆದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಪತ್ನಿಯೇ ಪತಿಯನ್ನು ಕೊಲೆ ಮಾಡಿದ್ದಾಳೆ. ಉತ್ತರ ಪ್ರದೇಶದ ನಜಿಬಾಬಾದ್ ಪೊಲೀಸ್ ಠಾಣೆ ಪ್ರದೇಶದಲ್ಲಿ ಈ ಘಟನೆ ನಡೆದಿದೆ.


ಲಖನೌ: ಮೀರತ್ ಹತ್ಯೆ ಪಕ್ರರಣ ಮಾಸುವ ಮುನ್ನವೇ ಅಂತಹುದೇ ಪ್ರಕರಣ ಬೆಳಕಿಗೆ ಬಂದಿದೆ. ಬಿಜ್ನೋರ್‌ನಲ್ಲಿ ನಡೆದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಪತ್ನಿಯೇ ಪತಿಯನ್ನು ಕೊಲೆ ಮಾಡಿದ್ದಾಳೆ. ಉತ್ತರ ಪ್ರದೇಶದ (UP Horror) ನಜಿಬಾಬಾದ್ ಪೊಲೀಸ್ ಠಾಣೆ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ರೈಲ್ವೆ ತಂತ್ರಜ್ಞ ದೀಪಕ್ ಕುಮಾರ್ ಎಂದು ಗುರುತಿಸಲಾಗಿದ್ದು, ಆತನ ಪತ್ನಿ ಶಿವಾನಿಯೇ ಕೊಲೆ ಮಾಡಿಸಿದ್ದಾಳೆ. ಆಕೆ ತನ್ನ ಪತಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ಎಲ್ಲರ ಬಳಿ ಹೇಳಿದ್ದಳು. ಆದರೆ ಪೊಲೀಸ್ ತನಿಖೆಯ ನಂತರ ನಿಜವಾದ ಆರೋಪಿ ಯಾರೆಂದು ತಿಳಿದು ಬಂದಿದೆ.
ಕಳೆದ ಕೆಲವು ದಿನಗಳ ಹಿಂದೆ ದೀಪಕ್ ಕುಮಾರ್ ತನ್ನ ನಜೀಬಾಬಾದ್ ಮನೆಯಲ್ಲಿ ಪೂಜೆಯ ಸಮಯದಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದರು ಎಂದು ಅವರ ಪತ್ನಿ ಹೃದಯಾಘಾತ ಎಂದು ಕುಟುಂಬಕ್ಕೆ ಮಾಹಿತಿ ನೀಡಿದ್ದರು. ದೀಪಕ್ ಕುಮಾರ್ ಸರ್ಕಾರಿ ಉದ್ಯೋಗಿಯಾಗಿದ್ದರಿಂದ, ಅವರ ಕುಟುಂಬವು ಅಂತಿಮ ವಿಧಿವಿಧಾನಗಳನ್ನು ನಡೆಸುವ ಮೊದಲು ಶವಪರೀಕ್ಷೆಗೆ ಒತ್ತಾಯಿಸಿತು. ಏಪ್ರಿಲ್ 6 ರಂದು ನಡೆದ ಮರಣೋತ್ತರ ಪರೀಕ್ಷೆಯ ವರದಿಯು ಅವರ ಅನುಮಾನಗಳನ್ನು ದೃಢಪಡಿಸಿತು. ಮರಣೋತ್ತರ ಪರೀಕ್ಷೆಯಲ್ಲಿ ದೀಪಕ್ ಅವರನ್ನು ಕತ್ತು ಹಿಸುಕಿ ಕೊಲ್ಲಲಾಗಿದೆ ಎಂದು ತಿಳಿದು ಬಂದಿದೆ. ನಂತರ, ದೀಪಕ್ ಕುಟುಂಬವು ಶಿವಾನಿ ಮತ್ತು ಅಪರಿಚಿತ ವ್ಯಕ್ತಿಯ ವಿರುದ್ಧ ಕೊಲೆ ದೂರು ದಾಖಲಿಸಿದ್ದು, ಅವರನ್ನು ಬಂಧಿಸಲಾಗಿದೆ.
ಶಿವಾನಿ, ಅನುಕಂಪದ ಆಧಾರದ ಮೇಲೆ ನೀಡುವ ನೌಕರಿಯನ್ನು ಗಿಟ್ಟಿಸಿಕೊಳ್ಳಲು ಕೊಲೆ ಮಾಡಿದ್ದಾಳೆ ಎಂದು ಊಹಿಸಲಾಗಿದೆ. ಘಟನೆ ನಡೆದ ದಿನ, ಏಪ್ರಿಲ್ 4 ರಂದು, ಶಿವಾನಿ ತನ್ನ ಸೋದರ ಮಾವ ಪಿಯೂಷ್‌ಗೆ ಕರೆ ಮಾಡಿ, ದೀಪಕ್‌ಗೆ ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ ಎಂದು ಹೇಳಿದ್ದಳು. ಪಿಯೂಷ್ ಬಂದಾಗ ದೀಪಕ್ ಆಗಲೇ ಮೃತಪಟ್ಟಿದ್ದರು. ಮರಣೋತ್ತರ ಪರೀಕ್ಷೆ ನಡೆಸಲು ಶಿವಾನಿ ನಿರಾಕರಿಸಿದ್ದು ಪಿಯೂಷ್‌ನ ಅನುಮಾನಗಳನ್ನು ಮತ್ತಷ್ಟು ಹುಟ್ಟುಹಾಕಿತು, ಇದರಿಂದಾಗಿ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ದೀಪಕ್ ಸಹೋದರ ಹೇಳುವಂತೆ ಶಿವಾನಿ ಮತ್ತು ಆಕೆಯ ಸ್ನೇಹಿತ ತನ್ನ ಸಹೋದರನನ್ನು ಕೊಲೆ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Meerut murder case: ಪತಿ ಕೊಲೆ ಆರೋಪದಲ್ಲಿ ಜೈಲಿನಲ್ಲಿರುವ ಮುಸ್ಕಾನ್ ಈಗ ಗರ್ಭಿಣಿ! ವೈದ್ಯರು ಹೇಳಿದ್ದೇನು?
ಶಿವಾನಿ ನಿರಂತರವಾಗಿ ತಮ್ಮ ವಿರುದ್ಧ ದ್ವೇಷ ಸಾಧಿಸುತ್ತಿದ್ದಳು ಎಂದು ಪಿಯೂಷ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. "ಅವಳು ತನ್ನ ಅತ್ತೆಯನ್ನು ದೈಹಿಕವಾಗಿ ನಿಂದಿಸುತ್ತಿದ್ದಳು" ಎಂದು ಆತ ಹೇಳಿದ್ದಾನೆ. ಸದ್ಯ ಪೊಲೀಸರು ಆಕೆಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.