ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Murder Case: ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಂದು ಮೃತದೇಹವನ್ನು ಚರಂಡಿಗೆ ಎಸೆದ ಯುಟ್ಯೂಬರ್

Crime News: ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ಯುವಕನೊಂದಿಗೆ ಸೇರಿ ಮಹಿಳೆ ತನ್ನ ಗಂಡನನ್ನೇ ಕೊಂದಿರುವ ಘಟನೆ ಹರಿಯಾಣದ ಹಿಸಾರ್‌ನಲ್ಲಿ ನಡೆದಿದೆ. 32 ವರ್ಷದ ರವೀನಾ ಮತ್ತು ಸುರೇಶ್ ಸೇರಿ ಪ್ರವೀಣ್‌ನನ್ನು ಕೊಂದು ಇದೀಗ ಜೈಲು ಪಾಲಾಗಿದ್ದಾರೆ.

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಂದು ಚರಂಡಿಗೆ ಎಸೆದ ಯುಟ್ಯೂಬರ್

ಚಂಡೀಗಢ: ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಪರಿಚಯವಾದ ಯುವಕನೊಂದಿಗೆ ಸೇರಿ ಮಹಿಳೆ ತನ್ನ ಗಂಡನನ್ನೇ ಕೊಂದಿರುವ (Murder Case) ಘಟನೆ ಹರಿಯಾಣದ (Haryana) ಹಿಸಾರ್‌ನಲ್ಲಿ ನಡೆದಿದೆ. 32 ವರ್ಷದ ರವೀನಾ ಮತ್ತು ಸುರೇಶ್ ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿದ್ದರು. ಬಳಿಕ ಪ್ರೇಮ್‌ನಗರದಲ್ಲಿ ಒಟ್ಟಿಗೆ ಸಣ್ಣ ಸಣ್ಣ ವಿಡಿಯೊಗಳನ್ನು ಮಾಡಲು ಪ್ರಾರಂಭಿಸಿದರು. ಕ್ರಮೇಣ ಇವರ ನಡುವೆ ಪ್ರೀತಿ ಹುಟ್ಟಿಕೊಂಡಿತ್ತು. ಇಬ್ಬರೂ ಆತ್ಮೀಯ ಕ್ಷಣದಲ್ಲಿ ತೊಡಗಿದ್ದಾಗ ಅಲ್ಲಿಗೆ ಬಂದ ರವೀನಾಳ ಪತಿ ಪ್ರವೀಣ್ ಅವರೊಂದಿಗೆ ಜಗಳವಾಡಿದ್ದಾನೆ. ಆಗ ರವೀನಾ ಮತ್ತು ಸುರೇಶ್ ಸೇರಿ ಆತನ ಕತ್ತು ಹಿಸುಕಿ ಕೊಂದು ಹಾಕಿದ್ದಾರೆ.

ಪತಿ ಪ್ರವೀಣ್ ಮತ್ತು ಅವರ ಕುಟುಂಬದವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದರೂ ಸುರೇಶನ ಜತೆ ಸೇರಿ ರವೀನಾ ವಿಡಿಯೊಗಳನ್ನು ಮಾಡುತ್ತಿದ್ದಳು. ಅವರಿಬ್ಬರು ಸುಮಾರು ಒಂದೂವರೆ ವರ್ಷಗಳಿಂದ ಒಟ್ಟಿಗೆ ವಿಡಿಯೊ ಮಾಡುತ್ತಿದ್ದರು. ಜತೆಗೆ ಡ್ಯಾನ್ಸ್‌ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡುತ್ತಿದ್ದರು.



ಇನ್‌ಸ್ಟಾಗ್ರಾಮ್‌ನಲ್ಲಿ 34,000ಕ್ಕೂ ಹೆಚ್ಚು ಅನುಯಾಯಿಗಳನ್ನು ಗಳಿಸಿದ್ದ ಅವರ ಯುಟ್ಯೂಬ್ ವಿಡಿಯೊ ಸರಣಿಯಲ್ಲಿ ಇತರ ಕಲಾವಿದರು ಕೂಡ ಇದ್ದರು. ರೀಲ್ಸ್ ಮಾಡುವ ಗೀಳನ್ನು ಹೊಂದಿದ್ದ ರವೀನಾಗೆ ಕುಟುಂಬದವರು ತೀವ್ರವಾದ ಆಕ್ಷೇಪ ವ್ಯಕ್ತಪಡಿಸುತ್ತಿದ್ದರು. ಈ ವಿಷಯ ಸದಾ ಪತಿ ಪತ್ನಿಯರ ನಡುವೆ ಜಗಳಕ್ಕೆ ಕಾರಣವಾಗುತ್ತಿತ್ತು.

ಮಾರ್ಚ್ 25ರಂದು ಸುರೇಶ್ ಜತೆಗೆ ರವೀನಾ ಆತ್ಮೀಯ ಕ್ಷಣದಲ್ಲಿ ತೊಡಗಿದ್ದಾಗ ಅಲ್ಲಿಗೆ ಬಂದ ಪ್ರವೀಣ್ ಅವರಿಬ್ಬರೊಂದಿಗೆ ಜಗಳವಾಡಿದ್ದಾನೆ. ಅನಂತರ ರವೀನಾ ತನ್ನ ದುಪಟ್ಟಾದಿಂದಲೇ ಪ್ರವೀಣ್ ನ ಕತ್ತು ಹಿಸುಕಿ ಕೊಂದಿದ್ದಾಳೆ. ಪ್ರವೀಣ್ ಎಲ್ಲಿದ್ದಾನೆಂದು ಕುಟುಂಬ ಸದಸ್ಯರು ವಿಚಾರಿಸಿದಾಗ ತನಗೆ ಏನೂ ಗೊತ್ತಿಲ್ಲ ಎಂಬಂತೆ ನಟಿಸಿದ್ದಳು.

ಅದೇ ದಿನ ಮಧ್ಯರಾತ್ರಿ ಸುರೇಶ್ ಮತ್ತು ರವೀನಾ ಸೇರಿ ಪ್ರವೀಣ್ ನ ಶವವನ್ನು ಬೈಕ್‌ನಲ್ಲಿ ತೆಗೆದುಕೊಂಡು ಹೋಗಿ ಮನೆಯಿಂದ ಸುಮಾರು 6 ಕಿ.ಮೀ. ದೂರದಲ್ಲಿರುವ ಚರಂಡಿಗೆ ಎಸೆದಿದ್ದಾರೆ ಎನ್ನಲಾಗಿದೆ. ಮಾರ್ಚ್ 28ರಂದು ಪ್ರವೀಣನ ಕೊಳೆತ ಶವವನ್ನು ಪೊಲೀಸರು ಪತ್ತೆ ಹಚ್ಚಿದ್ದರು.

ಇದನ್ನೂ ಓದಿ: Soil collapse: ಒಳ ಚರಂಡಿ ಕಾಮಗಾರಿ ವೇಳೆ ಮಣ್ಣು ಕುಸಿದು ಇಬ್ಬರು ಕಾರ್ಮಿಕರ ಸಾವು

ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದ ವೇಳೆ ಸಿಸಿಟಿವಿ ದೃಶ್ಯಗಳಲ್ಲಿ ಹೆಲ್ಮೆಟ್ ಧರಿಸಿ ಬಂದ ವ್ಯಕ್ತಿಯೊಂದಿಗೆ ರವೀನಾ ಮುಖ ಮುಚ್ಚಿಕೊಂಡು ಹೋಗುತ್ತಿರುವುದು ಕಂಡು ಬಂದಿತ್ತು. ಸುಮಾರು ಎರಡು ಗಂಟೆಗಳ ಅನಂತರ ರವೀನಾ ಅದೇ ಸವಾರನೊಂದಿಗೆ ಬೈಕ್‌ನಲ್ಲಿ ಮನೆಗೆ ಮರಳಿರುವುದೂ ಗೊತ್ತಾಗಿತ್ತು. ಸದ್ಯ ರವೀನಾ ಮತ್ತು ಸುರೇಶ್ ಇಬ್ಬರನ್ನೂ ಬಂಧಿಸಲಾಗಿದೆ. ರವೀನಾ ಮತ್ತು ಪ್ರವೀಣ್ ಅವರ ಆರು ವರ್ಷದ ಮಗನನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.