Moharram: ಬೆಂಗಳೂರಿನ ಕೆಲವೆಡೆ ರಸ್ತೆ ಬಂದ್! ಪರ್ಯಾಯ ಮಾರ್ಗದ ಮಾಹಿತಿ ಇಲ್ಲಿದೆ
ಭಾನುವಾರ ಮೊಹರಂ ಹಬ್ಬದ ಹಿನ್ನಲೆಯಲ್ಲಿ ಮಧ್ಯಾಹ್ನ 11 ಗಂಟೆಯಿಂದ ಸಂಜೆ 05-30 ಗಂಟೆಯವರೆಗೆ ಬೆಂಗಳೂರು (bangaluru) ನಗರದಲ್ಲಿ ಮೂರು ರಸ್ತೆಗಳಲ್ಲಿ ಸಂಚಾರ ಬದಲಾವಣೆ ಮಾಡಲಾಗಿದೆ. ಈ ಬಗ್ಗೆ ಬೆಂಗಳೂರು ನಗರ ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.


ಬೆಂಗಳೂರು: ಭಾನುವಾರ ಮೊಹರಂ (Moharram) ಹಬ್ಬದ ಹಿನ್ನಲೆಯಲ್ಲಿ ಮಧ್ಯಾಹ್ನ 11 ಗಂಟೆಯಿಂದ ಸಂಜೆ 05-30 ಗಂಟೆಯವರೆಗೆ ಬೆಂಗಳೂರು (bangaluru) ನಗರದಲ್ಲಿ ಮೂರು ರಸ್ತೆಗಳಲ್ಲಿ ಸಂಚಾರ ಬದಲಾವಣೆ ಮಾಡಲಾಗಿದೆ. ಈ ಬಗ್ಗೆ ಬೆಂಗಳೂರು ನಗರ ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ. ಬ್ರಿಗೇಡ್ ರಸ್ತೆ, ರಿಚ್ಮಂಡ್ ರಸ್ತೆ ಮೂಲಕ ಹೊಸೂರು ರಸ್ತೆ ಶೂಲೆ ಜಂಕ್ಷನ್ ವರೆಗೆ ಮಾರ್ಗ ಬದಲಾಗಲಿದೆ ಎಂದು ನಗರ ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.
ಬ್ರಿಗೇಡ್ ರಸ್ತೆ, ರಿಚ್ಮಂಡ್ ರಸ್ತೆ ಮೂಲಕ ಹೊಸೂರು ರಸ್ತೆ ಶೂಲೆ ಜಂಕ್ಷನ್ ವರೆಗೆ ಮಾರ್ಗ ಬದಲಾವಣೆ ಆಗಲಿದೆ. ಪರ್ಯಾಯವಾಗಿ ಹಳೇ ಮದ್ರಾಸ್ ರಸ್ತೆ, ವುಡ್ ಸ್ಟ್ರೀಟ್, ಟೇಟ್ ಲೇನ್, ರಿಚ್ಮಂಡ್ ಜಂಕ್ಷನ್, ಶಾಂತಿನಗರ ಜಂಕ್ಷನ್, ನಂಜಪ್ಪ ಸರ್ಕಲ್ ಮೂಲಕ ಹೊಸೂರು ರಸ್ತೆಗೆ ಸಂಚರಿಸಬಹುದು ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.
ಹೊಸೂರು ರಸ್ತೆಯ ಆಡುಗೋಡಿ ಕಡೆಯಿಂದ ಬರುವ ವಾಹನಗಳು. ಆನೇಪಾಳ್ಯ ಜಂಕ್ಷನ್, ಸಿಮೆಟ್ರಿ ಕ್ರಾಸ್, ಬರ್ಲಿ ಸ್ಟ್ರೀಟ್, ಲಾಂಗ್ ಪೋರ್ಡ್ ರಸ್ತೆ, ನಂಜಪ್ಪ ಸರ್ಕಲ್, ರಿಚ್ಮಂಡ್ ರಸ್ತೆ ಮೂಲಕ ಸಂಚಾರಿಸಬಹುದಾಗಿದೆ. ಹೊಸೂರು ರಸ್ತೆ ಕಡೆಯಿಂದ ಬರುವ ಭಾರಿ ವಾಹನ ಸವಾರರು ಆಡುಗೋಡಿ ಜಂಕ್ಷನ್, ಮೈಕೋ ಜಂಕ್ಷನ್, 8ನೇ ಮೈನ್, ವಿಲ್ಸನ್ ಗಾರ್ಡನ್ ಮುಖ್ಯ ರಸ್ತೆ, ಸಿದ್ದಯ್ಯ ರಸ್ತೆಗೆ ಬಂದು ಮುಂದಕ್ಕೆ ಸಂಚರಿಸುವುದು.
ಹೆಣ್ಣೂರು ಜಂಕ್ಷನ್‌ನಲ್ಲಿ ಬಿಎಂಆರ್‌ಸಿಎಲ್ ಕಾಮಗಾರಿಯಿಂದಾಗಿ, ಹೊರಮಾವು ಜಂಕ್ಷನ್ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ. ಕಾಲಾಮಂದಿರ ಹತ್ತಿರ ಬಿಎಂಆರ್‌ಸಿಎಲ್ ಕಾಮಗಾರಿಯಿಂದಾಗಿ, ಕಾಡುಬಿಸನಹಳ್ಳಿ ಹೊರ ವರ್ತುಲ ರಸ್ತೆಯ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ. ಮೇಡಹಳ್ಳಿ ಜಂಕ್ಷನ್‌ನಲ್ಲಿ ಹಬ್ಬದ ಕಾರಣ ಹೊಸಕೋಟೆ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ.
ಈ ಸುದ್ದಿಯನ್ನೂ ಓದಿ: Karnataka Rains: ಕದ್ರಾ-ಕೊಡಸಳ್ಳಿ ಮಾರ್ಗದಲ್ಲಿ ಗುಡ್ಡ ಕುಸಿತ; ರಸ್ತೆ ಸಂಚಾರ ಸ್ಥಗಿತ
ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ರಾಜ್ಯಾದ್ಯಂತ ಪೊಲೀಸ್ ಇಲಾಖೆ ಬಿಗಿ ಭದ್ರತೆಯನ್ನು ಒದಗಿಸಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಈ ಆದೇಶ ಜುಲೈ 7 ರವರೆಗೆ ಇರಲಿದೆ.