ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಇಂಗ್ಲೆಂಡ್‌ ವಿರುದ್ಧ ಕೇವಲ 52 ಎಸೆತಗಳಲ್ಲಿಯೇ ಸೆಂಚುರಿ ಬಾರಿಸಿದ ವೈಭವ್‌ ಸೂರ್ಯವಂಶಿ!

ಇಂಗ್ಲೆಂಡ್ ವಿರುದ್ಧ ಶನಿವಾರ ನಡೆದಿದ್ದ ನಾಲ್ಕನೇ ಅಂಡರ್-19 ಏಕದಿನ ಪಂದ್ಯದಲ್ಲಿ‌ ಭಾರತದ ಆರಂಭಿಕ ಬ್ಯಾಟ್ಸ್‌ಮನ್‌ ವೈಭವ್‌ ಸೂರ್ಯವಂಶಿ ಆಂಗ್ಲ ಬೌಲರ್‌ಗಳನ್ನು ಬೆಂಡೆತ್ತಿದ್ದಾರೆ. ವೈಭವ್ ಕೇವಲ 52 ಎಸೆತಗಳಲ್ಲಿ ಭರ್ಜರಿ ಶತಕ ಬಾರಿಸಿ ಒಟ್ಟು 78 ಎಸೆತಗಳಲ್ಲಿ 143 ರನ್ ಗಳಿಸಿದರು. ಈ ಸ್ಫೋಟಕ ಇನಿಂಗ್ಸ್‌ನಲ್ಲಿ ಅವರು 13 ಬೌಂಡರಿ ಮತ್ತು 10 ಸಿಕ್ಸರ್ ಬಾರಿಸಿದ್ದಾರೆ.

52 ಎಸೆತಗಳಲ್ಲಿಯೇ ಸೆಂಚುರಿ ಬಾರಿಸಿದ ವೈಭವ್‌ ಸೂರ್ಯವಂಶಿ!

ಕೇವಲ 52 ಎಸೆತಗಳನ್ನು ಶತಕ ಬಾರಿಸಿ ಮಿಂಚಿದ ವೈಭವ್‌ ಸೂರ್ಯವಂಶಿ.

Profile Ramesh Kote Jul 5, 2025 10:30 PM

ಲಂಡನ್: ಇತ್ತೀಚಿಗೆ ಮುಕ್ತಾಯವಾಗಿದ್ದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯಲ್ಲಿ ಅಮೋಘ ಪ್ರದರ್ಶನ ತೋರುವ ಮೂಲಕ ಎಲ್ಲರ ಗಮನ ಸೆಳೆದಿದ್ದ ರಾಜಸ್ತಾನ್‌ ರಾಯಲ್ಸ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ 14ನೇ ವಯಸ್ಸಿನ ವೈಭವ್‌ ಸೂರ್ಯವಂಶಿ ( Vaibhav Suryavanshi) ಇದೀಗ ಇಂಗ್ಲೆಂಡ್ ವಿರುದ್ಧ ಶನಿವಾರ ನಡೆದಿದ್ದ ನಾಲ್ಕನೇ ಅಂಡರ್-19 ಯುವ ಏಕದಿನ ಪಂದ್ಯದಲ್ಲಿ‌ ಆಂಗ್ಲ ಬೌಲರ್‌ಗಳನ್ನು ಬೆಂಡೆತ್ತಿದ್ದಾರೆ. ಅವರು ಸ್ಪೋಟಕ ಶತಕ ಸಿಡಿಸುವ ಮೂಲಕ ಭಾರತ ಕಿರಿಯರ ತಂಡದ ಗೆಲುವಿಗೆ ನೆರವು ನೀಡಿದ್ದಾರೆ.

ವೈಭವ್ ಕೇವಲ 52 ಎಸೆತಗಳಲ್ಲಿ ಭರ್ಜರಿ ಶತಕ ಬಾರಿಸಿದರು ಹಾಗೂ ಒಟ್ಟು ಆಡಿದ 78 ಎಸೆತಗಳಲ್ಲಿ 143 ರನ್ ಗಳಿಸಿದರು. ಈ ಸ್ಫೋಟಕ ಇನಿಂಗ್ಸ್‌ನಲ್ಲಿ 13 ಬೌಂಡರಿ ಮತ್ತು 10 ಸಿಕ್ಸರ್ ಒಳಗೊಂಡಿವೆ. ಹಿಂದಿನ ಪಂದ್ಯದಲ್ಲೂ ಅವರು 31 ಎಸೆತಗಳಲ್ಲಿ 86 ರನ್ ಗಳಿಸಿ ಭಾರತಕ್ಕೆ ನಾಲ್ಕು ವಿಕೆಟ್ ಜಯ ತಂದುಕೊಟ್ಟಿದ್ದರು. ಈ ಪಂದ್ಯಕ್ಕೆ ಮಳೆ ಅಡಚಣೆ ಉಂಟು ಮಾಡಿದ್ದರಿಂದ ಪಂದ್ಯ 40 ಓವರ್‌ಗಳಿಗೆ ನಿಗದಿಯಾಗಿತ್ತು. ಇಂಗ್ಲೆಂಡ್ ತಂಡ, ತನ್ನ ನಾಯಕ ಥಾಮಸ್ (76 ರನ್, 44 ಎಸೆತ) ಅವರ ಅರ್ಧಶತಕದ ನೆರವಿನಿಂದ 6 ವಿಕೆಟ್‌ಗೆ 268 ರನ್ ಗಳಿಸಿತ್ತು. ಆದರೆ ವೈಭವ್ ಅವರು ಕೇವಲ 20 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಚೇಸಿಂಗ್‌ನಲ್ಲಿ ಭಾರತ ತಂಡಕ್ಕೆ ಸ್ಪೋಟಕ ಆರಂಭ ತಂದುಕೊಟ್ಟಿದ್ದರು. ಆ ಮೂಲಕ ಭಾರತ ತಂಡವನ್ನು 34.3 ಓವರ್‌ನಲ್ಲಿಯೇ ಗೆಲುವಿನ ದಡ ಸೇರಿಸಿದರು.

IND vs ENG: ಅವಳಿ ಶತಕಗಳ ಮೂಲಕ ಕೊಹ್ಲಿ-ಗವಾಸ್ಕರ್‌ ದಾಖಲೆ ಮುರಿದ ಶುಭಮನ್‌ ಗಿಲ್‌!

ಈ ಹಿಂದೆ ರಿಷಭ್ ಪಂತ್ 2016ರಲ್ಲಿ 18 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು. ಅವರು ಬಾರಿಸಿದ 9 ಸಿಕ್ಸರ್‌ಗಳು ಅಂಡರ್-19 ಏಕದಿನ ಪಂದ್ಯಗಳಲ್ಲಿ ಅತಿ ಸಿಕ್ಸರ್‌ಗಳ ದಾಖಲೆಯಾಗಿತ್ತು. ನಂತರ ರಾಜ್ ಅಂಗಡ್‌ ಬಾವಾ ಮತ್ತು ಮಂದೀಪ್ ಸಿಂಗ್ 8 ಸಿಕ್ಸರ್‌ಗಳನ್ನು ಬಾರಿಸಿದ್ದರು. ಇದೀಗ ವೈಭವ್‌ ಸೂರ್ಯವಂಶಿ 10 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಅಂಡರ್‌-19 ಏಕದಿನ ಪಂದ್ಯದಲ್ಲಿ ಅತಿ ಹೆಚ್ಚು ಸಿಕ್ಸರ್‌ ಬಾರಿಸಿದ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ.



2025ರ ಐಪಿಎಲ್ ಟೂರ್ನಿಯ ಪಂದ್ಯದಲ್ಲಿ 35 ಎಸೆತಗಳಲ್ಲಿ ವೈಭವ್‌ ಸೂರ್ಯವಂಶಿ ಶತಕವನ್ನು ಬಾರಿಸಿದ್ದರು. ಆ ಮೂಲಕ ವಿಶ್ವದ ಶ್ರೀಮಂತ ಫ್ರಾಂಚೈಸಿ ಲೀಗ್‌ನಲ್ಲಿ ವೇಗವಾಗಿ ಶತಕ ಬಾರಿಸಿದ ಭಾರತೀಯ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದರು. ಅಂದ ಹಾಗೆ ಇಂಗ್ಲೆಂಡ್‌ ವಿರುದ್ಧದ ಈ ಪಂದ್ಯದಲ್ಲಿ ವೈಭವ್‌ 78 ರನ್‌ಗಳನ್ನು ಬೌಂಡರಿಗಳಿಂದ ಗಳಿಸಿದ್ದಾರೆ. ಇದು ಅವರ ಒಟ್ಟು ರನ್‌ಗಳಲ್ಲಿ ಶೇ. 90.69 ರಷ್ಟು. ಪಂತ್, ಸರ್ಫರಾಜ್ ಖಾನ್ ಮತ್ತು ಮನನ್ ವೋಹ್ರಾ ಮಾತ್ರ ಈ ಶೇಕಡಾವಾರು ರನ್‌ಗಳ ದಾಖಲೆಯನ್ನು ವೈಭವ್‌ ಹಿಂದಿಕ್ಕಿದ್ದಾರೆ. ಕೇವಲ 14ನೇ ವಯಸ್ಸಿನಲ್ಲಿಯೇ ಇಂಗ್ಲೀಷ್‌ ನೆಲದಲ್ಲಿ ಅಬ್ಬರಿಸಿ, ಇಂಗ್ಲೆಂಡ್ ಬೌಲರ್‌ಗಳಿಗೆ ಬಿಸಿ ಮುಟ್ಟಿಸಿದ ವೈಭವ್ ಸುರ್ಯವಂಶಿ ಕ್ರಿಕೆಟ್‌ ಲೋಕದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.