ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bomb Blast: ಅಕ್ರಮ ಬಾಂಬ್‌ ತಯಾರಿ ವೇಳೆ ಸ್ಫೋಟ; ಸ್ಥಳದಲ್ಲೇ ಓರ್ವ ಸಾವು

ಪಶ್ಚಿಮ ಬಂಗಾಳದ ಈಸ್ಟ್ ಬರ್ಡ್ವಾನ್ ಜಿಲ್ಲೆಯಲ್ಲಿ ಅಕ್ರಮವಾಗಿ ಬಾಂಬ್ ತಯಾರಿಸುತ್ತಿದ್ದ ವೇಳೆ ಅದು ಸ್ಫೋಟಗೊಂಡು ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ ಮತ್ತು ಇನ್ನೊಬ್ಬ ತೀವ್ರ ಗಾಯಗೊಂಡಿದ್ದಾನೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ. ಸ್ಫೋಟದಲ್ಲಿ ಸಾವನ್ನಪ್ಪಿರುವ ವ್ಯಕ್ತಿಯನ್ನು 35 ವರ್ಷದ ಬರ್ಕತ್ ಕರಿಕರ್ ಎಂದು ಗುರುತಿಸಲಾಗಿದೆ.

ಅಕ್ರಮ ಬಾಂಬ್‌ ತಯಾರಿ ವೇಳೆ ಸ್ಫೋಟ; ಸ್ಥಳದಲ್ಲೇ ಓರ್ವ ಸಾವು

Profile Ramesh B Jul 5, 2025 8:01 PM

ಕೋಲ್ಕತಾ: ಪಶ್ಚಿಮ ಬಂಗಾಳದ (West Bengal) ಈಸ್ಟ್ ಬರ್ಡ್ವಾನ್ ಜಿಲ್ಲೆಯಲ್ಲಿ ಅಕ್ರಮವಾಗಿ ಬಾಂಬ್ ತಯಾರಿಸುತ್ತಿದ್ದ ವೇಳೆ ಅದು ಸ್ಫೋಟಗೊಂಡು ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ ಮತ್ತು ಇನ್ನೊಬ್ಬ ತೀವ್ರ ಗಾಯಗೊಂಡಿದ್ದಾನೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ. ಶುಕ್ರವಾರ ರಾತ್ರಿ 8.30ರ ಸುಮಾರಿಗೆ ಈ ಘಟನೆ ನಡೆದಿದ್ದು, ಕಟ್ವಾ ತಾಲೂಕು ರಾಜುವಾ ಗ್ರಾಮದಲ್ಲಿ ಹಳೆಯ ಮನೆವೊಂದರಲ್ಲಿ ಅವಘಡ ಸಂಭವಿಸಿದೆ. ಸ್ಫೋಟದಲ್ಲಿ ಸಾವನ್ನಪ್ಪಿರುವ ವ್ಯಕ್ತಿಯನ್ನು 35 ವರ್ಷದ ಬರ್ಕತ್ ಕರಿಕರ್ ಎಂದು ಗುರುತಿಸಲಾಗಿದೆ. ಇನ್ನೊಬ್ಬ ವ್ಯಕ್ತಿ ತುಫಾನ್ ಚೌಧರಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಈ ಇಬ್ಬರೂ ವ್ಯಕ್ತಿಗಳು ಬಾಂಬ್ ತಯಾರಿಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಸ್ಥಳೀಯರು ಭಾರಿ ಸ್ಫೋಟ ಶಬ್ದ ಕೇಳಿಸಿಕೊಂಡು ಹೊರಗೆ ಓಡಿದ್ದಾರೆ. “ಮನೆ ಸಂಪೂರ್ಣವಾಗಿ ಧ್ವಂಸವಾಗಿದೆ. ಗೋಡೆಗಳು ಕುಸಿದಿವೆ, ಕಲ್ಲುಮಣ್ಣಿನಿಂದ ಕಟ್ಟಲಾಗಿದ್ದ ಮನೆಯ ಛಾವಡಿ ಹಾರಿ ಹೋಗಿದೆ” ಎಂದು ಸ್ಥಳೀಯರೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ.

ಘಟನೆಯ ನಂತರ ಪೊಲೀಸರು ಗಾಯಗೊಂಡಿರುವ ತುಫಾನ್ ಚೌಧರಿಯನ್ನು ಬಂಧಿಸಿದ್ದು, ಅವರ ಮೇಲೆ ಈ ಹಿಂದೆ ದೂರು ದಾಖಲಾಗಿರುವುದಾಗಿ ತಿಳಿಸಿದ್ದಾರೆ. “ತುಫಾನ್‌ ಹಲವಾರು ಬಾರಿ ಜೈಲು ಸೇರಿದ್ದು, ಇತ್ತೀಚೆಗೆ ಮಾತ್ರ ಜೈಲಿನಿಂದ ಬಿಡುಗಡೆಯಾಗಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರಣ ಇನ್ನೂ ವಿಚಾರಣೆ ನಡೆಸಲು ಸಾಧ್ಯವಾಗಿಲ್ಲʼʼ ಎಂದು ಕಟ್ವಾ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Bomb Blast: ಅಕ್ರಮ ಬಾಂಬ್‌ ತಯಾರಿಕೆ ವೇಳೆ ಭಾರೀ ಸ್ಫೋಟ; ಮೂವರ ದಾರುಣ ಸಾವು

ಪಶ್ಚಿಮ ಬಂಗಾಳದಲ್ಲಿ ಪದೇ ಪದೆ ನಡೆಯುವ ಬಾಂಬ್‌ ಸ್ಫೋಟ

ಕಚ್ಚಾ ಬಾಂಬ್‌ ಸ್ಫೋಟಗೊಳ್ಳುವ ಘಟನೆ ಪಶ್ಚಿಮ ಬಂಗಾಳದಲ್ಲಿ ಪದೇ ಪದೆ ನಡೆಯುತ್ತಲೇ ಇದೆ. ಕೆಲವು ತಿಂಗಳ ಹಿಂದೆ ಪಶ್ಚಿಮ ಬಂಗಾಳದ ಖಯರ್ತಲಾ ಪ್ರದೇಶದಲ್ಲಿ ದೇಶಿ ನಿರ್ಮಿತ ಬಾಂಬ್‌ಗಳು ಸ್ಫೋಟಗೊಂಡ ಪರಿಣಾಮ ಮೂವರು ದಾರುಣವಾಗಿ ಸಾವನ್ನಪ್ಪಿದ್ದರು. ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಮಾಮುನ್ ಮೊಲ್ಲಾ, ಸಕಿರುಲ್ ಸರ್ಕಾರ್ ಮತ್ತು ಮುಸ್ತಾಕಿನ್ ಶೇಖ್ ಎಂದು ಗುರುತಿಸಲಾಗಿತ್ತು. ಮಾಮುನ್ ಮೊಲ್ಲಾ ಎಂಬುವವರ ಮನೆಯಲ್ಲಿ ಅಕ್ರಮವಾಗಿ ಬಾಂಬ್‌ಗಳನ್ನು ತಯಾರಿಸಲಾಗುತ್ತಿತ್ತು ಎಂದು ಅಲ್ಲಿನ ಸ್ಥಳೀಯರು ಆರೋಪಿಸಿದ್ದರು. ಸ್ಫೋಟದ ತೀವ್ರತೆಗೆ ಮನೆಯ ಮೇಲ್ಛಾವಣಿ ಸಂಪೂರ್ಣವಾಗಿ ಕುಸಿದು ಬಿದ್ದಿದ್ದು, ಸ್ಫೋಟದಿಂದಾಗಿ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.