Beauty Trend 2025: ಜೆನ್ ಜಿ ಹುಡುಗಿಯರ ಕಣ್ಣಿನ ಸೌಂದರ್ಯಕ್ಕೆ ಬಂತು ಕಲರ್ ಕಾಡಿಗೆ
Beauty Trend 2025: ಮಾನಿನಿಯರ ಕಣ್ಣಿಗೆ ಕಪ್ಪು ಕಾಡಿಗೆ ಎಂಬ ಬ್ಯೂಟಿ ಕಾನ್ಸೆಪ್ಟ್ ಇದೀಗ ಮಾಯವಾಗಿದೆ. ಜನರೇಷನ್ ಬದಲಾದಂತೆ ಈ ಜನರೇಷನ್‌ನ ಹುಡುಗಿಯರಿಗೆ ಪ್ರಿಯವಾಗುವಂತಹ ಕಲರ್ ಕಾಡಿಗೆ ಪೆನ್ಸಿಲ್‌ಗಳು ಲಗ್ಗೆ ಇಟ್ಟಿವೆ. ಈ ಕುರಿತಂತೆ ಇಲ್ಲಿದೆ ವರದಿ.

ಚಿತ್ರಕೃಪೆ: ಪಿಕ್ಸೆಲ್

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹುಡುಗಿಯರ ಕಪ್ಪು ಕಾಡಿಗೆ ಜಾಗಕ್ಕೆ ಕಲರ್‌ಫುಲ್ ಕಾಡಿಗೆ ಎಂಟ್ರಿ ನೀಡಿದೆ. ಹೌದು, ಬಣ್ಣ ಬಣ್ಣದ ಕಣ್ಣಿಗೆ ಹಚ್ಚುವ ಕಾಡಿಗೆ ಪೆನ್ಸಿಲ್‌ಗಳು ಬ್ಯೂಟಿ ಲೋಕದಲ್ಲಿ (Beauty Trend 2025) ಲಗ್ಗೆ ಇಟ್ಟಿವೆ. ಮೊದಲೆಲ್ಲಾ ಕಣ್ಣಿಗೆ ಕಪ್ಪು ಕಾಡಿಗೆ ಚೆಂದ ಎಂಬಂತಿದ್ದ ಬ್ಯೂಟಿ ಕಾನ್ಸೆಪ್ಟ್ ಇದೀಗ ಮಾಯವಾಗುತ್ತಿದೆ. ಈ ಜನರೇಶನ್‌ಗೆ ತಕ್ಕಂತೆ ಕಣ್ಣುಗಳ ಸೌಂದರ್ಯದ ಥೀಮ್ ಕೂಡ ಬದಲಾಗಿದೆ. ಕಂಗಳನ್ನು ಕಲರ್‌ಫುಲ್ ಆಗಿಸುತ್ತಿವೆ ಎನ್ನುತ್ತಾರೆ ಬ್ಯೂಟಿ ಎಕ್ಸ್‌ಪರ್ಟ್ಸ್ ದಿಶಾ. ಐ ಲೈನರ್‌ನಂತೆಯೇ ಕಾಣಿಸುವ ಈ ಪೆನ್ಸಿಲ್‌ಗಳು ಎರಡು ಶೈಲಿಯಲ್ಲಿ ದೊರೆಯುತ್ತವೆ. ಒಂದು ವಾಟರ್ ಪ್ರೂಫ್ ಮತ್ತೊಂದು ಸಾಮಾನ್ಯವಾಗಿರುವಂತದ್ದು. ಇತ್ತೀಚೆಗಂತೂ ಸಾಕಷ್ಟು ಬ್ಯೂಟಿ ಬ್ರಾಂಡ್‌ಗಳು ನಾನಾ ಕಲರ್‌ನ ಸೆಟ್‌ನಲ್ಲಿಯೂ ಬಿಡುಗಡೆಗೊಳಿಸಿವೆ ಎನ್ನುತ್ತಾರೆ ಕಾಸ್ಮೆಟಿಕ್ ಎಕ್ಸ್‌ಪರ್ಟ್ಸ್.

ಸ್ಕೆಚ್ ಪೆನ್ ಕಾಡಿಗೆಗೆ ಡಿಮ್ಯಾಂಡ್
ಇನ್ನು, ಕಾಡಿಗೆ ಪೆನ್ಸಿಲ್, ಕಾಡಿಗೆ ಕ್ರಯಾನ್ಸ್, ಐ ಲೈನರ್‌ನಂತಹ ಕಾಡಿಗೆ ಹೀಗೆ ನಾನಾ ರೂಪದಲ್ಲಿ ದೊರೆಯುತ್ತವೆ. ಇನ್ನು ಕೊಂಚ ದುಬಾರಿಯವು ನಿಬ್ ಇರುವಂತಹ ಪೆನ್ಸಿಲ್ ಪೆನ್ ಹಾಗೂ ಸ್ಕೆಚ್ ಪೆನ್ ರೂಪದಲ್ಲಿಯೂ ಸಿಗುತ್ತವೆ. ವಾಟರ್ ಪ್ರೂಫ್ ಕಾಜಲ್ ಪೆನ್ಸಿಲ್‌ಗಳು ಮೊದಲಿನಂತೆ ಹರಡುವುದಿಲ್ಲ. ಮಳೆಯಲ್ಲಿ ನೆನೆದರೂ ಕರಗುವುದಿಲ್ಲ ಎನ್ನುತ್ತಾರೆ ಮೇಕಪ್ ಎಕ್ಸ್‌ಪರ್ಟ್ಸ್.

ಈ ಸುದ್ದಿಯನ್ನೂ ಓದಿ | Monsoon Fashion 2025: ಮಾನ್ಸೂನ್‌ಗೆ ಬಂತು ಲೈಟ್ ವೇಟ್ ಯೂನಿಸೆಕ್ಸ್ ಜಾಕೆಟ್ಸ್
ವೈಬ್ರೆಂಟ್ ಕಾಡಿಗೆ ಜಾದೂ
ಇವು ಉಡುಪಿಗೆ ಮ್ಯಾಚ್ ಮಾಡುವ ಬಣ್ಣದ ಕಾಂಟ್ರಸ್ಟ್ ಶೇಡ್‌ಗಳಲ್ಲೂ ದೊರೆಯುತ್ತಿವೆ. ಪರ್ಪಲ್, ಕೊಬಾಲ್ಟ್ ಬ್ಲ್ಯೂ, ಪೀಚ್ ಪಿಂಕ್, ಸಿಲ್ವರ್, ವೈಟ್ ಹೀಗೆ ನಾನಾ ವರ್ಣಗಳಲ್ಲಿ ದೊರೆಯುತ್ತಿವೆ. ವೈಬ್ರೆಂಟ್ ಶೇಡ್‌ಗಳನ್ನು ಮೊದಲೆಲ್ಲಾ ಕೇವಲ ಮಾಡೆಲ್‌ಗಳು ಫ್ಯಾಷನ್ ಕ್ಷೇತ್ರದಲ್ಲಿ ಬಳಸುತ್ತಿದ್ದರು. ಇದೀಗ ಸಾಮಾನ್ಯ ಸ್ತ್ರೀಯರು ಬಳಸಲಾರಂಭಿಸಿದ್ದಾರೆ. ಆದರೆ, ಎವರ್‌ಗ್ರೀನ್ ಕಪ್ಪು ಬಣ್ಣದ ಕಾಡಿಗೆ ಇಂದಿಗೂ ಟ್ರೆಂಡ್‌ನಲ್ಲೆ ಇದೆ. ಆದರೆ, ಡ್ರೆಸ್‌ಗಳ ಮ್ಯಾಚಿಂಗ್ ತಕ್ಕಂತೆ ಬದಲಿಸುವುದು ಸಾಮಾನ್ಯವಾಗತೊಡಗಿದೆ ಎನ್ನುತ್ತಾರೆ ಮೇಕಪ್ ಆರ್ಟಿಸ್ಟ್ ಮಂಗಲಾ.

ಕಲರ್ ಕಾಡಿಗೆ ಪ್ರಿಯರಿಗೆ ಟಿಪ್ಸ್
- ಮೇಕಪ್ ಮುಗಿದ ನಂತರ ಕಲರ್ ಕಾಜಲ್ ಲೇಪಿಸಿ.
- ಸ್ಮಡ್ಜ್ ಪ್ರೂಫ್ ಕಾಜಲ್ ಮಲಗುವ ಮುನ್ನ ಮರೆಯದೇ ತೆಗೆಯಿರಿ.
- ಕಿರಿಕಿರಿಯಾದಲ್ಲಿ ಬಳಸುವುದನ್ನು ಅವಾಯ್ಡ್ ಮಾಡಿ.
- ಫಂಕಿ ಲುಕ್‌ಗೆ ಕಲರ್ ಕಾಜಲ್ ಬೆಸ್ಟ್ ಲುಕ್ ನೀಡುತ್ತದೆ.
- ಔಟಿಂಗ್‌ಗೂ ಆಕರ್ಷಕವಾಗಿ ಕಾಣುತ್ತದೆ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)