ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಅಯ್ಯೋ ಇವಳೆಂಥ ತಾಯಿ...? ಮಗುವನ್ನು ಹಿಗ್ಗಾಮುಗ್ಗಾ ಥಳಿಸಿದ ಕ್ರೂರಿ; ಹೃದಯವಿದ್ರಾವಕ ವಿಡಿಯೊ ವೈರಲ್

ತಾಯಿಯೊಬ್ಬಳು ಕೋಪಗೊಂಡು ತನ್ನ ಮಗನನ್ನು ಅಡುಗೆಮನೆಯ ಪಾತ್ರೆಯಿಂದ ಹಿಗ್ಗಾಮಗ್ಗಾ ಹೊಡೆದಿದ್ದಾಳೆ. ಈ ಭಯಾನಕ ಘಟನೆಯನ್ನು ಕುಟುಂಬ ಸದಸ್ಯರೊಬ್ಬರು ಸೆರೆಹಿಡಿದಿದ್ದಾರೆ. ಈ ವಿಡಿಯೊ ಈಗ ಸೋಶಿಯಲ್ ಮೀಡಿಯಾಗಳಲ್ಲಿ ಬಹಳಷ್ಟು ವೈರಲ್‌ ಆಗಿದ್ದು ನೆಟ್ಟಿಗರು ಶಾಕ್‌ ಆಗಿದ್ದಾರೆ.

ಹೆತ್ತಕಂದಮ್ಮನಿಗೆ ಹಿಗ್ಗಾಮುಗ್ಗಾ ಹೊಡೆದ ತಾಯಿ; ವಿಡಿಯೊ ವೈರಲ್

Profile pavithra Jul 5, 2025 4:13 PM

ಜೈಪುರ: ತಾಯಿ ಮಗುವಿನ ಸಂಬಂಧ ಅನ್ಯೋನ್ಯವಾದುದು. ತನ್ನ ಮಗುವಿಗೆ ಸ್ವಲ್ಪ ನೋವಾದರೂ ತಾಯಿ ಹೃದಯ ಸಹಿಸುವುದಿಲ್ಲ. ಆದರೆ ಇಲ್ಲೊಬ್ಬ ತಾಯಿ ಮಾತ್ರ ಮಗುವಿಗೆ ಹಿಗ್ಗಾಮಗ್ಗಾ ಹೊಡೆದ ಭಯಾನಕ ಘಟನೆಯೊಂದನ್ನು ಕುಟುಂಬ ಸದಸ್ಯರೊಬ್ಬರು ಸೆರೆಹಿಡಿದಿದ್ದಾರೆ. ಈ ವಿಡಿಯೊ ಈಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ (Viral Video) ಆಗಿದೆ. ಈ ವಿಡಿಯೊ ಮಗುವಿನ ಸುರಕ್ಷತೆ ಹಾಗೂ ಭದ್ರತೆ ಮತ್ತು ಪೋಷಕರ (Parents) ಕೆಟ್ಟ ನಡವಳಿಕೆಯ ಬಗ್ಗೆ ಕಳವಳ ವ್ಯಕ್ತವಾಗಿದೆ.

ವೈರಲ್ ಆದ ವಿಡಿಯೊದಲ್ಲಿ ಸಣ್ಣ ಸಣ್ಣ ವಿಷಯಕ್ಕೂ ತಾಯಿ ಮಗುವಿನ ಜತೆ ಕ್ರೂರವಾಗಿ ವರ್ತಿಸುವುದನ್ನು ಸೆರೆಹಿಡಿಯಲಾಗಿದೆ. ಮಗ ಮೇಜಿನ ಕೆಳಗಿದ್ದ ಚಮಚವನ್ನು ತೆಗೆದುಕೊಳ್ಳಲು ಮರೆತಿದ್ದಕ್ಕಾಗಿ ತಾಯಿ ಅವನಿಗೆ ಪಾತ್ರೆಗಳಿಂದ ಹೊಡೆದಿದ್ದಾಳೆ. ತಾಯಿಗೆ ಹೆದರಿ ಮಗು ಒಂದು ಮೂಲೆಯಲ್ಲಿ ಕುಳಿತು ಅಸಹಾಯಕನಾಗಿ ಅತ್ತಿದ್ದಾನೆ. ಮಗು ಅಳುತ್ತಿರುವಾಗ ಮತ್ತೆ ಅವನಿಗೆ ಒದ್ದು ಜೀವ ಬೆದರಿಕೆ ಹಾಕುವುದು ಕಂಡುಬಂದಿದೆ. ಇನ್ನೊಂದು ಕ್ಲಿಪ್‌ನಲ್ಲಿ, ಮಹಿಳೆ ತನ್ನ ಗಂಡನನ್ನು ಕೋಪದಿಂದ ಬೆದರಿಸುವುದು ಸೆರೆಯಾಗಿದೆ.

ವಿಡಿಯೊ ಇಲ್ಲಿದೆ ನೋಡಿ...



ವಿಡಿಯೊದಲ್ಲಿರುವ ಯಾರ ಗುರುತುಗಳು ಇನ್ನೂ ದೃಢಪಟ್ಟಿಲ್ಲ. ರಾಜಸ್ಥಾನದ ಕರೌಲಿಯಲ್ಲಿ ಈ ಘಟನೆ ನಡೆದಿದೆಯಂತೆ. ತಾಯಿ ತನ್ನ ಮಕ್ಕಳನ್ನು ಕ್ರೂರವಾಗಿ ಹೊಡೆಯುವ ಘಟನೆ ನಡೆದಿದ್ದು ಇದೇ ಮೊದಲಲ್ಲ. ಈ ಹಿಂದೆ ತೆಲಂಗಾಣದ ಜಗ್ತಿಯಾಲ್ ಜಿಲ್ಲೆಯಲ್ಲಿ ತಾಯಿಯೊಬ್ಬಳು ತನ್ನ ಅಪ್ರಾಪ್ತ ಮಗುವನ್ನು ನಿರ್ದಯವಾಗಿ ಥಳಿಸಿದ್ದು, ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಈ ಸುದ್ದಿಯನ್ನೂ ಓದಿ:Viral Video: ಫ್ಲೈಟ್‌ನಲ್ಲಿ ಸಹಪ್ರಯಾಣಿಕನ ಮೇಲೆ ಹಲ್ಲೆ; ಭಾರತೀಯ ಮೂಲದ ವ್ಯಕ್ತಿ ಬಂಧನ

ವಿಡಿಯೊದಲ್ಲಿ ತಾಯಿ ಮನೆಯ ಗೇಟ್ ಹೊರಗೆ ಮಗನನ್ನು ಒದೆದಿದ್ದರಿಂದ ಮಗು ನೆಲದ ಮೇಲೆ ಹೋಗಿ ಬಿದ್ದಿದೆ. ಇಷ್ಟಕ್ಕೆ ಸುಮ್ಮನಾಗದೆ ಆಕೆ ಮಗುವನ್ನು ಬಲವಂತವಾಗಿ ನೆಲದಿಂದ ಎತ್ತಿ ಕಪಾಳಕ್ಕೆ ಹೊಡೆಯುವುದು ಕಂಡುಬಂದಿದೆ. ನಂತರ ಆಕೆ ತನ್ನ ಮಗನ ಕಾಲನ್ನು ಹಿಡಿದು ಎಳೆದುಕೊಂಡು ಹೋಗಿದ್ದಾಳೆ. ವಿಡಿಯೊದಲ್ಲಿರುವ ಮಹಿಳೆಯನ್ನು ರಮಾ ಎಂದು ಗುರುತಿಸಲಾಗಿದೆ. ರಮಾ ಪ್ರತಿದಿನ ತನ್ನ ಮಗನಿಗೆ ಹೊಡೆಯುತ್ತಿದ್ದು, ಈ ದೌರ್ಜನ್ಯವನ್ನು ನೋಡಲಾಗದೆ ಸ್ಥಳೀಯರು ವಿಡಿಯೊಗಳನ್ನು ರೆಕಾರ್ಡ್ ಮಾಡಿ ಸಖಿ ಕೇಂದ್ರಕ್ಕೆ ದೂರು ನೀಡಿದ್ದರು. ನಂತರ ಮಗುವನ್ನು ಸಖಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು. ವರದಿಯ ಪ್ರಕಾರ, ಮಹಿಳೆಯ ಪತಿ ಆಂಜನೇಯುಲು ಕೆಲಸದ ನಿಮಿತ್ತ ದುಬೈನಲ್ಲಿ ವಾಸಿಸುತ್ತಿದ್ದ ಎನ್ನಲಾಗಿತ್ತು.