UAE Bunts: ಯುಎಇ ಬಂಟರ ಸಂಘದ ಅಧ್ಯಕ್ಷರಾಗಿ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಅಧಿಕಾರ ಸ್ವೀಕಾರ
UAE Bunts: ದುಬೈನ ಕರಾಮದಲ್ಲಿರುವ ಫಾರ್ಚೂನ್ ಆಟ್ರಿಯಂ ಹೋಟೆಲ್‌ನಲ್ಲಿ ಡಿ.14ರಂದು ಯುಎಇ ಬಂಟರ ಸಂಘದ ನೂತನ ಅಧ್ಯಕ್ಷರಾಗಿ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಅವರನ್ನು ಆಯ್ಕೆಮಾಡಲಾಗಿದೆ.
Prabhakara R
December 15, 2024
ದುಬೈ: ಸಂಯುಕ್ತ ಅರಬ್ ಸಂಸ್ಥಾನದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರ ಸಂಘಟನೆಗಳ ಪೈಕಿ 47 ವರ್ಷಗಳಿಂದ ಯಶಸ್ವಿ ಹೆಜ್ಜೆಗುರುತುಗಳನ್ನು ಮೂಡಿಸಿರುವ ಯುಎಇ ಬಂಟ್ಸ್ ಎಕ್ಸಿಕ್ಯೂಟಿವ್ ಬೋರ್ಡ್‌ನ (UAE Bunts) ವಾರ್ಷಿಕ ಮಹಾಸಭೆ ದುಬೈನ ಕರಾಮದಲ್ಲಿರುವ ಫಾರ್ಚೂನ್ ಆಟ್ರಿಯಂ ಹೋಟೆಲ್‌ನಲ್ಲಿ ಡಿ.14ರಂದು ನಡೆಯಿತು. ಈ ವೇಳೆ ಯುಎಇ ಬಂಟರ ಸಂಘದ ಉಪಾಧ್ಯಕ್ಷರಾಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿರುವ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಅವರನ್ನು ನೂತನ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ನಿಕಟ ಪೂರ್ವ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ಅವರಿಂದ ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿದ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಅವರು, ತಮ್ಮನ್ನು ಆಯ್ಕೆಮಾಡಿರುವ ಯು.ಎ.ಇ. ಬಂಟ್ಸ್ ಆಡಳಿತ ಮಂಡಳಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಾ, ಸಂಘಟನೆಯನ್ನು ಯಶಸ್ವಿ ಪಥದತ್ತ ಕೊಂಡೊಯ್ಯುವ ಭರವಸೆ ನೀಡಿ, ಸರ್ವರು ಸಲಹೆ ಸಹಕಾರ ನೀಡುವಂತೆ ಮನವಿ ಮಾಡಿದರು.
ಕಳೆದ ನಾಲ್ಕೂವರೆ ದಶಕಗಳಿಂದ ಯುಎಇ ಬಂಟ್ಸ್ ವಾರ್ಷಿಕ ಸ್ನೇಹ ಮಿಲನ, ಯುಎಇ ಬಂಟ್ಸ್ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ವಿಹಾರ ಕೂಟ, ಕ್ರೀಡಾ ಕೂಟ, ಕ್ರಿಕೆಟ್ ಪಂದ್ಯ, ರಕ್ತದಾನ ಶಿಬಿರ, ಊರಿನಲ್ಲಿ ಅನಾರೋಗ್ಯ ಪೀಡಿತರಿಗೆ ಸಹಾಯ ಹಸ್ತ, ಬಡ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ನೆರವು ಯು.ಎ.ಇ. ಬಂಟ್ಸ್ 2024 ನೇ ಸಾಲಿನ 47ನೇ ವಾರ್ಷಿಕೋತ್ಸವದ ಜತೆಯಲ್ಲಿ ಗಲ್ಫ್ ಬಂಟೋತ್ಸವ ದುವೈ ಅತ್ಯಂತ ವಿಜೃಂಬಣೆಯಿಂದ ಆಚರಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಯುಎಇ. ಬಂಟ್ಸ್ ಪೋಷಕರಾಗಿರುವ ಸರ್ವೋತ್ತಮ ಶೆಟ್ಟಿ ಅವರು ನೂತನ ಆಡಳಿತ ಮಂಡಳಿಗೆ ಶುಭ ಹಾರೈಸಿದರು.
ವಕ್ವಾಡಿ ಪ್ರವೀಣ್ ಶೆಟ್ಟಿ ಅವರ ಪರಿಚಯಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ವಕ್ವಾಡಿ ಎಂಬಲ್ಲಿ 1967ರ ಜುಲೈ 6 ರಂದು ನಾರಾಯಣ ಶೆಟ್ಟಿ ಮತ್ತು ಸರೋಜಿನಿ ಶೆಟ್ಟಿ ದಂಪತಿಯ ಪುತ್ರನಾಗಿ ಜನಿಸಿದ ಪ್ರವೀಣ್ ಶೆಟ್ಟಿ ಅವರು ಸರಕಾರಿ ಕಾಲೇಜು ಕೋಟೇಶ್ವರ ಹಾಗೂ ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ ಪಡೆದರು.
ಗಲ್ಫ್ ರಾಷ್ಟ್ರದಲ್ಲಿ ಪ್ರತಿಷ್ಠಿತ ಹೋಟೆಲ್ ಫಾರ್ಚೂನ್ ಗ್ರೂಪಿನ ಆಡಳಿತ ನಿರ್ದೇಶಕ, ಸಂಘಟಕ, ಮಯೂರ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರ ಪಡೆದಿರುವ ವಕ್ವಾಡಿ ಪ್ರವೀಣ್ ಶೆಟ್ಟಿಯವರು ಯುಎಇ ಬಂಟರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಹುಟ್ಟೂರಾದ ಬ್ರಹ್ಮಾವರದಲ್ಲಿ ಹೋಟೆಲ್ ಫಾರ್ಚೂನ್ ಪ್ರಾರಂಭಿಸಿದ ಇವರು ನೂರಾರು ಯುವಕರಿಗೆ ಉದ್ಯೋಗವನ್ನು ನೀಡಿದ್ದಾರೆ. ಕೊಲ್ಲಿ ರಾಷ್ಟ್ರದ ಯುಎಇಯಲ್ಲಿ ಗ್ರೂಫ್ ಆಫ್ ಫಾರ್ಚೂನ್ ಹೊಟೇಲ್ ಅನ್ನು ಹುಟ್ಟು ಹಾಕಿ ತಮ್ಮ ಕಠಿಣ ಪರಿಶ್ರಮದಿಂದ ಯಶಸ್ವಿ ಹೋಟೆಲ್ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ.
ಸಾಮಾಜಿಕ ಚಿಂತನೆಯುಳ್ಳ ವ್ಯಕ್ತಿತ್ವ ಹೊಂದಿರುವ ಇವರು ಪ್ರವೀಣ್ ಶೆಟ್ಟಿ ಅವರು ಬಿಡುವಿಲ್ಲದ ವ್ಯವಹಾರಗಳ ಮಧ್ಯೆಯೂ ಸಮಾಜಮುಖಿ ಚಟುವಟಿಕೆಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡವರು. ರಕ್ತದಾನ ಶಿಬಿರ, ಅನಾಥರಿಗೆ, ಅನಾರೋಗ್ಯ ಪೀಡಿತರಿಗೆ ಸಹಾಯ ಮುಂತಾದ ಸಮಾಜಪರ ಕೆಲಸಗಳಲ್ಲಿ ಮುತುವರ್ಜಿ ವಹಿಸುತ್ತಾ ಓರ್ವ ಉತ್ಸಾಹಿ ಯುವ ಸಮಾಜ ಸೇವಕರಾಗಿಯೂ ಗುರುತಿಸಿಕೊಂಡಿದ್ದಾರೆ. ತನ್ನ ಸಮುದಾಯದ ಬಾಂಧವರನ್ನು ಒಂದುಗೂಡಿಸಿಕೊಂಡು ಅವರ ಸಮಸ್ಯೆಗಳ ಕುರಿತು ಸಮಾಲೋಚನೆ ನಡೆಸಿ ಸಮಾನ ಆಸಕ್ತ ಬಂಧುಗಳನ್ನು ಒಟ್ಟು ಸೇರಿಸಿ ತವರು ನೆಲದ ಸಂಸ್ಕೃತಿ, ಆಚಾರ- ವಿಚಾರಗಳನ್ನು ಕಾಪಾಡಲು ಶ್ರಮಿಸುತ್ತಿದ್ದಾರೆ. ಪ್ರತಿಷ್ಠಿತ ಹೋಟೆಲ್ ಫಾರ್ಚೂನ್ ಗ್ರೂಪಿನ ಆಡಳಿತ ನಿರ್ದೇಶಕ, ಸಂಘಟಕರಾದ ಇವರು ಮಯೂರ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರ ಪಡೆದಿದ್ದಾರೆ.
ಇದೀಗ ನೂತನವಾಗಿ ಯುಎಇ ಬಂಟರ ಸಂಘದ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ವಕ್ವಾಡಿ ಪ್ರವೀಣ್ ಶೆಟ್ಟಿ ದುಬೈ ಅವರಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಮತ್ತು ಪದಾಧಿಕಾರಿಗಳು, ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಮತ್ತು ಪದಾಧಿಕಾರಿಗಳು, ಬಾಂಬೆ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಸಿಎ ಸುರೇಂದ್ರ ಕೆ ಶೆಟ್ಟಿ ಮತ್ತು ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ಯುಎಇ ಬಂಟ್ಸ್ 2025-26 (2 ವರ್ಷದ ಅವಧಿ) ನೂತನ ಆಡಳಿತ ಮಂಡಳಿ
ಪೋಷಕರು: ಸರ್ವೋತ್ತಮ್ ಶೆಟ್ಟಿಅಧ್ಯಕ್ಷರು: ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿಉಪಾಧ್ಯಕ್ಷರು: ಪ್ರೇಮ್‌ನಾಥ್ ಶೆಟ್ಟಿಪ್ರಧಾನ ಕಾರ್ಯದರ್ಶಿ: ರವಿರಾಜ್ ಶೆಟ್ಟಿ
ಆಡಳಿತ ಮಂಡಳಿಯ ಸದಸ್ಯರು: ರತ್ನಾಕರ್ ಶೆಟ್ಟಿ, ಗುಣಶೀಲ್ ಶೆಟ್ಟಿ, ಸುಜಾತ್ ಶೆಟ್ಟಿ. ಬಿ. ಕೆ. ಗಣೇಶ್ ರೈ, ಸುಂದರ್ ಶೆಟ್ಟಿ, ಸಜನ ಶೆಟ್ಟಿ ಹಾಗೂ ದಿನೇಶ್ ಶೆಟ್ಟಿ ಕೊಟ್ಟಿಂಜ.
ಯುಎಇ ಬಂಟ್ಸ್ 2025-26 ರ ನೂತನ ಕಾರ್ಯಕಾರಿ ಸಮಿತಿಅಬುಧಾಬಿ: ನಿತ್ಯಾಪ್ರಕಾಶ್ ಶೆಟ್ಟಿ , ಕೀರ್ತಿ ಶೆಟ್ಟಿ, ಪ್ರಸನ್ನ ಶೆಟ್ಟಿ, ಮೆಘಾ ಶೆಟ್ಟಿ, ಶ್ರೀಶ್ ಹೆಗ್ಡೆ, ವಿದ್ಯಾಶ್ರೀ ಹೆಗ್ಡೆ, ಕಿರಣ್ ಶೆಟ್ಟಿ, ದೀಪಾ ಶೆಟ್ಟಿ.ದುಬೈ: ದಿನ್ ರಾಜ್ ಶೆಟ್ಟಿ, ದೀಪ್ತಿ ಶೆಟ್ಟಿ, ಅನೂಪ್ ಶೆಟ್ಟಿ ಚೈತ್ರಾ ಶೆಟ್ಟಿ, ವಸಂತ್ ಶೆಟ್ಟಿ, ರಜಿತಾ ಶೆಟ್ಟಿ, ಸುಪ್ರಜ್ ಶೆಟ್ಟಿ, ಪೃಥ್ವಿ ಶೆಟ್ಟಿ, ಸೀತರಾಮ್ ಶೆಟ್ಟಿ, ಅಶ್ವಿನಿ ಶೆಟ್ಟಿ, ಗೋಕುಲ್ ದಸ್ಸ್ ರೈ, ನಿಶ್ಮಿತಾ ರೈರಾಸ್ ಅಲ್ ಖೈಮಾ: ಸಂಪತ್ ಶೆಟ್ಟಿ / ಲಾಸ್ಯ ಶೆಟ್ಟಿ.