ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Viral News: ಬೆನ್ನಿನ ಮೇಲೆ ಟ್ಯಾಟೂ ಹಾಕಿಸಿಕೊಳ್ಳುತ್ತಲೇ ವ್ಯಕ್ತಿಗೆ ಹೃದಯಾಘಾತ!

ಬ್ರೆಜಿಲ್‌ ದೇಶದ ಸೋಶಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ ಆದ ರಿಕಾರ್ಡೊ ಗೊಡೊಯ್ ಎಂಬ ವ್ಯಕ್ತಿ ಬೆನ್ನಿನ ಮೇಲೆ ಟ್ಯಾಟೂ ಹಾಕಿಸಿಕೊಳ್ಳುವ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಐಷಾರಾಮಿ ಪ್ರೀಮಿಯಂ ಕಾರು, ಸೂಪರ್ ಕಾರು ಸೇರಿದಂತೆ ದುಬಾರಿ ಕಾರುಗಳ ಕುರಿತು ಇಂಚಿಂಚು ಮಾಹಿತಿ ನೀಡುವ ಮೂಲಕ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದ 45 ವರ್ಷದ ರಿಕಾರ್ಡೋ ಟ್ಯಾಟೂ ಹಾಕಿಸಿಕೊಳ್ಳುವ ವೇಳೆ ನೆಲಕ್ಕೆ ಕುಸಿದು ಬಿದ್ದಿದ್ದು,ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಈ ಸುದ್ದಿ ಇದೀಗ ಭಾರೀ ವೈರಲ್‌ ಆಗಿದೆ.

ಜೀವಕ್ಕೆ ಕುತ್ತು ತಂದ ಟ್ಯಾಟೂ! ಬ್ರೆಜಿಲ್‌ ವ್ಯಕ್ತಿಗೆ ಹೃದಯಾಘಾತ

Viral News

Profile Deekshith Nair Jan 24, 2025 4:47 PM

ಬ್ರೆಸಿಲಿಯಾ: ಟ್ಯಾಟೂ ಟ್ರೆಂಡ್(Tattoo Trend) ಇತ್ತೀಚೆಗೆ ಹೆಚ್ಚಾಗಿದೆ. ಟ್ಯಾಟೂ ಮೇಲಿನ ವ್ಯಾಮೋಹದಿಂದಾಗಿ ಹಲವರು ಸಾಕಷ್ಟು ಸಮಸ್ಯೆಗಳನ್ನು ಮೈ ಮೇಲೆ ಎಳೆದುಕೊಳ್ಳುತ್ತಿದ್ದಾರೆ. ಇದೀಗ ಖ್ಯಾತ ಕಾರು ಇನ್‌ಫ್ಲುಯೆನ್ಸರ್ ಒಬ್ಬರು ಬೆನ್ನ ಮೇಲೆ ಟ್ಯಾಟೂ ಹಾಕಿಸಿಕೊಳ್ಳುತ್ತಿದ್ದಂತೆ ಹೃದಯಾಘಾತಕ್ಕೆ(Cardiac Arrest) ಬಲಿಯಾಗಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಇದೀಗ ಆ ಸುದ್ದಿ ಭಾರೀ(Viral News) ವೈರಲ್‌ ಆಗಿದೆ.

ಐಷಾರಾಮಿ ಪ್ರೀಮಿಯಂ ಕಾರು, ಸೂಪರ್ ಕಾರು ಸೇರಿದಂತೆ ದುಬಾರಿ ಕಾರುಗಳ ಕುರಿತು ಇಂಚಿಂಚು ಮಾಹಿತಿ ನೀಡುವ ಮೂಲಕ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದ 45 ವರ್ಷದ ರಿಕಾರ್ಡೋ ಸಂಪೂರ್ಣ ಬೆನ್ನಿಗೆ ಟ್ಯಾಟೂ ಹಾಕಿಸಿಕೊಳ್ಳುವ ವೇಳೆ ನೆಲಕ್ಕೆ ಕುಸಿದು ಬಿದ್ದಿದ್ದು, ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.



ರಿಕಾರ್ಡೋ ತನ್ನ ಟ್ಯಾಟೂ ಕಲಾವಿದನ ಬಳಿ ಡೇಟ್ ಫಿಕ್ಸ್ ಮಾಡಿದ್ದಾರೆ. ಟ್ಯಾಟೂ ಕಲಾವಿದ ರಿಕಾರ್ಡೋ ಬೆನ್ನ ಹಿಂದೆ ಲಿಕ್ವಿಡ್ ಮೂಲಕ ಶುಚಿಗೊಳಿಸಿ ಟ್ಯಾಟೂ ಹಾಕಲು ಆರಂಭಿಸಿದ್ದಾರೆ. ಆದರೆ ಟ್ಯೂಟೂ ಹಾಕುತ್ತಿದ್ದಂತೆಯೇ ರಿಕಾರ್ಡೋ ತೀವ್ರ ಹೃದಯಾಘಾತಕ್ಕೆ ತುತ್ತಾಗಿದ್ದಾರೆ. ಅಸ್ವಸ್ಥಗೊಂಡು ಕುಸಿದ ರಿಕಾರ್ಡೋ ಅವರನ್ನು ಟ್ಯಾಟೂ ಕಲಾವಿದ ಹಾಗೂ ಸಿಬ್ಬಂದಿಗಳು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೆಲವೇ ಗಂಟೆಗಳಲ್ಲಿ ರಿಕಾರ್ಡೋ ಮೃತಪಟ್ಟಿದ್ದಾರೆ. ತಪಾಸಣೆ ನಡೆಸಿದ ವೈದ್ಯರು ತೀವ್ರ ಹೃದಯಾಘಾತಕ್ಕೆ ರಿಕಾರ್ಡೋ ಬಲಿಯಾಗಿರುವುದಾಗಿ ಖಚಿತಪಡಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:Pushpak Express Fire: ಪುಷ್ಪಕ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಭಾರೀ ದುರಂತ- 20ಕ್ಕೂ ಅಧಿಕ ಪ್ರಯಾಣಿಕರು ಸಾವು

ರಿಕಾರ್ಡೋ ಗೊಡೊಯ್ ನಿಧನಕ್ಕೆ ಹಲವರು ಆಘಾತ ವ್ಯಕ್ತಪಡಿಸಿದ್ದಾರೆ. ಇತ್ತ ಅವರ ಅಭಿಮಾನಿಗಳು ಆತಂಕ ಹೊರ ಹಾಕಿದ್ದಾರೆ. ಅಭಿಮಾನಿಗಳು ಮತ್ತು ರಿಕಾರ್ಡೋ ಕುಟುಂಬಸ್ಥರು ವಿಡಿಯೊ ಹಂಚಿಕೊಂಡು ಕಣ್ಣೀರು ಹಾಕಿದ್ದಾರೆ.