‌Viral Video: ಬಿಬಿಎಂಪಿ ನಿರ್ಲಕ್ಷ್ಯ; 83ರ ಇಳಿ ವಯಸ್ಸಿನಲ್ಲಿ ಬೀದಿ ಕಸ ಗುಡಿಸುವ ಅಜ್ಜ: ವಿಡಿಯೊ ವೈರಲ್

Viral Video: 83ರ ಇಳಿ ವಯಸ್ಸಿನ ಅಜ್ಜ ಪ್ರತಿದಿನ ತಮ್ಮ ಮನೆ ಬೀದಿಯನ್ನು ಕಸ ಗುಡಿಸುವ ಮೂಲಕ ಸ್ವಚ್ಛಗೊಳಿಸುತ್ತಾರೆ.

Profile Deekshith Nair December 29, 2024
ಬೆಂಗಳೂರು: ನಾವು ಮತ್ತು ನಮ್ಮ ಮನೆಯವರು ಚೆನ್ನಾಗಿದ್ದರೆ ಸಾಕು, ಊರಿನ ಉಸಾಬರಿ ನಮಗ್ಯಾಕೆ? ಎನ್ನುವ ಜನರೇ ನಮ್ಮ ನಡುವೆ ಹೆಚ್ಚಿದ್ದಾರೆ. ಅವ್ಯವಸ್ಥೆಗಳ ವಿರುದ್ಧ ಉದ್ದುದ್ದ ಭಾಷಣ ಮಾಡುತ್ತಾರೆಯೇ ವಿನಾ ಅವ್ಯವಸ್ಥೆಯ ಸಮಾಜವನ್ನು ವ್ಯವಸ್ಥಿತ ಸಮಾಜವಾಗಿಸುವ ಲವಲೇಶ ಪ್ರಯತ್ನವನ್ನೂ ಮಾಡುವುದಿಲ್ಲ. ಪ್ರತಿ ದಿನ ಅಡ್ಡಾಡುವ ರಸ್ತೆಯಲ್ಲಿ ಕಸದ ರಾಶಿ ಬಿದ್ದು, ಗಬ್ಬು ನಾರುತ್ತಿದ್ದರೂ ಅದನ್ನು ನೋಡಿಕೊಂಡು ಕ್ಯಾರೆ ಎನ್ನದೆ ಹೋಗುವವರಿದ್ದಾರೆ. ಆದರೆ ಇಲ್ಲೊಬ್ಬರು ತಮ್ಮ 83ನೇ ಇಳಿ ವಯಸ್ಸಿನಲ್ಲಿ ಮನೆ ಮಾತ್ರವಲ್ಲ ಇಡೀ ವಾತಾವರಣ ಸ್ವಚ್ಛವಾಗಿರಿಸಬೇಕೆಂದು ಪ್ರತಿ ದಿನವೂ ಬೀದಿ ಹಾಗೂ ಚರಂಡಿಯನ್ನು ಸ್ವಚ್ಛಗೊಳಿಸುವಂಥ ಕೆಲಸವನ್ನು ಮಾಡುತ್ತಿದ್ದಾರೆ. ಈ ಕುರಿತ ವಿಡಿಯೊವೊಂದು ಇದೀಗ ಸಾಕಷ್ಟು ವೈರಲ್‌ ಆಗುತ್ತಿದ್ದು, ಅವರ ಈ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ (Viral Video).
🌟 Meet Mr. Surya Narayan (83), a true inspiration from HSR Layout!👏He spends 1-2 hours daily cleaning his street, as #BBMP skips routine clean-ups. A reminder of community spirit & a call for accountability. #Bengaluru deserves better!Thanks to @mi2madhu for sharing the… pic.twitter.com/PhP9018HUv— BengaluruPost (@bengalurupost1) December 27, 2024
ಬೆಂಗಳೂರಿನ ಎಚ್‌.ಎಸ್‌.ಆರ್‌ ಲೇಔಟ್‌ನಲ್ಲಿ(HSR Layout) ವಾಸವಿರುವ 83ರ ಹರೆಯದ ಸೂರ್ಯ ನಾರಾಯಣ್‌ ಎಂಬುವವರು ಪ್ರತಿದಿನ ಸುಮಾರು 1ರಿಂದ 2 ಗಂಟೆಗಳ ಕಾಲ ತಮ್ಮ ಮನೆಯ ಸುತ್ತಮುತ್ತಲಿನ ಬೀದಿಯನ್ನು ಸ್ವಚ್ಛಗೊಳಿಸುವ ಕೆಲಸವನ್ನು ನಿಸ್ವಾರ್ಥವಾಗಿ ಮಾಡುತ್ತಿದ್ದಾರೆ. ಬಿಬಿಎಂಪಿ ಇಲ್ಲಿನ ಪರಿಸರದ ಸ್ವಚ್ಛತೆಯ ಬಗ್ಗೆ ಯಾವುದೇ ಕ್ರಮವನ್ನು ಕೈಗೊಳ್ಳದಿರುವ ಕಾರಣ ಹಲವು ವರ್ಷಗಳಿಂದ ಸ್ವತಃ ಸೂರ್ಯ ನಾರಾಯಣ್‌ ಅವರೇ ತಮ್ಮ ಮನೆಯ ಸುತ್ತಲಿನ ಬೀದಿಯನ್ನು ಸ್ವಚ್ಛಗೊಳಿಸುತ್ತಿದ್ದಾರೆ. ಸೇವೆಯ ಮನೋಭಾವವಿರುವ ಇವರು ಪ್ರತಿದಿನ ಬೀದಿಯಲ್ಲಿರುವ ಕಸ ಕಡ್ಡಿಗಳನ್ನು ಗುಡಿಸುವುದರಿಂದ ಹಿಡಿದು, ಚರಂಡಿಗಳಲ್ಲಿ ಬಿದ್ದಂತಹ ಕಸಗಳನ್ನು ಸಹ ಗುಡಿಸುವಂತಹ ಕೆಲಸವನ್ನು ಮಾಡುತ್ತಿದ್ದಾರೆ.
Bengalurupost1 ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೊದಲ್ಲಿ ಸೂರ್ಯ ನಾರಾಯಣ್‌ ಅವರು ತಮ್ಮ ಮನೆ ಸುತ್ತಲಿನ ಬೀದಿಯನ್ನು ಸ್ವಚ್ಛಗೊಳಿಸುತ್ತಿರುವಂತ ದೃಶ್ಯವನ್ನು ಕಾಣಬಹುದು. ಡಿಸೆಂಬರ್‌ 27 ರಂದು ಹಂಚಿಕೊಳ್ಳಲಾದ ಈ ವಿಡಿಯೊ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈ ಮಹಾನ್‌ ವ್ಯಕ್ತಿಗೆ ನನ್ನ ನಮನಗಳುʼ ಎಂದು ಕಾಮೆಂಟ್‌ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼನಿಜಕ್ಕೂ ಇವರ ಕಾರ್ಯ ಸ್ಪೂರ್ತಿದಾಯಕವಾಗಿದೆʼ ಎಂದು ಹೇಳಿದ್ದಾರೆ. ಮತ್ತೋರ್ವರು ʼಬಿಬಿಎಂಪಿ ಅಧಿಕಾರಿಗಳು ಆದಷ್ಟು ಬೇಗ ಎಚ್ಚೆತ್ತುಕೊಳ್ಳಿʼ ಎಂದು ಹೇಳಿದ್ದಾರೆ.
ಎಂದಾದರೂ ಒಮ್ಮೆ ಎಚ್‌.ಎಸ್‌.ಆರ್‌ ಲೇಔಟ್‌ ರಸ್ತೆಯಲ್ಲಿ ನಾವು ಹಾದು ಹೋಗುವಾಗ ಹಿರಿ ಜೀವ ಸೂರ್ಯ ನಾರಾಯಣ್‌ ಅವರು ಕಂಡರೆ ಅವರ ಎದುರು ಕೈ ಕಟ್ಟಿಕೊಂಡು ನಿಲ್ಲೋಣ. ಅವರೊಂದಿಗೆ ತುಸು ಹೊತ್ತು ಮಾತಿಗಿಳಿಯೋಣ. ಅವರ ಗಾಳಿ ನಮಗೂ ಬೀಸಲಿ!
ಈ ಸುದ್ದಿಯನ್ನೂ ಓದಿ:DK Shivakumar: ಹೊಸ ವರ್ಷಾಚರಣೆ ವೇಳೆ ಕಾನೂನು ಉಲ್ಲಂಘಿಸಿದರೆ ಕಠಿಣ ಕ್ರಮ; ಡಿಕೆಶಿ ಖಡಕ್‌ ವಾರ್ನಿಂಗ್‌
Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ