Haveri Murder Case: ಹಾವೇರಿಯಲ್ಲಿ ಲವ್ ಜಿಹಾದ್‌ಗೆ ಹಿಂದು ಯುವತಿ ಬಲಿ?; ಕೊಲೆಗೈದು ನದಿಗೆ ಬಿಸಾಡಿದ ಕಿರಾತಕರು
Haveri Murder Case: ಹಾವೇರಿ ಜಿಲ್ಲೆಯ ಹಲಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಮೊದಲಿಗೆ ಅಪರಿಚಿತ ಶವ ಎಂದು ಪೊಲೀಸರು ಘೋಷಿಸಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ ಕೊಲೆ ಎಂದು ತಿಳಿದುಬಂದಿದ್ದು, ಇದರಿಂದ ಲವ್ ಜಿಹಾದ್ ಆರೋಪ ಕೇಳಿಬಂದಿದೆ.


ಹಾವೇರಿ: ಲವ್ ಕಾಂಪ್ರಮೈಸ್‌ಗೆಂದು ಕರೆದೊಯ್ದು ಯುವತಿಯನ್ನು ಹತ್ಯೆ ಮಾಡಿರುವ ಘಟನೆ (Haveri Murder Case) ಜಿಲ್ಲೆಯ ಹಲಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರಟ್ಟಿಹಳ್ಳಿ ತಾಲೂಕಿನ ಮಾಸೂರು ಗ್ರಾಮದ ಯುವತಿ ಸ್ವಾತಿ ರಮೇಶ್ ಬ್ಯಾಡಗಿ (23) (Swathi Ramesh Byadagi) ಹತ್ಯೆಯಾದ ಯುವತಿ. ನಯಾಜ್, ವಿನಯ್, ದುರ್ಗಾಚಾರಿ ಹತ್ಯೆಗೈದ ದುರುಳರು. ಈ ಮೂವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಮೊದಲಿಗೆ ಅಪರಿಚಿತ ಶವ ಎಂದು ಪೊಲೀಸರು ಘೋಷಿಸಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ ಕೊಲೆ ಎಂದು ತಿಳಿದುಬಂದಿದ್ದು, ಇದರಿಂದ ಲವ್ ಜಿಹಾದ್ ಆರೋಪ ಕೇಳಿಬಂದಿದೆ.
ಸ್ವಾತಿ ಮತ್ತು ನಯಾಜ್ ಇಬ್ಬರೂ ಪ್ರೀತಿ ಮಾಡುತ್ತಿದ್ದರು ಎನ್ನಲಾಗಿದೆ. ಕೆಲ ದಿನಗಳ ಹಿಂದೆ ಸ್ವಾತಿ ಪ್ರೀತಿಯನ್ನು ನಯಾಜ್ ನಿರಾಕರಿಸಿದ್ದ. ಇದೇ ವಿಚಾರದಲ್ಲಿ ಕಾಂಪ್ರಮೈಸ್‌ಗೆಂದು ನಯಾಜ್ ಕರೆದಿದ್ದ. ಈ ವೇಳೆ ಇಬ್ಬರು ಹಿಂದು ಯುವಕರ ಸಹಾಯ ಪಡೆದಿದ್ದ. ಅದರಂತೆ ಕಾರಿನಲ್ಲಿ ವಿನಯ್ ಮತ್ತು ದುರ್ಗಾಚಾರಿ ತೆರಳಿದ್ದರು.
ನಯಾಜ್‌ನಿಂದ ದೂರ ಆಗುವಂತೆ ಸ್ವಾತಿಗೆ ವಿನಯ್ ಮತ್ತು ದುರ್ಗಾಚಾರಿ ಹೇಳಿದ್ದರು. ಕಾಂಪ್ರಮೈಸ್ ಒಪ್ಪದಿದ್ದಾಗ ಮೂವರೂ ಸೇರಿ ಮಾ.2ರಂದು ಯುವತಿಯ ಕೊರಳಿಗೆ ದುಪಟ್ಟಾ ಬಿಗಿದು ಹತ್ಯೆ ಮಾಡಿದ್ದಾರೆ. ಬಳಿಕ ತುಂಗಭದ್ರಾ ನದಿಗೆ ಹೆಣ ಬಿಸಾಕಿ ಎಸ್ಕೇಪ್ ಆಗಿದ್ದರು. ನಂತರ ಮಾ. 6 ರಂದು ಹರಿಹರ ಮತ್ತು ಹೊಳೆಸಿರಿಗೇರಿ ಮಾರ್ಗ ಮಧ್ಯೆ ಶವ ಪತ್ತೆಯಾಗಿತ್ತು.
ಮೊದಲಿಗೆ ಅಪರಿಚಿತ ಶವ ಪತ್ತೆ ಎಂದು ಖಾಕಿ ಪ್ರಕರಣ ದಾಖಲಿಸಿತ್ತು. ಸದ್ಯ ತನಿಖೆಯಲ್ಲಿ ಸ್ವಾತಿ ಹತ್ಯೆಯ ಸತ್ಯ ಬಯಲಾಗಿದೆ. ಕೊಲೆ ಆರೋಪಿ ನಯಾಜ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಹಲಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.