INDW vs ENGW: ಇಂಗ್ಲೆಂಡ್ ವಿರುದ್ಧ ಕೇವಲ 5 ರನ್‌ನಿಂದ ಸೋತ ಭಾರತ ವನಿತೆಯರು!
INDW vs ENGW Match Highlights: ಸ್ಮೃತಿ ಮಂಧಾನಾ ಅವರ ಅರ್ಧಶತಕದ ಹೊರತಾಗಿಯೂ ಭಾರತ ಮಹಿಳಾ ತಂಡ, ಮೂರನೇ ಟಿ20ಐ ಪಂದ್ಯದಲ್ಲಿ ಕೇವಲ 5 ರನ್‌ಗಳಿಂದ ಸೋಲು ಅನುಭವಿಸಿತು. ಈ ಗೆಲುವಿನ ಮೂಲಕ ಆತಿಥೇಯ ಇಂಗ್ಲೆಂಡ್ ತಂಡ, ಟಿ20ಐ ಸರಣಿಯನ್ನು ಜೀವಂತವಾಗಿಸಿಕೊಂಡಿದೆ.

ಭಾರತ ಮಹಿಳಾ ತಂಡಕ್ಕೆ 5 ರನ್‌ಗಳ ಸೋಲು.

ಲಂಡನ್: ಸತತ ಎರಡು ಪಂದ್ಯಗಳಲ್ಲಿ ಗೆಲುವು ಪಡೆದಿದ್ದ ಭಾರತ ಮಹಿಳಾ ತಂಡ, ಶುಕ್ರವಾರ ಲಂಡನ್‌ನ ಕೆನ್ಸಿಂಗ್ಟನ್‌ನ ಓವಲ್ ಕ್ರೀಡಾಂಗಣದಲ್ಲಿ ನಡೆದಿದ್ದ ಮೂರನೇ ಟಿ20ಐ ಪಂದ್ಯದಲ್ಲಿ(INDW vs ENGW) ಇಂಗ್ಲೆಂಡ್ ವಿರುದ್ಧ ಕೇವಲ 5 ರನ್‌ಗಳಿಂದ ಸೋಲು ಅನುಭವಿಸಿದೆ. ಇನ್ನುಳಿದ ಎರಡು ಪಂದ್ಯಗಳಲ್ಲಿ ಒಂದರಲ್ಲಿ ಗೆಲುವು ಪಡೆದರೆ, ಹರ್ಮನ್‌ಪ್ರೀತ್ ಕೌರ್ (Harmanpreet Kaur) ನಾಯಕತ್ವದ ಭಾರತ ತಂಡ ಈ ಸರಣಿಯನ್ನು ಗೆಲ್ಲಲಿದೆ. ಅಂದ ಹಾಗೆ ಈ ಪಂದ್ಯದಲ್ಲಿ 53 ಎಸತೆಗಳಲ್ಲಿ 75 ರನ್ ಗಳಿಸಿದ ಸೋಫಿಯಾ ಡಂಕ್ಲಿ (Sophia Dunkley) ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇಂಗ್ಲೆಂಡ್ ನೀಡಿದ್ದ 172 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ಮಹಿಳಾ ತಂಡ, ಸ್ಮೃತಿ ಮಂಧಾನಾ ಹಾಗೂ ಶಫಾಲಿ ವರ್ಮಾ ಅವರ ಬ್ಯಾಟಿಂಗ್ ಹೊರತಾಗಿಯೂ ತನ್ನ ಪಾಲಿನ 20 ಓವರ್‌ಗಳಿಗೆ 5 ವಿಕೆಟ್‌ಗಳ ನಷ್ಟಕ್ಕೆ 166 ರನ್‌ಗಳಿಗೆ ಸೀಮಿತವಾಯಿತು. ಆ ಮೂಲಕ ಕೇವಲ 5 ರನ್‌ಗಳಿಂದ ಸೋಲು ಅನುಭವಿಸಿತು. ಮಂಧಾನಾ 56 ರನ್ ಗಳಿಸಿದರೆ, ಶಫಾಲಿ ವರ್ಮಾ 47 ರನ್ ಗಳಿಸಿದರು. ಜೆಮಿಮಾ ರೊಡ್ರಿಗಸ್ ಹಾಗೂ ಹರ್ಮನ್‌ಪ್ರೀತ್ ಕೌರ್ ಕ್ರಮವಾಗಿ 20 ಮತ್ತು 23 ರನ್ ಗಳಿಸಿದರು. ಆದರೆ, ಕೊನೆಯಲ್ಲಿ ಸ್ವಲ್ಪ ಎಡವಿದ ಕಾರಣ ಭಾರತ ಮಹಿಳಾ ತಂಡ ಸೋಲು ಅನುಭವಿಸಬೇಕಾಯಿತು.
IND vs ENG: ಎರಡನೇ ಟೆಸ್ಟ್‌ನಲ್ಲಿಯೂ ಭಾರತವನ್ನು ಸೋಲಿಸುತ್ತೇವೆಂದ ಹ್ಯಾರಿ ಬ್ರೂಕ್!
ಇನಿಂಗ್ಸ್ ಆರಂಭಿಸಿದ ಸ್ಮೃತಿ ಮಂಧಾನಾ ಹಾಗೂ ಶಫಾಲಿ ವರ್ಮಾ ಅವರು ಮುರಿಯದ ಮೊದಲನೇ ವಿಕೆಟ್‌ಗೆ 85 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಭಾರತಕ್ಕೆ ಭರ್ಜರಿ ಆರಂಭವನ್ನು ತಂದುಕೊಟ್ಟಿದ್ದರು. ಕೇವಲ 25 ಎಸೆತಗಳಲ್ಲಿ 47 ರನ್ ಸಿಡಿಸಿದ್ದ ಶಫಾಲಿ ವರ್ಮಾ ಅರ್ಧಶತಕದಂಚಿನಲ್ಲಿ ವಿಕೆಟ್ ಒಪ್ಪಿಸಿದರು. ನಂತರ ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ 15 ಎಸೆತಗಳಲ್ಲಿ 20 ರನ್ ಗಳಿಸಿ ಔಟ್ ಆದರು. ನಂತರ 49 ಎಸೆತಗಳಲ್ಲಿ 56 ರನ್ ಗಳಿಸಿದರು. ಆದರೆ, ಕೊನೆಯವರೆಗೂ ಹೋರಾಟ ನಡಸಿದ ನಾಯಕಿ ಹರ್ಮನ್‌ಪ್ರೀತ್ ಕೌರ್ 17 ಎಸೆತಗಳಲ್ಲಿ 23 ರನ್ ಗಳಿಸಿದರು, ಆದರೂ ಭಾರತ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಭಾರತ ಕೇವಲ 5 ರನ್‌ಗಳಿಂದ ಸೋಲು ಒಪ್ಪಿಕೊಂಡಿತು.
ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡುವಂತಾಗಿದ್ದ ಇಂಗ್ಲೆಂಡ್ ತಂಡ, ತನ್ನ ಪಾಲಿನ 20 ಓವರ್‌ಗಳಿಗೆ 9 ವಿಕೆಟ್‌ಗಳ ನಷ್ಟಕ್ಕೆ 171 ರನ್‌ಗಳನ್ನು ಕಲೆ ಹಾಕಿತ್ತು. ಇಂಗ್ಲೆಂಡ್ ಪರ ಇನಿಂಗ್ಸ್ ಆರಂಭಿಸಿದ್ದ ಸೋಫಿಯಾ ಡಂಕ್ಲಿ ಹಾಗೂ ವೇ ಹಾಡ್ಜ್ ಅವರು ಮುರಿಯದ ಮೊದಲನೇ ವಿಕೆಟ್‌ಗೆ ಸ್ಪೋಟಕ ಬ್ಯಾಟ್ ಮಾಡಿದ್ದರು. ಈ ಜೋಡಿ ಮುರಿಯದ ಮೊದಲನೇ ವಿಕೆಟ್‌ಗೆ 137 ರನ್‌ಗಳನ್ನು ಕಲೆ ಹಾಕಿದ್ದರು. ಸ್ಪೋಟಕ ಬ್ಯಾಟ್ ಮಾಡಿದ ಸೋಫಿಯಾ ಡಂಕ್ಲಿ ಅವರು ಕೇವಲ 53 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ 7 ಬೌಂಡರಿಗಳೊಂದಿಗೆ 75 ರನ್‌ಗಳನ್ನು ಸಿಡಿಸಿದರು. ಬಳಿಕ ದೀಪ್ತಿ ಶರ್ಮಾಗೆ ವಿಕೆಟ್ ಒಪ್ಪಿಸಿದರು.
IND vs ENG: 6 ವಿಕೆಟ್ ಕಿತ್ತು ಕಪಿಲ್ ದೇವ್ ಒಳಗೊಂಡ ಎಲೈಟ್ ಲೀಸ್ಟ್ ಸೇರಿದ ಮೊಹಮ್ಮದ್ ಸಿರಾಜ್!
ಇವರ ಜೊತೆ ಮೊದಲನೇ ವಿಕೆಟ್‌ಗೆ ದೊಡ್ಡ ಜೊತೆಯಾಟವನ್ನು ಆಡಿದ ವ್ಯಾಟ್ ಹಾಡ್ಜ್ 42 ಎಸೆತಗಳಲ್ಲಿ ಮೂರು ಸಿಕ್ಸರ್ ಹಾಗೂ 7 ಬೌಂಡರಿಗಳೊಂದಿಗೆ 66 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಇಂಗ್ಲೆಂಡ್ ತಂಡ ದೊಡ್ಡ ಮೊತ್ತವನ್ನು ಕಲೆ ಹಾಕಲು ನೆರವು ನೀಡಿದ್ದರು. ಭಾರತ ಪರ ಅರುಂಧತಿ ರೆಡ್ಡಿ ಹಾಗೂ ದೀಪ್ತಿ ಶರ್ಮಾ ತಲಾ ಮೂರು ವಿಕೆಟ್‌ಗಳನ್ನು ಕಬಳಿಸಿದ್ದಾರೆ.