Interview for Marriage: ಆಧುನಿಕ ಕಾಲದಲ್ಲೂ ಸ್ವಯಂವರ ಪದ್ಧತಿ; 11 ಯುವತಿಯರನ್ನು ಮದುವೆಯಾಗಲು ಬಂದಿದ್ದು ಬರೋಬ್ಬರಿ 1,900 ಯುವಕರು!
ರಾಜಸ್ಥಾನದಲ್ಲಿ ನಡೆದ ಸ್ವಯಂವರ ಪದ್ಧತಿಯಲ್ಲಿ ಸುಮಾರು 1,900 ಯುವಕರು ತಮ್ಮ ಅದೃಷ್ಟವನ್ನು ಪರೀಕ್ಷೆಗೆ ಒಡ್ಡಿದರು. ಕೇವಲ 11 ಯುವತಿಯರಿಗಾಗಿ ಸುಮಾರು 1,900 ಯುವಕರು ಸಾಲುಗಟ್ಟಿ ನಿಂತು ಸಂದರ್ಶನ ಎದುರಿಸಿದರು. ಅದರಲ್ಲಿ ಆಯ್ಕೆಯಾದವರಿಗೆ ಯುವತಿಯರನ್ನು ಕೊಟ್ಟು ಮದುವೆ ಮಾಡಲು ದಿನ ನಿಗದಿ ಪಡಿಸಲಾಯಿತು.


ಜೈಪುರ: ಇಲ್ಲೊಂದು ಸಂದರ್ಶನವಿತ್ತು (Interview), ಸುಮಾರು 1,900 ಯುವಕರು ಸಾಲುಗಟ್ಟಿ ನಿಂತಿದ್ದರು. ಆದರೆ ಇವರು ಹೇಳಬೇಕಿದ್ದದ್ದು ಕೇವಲ ಎರಡೇ ಪದ ಅದುವೇ ಕಾಬೂಲ್ ಹೈ... ಅರೆ ಇದೇನಿದು ವಿಚಿತ್ರ ಸಂದರ್ಶನ ಅಂದುಕೊಂಡಿರಾ? ಇದು ಯಾವುದೇ ಉದ್ಯೋಗಕ್ಕಾಗಿ ನಡೆಯುತ್ತಿದ್ದ ಸಂದರ್ಶನವಲ್ಲ. ಇದು ಮದುವೆಗಾಗಿ ನಡೆಯುತ್ತಿದ್ದ ಸಂದರ್ಶನ (interview for marriage). ಕೇವಲ 11 ಯುವತಿಯರಿಗಾಗಿ 1,900 ಯುವಕರು ಸಾಲುಗಟ್ಟಿ ನಿಂತು ಸಂದರ್ಶನವನ್ನು ಎದುರಿಸಿದರು. ಇಂತಹ ಒಂದು ವಿಚಿತ್ರ ಘಟನೆ ರಾಜಸ್ಥಾನದಲ್ಲಿ (Rajasthan) ನಡೆದಿದೆ. ರಾಜ್ಯ ಸರ್ಕಾರದ ಮಹಿಳಾ ಸದನಗಳ (Women's House) ಉಪಕ್ರಮದಡಿಯಲ್ಲಿ ಇದನ್ನು ಆಯೋಜಿಸಲಾಗಿತ್ತು.
ರಾಜಸ್ಥಾನದಲ್ಲಿ ಒಂದು ವಿಶಿಷ್ಟ ಮತ್ತು ಆಸಕ್ತಿದಾಯಕ ವಿವಾಹ ವ್ಯವಸ್ಥೆ ಕಾರ್ಯಕ್ರಮದಲ್ಲಿ ಸುಮಾರು 1,900 ಯುವಕರು ತಮ್ಮ ಅದೃಷ್ಟವನ್ನು ಪರೀಕ್ಷೆಗೆ ಒಡ್ಡಿದರು. ಕೇವಲ 11 ಯುವತಿಯರಿಗಾಗಿ ಸುಮಾರು 1,900 ಯುವಕರು ಸಾಲುಗಟ್ಟಿ ನಿಂತ ಸಂದರ್ಶನ ಎದುರಿಸಿದರು. ಅದರಲ್ಲಿ ಆಯ್ಕೆಯಾದವರಿಗೆ ಯುವತಿಯರನ್ನು ಕೊಟ್ಟು ಮದುವೆ ಮಾಡಲು ದಿನ ನಿಗದಿ ಪಡಿಸಲಾಯಿತು.
ರಾಜಸ್ಥಾನ ರಾಜ್ಯ ಸರ್ಕಾರದ ಮಹಿಳಾ ಸದನಗಳ ಉಪಕ್ರಮದ ಅಡಿಯಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ನಿರ್ಲಕ್ಷಿತ, ತುಳಿತಕ್ಕೊಳಗಾದ ಮತ್ತು ಅಸಹಾಯಕ ಯುವತಿಯರಿಗೆ ಹೊಸ ಜೀವನ ಕಲ್ಪಿಸಲು ಈ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಇವರನ್ನು ಮದುವೆಯಾಗಲು ಮೊದಲಿಗೆ ಅರ್ಜಿ ಸಲ್ಲಿಸಲು ಕೇಳಲಾಗಿತ್ತು. ಬಳಿಕ ಸಂದರ್ಶನ ಆಯೋಜಿಸಲಾಗಿತ್ತು. ಸಂದರ್ಶನದ ಸುತ್ತಿಗೆ ಜೈಪುರ, ದಿಡ್ವಾನಾ, ಜುನ್ಜುನು, ಕೋಟಾ ಮತ್ತು ಬರಾನ್‌ನ ಸುಮಾರು 1,900 ಕ್ಕೂ ಹೆಚ್ಚು ಯುವಕರು ತಮ್ಮ ದಾಖಲೆಗಳೊಂದಿಗೆ ಆಗಮಿಸಿದರು. ಎಲ್ಲ ಕುಟುಂಬಗಳ ಹಿನ್ನೆಲೆ, ಯುವಕರ ಕುರಿತು ತನಿಖೆ ನಡೆಸಿ, ಉದ್ಯೋಗ, ಆದಾಯವನ್ನು ಪರಿಶೀಲಿಸಿದ ಬಳಿಕ 11 ಯುವಕರೊಂದಿಗೆ ಯುವತಿಯರಿಗೆ ವಿವಾಹ ಜೋಡಿಗಳನ್ನು ರಚಿಸಲಾಯಿತು.
ಕಠಿಣ ಸ್ಪರ್ಧೆ
ಮಹಿಳಾ ಸದನದಲ್ಲಿ ವಾಸಿಸುವ 11 ಹುಡುಗಿಯರ ಮದುವೆಯಾಗಲು 1,900 ಯುವಕರು ಸಾಲುಗಟ್ಟಿ ನಿಂತಿದ್ದರು. ಹೀಗಾಗಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ತಂಡವು ಹಲವು ತಿಂಗಳುಗಳ ಕಾಲ ತನಿಖೆ ನಡೆಸಿತು. ಕೊನೆಗೆ 11 ಯುವಕರನ್ನು ಆಯ್ಕೆ ಮಾಡಲಾಯಿತು. ಇದು ಒಂದು ರೀತಿಯಲ್ಲಿ ಸ್ವಯಂವರದಂತೆ ಇತ್ತು. ಇಲ್ಲಿ ಯುವಕರ ಪ್ರತಿಭೆ ಮಾತ್ರವಲ್ಲ ಪಾತ್ರ ಮತ್ತು ಬದ್ಧತೆಯನ್ನೂ ಪರೀಕ್ಷಿಸಲಾಯಿತು.
ಆಯ್ದ 11 ಯುವಕರಲ್ಲಿ 6 ಮಂದಿ ಜೈಪುರದವರಾಗಿದ್ದು, ಉಳಿದ ಇಬ್ಬರು ದಿಡ್ವಾನಾ-ಕುಚಮನ್‌ನವರಾಗಿದ್ದಾರೆ. ಉಳಿದವರು ಜುನ್ಜುನು, ಕೋಟಾ ಮತ್ತು ಬರಾನ್‌ನವರು. ಒಟ್ಟಿನಲ್ಲಿ ರಾಜಸ್ಥಾನದ ಮೂಲೆ ಮೂಲೆಯಿಂದ ಯುವಕರು ಮಹಿಳಾ ಸದನದ ಯುವತಿಯರನ್ನು ಮದುವೆಯಾಗಲು ಬಂದಿದ್ದು, ಇದರಲ್ಲಿ ರಾಜಧಾನಿಯೇ ಮೇಲುಗೈ ಸಾಧಿಸಿತ್ತು.
ಇದನ್ನೂ ಓದಿ: Rahul Gandhi: ಟ್ರಂಪ್ ತೆರಿಗೆ ನಿಯಮಕ್ಕೆ ಪ್ರಧಾನಿ ತಲೆಬಾಗುತ್ತಾರೆ; ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ
ಮುಖ್ಯಮಂತ್ರಿಯಿಂದ ಆಶೀರ್ವಾದ
ರಾಜ್ಯ ಸರ್ಕಾರ ಸಂಪೂರ್ಣ ಈ ಕಾರ್ಯಕ್ರಮವನ್ನು 'ಜೀವನ ಪುನರ್ವಸತಿ' ಎಂದು ಕರೆಯುತ್ತದೆ. ಇಲ್ಲಿನ ನಿರ್ಲಕ್ಷಿತ ಸಮುದಾಯದ ಯುವತಿಯರಿಗೆ ಇದು ಹೊಸ ಜೀವನ ಕಲ್ಪಿಸುತ್ತದೆ. ಇವರ ವಿವಾಹ ಸಮಾರಂಭದಲ್ಲಿ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಸ್ವತಃ ಹಾಜರಿದ್ದು, ನವವಿವಾಹಿತ ದಂಪತಿಯನ್ನು ಆಶೀರ್ವದಿಸಲಿದ್ದಾರೆ.
ಈವರೆಗೆ 100ಕ್ಕೂ ಹೆಚ್ಚು ವಿವಾಹ
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿರುವ ಮಹಿಳಾ ಸದನಗಳಲ್ಲಿ 100ಕ್ಕೂ ಹೆಚ್ಚು ಯುವತಿಯರ ವಿವಾಹಗಳನ್ನು ಸರ್ಕಾರ ಈವರೆಗೆ ನಡೆಸಿದೆ. ವಿವಿಧ ರೀತಿಯ ತೊಂದರೆಗಳಿಂದಾಗಿ ಮಹಿಳಾ ಸದನಕ್ಕೆ ಬಂದು ವಾಸವಾಗಿರುವ ಮಹಿಳೆಯರಿಗೆ ಗೌರವ ಮತ್ತು ಹೊಸ ಜೀವನವನ್ನು ನೀಡಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ.