Kushi Kapoor: ಕೊನೆಗೂ ಬಾಯ್ಫ್ರೆಂಡ್ ಗುಟ್ಟು ಬಿಟ್ಟು ಕೊಟ್ಟ ಶ್ರೀದೇವಿ ಕಿರಿಯ ಪುತ್ರಿ; ಯಾರಾತ ಫೋಟೋ ನೋಡಿ
ನಟಿ ಶ್ರೀದೇವಿಯವರ ಪುತ್ರಿ ಖುಷಿ ಕಪೂರ್ ತಮ್ಮ ರಿಲೇಷನ್ಶಿಪ್ ಹಿಂಟನ್ನು ನೀಡಿದ್ದಾರೆ. ಅವರು ತಮ್ಮ ಗೆಳೆಯನ ಹೆಸರಿರುವ ಪೆಂಡೆಂಟ್ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಇಷ್ಟು ದಿನದಿಂದ ಬಿ ಟೌನ್ನಲ್ಲಿ ನಡೆಯುತ್ತಿದ್ದ ಗಾಸಿಪ್ಗೆ ಇದೀಗ ಖುಷಿ ತೆರೆ ಎಳೆದಿದ್ದು, ಅಧಿಕೃತವಾಗಿ ತಾನು ಪ್ರೀತಿಯಲ್ಲಿ ಇರುವುದಾಗಿ ಹೇಳಿಕೊಂಡಿದ್ದಾರೆ.



ದಿವಂಗತ ನಟಿ ಶ್ರೀದೇವಿ ಅವರ ಇಬ್ಬರು ಪುತ್ರಿಯರು ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಇತ್ತೀಚೆಗಷ್ಟೇ ಅವರ ಕಿರಿಯ ಪುತ್ರಿ ಖುಷಿ ಕಪೂರ್ ಸೈಫ್ ಅಲಿ ಖಾನ್ ಅವರ ಪುತ್ರ ಇಬ್ರಾಹಿಂ ಅಲಿ ಖಾನ್ ಅವರ ಜೊತೆ ಬಣ್ಣ ಹಚ್ಚಿದ್ದರು. ಚಿತ್ರರಂಗದಲ್ಲಿ ಬೆಳೆಯುತ್ತಿರುವ ಖುಷಿ ಸಮಾಜಿಕ ಮಾಧ್ಯಮದಲ್ಲಿಯೂ ಅಷ್ಟೇ ಆಕ್ಟಿವ್ ಆಗಿದ್ದಾರೆ. ಇದೀಗ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ತಮ್ಮ ಗೆಳೆಯನ ಹೆಸರನ್ನು ಬಹಿರಂಗಗೊಳಿಸಿದ್ದಾರೆ.

ಖುಷಿ ಪ್ರೀತಿಯಲ್ಲಿ ಬಿದ್ದಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಅವರು ಎಲ್ಲಿಯೂ ಈ ಬಗ್ಗೆ ಅಧಿಕೃತವಾಗಿ ಹೇಳಿಕೊಂಡಿರಲಿಲ್ಲ. ಆಗಾಗ ಇವರ ಡೇಟಿಂಗ್ ವಿಷಯ ಮುನ್ನಲೆಗೆ ಬರುತ್ತಿರುತ್ತದೆ. ಇದೀಗ ದಿ ಆರ್ಚೀಸ್' ಸಹನಟ ವೇದಾಂಗ್ ರೈನಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಹಬ್ಬಿದ್ದ ಖುಷಿ ಕಪೂರ್, ಕೊನೆಗೂ ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದ್ದಾರೆ. VK ಇರುವ ಪೆಂಡೆಂಟ್ ಹಾಕಿಕೊಂಡು ಪೋಟೋ ಪೋಸ್ಟ್ ಮಾಡಿದ್ದಾರೆ.

ವಿ' ಮತ್ತು 'ಕೆ' ಅಕ್ಷರಗಳನ್ನು ಹೊಂದಿರುವ ಪೆಂಡೆಂಟ್ ಧರಿಸಿ ತಮ್ಮ ಸಂಬಂಧವನ್ನು ಖುಷಿ ಅಧಿಕೃತಗೊಳಿಸಿದ್ದಾರೆ. ಇದು V ಮತ್ತು K ಎಂಬ ಮೊದಲಕ್ಷರಗಳನ್ನು ಹೊಂದಿದ್ದು, ಮಧ್ಯದಲ್ಲಿ ಹೃದಯವನ್ನು ಹೊಂದಿದೆ. ಈ ಹಿಂದೆ, ಖುಷಿಯ ಹುಟ್ಟುಹಬ್ಬ ಮತ್ತು ಜಾಮ್ನಗರದಲ್ಲಿ ನಡೆದ ಅನಂತ್ ಅಂಬಾನಿಯವರ ವಿವಾಹ ಆಚರಣೆಗಳು ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಈ ಜೋಡಿ ಒಟ್ಟಿಗೆ ಫೋಟೋ ತೆಗೆದಿದ್ದು, ಅದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಅನಂತ್ ಅಂಬಾನಿಯವರ ವಿವಾಹಪೂರ್ವ ಸಂಭ್ರಮದ ಸಮಯದಲ್ಲಿ, ಖುಷಿ ವೇದಾಂಗ್ ರೈನಾ ಜೊತೆ ಕೈ ಹಿಡಿದು ಸಂಭ್ರಮಿಸಿದ್ದರು. ಖುಷಿ ಕಪೂರ್ ತನ್ನ ಗೆಳೆಯನ ಹೆಸರು ಇರುವ ಆಭರಣವನ್ನು ಧರಿಸುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ, ಖುಷಿ ತನ್ನ ಸಹೋದರಿ ಜಾನ್ವಿ ಕಪೂರ್ ಜೊತೆ ಮಾಲ್ಡೀವ್ಸ್ಗೆ ಹೋಗಿದ್ದರು ಅಲ್ಲಿ ಖುಷಿ ತನ್ನ ಗೆಳೆಯ ಹೆಸರಿರುವ ಬ್ರೆಸ್ಲೈಟ್ ಧರಿಸಿದ್ದರು.

ಇತ್ತೀಚಿನ ತಿಂಗಳುಗಳಲ್ಲಿ ಖುಷಿ ಕಪೂರ್ ಮತ್ತು ವೇದಾಂಗ್ ರೈನಾ ಹಲವಾರು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಕರಣ್ ಜೋಹರ್ ಅವರ ಚಾಟ್ ಶೋ, ಕಾಫಿ ವಿತ್ ಕರಣ್ ನಲ್ಲಿ, ವೇದಾಂಗ್ ರೈನಾ ಜೊತೆಗಿನ ಸಂಬಂಧದ ವದಂತಿಗಳ ಬಗ್ಗೆ ಕರಣ್ ಕೇಳಿದ ಪ್ರಶ್ನೆಗೆ ಖುಷಿ ಕಪೂರ್ ಹಾಸ್ಯಮಯವಾಗಿ ಪ್ರತಿಕ್ರಿಯಿಸಿದ್ದರು. ಈ ಜೋಡಿ ಬಿ ಟೌನ್ ಸುದ್ದಿಯಲ್ಲಿದೆ.