Mother’s Day 2025: ತಾಯ್ತನದ ಖುಷಿಯಲ್ಲಿ ಮದರ್ಸ್ ಡೇ ಆಚರಿಸುತ್ತಿರುವ ಬಾಲಿವುಡ್ ನಟಿಯರು
ಜಗತ್ತಿನಾದ್ಯಂತ ಅಮ್ಮಂದಿರ ದಿನವನ್ನು ಸಂಭ್ರಮಿಸಲಾಗುತ್ತಿದೆ.ಇದರಲ್ಲಿ ಸೆಲೆಬ್ರಿಟಿಗಳೂ ಕೂಡ ಹಿಂದೆ ಬಿದ್ದಿಲ್ಲ. ಅದರಲ್ಲಿಯೂ ಬಾಲಿವುಡ್ ಚಿತ್ರರಂಗದ ಅನೇಕ ನಟಿಯರು ಮದರ್ಸ್ ಡೇ ಆಚರಿಸಿಕೊಳ್ಳುತ್ತಿದ್ದಾರೆ.. 2024 ರ ನಂತರ ತಮ್ಮ ಮೊದಲ ಮಕ್ಕಳನ್ನು ಸ್ವಾಗತಿಸಿದ ದೀಪಿಕಾ ಪಡುಕೋಣೆ ಮತ್ತು ರಿಚಾ ಚಡ್ಡಾ ಸೇರಿದಂತೆ ಅನೇಕ ಚಿತ್ರರಂಗದ ತಾರೆಯರು ಹೊಸ ತಾಯ್ತನದ ಖುಷಿಯಲ್ಲಿ ಇದ್ದಾರೆ.

Mother’s Day 2025


ದೀಪಿಕಾ ಪಡುಕೋಣೆ: ಸೆಪ್ಟೆಂಬರ್ 8, 2024ರಂದು ದೀಪಿಕಾ ಮತ್ತು ರಣವೀರ್ ಸಿಂಗ್ ದಂಪತಿಯ ಮಗಳು ದುವಾ ಜನಿಸಿದ್ದು, WAVES 2025 ಕಾರ್ಯಕ್ರಮದಲ್ಲಿ ದೀಪಿಕಾ, “ತಾಯಿ ಆಗಿರುವುದು ನನ್ನ ಜೀವನವನ್ನೇ ಬದಲಾಯಿಸಿದೆ,” ಎಂದು ಹಂಚಿ ಕೊಂಡಿದ್ದರು. ತಾಯಂದಿರ ದಿನ ವಿಶೇಷ ಆವೃತ್ತಿಗಾಗಿ ದೀಪಿಕಾ ಪಡುಕೋಣೆ ಮೇರಿ ಕ್ಲೇರ್ ಮ್ಯಾಗಜಿನ್ ಮುಖಪುಟದಲ್ಲಿ ಕಾಣಿಸಿಕೊಂಡಿದ್ದು ಈ ವೇಳೆ ಮಾತನಾಡಿದ ದೀಪಿಕಾ ತಾಯಿಯಾಗಿರುವುದು ವಿಶೇಷ ಅನುಭವ ನೀಡಿದ್ದು ಹೇಳಿಕೊಳ್ಳಲಾಗದ ಖುಷಿ ನೀಡಿದೆ ಎಂದು ಹೇಳಿಕೊಂಡಿದ್ದರು.

ರಿಚಾ ಚಡ್ಡಾ: ಜುಲೈ 2024ರಲ್ಲಿ ರಿಚಾ ಮತ್ತು ಆಲಿ ಫಜಲ್ ಅವರಿಗೆ ಮಗಳು ಜುನೈರಾ ಇಡಾ ಫಜಲ್ ಜನಿಸಿದಳು. ತಾಯಿ ಆದ ನಂತರ ರಿಚಾ ಮಟೆ ರ್ನಿಟಿ ಬ್ರೇಕ್ ಮುಗಿಸಿ ಹೊಸ ಸಿನಿಮಾ ಒಪ್ಪಿ ಕೊಂಡಿದ್ದಾರೆ.ನಟಿ ರಿಚಾ ಚಡ್ಡಾ ಮತ್ತು ಅಲಿ ಫಜಲ್ ಅವರದ್ದು ಅಂತರ್ ಧರ್ಮೀಯ ವಿವಾಹ ವಾಗಿದ್ದು ಈ ಜೋಡಿ 4 ಅಕ್ಟೋಬರ್ 2022ರಂದು ಮದುವೆ ಯಾಗಿದ್ದರು. ಇಕೋ ಫ್ರೆಂಡ್ಲಿ ಥೀಮ್ ಅಡಿ ರಿಚಾ ಮತ್ತು ಅಲಿ ಮದುವೆ ನಡೆದಿತ್ತು. ಸದ್ಯ ನಟಿ ತಾಯಿತನ ಸಂತಸದ ಸುದ್ದಿಯನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ..

ಮಸಾಬಾ ಗುಪ್ತಾ: ನಟಿ ಮಸಾಬಾ ಬಾಲಿವುಡ್ನ ಜನಪ್ರಿಯ ಫ್ಯಾಷನ್ ಡಿಸೈನರ್ಗಳಲ್ಲಿ ಒಬ್ಬರು. ಪತಿ ಸತ್ಯದೀಪ್ ಮಿಶ್ರ ಅವರ ಜೊತೆ, ಅಕ್ಟೋಬರ್ 11, 2024ರಂದು ತಮ್ಮ ಮೊದಲ ಮಗುವನ್ನು ಸ್ವಾಗತಿಸಿದರು. ತಾಯಿಯಾಗಿರುವ ಜೊತೆಗೆ ಕೇಸರಿ 2 ಸಿನಿಮಾದಲ್ಲಿ ನಟಿ ಮಿಂಚಿದ್ದರು. ಕಳೆದ ಏಪ್ರಿಲ್ನಲ್ಲಿ ತಾವು ತಾಯಿಯಾಗುತ್ತಿರುವ ಕುರಿತು ಖ್ಯಾತ ಡಿಸೈನರ್ ಆಗಿರುವ ಮಸಾಬಾ ತಮ್ಮ ಅಭಿಮಾನಿಗಳೊಂದಿಗೆ ಸುದ್ದಿ ಹಂಚಿಕೊಂಡಿದ್ದರು.

ರಾಧಿಕಾ ಆಪ್ಟೆ: ಡಿಸೆಂಬರ್ 2024ರಲ್ಲಿ ರಾಧಿಕಾ ಮತ್ತು ಅವರ ಪತಿ ಬೆನೆಡಿಕ್ಟ್ ಟೇಲರ್ ಅವರಿಗೆ ಹೆಣ್ಣು ಮಗು ಜನನ ವಾಯಿತು. ನಟಿ ರಾಧಿಕಾ ಆಪ್ಟೆ 2011 ರಲ್ಲಿ ಬೆನೆಡಿಕ್ಟ್ ಟೇಲರ್ ಅವರನ್ನು ಪ್ರೀತಿಸಿದರು. ಒಂದು ವರ್ಷ ಲಿವಿಂಗ್ ಟುಗೆದರ್ ನಲ್ಲಿ ಇದ್ದ ಈ ಜೋಡಿ 2012 ರಲ್ಲಿ ಮದುವೆಯಾಯಿತು. ಸದ್ಯ ನಟಿ ರಾಧಿಕಾ ಆಪ್ಟೆ ಕೂಡ ತಾಯಿಯಾಗಿರುವ ಖುಷಿಯಲ್ಲಿ ಇದ್ದಾರೆ.

ನತಾಷಾ ದಲಾಲ್:ವರುನ್ ಧವನ್ ಮತ್ತು ನತಾಷಾ ದಲಾಲ್ ಜೂನ್ 3, 2024ರಂದು ಈ ಜೋಡಿಗೆ ಮಗಳು ಜನಿಸಿದರು. ಈ ದಂಪತಿ 2021ರಲ್ಲಿ ವಿವಾಹವಾಗಿದ್ದರು.ವರುಣ್ ಧವನ್ ಬಾಲಿವುಡ್ ನಟನಾಗಿದ್ದಾರೆ. ಮತ್ತು ನತಾಶಾ ದಲಾಲ್ ಅವರು ಫ್ಯಾಷನ್ ಡಿಸೈನರ್ ಆಗಿದ್ದಾರೆ. ವರುಣ್ ಮತ್ತು ನತಾಶಾ ಬಾಲ್ಯದ ಸ್ನೇಹಿತರಾಗಿದ್ದರು.

ಅಥಿಯಾ ಶೆಟ್ಟಿ: 2025ರ ಮಾರ್ಚ್ನಲ್ಲಿ ಅಥಿಯಾ ಮತ್ತು ಕ್ರಿಕೆಟಿಗ ಕೆಎಲ್ ರಾಹುಲ್ ಅವರಿಗೆ ಮಗಳು ಜನಿಸಿದ್ದಳು. ಈ ಬಗ್ಗೆ ದಂಪತಿ ತಮ್ಮ ಇನ್ ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡುವ ಮೂಲಕ ಖುಷಿ ವ್ಯಕ್ತ ಪಡಿಸಿದ್ದರು.ಈ ವರ್ಷ ಮೇ 11ರಂದು ಅಥಿಯಾ ತಮ್ಮ ಮೊದಲ ಮದರ್ಸ್ ಡೇ ಆಚರಣೆ ಮಾಡಿದ್ದಾರೆ.

ಕಿಯಾರಾ ಅಡ್ವಾಣಿ : ನಟಿಯು ತಮ್ಮ ಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದು ಅಮ್ಮನಾಗ್ತಿರೋ ಖುಷಿಯಲ್ಲಿ ಇದ್ದಾರೆ. ನಟಿ ಮೆಟ್ ಗಾಲ ಫ್ಯಾಷನ್ ಶೋ ಕಾರ್ಯ ಕ್ರಮದಲ್ಲಿ ಕಪ್ಪು ಬಣ್ಣದ ಗೌನ್ನಲ್ಲಿ ಬೇಬಿ ಬಂಪ್ ಪ್ರದರ್ಶಿಸಿ ಎಲ್ಲರ ಗಮನ ಸೆಳೆದಿದ್ದರು. ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರು 2023ರಲ್ಲಿ ಮದುವೆಯಾಗಿದ್ದು ಇವರೀಗ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ.