ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ʻಮುಂದಿನ ವರ್ಷ ಐಪಿಎಲ್‌ ಆಡಲು ನನಗೆ ಅವಕಾಶವಿದೆʼ-ಮೊಹಮ್ಮದ್‌ ಆಮಿರ್‌!

Mohammad Amir on IPL: ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಆಡುವ ಇಂಗಿತವನ್ನು ಪಾಕಿಸ್ತಾನ ಮಾಜಿ ವೇಗಿ ಮೊಹಮ್ಮದ್‌ ಆಮಿರ್‌ ವ್ಯಕ್ತಪಡಿಸಿದ್ದಾರೆ. ಮುಂದಿನ ವರ್ಷ ಐಪಿಎಲ್‌ ಟೂರ್ನಿಯಲ್ಲಿ ಆಡಲು ನನಗೆ ಅವಕಾಶ ಸಿಗಲಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಇದು ಹೇಗೆ ಸಾಧ್ಯ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

ಮುಂದಿನ ವರ್ಷ ಐಪಿಎಲ್‌ ಆಡಲು ನನಗೆ ಅವಕಾಶವಿದೆ: ಮೊಹಮ್ಮದ್‌ ಆಮಿರ್!

ಐಪಿಎಲ್‌ ಆಡುವ ಇಂಗಿತವನ್ನು ವ್ಯಕ್ತಪಡಿಸಿದ ಮೊಹಮ್ಮದ್‌ ಆಮಿರ್‌.

Profile Ramesh Kote Apr 24, 2025 4:07 PM

ನವದೆಹಲಿ: ವಿಶ್ವದ ಅತ್ಯಂತ ಶ್ರೀಮಂತ ಫ್ರಾಂಚೈಸಿ ಲೀಗ್‌ ಎಂದೇ ಬಿಂಬಿಸಿಕೊಂಡಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL) ಟೂರ್ನಿಯಲ್ಲಿ ಆಡುವ ಇಂಗಿತವನ್ನು ಪಾಕಿಸ್ತಾನ (Pakistan) ಮಾಜಿ ವೇಗಿ ಮೊಹಮ್ಮದ್‌ ಆಮಿರ್‌ (Mohammad Amir) ವ್ಯಕ್ತಪಡಿಸಿದ್ದಾರೆ. ಮುಂದಿನ ವರ್ಷ ನನಗೆ ಐಪಿಎಲ್‌ ಆಡುವ ಅವಕಾಶ ಸಿಗಲಿದೆ ಎಂದು ಪಾಕ್‌ ಮಾಜಿ ವೇಗಿ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಆಮಿರ್‌ ಅವರ ಪತ್ನಿ ನರ್ಜೀಸ್‌ ಖಾತುನ್‌ ಅವರು ಯುಕೆ ಪೌರತ್ವವನ್ನು ಹೊಂದಿದ್ದಾರೆ. ಹಾಗಾಗಿ ಮೊಹಮ್ಮದ್‌ ಆಮಿರ್‌ ಯುಕೆ ಪಾಸ್‌ಪೋರ್ಟ್‌ಗೆ ಪ್ರಯತ್ನ ನಡೆಸುತ್ತಿದ್ದಾರೆ. ಇದು ಅವರಿಗೆ ಲಭ್ಯವಾದರೆ, ಅವರು ಐಪಿಎಲ್‌ ಟೂರ್ನಿಯಲ್ಲಿ ಆಡಲು ಅರ್ಹರಾಗುತ್ತಾರೆ.

ಭಾರತೀಯ ಕ್ರಿಕೆಟ್‌ ನಿಯಂತ್ರಣ (ಬಿಸಿಸಿಐ) ಮಂಡಳಿಯು ಈ ಹಿಂದೆ ರಾಜಕೀಯ ಕಾರಣಗಳಿಂದಾಗಿ ಪಾಕಿಸ್ತಾನದ ಆಟಗಾರರನ್ನು ಐಪಿಎಲ್‌ ಟೂರ್ನಿಗೆ ನಿಷೇಧ ಹೇರಿತ್ತು. ಇದಾದ ಬಳಿಕ 2012ರಲ್ಲಿ ಪಾಕಿಸ್ತಾನದ ಅಝರ್‌ ಮಹ್ಮೂದ್‌ ಅವರು ಯುಕೆ ಪೌರತ್ವವನ್ನು ಪಡೆಯುವ ಮೂಲಕ ಐಪಿಎಲ್‌ ಟೂರ್ನಿಯಲ್ಲಿ ಆಡಿದ್ದರು. ಇದೀಗ ಮೊಹಮ್ಮದ್‌ ಆಮಿರ್‌ ಅದೇ ಹಾದಿಯನ್ನು ಅನುಸರಿಸಲು ಪ್ರಯತ್ನ ನಡೆಸುತ್ತಿದ್ದಾರೆ.

IPL 2025 Points Table: ಭಾರೀ ಜಿಗಿತ ಕಂಡ ಮುಂಬೈ; ಆರ್‌ಸಿಬಿಗೆ ಒಂದು ಸ್ಥಾನ ನಷ್ಟ

ವಿಶ್ವದ ಅತ್ಯಂತ ದೊಡ್ಡ ಫ್ರಾಂಚೈಸಿ ಕ್ರಿಕೆಟ್‌ ಲೀಗ್‌ ಆಡುವ ಸಲುವಾಗಿ ನಿಯಮಿತವಾಗಿ ಯುಕೆ ಪೌರತ್ವವನ್ನು ಪಡೆಯಲು ಪ್ರಯತ್ನಿಸುತ್ತಿರುವುದಾಗಿ ಮೊಹಮ್ಮದ್‌ ಆಮಿರ್‌ ಬಹಿರಂಗಪಡಿಸಿದ್ದಾರೆ. 2024ರಲ್ಲಿ ಎರಡನೇ ಬಾರಿ ಮೊಹಮ್ಮದ್‌ ಆಮಿರ್‌ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಮುಂದಿನ ವರ್ಷ ಐಪಿಎಲ್‌ ಟೂರ್ನಿಯಲ್ಲಿ ಆಡುವ ಅವಕಾಶ ಸಿಗುವ ಬಗ್ಗೆ ಆಮಿರ್‌ ಅವರು ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

"ಪ್ರಾಮಾಣಿಕವಾಗಿ ನನಗೆ ಐಪಿಎಲ್‌ ಟೂರ್ನಿಯಲ್ಲಿ ಆಡಲು ಅವಕಾಶ ಸಿಕ್ಕರೆ, ಖಂಡಿತವಾಗಿಯೂ ಆಡುತ್ತೇನೆ. ಇದನ್ನು ನಾನು ಮುಕ್ತವಾಗಿ ಹೇಳುತ್ತೇನೆ. ಒಂದು ವೇಳೆ ನನಗೆ ಅವಕಾಶ ಸಿಗಲಿಲ್ಲವಾದರೆ, ಪಾಕಿಸ್ತಾನ್‌ ಸೂಪರ್‌ ಲೀಗ್‌ ಟೂರ್ನಿಯಲ್ಲಿ ಆಡಲಿದ್ದೇನೆ. ಮುಂದಿನ ವರ್ಷ ನನಗೆ ಐಪಿಎಲ್‌ ಆಡುವ ಅವಕಾಶ ಸಿಗಲಿದೆ. ಒಂದು ವೇಳೆ ನನಗೆ ಅವಕಾಶ ಸಿಕ್ಕರೆ ನಾನು ಏಕೆ ಆಡಬಾರದು? ಹಾಗಾಗಿ ಐಪಿಎಲ್‌ ಆಡುತ್ತೇನೆ," ಎಂದು ಜಿಇಒ ನ್ಯೂಸ್‌ಗೆ ಮೊಹಮ್ಮದ್‌ ಆಮಿರ್‌ ತಿಳಿಸಿದ್ದಾರೆ.

IPL 2025: ಐಪಿಎಲ್‌ನಲ್ಲಿ ಅನಗತ್ಯ ದಾಖಲೆ ಬರೆದ ಕನ್ನಡಿಗ ಅಭಿನವ್

ಯಾವ ಲೀಗ್‌ಗೆ ಆಯ್ಕೆಯಾಗುತ್ತೇನೆಂಬುದು ಮುಖ್ಯ

ಮುಂದಿನ ವರ್ಷ ಐಪಿಎಲ್‌ ಹಾಗೂ ಪಿಎಸ್‌ಎಲ್‌ ಏಕಕಾಲದಲ್ಲಿ ನಡೆಯುತ್ತದೆ ಎಂದು ನನಗೆ ಅನಿಸುತ್ತಿಲ್ಲ. ಒಂದು ವೇಳೆ ಐಪಿಎಲ್‌ ಟೂರ್ನಿಗೆ ಆಯ್ಕೆಯಾದರೆ ನಾನು ಒಂದೇ ಒಂದು ಟೂರ್ನಿಯಲ್ಲಿ ಮಾತ್ರ ಆಡುತ್ತೇನೆ ಎಂದು ಅವರು ಹೇಳಿದ್ದಾರೆ.

"ಮುಂದಿನ ವರ್ಷ ಐಪಿಎಲ್‌ ಹಾಗೂ ಪಿಎಸ್‌ಎಲ್‌ ಎರಡೂ ಟೂರ್ನಿಗಳು ಏಕ ಸಮಯದಲ್ಲಿ ನಡೆಯಬಹುದೆಂದು ನನಗೆ ಅನಿಸುತ್ತಿಲ್ಲ. ಏಕೆಂದರೆ ಈ ವರ್ಷ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ನಡೆದಿದೆ. ನಾನು ಮೊದಲು ಪಿಎಸ್‌ಎಲ್‌ಗೆ ಆಯ್ಕೆಯಾದರೆ, ನಾನು ಆ ಟೂರ್ನಿಯನ್ನು ತೊರೆಯಲು ಸಾಧ್ಯವಾಗುವುದಿಲ್ಲ, ಏಕೆಂದರೆ ಹಾಗೆ ಮಾಡಿದರೆ ನಾನು ಆ ಟೂರ್ನಿಯಿಂದ ಬ್ಯಾನ್‌ ಆಗಬೇಕಾಗುತ್ತದೆ. ನಾನು ಮೊದಲು ಐಪಿಎಲ್‌ಗೆ ಆಯ್ಕೆಯಾದರೆ, ಆ ಲೀಗ್‌ನಿಂದಲೂ ಹೊರಬರಲು ಸಾಧ್ಯವಿಲ್ಲ. ಮೊದಲು ನಾನು ಯಾವ ಲೀಗ್‌ಗೆ ಆಯ್ಕೆಯಾಗುತ್ತೇನೆಂಬುದು ಇಲ್ಲಿ ಮುಖ್ಯ. ಮೊದಲಿಗೆ ಐಪಿಎಲ್‌ ಹರಾಜು ನಡೆದು, ಅದರಲ್ಲಿ ನಾನು ಅಲ್ಲಿ ಆಯ್ಕೆಯಾದರೆ, ಆ ಟೂರ್ನಿಯನ್ನು ತೊರೆಯಲು ಸಾಧ್ಯವಾಗುವುದಿಲ್ಲ. ಆಗ ಪಾಕಿಸ್ತಾನ ಸೂಪರ್‌ ಲೀಗ್‌ನಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ಐಪಿಎಲ್‌ಗೂ ಮುನ್ನ ಪಿಎಸ್‌ಎಲ್‌ಗೆ ಆಯ್ಕೆಯಾದರೆ, ಈ ಟೂರ್ನಿಯಿಂದಲೂ ಹೊರ ಬರಲು ಸಾಧ್ಯವಾಗುವುದಿಲ್ಲ," ಎಂದು ಮೊಹಮ್ಮದ್‌ ಆಮಿರ್‌ ತಿಳಿಸಿದ್ದಾರೆ.

ಪಹಲ್ಗಾಮ್ ಭಯೋತ್ಪಾದಕ ದಾಳಿ; ಕಠಿಣ ಕ್ರಮ ಕೈಗೊಂಡ ಬಿಸಿಸಿಐ ಉಪಾಧ್ಯಕ್ಷ

ಐಪಿಎಲ್‌ನಲ್ಲಿ ಪಾಕ್‌ ಆಟಗಾರರಿಗೆ ಅವಕಾಶ ಸಿಗುವುದು ಅನುಮಾನ

2008ರಲ್ಲಿ ನಡೆದಿದ್ದ ಮುಂಬೈ 26/11ರ ದುರ್ಘಟನೆ ಬಳಿಕ ಐಪಿಎಲ್‌ ಟೂರ್ನಿಯಲ್ಲಿ ಪಾಕಿಸ್ತಾನದ ಆಟಗಾರರನ್ನು ಬ್ಯಾನ್‌ ಮಾಡಲಾಗಿತ್ತು. ಅಂದಿನಿಂದ ಇಲ್ಲಿಯವರೆಗೂ ಭಾರತ ಹಾಗೂ ಪಾಕಿಸ್ತಾನ ತಂಡಗಳು ಕೂಡ ದ್ವಿಪಕ್ಷೀಯ ಸರಣಿಗಳಲ್ಲಿಯೂ ಆಡುತ್ತಿಲ್ಲ. ಇದೀಗ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದಿದ್ದ ಉಗ್ರರ ದಾಳಿಯಿಂದ 26 ಮಂದಿ ಪ್ರವಾಸಿಗರು ಬಲಿಯಾಗಿದ್ದಾರೆ. ಈ ದುರ್ಘಟನೆಯ ಹಿನ್ನೆಲೆಯಲ್ಲಿ ಬೇರೆ ರಾಷ್ಟ್ರ ಪೌರತ್ವದ ಹೊರತಾಗಿಯೂ ಪಾಕ್‌ ಆಟಗಾರರಿಗೆ ಐಪಿಎಲ್‌ ಟೂರ್ನಿಯಲ್ಲಿ ಆಡಲು ಅವಕಾಶ ನೀಡುವ ಸಾಧ್ಯತೆ ಇಲ್ಲ.