ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL Points Table: ಗೆದ್ದರೂ ಕೊನೆಯ ಸ್ಥಾನದಿಂದ ಮೇಲೇರದ ಚೆನ್ನೈ

ಇದುವರೆಗೆ ಆಡಿರುವ 11 ಪಂದ್ಯಗಳಲ್ಲಿ 7 ಜಯ, 3 ಸೋಲು, 1 ರದ್ದು ಒಳಗೊಂಡಂತೆ 15 ಅಂಕ ಕಲೆಹಾಕಿರುವ ಪಂಜಾಬ್​ ತಂಡ ಈ ಪಂದ್ಯ ಗೆದ್ದರೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶ ಹೊಂದಿದೆ. ಜತೆಗೆ ಪ್ಲೇಆಫ್​ ಸ್ಥಾನವನ್ನೂ ಬಹುತೇಕ ಖಾತ್ರಿಪಡಿಸಿಕೊಳ್ಳಲಿದೆ.

ಗೆದ್ದರೂ ಕೊನೆಯ ಸ್ಥಾನದಿಂದ ಮೇಲೇರದ ಚೆನ್ನೈ

Profile Abhilash BC May 8, 2025 6:53 AM

ಕೋಲ್ಕತಾ: ಪ್ಲೇ-ಆಫ್‌ ರೇಸ್‌ನಲ್ಲಿ(Playoff race) ಉಳಿದುಕೊಳ್ಳುವ ನಿರ್ಣಾಯಕ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಕೆಕೆಆರ್‌(KKR vs CSK) ತಂಡ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ 2 ವಿಕೆಟ್‌ ಅಂತರದ ಸೋಲು ಕಂಡಿದೆ. ಚೆನ್ನೈ ಗೆದ್ದರೂ ಅಂಕಪಟ್ಟಿಯಲ್ಲಿ(IPL Points Table) ಯಾವುದೇ ಸ್ಥಾನಗಳ ಬದಲಾವಣೆ ಸಂಭವಿಸಿಲ್ಲ. ಈ ಹಿಂದಿನಂತೆ ಧೋನಿ ಪಡೆ ಕೊನೆಯ ಸ್ಥಾನದಲ್ಲೇ ಮುಂದುವರಿದರೆ, ಕೆಕೆಆರ್‌ 6ನೇ ಸ್ಥಾನದಲ್ಲೇ ಉಳಿದಿದೆ. ತಲಾ 16 ಅಂಕಗಳಿಸಿರುವ ಗುಜರಾತ್‌ ಟೈಟಾನ್ಸ್‌ ಮತ್ತು ಆರ್‌ಸಿಬಿ ಕ್ರಮವಾಗಿ ಮೊದಲ ಎರಡು ಸ್ಥಾನದಲ್ಲಿದೆ.

ಇಂದು ನಡೆಯುವ ಪಂದ್ಯದಲ್ಲಿ ಮೂರನೇ ಸ್ಥಾನಿ ಪಂಜಾಬ್‌ ಕಿಂಗ್ಸ್‌ ಮತ್ತು ಐದನೇ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್‌ ಸೆಣಸಾಟ ನಡೆಸಲಿದೆ. ಡೆಲ್ಲಿಗೆ ಇದು ಮಸ್ಟ್‌ ವಿನ್‌ ಗೇಮ್‌ ಸೋತರೆ ಪ್ಲೇ ಆಫ್‌ ಹಾದಿ ಕಠಿಣಗೊಳ್ಳಲಿದೆ. ಇತ್ತಂಡಗಳ ಈ ಪಂದ್ಯ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನಡೆಯಲಿದೆ.

ಇದುವರೆಗೆ ಆಡಿರುವ 11 ಪಂದ್ಯಗಳಲ್ಲಿ 7 ಜಯ, 3 ಸೋಲು, 1 ರದ್ದು ಒಳಗೊಂಡಂತೆ 15 ಅಂಕ ಕಲೆಹಾಕಿರುವ ಪಂಜಾಬ್​ ತಂಡ ಈ ಪಂದ್ಯ ಗೆದ್ದರೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶ ಹೊಂದಿದೆ. ಜತೆಗೆ ಪ್ಲೇಆಫ್​ ಸ್ಥಾನವನ್ನೂ ಬಹುತೇಕ ಖಾತ್ರಿಪಡಿಸಿಕೊಳ್ಳಲಿದೆ. ಅಲ್ಲದೆ ಅಗ್ರ 2ರೊಳಗೆ ಸ್ಥಾನ ಸಂಪಾದಿಸುವ ಆಸೆಯನ್ನೂ ಜೀವಂತವಿಡಲಿದೆ. ಪ್ಲೇಆಫ್​ಗೇರಲು ಪಂಜಾಬ್​ಗೆ ಉಳಿದ 3 ಪಂದ್ಯಗಳಲ್ಲಿ 1 ಅಥವಾ 2 ಗೆಲುವಿನ ಅಗತ್ಯವಿದೆ.

ಇದನ್ನೂ ಓದಿ IPL 2025: ದೇವದತ್‌ ಪಡಿಕ್ಕಲ್‌ ಔಟ್‌, ಆರ್‌ಸಿಬಿಗೆ ಮರಳಿದ ಮಯಾಂಕ್‌ ಅಗರ್ವಾಲ್‌!

ಆರೆಂಜ್‌ ಕ್ಯಾಪ್‌ ಮತ್ತು ಪರ್ಪಲ್‌ ಕ್ಯಾಪ್‌ ವಿಭಾಗದಲ್ಲಿ ಯಾವುದೇ ಬದಲಾವಣೆ ಸಂಭವಿಸಿಲ್ಲ. 510 ರನ್‌ ಬಾರಿಸಿರುವ ಸೂರ್ಯಕುಮಾರ್‌ ಯಾದವ್‌ ಆರೆಂಜ್‌ ಕ್ಯಾಪ್‌, 20 ವಿಕೆಟ್‌ ಕಿತ್ತಿರುವ ಪ್ರಸಿದ್ಧ್‌ ಕೃಷ್ಣ ಪರ್ಪಲ್‌ ಕ್ಯಾಪ್‌ ಪಡೆದಿದ್ದಾರೆ.