ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Zaheer Khan: ಗಂಡು ಮಗುವಿಗೆ ಜನ್ಮ ನೀಡಿದ ಸಾಗರಿಕಾ: ತಂದೆಯಾದ ಸಂಭ್ರಮದಲ್ಲಿ ಜಹೀರ್‌ ಖಾನ್‌

ಭಾರತೀಯ ಕ್ರಿಕೆಟ್‌ನ ಎಡಗೈ ವೇಗಿ, 46 ವರ್ಷದ ಜಹೀರ್‌ ಖಾನ್‌ 2015ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಸದ್ಯ ಐಪಿಎಲ್‌ನಲ್ಲಿ ಲಕ್ನೋ ತಂಡದ ಮೆಂಟರ್‌ ಮತ್ತು ಬೌಲಿಂಗ್‌ ಕೋಚ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಂದೆಯಾದ ಜಹೀರ್‌ ಖಾನ್‌ಗೆ ಲಕ್ನೋ ಫ್ರಾಂಚೈಸಿ ಶುಭ ಹಾರೈಸಿದೆ.

ಗಂಡು ಮಗುವಿಗೆ ತಂದೆಯಾದ ಖುಷಿಯಲ್ಲಿ ಜಹೀರ್‌ ಖಾನ್‌

Profile Abhilash BC Apr 16, 2025 1:34 PM

ಮುಂಬಯಿ: ಭಾರತ ತಂಡದ ಮಾಜಿ ವೇಗಿ ಜಹೀರ್‌ ಖಾನ್‌(Zaheer Khan) ತಂದೆಯಾದ ಸಂತಸದಲ್ಲಿದ್ದಾರೆ. ಪತ್ನಿ ಸಾಗರಿಕಾ ಘಾಟ್ಗೆ(Sagarika Ghatge) ಬುಧವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಂತಸದ ವಿಚಾರವನ್ನು ಸ್ವತಃ ಸಾಗರಿಕಾ ಘಾಟ್ಗೆ ಸಾಮಾಜಿಕ ಜಾಲತಾಣದಲ್ಲಿ ಪತಿ ಮತ್ತು ಮಗುವಿನ ಫೋಟೊವೊಂದನ್ನು ಹಂಚಿಕೊಂಡು ಪ್ರಕಟಿಸಿದ್ದಾರೆ. ಮಗನಿಗೆ ಫತೇಸಿನ್ಹ್ ಖಾನ್ (Fatehsinh Khan) ಎಂದು ಹೆಸರಿಡಲಾಗಿದೆ. ʼಫತೇಹ್ʼ ಎಂದರೆ ವಿಜಯಶಾಲಿ ಎಂದು ಅರ್ಥ. ಸಾಗರಿಕಾ ಘಾಟ್ಗೆ ರಜಪೂತ ವಂಶಸ್ಥರಾಗಿದ್ದು, ಹೀಗಾಗಿ ಮಗುವಿನ ಹೆಸರಿನಲ್ಲಿ ಸಿನ್ಹ್​ ಸೇರಿಸಲಾಗಿದೆ.

"ಪ್ರೀತಿ, ಕೃತಜ್ಞತೆ ಮತ್ತು ದೈವಿಕ ಆಶೀರ್ವಾದಗಳೊಂದಿಗೆ ನಾವು ನಮ್ಮ ಪುಟ್ಟ ಗಂಡು ಮಗು ಫತೇಸಿನ್ ಖಾನ್‌ನನ್ನು ಈ ಜಗತ್ತಿಗೆ ಸ್ವಾಗತಿಸುತ್ತೇವೆ" ಎಂದು ಸಾಗರಿಕಾ ತಮ್ಮ ಇನ್‌ಸ್ಟಾಗ್ರಾಮ್‌ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಬಾಲಿವುಡ್ ನಟಿ ಸಾಗರಿಕಾ ಘಾಟ್ಗೆ ಅವರನ್ನು ಜಹೀರ್‌ ಖಾನ್‌ 2017ರಲ್ಲಿ ವಿವಾಹವಾಗಿದ್ದರು. ಸಾಗರಿಕಾ ಅವರು ‘ಚಕ್‌ ದೇ ಇಂಡಿಯಾ’ ಹಿಂದಿ ಸಿನಿಮಾದಲ್ಲಿ ನಟಿಸಿದ್ದರು. ಅದಕ್ಕೂ ಮುನ್ನ ಅವರು ಭಾರತೀಯ ಹಾಕಿ ತಂಡದಲ್ಲಿ ಆಡಿದ್ದರು. ಮುಂದೆ ಬಾಲಿವುಡ್‌ನ‌ಲ್ಲಿ ಸಾಗರಿಕಾ ಹೆಸರು ಮಾಡಿದರು. ಇದೇ ವೇಳೆ ಜಹೀರ್‌ ನಡುವೆ ಪ್ರೀತಿ ಬೆಳೆದಿತ್ತು.

46 ವರ್ಷದ ಭಾರತೀಯ ಕ್ರಿಕೆಟ್‌ನ ಎಡಗೈ ವೇಗಿ, ಜಹೀರ್‌ ಖಾನ್‌ 2015ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಸದ್ಯ ಐಪಿಎಲ್‌ನಲ್ಲಿ ಲಕ್ನೋ ತಂಡದ ಮೆಂಟರ್‌ ಮತ್ತು ಬೌಲಿಂಗ್‌ ಕೋಚ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಂದೆಯಾದ ಜಹೀರ್‌ ಖಾನ್‌ಗೆ ಲಕ್ನೋ ಫ್ರಾಂಚೈಸಿ ಶುಭ ಹಾರೈಸಿದೆ.

ಜಹೀರ್​ ಖಾನ್ ಮುಸ್ಲಿಂ ಸಮುದಾಯದವರಾಗಿದ್ದರೂ ಹಿಂದುಗಳ ಹಬ್ಬವನ್ನು ಕೂಡ ಪತ್ನಿ ಜತೆ ಆಚರಿಸುತ್ತಿರುತ್ತಾರೆ. ಇದೇ ಕಾರಣಕ್ಕೆ ಅವರ ವಿರುದ್ಧ ಮುಸ್ಲಿಂ ಮೂಲಭೂತವಾದಿಗಳು ಆಗಾಗ ಟೀಕೆಗಳನ್ನು ದ್ವೇಷಪೂರಿತ ಕಾಮೆಂಟ್​ಗಳ ಮೂಲಕ ನಿಂದನೆ ಮಾಡುತ್ತಿರುತ್ತಾರೆ.

ಜಹೀರ್‌ ಕ್ರಿಕೆಟ್​ ಸಾಧನೆ

ಭಾರತ ಕ್ರಿಕೆಟ್‌ ತಂಡದ ವೇಗದ ಬೌಲರ್‌ ಆಗಿ ಜಹೀರ್‌ ಖಾನ್‌ ಅಪಾರ ಸಾಧನೆ ಮಾಡಿದ್ದಾರೆ. 2011ರ ಏಕದಿನ ವಿಶ್ವಕಪ್​ನಲ್ಲಿ ಮಪದಲ ಓವರ್​ ಮೇಡನ್​ ಎಸೆದು ಎದುರಾಳಿ ಲಂಕಾ ತಂಡದ ಮೇಲೆ ಒತ್ತಡ ಹೇರಿದ್ದರು. ಭಾರತ ಪರ 200 ಏಕದಿನ ಪಂದ್ಯ ಆಡಿರುವ ಅವರು 282 ವಿಕೆಟ್​ ಕಬಳಿಸಿದ್ದಾರೆ. 92 ಟೆಸ್ಟ್​ಗಳಿಂದ 311 ವಿಕೆಟ್​, 17 ಟಿ20 ಪಂದ್ಯಗಳಿಂದ 17 ವಿಕೆಟ್​ ಪಡೆದಿದ್ದಾರೆ. ಐಪಿಎಲ್​ನಲ್ಲಿ ಭರ್ತಿ 100 ಪಂದ್ಯ ಆಡಿ 102 ವಿಕೆಟ್​ ಪಡೆದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಒಟ್ಟು 610 ವಿಕೆಟ್​ ಕಿತ್ತ ಸಾಧನೆ ಮಾಡಿದ್ದಾರೆ.