Sri Nirmalanand Swamiji Column: ರಾಕೆಟ್‌ ಉಡಾವಣೆಯಲ್ಲೂ ದೇಹಾಭಿಮಾನ ಕಳೆದುಹೋಗುವುದಿದೆ !

ಅಂತಿಮವಾಗಿ ಜ್ಞಾನದಿಂದಷ್ಟೇ ಮೋಕ್ಷಸಿದ್ಧಿ, ಜ್ಞಾನ ಮತ್ತು ಕರ್ಮಗಳನ್ನು ಸಮುಚ್ಚಯ ಗೊಳಿಸಿ ಸಾಧನೆಯಲ್ಲಿ ತೊಡಗಬೇಕಾದ ಅವಶ್ಯಕತೆಯಿಲ್ಲ ಎಂದು ಪ್ರತಿಪಾದಿಸುತ್ತಾರೆ (ಬ್ರಹ್ಮಸೂತ್ರಭಾಷ್ಯ 3.4.1.).

ಉಪಗ್ರಹ ಒಮ್ಮೆ ತನ್ನ ಕಕ್ಷೆಯಲ್ಲಿ ಪರಿಭ್ರಮಿಸಲು ಪ್ರಾರಂಭಿಸಿದ ಮೇಲೆ ರಾಕೆಟ್ ಉಪಗ್ರಹದಿಂದ ಕಳಚಿಕೊಳ್ಳುತ್ತದೆ. ಪುನಃ ಭೂಮಿಯ ಗುರುತ್ವಾಕರ್ಷಣೆಗೆ ಸಿಲುಕಿ ಸುಟ್ಟು ಹೋಗುತ್ತದೆ. ಇಲ್ಲವೇ ಬಾಹ್ಯಾಕಾಶ ಕಸ (ಸ್ಪೇಸ್ ಜಂಕ್) ವಾಗುತ್ತದೆ
Profile Ashok Nayak January 15, 2025

Source : Vishwavani Daily News Paper

ನಿರ್ಮಲನುಡಿ

ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ

ರಾಕೆಟ್ಟಿನ ಉಡಾವಣೆಯ ೨ನೇ ಹಂತವನ್ನು ಪ್ಲೇಸ್‌ಮೆಂಟ್ ಅಥವಾ ಆರ್ಬಿಟ್ ಇನ್ಸರ್ಷನ್ ಎನ್ನುತ್ತಾರೆ. ಈ ಹಂತದಲ್ಲಿ ರಾಕೆಟ್ಟು ಉಪಗ್ರಹವನ್ನು ಅದರ ಕಕ್ಷೆ ಯಲ್ಲಿ ಸ್ಥಿರವಾಗಿ ನೆಲೆ ಗೊಳಿಸುತ್ತದೆ. ಯಮ ನಿಯಮಗಳ ನೆರವಿನಿಂದ ಲೌಕಿಕ ಸೆಳೆತದಿಂದ ಬಿಡುಗಡೆ ಹೊಂದುವ ಮುಮುಕ್ಷುಗಳು ಅಷ್ಟಾಂಗ ಯೋಗದ ಮುಂದಿನ ಮೂರು ಹಂತಗಳನ್ನು ತಲುಪುತ್ತಾರೆ, ಸಾಧನೆಯಲ್ಲಿ ಸ್ಥಿರವಾಗಿ ನೆಲೆಗೊಳ್ಳುತ್ತಾರೆ.

ಭಾರತೀಯ ಅಧ್ಯಾತ್ಮ ಪರಂಪರೆಯಲ್ಲಿ ಯೋಗಮಾರ್ಗವಲ್ಲದೇ ಭಕ್ತಿ ಅಥವಾ ಪ್ರಪತ್ತಿ ಎಂಬ ಮತ್ತೊಂದು ಮಾರ್ಗವೂ ಉಂಟು. ಭಗವಂತನಿಗೆ ಶರಣಾಗುವ ಮೂಲಕವೂ

ಸಾಧಕರು ತಮ್ಮ ಕರ್ಮಕ್ಲೇಶಗಳನ್ನು ಕಳೆದುಕೊಂಡು ಶ್ರೇಯೋಮಾರ್ಗದಲ್ಲಿ ಕ್ರಮಿಸ ಬಹುದು. ಪತಂಜಲಿ ತಮ್ಮ ಯೋಗಸೂತ್ರಗಳಲ್ಲಿ ಈ ಪ್ರಪತ್ತಿ ಮಾರ್ಗವನ್ನು ಸೂಕ್ಷ್ಮವಾಗಿ ಉಲ್ಲೇಖಿಸಿರುವರಾದರೂ (ಯೋ.ಸೂ. 1.23) ಅದನ್ನು ವಿಸ್ತೃತವಾಗಿ ವಿವರಿಸಲು ಹೋಗುವುದಿಲ್ಲ.

ಸಾಧಕರು ಪ್ರಪತ್ತಿ ಮಾರ್ಗದ ಅಧಿಕಾರಿಗಳಾಗಬೇಕೆಂದರೆ ಕರ್ಮ ಹಾಗೂ ಭಕ್ತಿಯೋಗ ಗಳನ್ನು ಸಮುಚ್ಚಯಗೊಳಿಸಬೇಕಾಗುತ್ತದೆ. ಸಾಧನೆಯ ಮಾರ್ಗದಲ್ಲಿ ಸಾಧಕರು ಮಲ, ವಿಕ್ಷೇಪ ಮತ್ತು ಆವರಣ ಎಂಬ ಮೂರು ಅಡಚಣೆಗಳನ್ನು ಎದುರಿಸುವರು. ಈ ಅಡಚಣೆ ಗಳ ನಿವಾರಣೆಗೆ ಕರ್ಮ ಸಮುಚ್ಚಯ ಮಾರ್ಗ ಬಹಳ ಸಹಾಯಕಾರಿ ಯಾದುದೆಂಬ ಅಭಿಪ್ರಾಯವೂ ಇದೆ. ಕಾಮ ಕ್ರೋಧಾದಿ ಅರಿಷಡ್ವರ್ಗಗಳೇ ಮಲವೆಂಬ ಮೊದಲ ಅಡಚಣೆಯಾಗಿದೆ. ಸೇವೆ ಹಾಗೂ ನಿಷ್ಕಾಮ ಕರ್ಮದಿಂದ ಈ ಮಲವನ್ನು ನಿವಾರಿಸಿ ಕೊಳ್ಳಬಹುದು.

ಆದರೆ ಆದಿಶಂಕರರು ಈ ಮಾರ್ಗವನ್ನು ತೀಕ್ಷ್ಣವಾಗಿ ಖಂಡಿಸುತ್ತಾರೆ. ಕರ್ಮ ಸಮುಚ್ಚಯ ದಿಂದ ಆತ್ಮಜ್ಞಾನ ಸಿದ್ಧಿಯಾಗುವುದಿಲ್ಲ; ಕರ್ಮ ಸಮುಚ್ಚಯ ಮಾರ್ಗವು ಹೆಚ್ಚೆಂದರೆ

ಮೋಕ್ಷ ಸಾಧನೆಗೆ ಸಾಧಕರನ್ನು ಸಜ್ಜುಗೊಳಿಸಬಹುದು. ಅಂತಿಮವಾಗಿ ಜ್ಞಾನದಿಂದಷ್ಟೇ ಮೋಕ್ಷಸಿದ್ಧಿ, ಜ್ಞಾನ ಮತ್ತು ಕರ್ಮಗಳನ್ನು ಸಮುಚ್ಚಯಗೊಳಿಸಿ ಸಾಧನೆಯಲ್ಲಿ

ತೊಡಗಬೇಕಾದ ಅವಶ್ಯಕತೆಯಿಲ್ಲ ಎಂದು ಪ್ರತಿಪಾದಿಸುತ್ತಾರೆ (ಬ್ರಹ್ಮಸೂತ್ರಭಾಷ್ಯ 3.4.1.). ಆದ್ದರಿಂದ ಇದನ್ನು ಕರ್ಮ ಸಮುಚ್ಚಯವೆನ್ನದೇ ಕ್ರಮ ಸಮುಚ್ಚಯವೆಂದು ಕರೆಯು ವುದು ಸೂಕ್ತ. ಅಂದರೆ ಜ್ಞಾನ ಕರ್ಮಗಳನ್ನು ಸಮನ್ವಯಿಸಿ ಸಾಧನೆಯಲ್ಲಿ ತೊಡಗದೇ ಮೊದಲು ಕರ್ಮದಿಂದ ಮಲಗಳನ್ನು ನೀಗಿಸಿಕೊಂಡು ಬಳಿಕ ಜ್ಞಾನೈಕ ಮಾರ್ಗವನ್ನು ಅವಲಂಬಿಸುವುದು ಕ್ರಮ ಸಮುಚ್ಚಯವಾಗಿದೆ.

ಇನ್ನು, ಉಪಗ್ರಹವನ್ನು ಹೊತ್ತು ಅಂತರಿಕ್ಷದೆಡೆಗೆ ಸಾಗುವ ರಾಕೆಟ್ಟಿನ ಉಡಾವಣೆಯ ಎರಡನೆಯ ಹಂತವನ್ನು ಪ್ಲೇಸ್‌ಮೆಂಟ್ ಅಥವಾ ಆರ್ಬಿಟ್ ಇನ್ಸರ್ಷನ್ ಎನ್ನುತ್ತಾರೆ. ಈ ಹಂತದಲ್ಲಿ ರಾಕೆಟ್ಟು ಉಪಗ್ರಹವನ್ನು ಅದರ ಕಕ್ಷೆಯಲ್ಲಿ ಸ್ಥಿರವಾಗಿ ನೆಲೆಗೊಳಿಸುತ್ತದೆ. ಯಮ ನಿಯಮಗಳ ನೆರವಿನಿಂದ ಲೌಕಿಕ ಸೆಳೆತದಿಂದ ಬಿಡುಗಡೆ ಹೊಂದುವ ಮುಮುಕ್ಷುಗಳು ಅಷ್ಟಾಂಗ ಯೋಗದ ಮುಂದಿನ ಮೂರು ಹಂತಗಳನ್ನು (ಆಸನ, ಪ್ರಾಣಾಯಾಮ ಮತ್ತು ಪ್ರತ್ಯಾಹಾರ) ತಲುಪುತ್ತಾರೆ, ಸಾಧನೆಯಲ್ಲಿ ಸ್ಥಿರವಾಗಿ ನೆಲೆಗೊಳ್ಳುತ್ತಾರೆ.

ಯಾವುದನ್ನು ಭಕ್ತಿ ಅಥವಾ ಪ್ರಪತ್ತಿ ಮಾರ್ಗವು ವಿಕ್ಷೇಪವೆನ್ನುತ್ತದೋ ಆ ಅಡಚಣೆ ಯನ್ನು ಸಾಧಕರು ಉಪಾಸನೆಯ ಮೂಲಕ ಕಳೆದುಕೊಂಡು ಈ ಹಂತವನ್ನು ತಲುಪು ತ್ತಾರೆ. ಅಷ್ಟಾಂಗ ಯೋಗದಲ್ಲಿ ಆಸನವೆಂದರೆ ಬಹುತೇಕರು ಶಾರೀರಿಕ ಕಸರತ್ತು ಎಂದೇ ಭಾವಿಸುವರು. ಆದರೆ ಪತಂಜಲಿ ಅದನ್ನು ‘ಸ್ಥಿರಂ ಸುಖಂ ಆಸನಮ್’ ಎಂದು ವ್ಯಾಖ್ಯಾ ನಿಸುವರು. ಉಪಗ್ರಹವು ತನ್ನ ಕಕ್ಷೆಯಲ್ಲಿ ಸ್ಥಿರಗೊಳ್ಳುವಂತೆ ಚಿತ್ತವು ತನ್ನಲ್ಲಿ ತಾನು ಸ್ಥಿರವಾಗಿ, ಸುಖವಾಗಿ ನೆಲೆಗೊಳ್ಳುವುದೇ ಆಸನ. ಈ ಹಂತದಲ್ಲಿ ಮುಮುಕ್ಷುಗಳಿಗೆ ಶರೀರವು ಯಾವುದೇ ಬಾಧೆ ನೀಡುವುದಿಲ್ಲ. ಚಿತ್ತವೃತ್ತಿಗಳು ಒಂದು ಸಮಸ್ಥಿತಿಗೆ ಬರುತ್ತವೆ.

ಒಮ್ಮೆ ಚಿತ್ತವೃತ್ತಿಗಳು ಸಂಯಮಗೊಂಡಾಗ ಉಸಿರಾಟವೂ ಸಂಯಮಗೊಳ್ಳುತ್ತದೆ, ಒಂದು ತಹಬಂದಿಗೆ ಬರುತ್ತದೆ. ಲೌಕಿಕ ವ್ಯವಹಾರಗಳು ಉಸಿರಾಟ ಸಂಯಮಗೊಳ್ಳಲು

ಆಸ್ಪದ ನೀಡುವುದಿಲ್ಲ. ಚಿತ್ತವು ಕೋಪ, ಆಸೆ, ಅಸೂಯೆ, ಭೋಗ ಮುಂತಾದ ಒಂದೊಂದು ವಿಕಲ್ಪದ ಮೂಲಕ ಹಾದು ಹೋದಾಗಲೂ ಉಸಿರಾಟದ ಕ್ರಮದಲ್ಲಿ ವ್ಯತ್ಯಾಸವಾಗುತ್ತದೆ.

ಆದರೆ ದೇಹ ಮನಸ್ಸುಗಳು ಸ್ಥಿರವಾಗಿ ಸುಖವಾಗಿ ಆಸೀನವಾದಾಗ ಪ್ರಾಣಾಯಾಮ ಸಿದ್ಧಿಸು ತ್ತದೆ. ಇನ್ನು, ಪ್ರತ್ಯಾಹಾರವೆಂದರೆ ಶರೀರ ಮತ್ತು ಮನಸ್ಸುಗಳ ಚೈತನ್ಯ ಒಳಮುಖಿ ಯಾಗುವುದು. ‘ಹೃ’ ಎಂಬ ಧಾತುವಿನಿಂದ ‘ಆಹಾರ’ ಎಂಬ ಪದ ನಿಷ್ಪತ್ತಿಯಾಗಿದೆ. ಆಹಾರಕ್ಕೆ ಚಲನೆ ಎಂಬರ್ಥವಿದೆ. ಇದಕ್ಕೆ ‘ಪ್ರತಿ’ ಎಂಬ ಉಪಸರ್ಗ ಸೇರಿ ‘ಪ್ರತ್ಯಾಹಾರ’ ಎಂಬ ಪದ ರೂಪುಗೊಂಡಿದೆ.

ಪ್ರತ್ಯಾಹಾರವೆಂದರೆ ಒಳಮುಖ ಚಲನೆ. ದೇಹ ಮನಸ್ಸುಗಳ ಶಕ್ತಿಯ ಒಗ್ಗೂಡುವಿಕೆಗೆ ಪ್ರತ್ಯಾಹಾರವೆನ್ನುವರು. ಸಾಧಾರಣವಾಗಿ ನಮ್ಮ ಚೈತನ್ಯ ಹೊರಮುಖವಾಗಿ ಹರಿಯುತ್ತಿ

ರುತ್ತದೆ. ಪ್ರತ್ಯಾಹಾರದಲ್ಲಿ ಚೈತನ್ಯವು ಹಾಗೆ ವ್ಯಯವಾಗದೇ ಒಳಗೇ ಸಂಗ್ರಹಿತವಾಗುತ್ತದೆ, ಸಾಧಕರ ಮುಂದಿನ ಹಂತದ ಸಾಧನೆಗೆ ಈ ಚೈತನ್ಯ ನೆರವಿಗೆ ಬರುತ್ತದೆ. ಕ್ರಮ ಸಮುಚ್ಚಯ

ಮಾರ್ಗವನ್ನು ಅನುಲಕ್ಷಿಸಿ ಹೇಳುವುದಾದರೆ ಈ ಹಂತದಲ್ಲಿ ಆವರಣ ಮಲವಷ್ಟೇ ಉಳಿದಿರುತ್ತದೆ. ಇದನ್ನು ಸಾಧಕರು ನಿದಿಧ್ಯಾಸನದಿಂದ, ತತ್ವಮಸಿ ಮುಂತಾದ ಮಹಾ ವಾಕ್ಯಗಳ ಧ್ಯಾನದಿಂದ ಕಳೆದುಕೊಳ್ಳಬಹುದು.

ಉಪಗ್ರಹ ಉಡಾವಣೆಯ ಮೂರನೆಯ ಹಂತವನ್ನು ‘ಆಪರೇಷನ್’ ಅಥವಾ ಕಾರ್ಯಾ ಚರಣೆ ಎನ್ನುವರು. ಈ ಹಂತದಲ್ಲಿ ಉಪಗ್ರಹವು ಕ್ರಿಯಾಶೀಲವಾಗುತ್ತದೆ. ತನ್ನ ಕಕ್ಷೆಯಲ್ಲಿ ಅಬಾಧಿತವಾಗಿ ಪರಿಭ್ರಮಿಸಲಾರಂಭಿಸುತ್ತದೆ. ಅಷ್ಟಾಂಗ ಯೋಗದ ಕೊನೆಯ ಮೂರು ಹಂತಗಳಲ್ಲಿ (ಧ್ಯಾನ, ಧಾರಣ ಮತ್ತು ಸಮಾಧಿ) ಚಿತ್ತವೂ ಇದೇ ರೀತಿ ಪರಮತತ್ವದಲ್ಲಿ ಅಬಾಧಿತವಾಗಿ ಚಲಿಸಲಾರಂಭಿಸುತ್ತದೆ. ಮೊದಲೆರಡು ಅಂಗಗಳು (ಯಮ ಮತ್ತು ನಿಯಮಗಳು) ಸಾಧಕ ಮತ್ತು ಹೊರಜಗತ್ತಿಗೆ ಸಂಬಂಧಿಸಿದ ಸಾಧನೆಗಳಾಗಿವೆ.

ಮುಂದಿನ ಮೂರು ಅಂಗಗಳು (ಆಸನ, ಪ್ರಾಣಾಯಾಮ ಮತ್ತು ಪ್ರತ್ಯಾಹಾರ) ಸಾಧಕ ಮತ್ತು ಅವನ ಶರೀರಕ್ಕೆ ಸಂಬಂಧಿಸಿದ ಸಾಧನೆಗಳಾಗಿವೆ. ಇನ್ನು ಕೊನೆಯ ಮೂರು ಅಂಗಗಳು (ಧ್ಯಾನ, ಧಾರಣ ಮತ್ತು ಸಮಾಧಿ) ಸಾಧಕ ಮತ್ತು ಪರಮತತ್ವಕ್ಕೆ ಸಂಬಂಽಸಿದ ಸಾಧನೆಗಳಾಗಿವೆ. ಈ ಮೂರನೆಯ ಹಂತದಲ್ಲಿ ಸಾಧಕರಿಗೆ ಲೋಕದ ಗೊಡವೆಯಾಗಲಿ ಅಥವಾ ಶರೀರ ಭಾವವಾಗಲಿ ಇರುವುದಿಲ್ಲ. ಇಲ್ಲಿ ಸಾಧಕ ಮತ್ತು ಪರಮತತ್ವ ಇವೆರಡೇ ಇರುವುದು. ಈ ಹಂತವನ್ನು ಶ್ರೀ ರಾಮಕೃಷ್ಣರು ತಮ್ಮ ಸ್ವಾನುಭವದಿಂದಲೇ ಹೀಗೆ ವರ್ಣಿಸಿದ್ದಾರೆ “ಜೀವಾತ್ಮ ಒಮ್ಮೆ ಪರಮಾತ್ಮನಲ್ಲಿ ಸ್ಥಿರವಾಗಿ ನೆಲೆಗೊಂಡ ಮೇಲೆ ಶರೀರ

ಕೃತಕೃತ್ಯವಾಗುತ್ತದೆ.

ಅಲ್ಲಿಂದಾಚೆಗೆ ಸಾಧಕರಿಗೆ ಶರೀರ ಅಗತ್ಯವೆನಿಸುವುದಿಲ್ಲ. ಒಮ್ಮೆ ನಿರ್ವಿಕಲ್ಪ ಸಮಾಧಿಯ

ಅನುಭವವಾದ ಮೇಲೆ ಶರೀರ ತರಗೆಲೆಯಂತೆ ಬಿದ್ದು ಹೋಗುತ್ತದೆ". ಈ ಸ್ಥಿತಿಯನ್ನು ಉಪನಿಷತ್ತು ಹೀಗೆ ವರ್ಣಿಸುತ್ತದೆ: ದೇಹಾಭಿಮಾನೇ ಗಲಿತೇ ವಿಜ್ಞಾತೇ ಪರಮಾತ್ಮನಿ |

ಯತ್ರ ಯತ್ರ ಮನೋ ಯಾತಿ ತತ್ರ ತತ್ರ ಬ್ರಹ್ಮದರ್ಶನಮ್ || (ಅರ್ಥ: ದೇಹಾಭಿಮಾನ ಅಥವಾ ದೇಹಾತ್ಮ ಭಾವ ಕಳೆದುಕೊಂಡು ಪರಮಾತ್ಮನಲ್ಲಿ ತನ್ನನ್ನು ತಾನು ಕಾಣುವ

ಯೋಗಿಯ ಮನಸ್ಸು ಎಲ್ಲೆಲ್ಲಿ ತಿರುಗಿದರೂ ಅಲ್ಲೆಲ್ಲ ಬ್ರಹ್ಮನನ್ನೇ ದರ್ಶಿಸುವುದು).

ರಾಕೆಟ್ ಉಡಾವಣೆಯಲ್ಲೂ ದೇಹಾಭಿಮಾನ ಕಳೆದುಹೋಗುವ ಇಂಥದೇ ಪ್ರಕ್ರಿಯೆ ಸಂಭವಿಸುತ್ತದೆ. ಉಪಗ್ರಹ ಒಮ್ಮೆ ತನ್ನ ಕಕ್ಷೆಯಲ್ಲಿ ಪರಿಭ್ರಮಿಸಲು ಪ್ರಾರಂಭಿಸಿದ ಮೇಲೆ

ರಾಕೆಟ್ ಉಪಗ್ರಹದಿಂದ ಕಳಚಿಕೊಳ್ಳುತ್ತದೆ. ಪುನಃ ಭೂಮಿಯ ಗುರುತ್ವಾಕರ್ಷಣೆಗೆ ಸಿಲುಕಿ ಸುಟ್ಟು ಹೋಗುತ್ತದೆ. ಇಲ್ಲವೇ ಬಾಹ್ಯಾಕಾಶ ಕಸ (ಸ್ಪೇಸ್ ಜಂಕ್) ವಾಗುತ್ತದೆ. ಒಟ್ಟಿನಲ್ಲಿ ಉಪಗ್ರಹದೊಂದಿಗಿನ ಸಂಬಂಧವನ್ನು ಕಳೆದುಕೊಳ್ಳುತ್ತದೆ. ಇಂದು ಉಪಗ್ರಹದ ನೆರವಿಲ್ಲದೇ ನಮ್ಮ ಬದುಕು ತನ್ನ ಚಲನೆಯನ್ನೇ ಕಳೆದುಕೊಂಡುಬಿಡುತ್ತದೆ ಎನ್ನುವ ಮಟ್ಟಿಗೆ ನಾವು ಅವಲಂಬಿತರಾಗಿದ್ದೇವೆ.

ಹವಾಮಾನ, ಮಾಹಿತಿ ತಂತ್ರಜ್ಞಾನ, ರಕ್ಷಣಾ ಇಲಾಖೆ ಮುಂತಾದ ಕ್ಷೇತ್ರಗಳಿಗೆ ಒಟ್ಟಾರೆ ಭೂಮಿಯ ಮೇಲಿನ ನಮ್ಮ ಬದುಕಿಗೆ ಉಪಗ್ರಹದಿಂದಾಗುವ ಪ್ರಯೋಜನಗಳನ್ನು ವಿವರಿಸಬೇಕಾದ ಅಗತ್ಯವಿಲ್ಲ. ರಾಕೆಟ್‌ನ ಹಂಗಿಲ್ಲದೇ ತನ್ನ ಕಕ್ಷೆಯಲ್ಲಿ ಪರಿಭ್ರಮಿಸುವ ಉಪಗ್ರಹವು ಪ್ರಾರಂಭದಲ್ಲಿ ವಿವರಿಸಿದಂತೆ ಎಫ್ಎಂ ಮಾಡ್ಯುಲೇಷನ್ ಮತ್ತು ವಿಎಚ್‌ಎ- ಬ್ಯಾಂಡ್‌ ಗಳನ್ನು ಬಳಸಿ ಭೂಮಿಗೆ ಸಂದೇಶಗಳನ್ನು ಪ್ರಸರಣ ಮಾಡುತ್ತದೆ.

ಉಪಗ್ರಹ ಉಡಾವಣೆಯ ನಾಲ್ಕನೆಯ ಹಾಗೂ ಕೊನೆಯ ಹಂತ ಪೇಲೋಡ್ ಸೇವೆ ಯಾಗಿದೆ. ಈ ಹಂತದಲ್ಲಿ ಉಪಗ್ರಹವು ಕಕ್ಷೆಗೆ ಸೇರಿ ಭೂಮಿಗೆ ಮಾಹಿತಿಗಳನ್ನು ಪ್ರಸರಣ ಮಾಡುತ್ತದೆ. ಇದೇ ರೀತಿ ಎಲ್ಲವನ್ನೂ ಪರಿತ್ಯಜಿಸಿ ಪರಮಾತ್ಮನಲ್ಲಿ ಐಕ್ಯವಾಗುವ ಯೋಗಿಗಳೂ ಭೂಮಿಯನ್ನು ಅನುಗ್ರಹಿಸುವರು. ಯೋಗಿಯ ಈ ಸ್ಥಿತಿಯನ್ನು ಮಹರ್ಷಿ

ಪತಂಜಲಿ ‘ಧರ್ಮಮೇಘ ಸಮಾಧಿ’ ಎಂದು ಕರೆದಿರುವರು. ಮೋಡವು ಭೂಮಿಯ ಮೇಲೆ ಮಳೆ ಸುರಿಸುವಂತೆ ಧರ್ಮಮೇಘ ಸಮಾಧಿಯನ್ನು ಹೊಂದುವ ಯೋಗಿಗಳು

ಭೂಮಿಯ ಜನಗಳ ಮೇಲೆ ತಮ್ಮ ಕರುಣೆಯನ್ನು, ಅನುಗ್ರಹವನ್ನು ಸುರಿಸುತ್ತಾರೆ. ಧರ್ಮಮೇಘದ ಪರಿಕಲ್ಪನೆ ಬೌದ್ಧಧರ್ಮದಲ್ಲೂ ಉಂಟು. ದಶಭೂಮಿಕಾ ಸೂತ್ರದಲ್ಲಿ

ಬೋಧಿಸತ್ವರ ಹತ್ತು ಲಕ್ಷಣಗಳನ್ನು (ಪ್ರಮುದಿತ, ವಿಮಲ, ಪ್ರಭಂಕರಿ, ಅರ್ಚಿಷ್ಮತಿ, ಸುದುರ್ಜಯ, ಅಭಿಮುಖಿ, ದೂರಂಗಮ, ಅಚಲ, ಸಾಧುಮತಿ ಮತ್ತು ಧರ್ಮಮೇಘ)

ವಿವರಿಸಲಾಗಿದೆ. ಧರ್ಮಮೇಘದ ಹಂತದಲ್ಲಿ ಬೋಧಿಸತ್ವರು ಅನುಗ್ರಹ ರೂಪಿ ಗಳಾಗುವರು. ಪರಮತತ್ವವನ್ನು ತಲುಪುವ ಸಾಧಕರು ಅದರಲ್ಲೇ ಶಾಶ್ವತವಾಗಿ ವಿಲೀನ ರಾಗುವರು, ಶೂನ್ಯರಾಗುವರು. ಎಲ್ಲೋ ಅಪರೂಪಕ್ಕೆ ಬುದ್ಧ, ಮಹಾವೀರ, ಶ್ರೀ ರಾಮಕೃಷ್ಣರಂಥ ಸಿದ್ಧಪುರುಷರು ಹಾಗೆ ವಿಲೀನರಾಗದೇ ಲೋಕದ ಕಡೆಗೆ ಹಿಂದಿರುಗಿ ನೋಡುವರು, ಲೋಕದ ಜಟಿಲತೆಗಳಲ್ಲಿ ನವೆಯುತ್ತಿರುವ ಜನಗಳನ್ನು ಮೋಕ್ಷ ಮಾರ್ಗದತ್ತ ನಡೆಸುವರು. ಜೈನದರ್ಶನವು ಈ ಎರಡು ಬಗೆಯ ಅನುಭಾವಿಗಳನ್ನು

ಸಿದ್ಧರು ಮತ್ತು ತೀರ್ಥಂಕರರು ಎಂದು ವಿಂಗಡಿಸುತ್ತದೆ.

ಸಿದ್ಧಪುರುಷರು ಸಿದ್ಧಶಿಲೆಯ ಮೇಲೆ ಹೋಗಿ ಕೂರುವರು, ಮತ್ತೆ ಹಿಂದಿರುಗಿ ಬರುವುದಿಲ್ಲ. ತೀರ್ಥಂಕರರಾದರೂ ಮತ್ತೆ ಹಿಂದಿರುಗಿ ನೋಡುತ್ತಾರೆ, ಲೋಕದ ಜನಗಳನ್ನು ಸಂಸಾರದ

ಜಂಜಾಟದಿಂದ ಪಾರುಮಾಡುತ್ತಾರೆ. ‘ತೃ’ ಎಂಬ ಧಾತುವಿನಿಂದ ‘ತೀರ್ಥಂಕರ’ ಎಂಬ ಪದ ನಿಷ್ಪನ್ನವಾಗಿದೆ. ತೃ ಎಂದರೆ ದಾಟಿಸುವಿಕೆ, ಅವಸ್ಥಾಂತರಿಸುವಿಕೆ ಎಂಬ ಅರ್ಥವಿದೆ. ತೀರ್ಥಂಕರರು ಸಿದ್ಧಶಿಲೆಗೆ ಹೋಗದೇ ಪುನಃ ಹಿಂದಕ್ಕೆ ತಿರುಗಿ ನೋಡುತ್ತಾರೆ. ಹೀಗೆ ಹಿಂದಿರುಗಿ ನೋಡುವ ಬೋಧಿಸತ್ವರನ್ನು ಬೌದ್ಧರು ‘ಅವಲೋಕಿತೇಶ್ವರ’ ಎನ್ನುವರು.

ಅವಲೋಕನವೆಂದರೆ ಹಿಂದಿರುಗಿ ನೋಡುವಿಕೆ. ಗೌತಮ ಬುದ್ಧ ಮೋಕ್ಷದ್ವಾರದವರೆಗೂ ಹೋಗಿ ಒಳಗೆ ಪ್ರವೇಶಿಸದೇ ಲೋಕಕಾರುಣ್ಯದಿಂದ ಹಿಂದಿರುಗಿ ನೋಡಿದನಂತೆ. ಯೋಗದರ್ಶನವು ಇಂಥ ಅನುಭಾವಿಗಳ ಸಮಾಧಿ ಸ್ಥಿತಿಯನ್ನು ‘ಸಂಪ್ರಜ್ಞಾತ ಸಮಾಽ’ ಎಂದು ವರ್ಣಿಸುತ್ತದೆ.

ಅಧ್ಯಾತ್ಮವೂ ವಿಜ್ಞಾನವೇ ಆಗಿದೆ. ವಿಜ್ಞಾನ ಅಂತರಿಕ್ಷದಲ್ಲಿ ಅಂದರೆ ಬ್ರಹ್ಮಾಂಡದಲ್ಲಿ ಪರಮಸತ್ಯವನ್ನು ಕಾಣುವ ಮಾರ್ಗದ್ದಾದರೆ ಅಧ್ಯಾತ್ಮ ಅಂತರಂಗದಲ್ಲಿ, ಶ್ರೀ ಗೋರಕ್ಷನಾಥರು ಹೇಳುವಂತೆ ಪಿಂಡಾಂಡದಲ್ಲಿ, ಪರಮಸತ್ಯವನ್ನು ಕಾಣುವ

ಮಾರ್ಗವಾಗಿದೆ. ಎರಡಕ್ಕೂ ಅದರದ್ದೇ ಆದ ಪ್ರತ್ಯೇಕ ಮಾರ್ಗಸೂಚಿಗಳಿವೆ, ವಿಽ ವಿಧಾನಗಳಿವೆ.

ವಿಚಿತ್ರವೆಂದರೆ ಬಹಿರಂಗದಲ್ಲಿ ಹುಡುಕುವ ವಿಜ್ಞಾನಿಗಳು ಮತ್ತು ಅಂತರಂಗದಲ್ಲಿ ಹುಡುಕುವ ಆತ್ಮಜ್ಞಾನಿಗಳು ಇಬ್ಬರೂ ಒಂದು ಹಂತದಲ್ಲಿ ತಮ್ಮ ಪ್ರಯತ್ನ ವ್ಯರ್ಥ ವಾದುದೆಂದು ತೀರ್ಮಾನಿಸುವರು. ಆಲ್ಬರ್ಟ್ ಐನ್‌ಸ್ಟೀನ್ ಅಂತೂ ನನಗೆ ಮನುಷ್ಯ ಪ್ರಯತ್ನದಲ್ಲಿ (ಫ್ರೀವಿಲ್) ನಂಬಿಕೆ ಇಲ್ಲವೆಂದು ಸ್ಪಷ್ಟವಾಗಿ ನುಡಿದಿದ್ದಾರೆ. ಇಂಥದೇ ಮಾತನ್ನು ಜನಕನಿಗೆ ಆತ್ಮಜ್ಞಾನವನ್ನು ಬೋಧಿಸಿದ ಅಷ್ಟಾವಕ್ರನೂ ನುಡಿದಿದ್ದಾನೆ:

‘ಅಯಮೇವ ಹಿ ತೇ ಬಂಧೋ ಸಮಾಽಮನುತಿಷ್ಠಸಿ’ (ಜನಕ ನಿನ್ನ ಬಂಧನ ಮತ್ತಾವುದೂ ಅಲ್ಲ, ಸಮಾಧಿಗಾಗಿ ಸಾಧನೆ ಮಾಡುತ್ತಿರುವೆಯಲ್ಲ ಈ ನಿನ್ನ ಸಾಧನೆಯೇ ನಿನ್ನ

ಪಾಲಿನ ಬಂಧನವಾಗಿದೆ). ತಮ್ಮ ತಮ್ಮ ಮಾರ್ಗಗಳಲ್ಲಿ ಕ್ರಮಿಸಿ ಸಾಧನೆಯ ಕೊನೆಯ ಹಂತವನ್ನು ತಲುಪಿದ ಅಷ್ಟಾವಕ್ರ ಅಥವಾ ಆಲ್ಬರ್ಟ್ ಐನ್‌ಸ್ಟೀನ್‌ರಂಥವರ ತೀರ್ಮಾ

ನಗಳು ಇನ್ನೂ ಮೊದಲ ಹೆಜ್ಜೆಯನ್ನೂ ಇರಿಸದ ಸಾಮಾನ್ಯ ಹುಲುಮಾನವರ ಜಡತ್ವಕ್ಕೆ ಸಮರ್ಥನೆಯಾಗಬಾರದು.

ನಮ್ಮ ನಿಟ್ಟಿನಲ್ಲಿ ನಾವು ಪ್ರಯತ್ನಶೀಲರಾದಲ್ಲಿ ಧರ್ಮಮೇಘ ಸಮಾಧಿಗೆ ಪ್ರಾಪ್ತರಾದ ಬೋಧಿಸತ್ವರ ಕರುಣೆ ಮತ್ತು ಅನುಗ್ರಹ ನಮ್ಮನ್ನು ಕೈಹಿಡಿದು ನಡೆಸದಿರದು.

(ಲೇಖಕರು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ

ಪೀಠಾಧ್ಯಕ್ಷರು)

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ