Thursday, 19th September 2024

ಪ್ರಬಲ ಭೂಕಂಪ: ಮೃತರ ಸಂಖ್ಯೆ 76ಕ್ಕೆ ಏರಿಕೆ

ಇಜ್ಮಿರ್‌ (ಟರ್ಕಿ): ಟರ್ಕಿಯ ಕರಾವಳಿ ಮತ್ತು ಗ್ರೀಕ್ ದ್ವೀಪ ಸಮೋಸ್ ಮಧ್ಯಭಾಗದಲ್ಲಿ ಸಂಭವಿಸಿದ್ದ ಪ್ರಬಲ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 76ಕ್ಕೆ ಏರಿಕೆಯಾಗಿದೆ. ಏಜಿಯನ್ ಈಶಾನ್ಯ ಭಾಗದ ಸಮೋಸ್‌ನಲ್ಲಿ ಕಳೆದ ಶುಕ್ರವಾರ 6.9 ತೀವ್ರತೆಯ ಭೂಕಂಪ ಸಂಭವಿಸಿತ್ತು. ಒಟ್ಟು 962 ಜನರು ಗಾಯಗೊಂಡಿದ್ದು, ಈ ಪೈಕಿ 743 ಮಂದಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. 219 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿರಾಶ್ರಿತರಿಗಾಗಿ ಈವರೆಗೆ 1,864 ಟೆಂಟ್‌ಗಳನ್ನು ಸ್ಥಾಪಿಸಲಾಗಿದೆ. ಭೂಕಂಪದಿಂದಾಗಿ ಕುಸಿದು ಬಿದ್ದಿರುವ ಕಟ್ಟಡಗಳ ಅವಶೇಷಗಳಡಿಯಿಂದ 105 ಮಂದಿಯನ್ನು ರಕ್ಷಿಸಲಾಗಿದೆ ಎಂದು ಪ್ರಾಧಿಕಾರ ಹೇಳಿದೆ.

ಮುಂದೆ ಓದಿ

ಟರ್ಕಿ, ಗ್ರೀಕ್ ಭೂಕಂಪ: ಮೃತರ ಸಂಖ್ಯೆ 49ಕ್ಕೆ ಏರಿಕೆ

ಇಜ್ಮಿರ್‌ (ಟರ್ಕಿ): ಟರ್ಕಿಯ ಕರಾವಳಿ ಮತ್ತು ಗ್ರೀಕ್ ದ್ವೀಪ ಸಮೋಸ್ ಮಧ್ಯಭಾಗದಲ್ಲಿ ಕಳೆದ ಶುಕ್ರವಾರ ಸಂಭವಿಸಿದ್ದ ಪ್ರಬಲ ಭೂಕಂಪದಲ್ಲಿ ಮೃತರ ಸಂಖ್ಯೆ 49ಕ್ಕೆ ಏರಿದ್ದು, 900ಕ್ಕೂ ಹೆಚ್ಚು...

ಮುಂದೆ ಓದಿ

ಟರ್ಕಿ, ಗ್ರೀಸ್‌ನಲ್ಲಿ ಭೀಕರ ಭೂಕಂಪ: 22 ಸಾವು, 700 ಮಂದಿಗೆ ಗಾಯ

ನವದೆಹಲಿ: ಟರ್ಕಿ ಮತ್ತು ಗ್ರೀಸ್‌ನಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಕನಿಷ್ಠ 22 ಮಂದಿ ಮೃತಪಟ್ಟಿದ್ದು, 700ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಭೂಕಂಪದಿಂದಾಗಿ ಹಲವಾರು ಕಟ್ಟಡಗಳು ನೆಲಸಮವಾಗಿದ್ದು, ಪ್ರವಾಹ ಪರಿಸ್ಥಿತಿ...

ಮುಂದೆ ಓದಿ