Narayana Yaaji Column: ಮಧ್ಯಮ ಮಾರ್ಗ ಪ್ರವರ್ತಕ ತಥಾಗತ ಬುದ್ದ
ಜ್ಞಾನೋದಯವೆನ್ನುವದು ವಾಸ್ತವ ಪ್ರಪಂಚದಲ್ಲಿದೆಯೇ ಹೊರತು ಕಾಣದ ಆತ್ಮ ಅಥವಾ ಬ್ರಹ್ಮದ ವಿಷಯದಲ್ಲಿ ಇಲ್ಲ. ಆತ್ಮ ಪ್ರತ್ಯೇಕವೆನ್ನುವ ಭಾವನೆಯನ್ನು ಮೀರಿ ಪ್ರಕೃತಿಯ ಪ್ರತೀ ವಸ್ತುವಿನಲ್ಲಿ ಸೌಂದರ್ಯವಿದೆಯೆನ್ನುವದನ್ನು ಗೌತಮನ ಅರಿವಿಗೆ ಬಂತು. ಪ್ರಪಂಚವೇ ಪರಸ್ಪರ ಅವಲಂಬಿತ ಮತ್ತು ಸ್ವಯಂ ಸ್ವಭಾವವುಳ್ಳ ಸತ್ಯವೆನ್ನುವ ಸೂತ್ರ ಆತನಿಗೆ ಅರಿವಾಯಿತು.


ಗಯಾಕ್ಕೆ ಬಂದು, ಅಲ್ಲಿದ್ದ ಬೋಧಿವೃಕ್ಷದ ಕೆಳಗೆ ಧ್ಯಾನ ಮಾಡುವ ಸ್ಥಿತಿಯಲ್ಲಿ ಬುದ್ಧನಿಗೆ ಜ್ಞಾನೋದಯವಾಯಿತು. ಜ್ಞಾನವೆಂದರೆ ಪ್ರಾಪಂಚಿಕ ವಸ್ತುಗಳಿಂದ ವಿಮುಖನಾಗುವುದಲ್ಲ, ನಮ್ಮ ಉಸಿರು, ಹಕ್ಕಿಯ ಹಾಡು, ಎಲೆ, ಸೂರ್ಯನ ಕಿರಣ ಇವೆಲ್ಲವೂ ಧ್ಯಾನಕ್ಕೆ ಸಾಧನವಾಗ ಬಹುದೆಂದು ಆತನಿಗೆ ಅನಿಸಿತು. ಒಂದು ಧೂಳಿನ ಕಣದಿಂದಲೇ ಸಮಗ್ರವಾಗಿ ಬ್ರಹ್ಮಾಂಡದ ಲಕ್ಷಣವನ್ನು ಅರಿಯಬಹುದೆನ್ನುವ ವಿಷಯ ಹೊಳೆಯಿತು.
ಜ್ಞಾನೋದಯವೆನ್ನುವದು ವಾಸ್ತವ ಪ್ರಪಂಚದಲ್ಲಿದೆಯೇ ಹೊರತು ಕಾಣದ ಆತ್ಮ ಅಥವಾ ಬ್ರಹ್ಮದ ವಿಷಯದಲ್ಲಿ ಇಲ್ಲ. ಆತ್ಮ ಪ್ರತ್ಯೇಕವೆನ್ನುವ ಭಾವನೆಯನ್ನು ಮೀರಿ ಪ್ರಕೃತಿಯ ಪ್ರತೀ ವಸ್ತುವಿನಲ್ಲಿ ಸೌಂದರ್ಯವಿದೆಯೆನ್ನುವದನ್ನು ಗೌತಮನ ಅರಿವಿಗೆ ಬಂತು. ಪ್ರಪಂಚವೇ ಪರಸ್ಪರ ಅವಲಂಬಿತ ಮತ್ತು ಸ್ವಯಂ ಸ್ವಭಾವವುಳ್ಳ ಸತ್ಯವೆನ್ನುವ ಸೂತ್ರ ಆತನಿಗೆ ಅರಿವಾಯಿತು.
ಜ್ಞಾನವೆನ್ನುವದು ಒಳಗಣ್ಣು ಎನ್ನುವ ಭ್ರಮೆಗಿಂತ ಹೊರಗಣ್ಣಿಗೆ ಕಾಣುವ ಪ್ರಪಂಚದ ಸಮಸ್ಥ ವಸ್ತುವಿನಲ್ಲಿ ಇದೆ ಎನ್ನುವದು ಸ್ಪಷ್ಟವಾಯಿತು.
ತಥಾಗತ (ಹೀಗೆ ಹೋಗಿ ಹಾಗೆ ಬಂದವ) ಬುದ್ಧ ಭಾರತೀಯ ತತ್ತ್ವಶಾಸ್ತ್ರದಲ್ಲಿ ಪ್ರಮುಖವಾಗಿ ಬರುವುದು ಆತ ಎಲ್ಲಾ ದರ್ಶನಶಾಸ್ತ್ರಗಳಿಗೂ ಪೂರ್ವ ಪಕ್ಷವಾಗಿರುವುದರಿಂದ. ಶಂಕರಾ ಚಾರ್ಯರು ಮತ್ತು ಬುದ್ಧ ಈ ಇಬ್ಬರೂ ಚದುರಿ ಹೋಗಿದ್ದ ಬಹುಮೂಲ್ಯ ತತ್ತ್ವಶಾಸ್ತ್ರಗಳಿಗೆ ಭದ್ರವಾದ ಬುನಾದಿಯನ್ನು ಹಾಕಿ ಕೊಟ್ಟವರು. ವ್ಯಾಸರು ಬೃಹತ್ತಾಗಿದ್ದ ವೇದಗಳನ್ನು ಅಭ್ಯಾಸಿ ಗಳಿಗೆ ಅನುಕೂಲವಾಗುವಂತೆ ನಾಲ್ಕು ವಿಭಾಗಗಳನ್ನಾಗಿ ವಿಭಜಿಸಿದಂತೆ ಭಾರತೀಯ ತತ್ತ್ವಶಾಸ್ತ್ರ ಗಳಿಗೆ ಹೊಸ ವಿವೇಚನೆಯನ್ನು ಕೊಡುವ ಕಾರ್ಯವನ್ನು ಮೊದಲಾಗಿ ಮಾಡಿದವ ಗೌತಮ ಬುದ್ಧ.
ಇದನ್ನೂ ಓದಿ: Narayana Yaaji Column: ಭಾರತೀಯ ದರ್ಶನದ ವಾದಿ ಮತ್ತು ಪ್ರತಿವಾದಿ
ಅವನನ್ನು ಆಳವಾಗಿ ಅಧ್ಯಯನ ಮಾಡಿದ್ದ ಸ್ವಾಮಿ ವಿವೇಕಾನಂದರು ಸೆಪ್ಟೆಂಬರ್ 26, 1893 ರಂದು ಶಿಕಾಗೋದಲ್ಲಿ ಮಾಡಿದ ಪ್ರಸಿದ್ಧವಾದ ಭಾಷಣದಲ್ಲಿ “ಬೌದ್ಧಧರ್ಮ; ಹಿಂದೂ ಧರ್ಮದ ಸಾಫಲ್ಯ" ಎಂದು ವಿವರಿಸುತ್ತಾರೆ. ಅವರು ಶಾಕ್ಯಮುನಿಯನ್ನು “ವೇದಗಳಲ್ಲಿ ಅಡಗಿದ್ದ ಸತ್ಯವನ್ನು ಹೊರತೆಗೆದು ಜಗತ್ತಿಗೆಲ್ಲ ಘಂಟಾಘೋಷವಾಗಿ ಸಾರಿದವ" ಎನ್ನುತ್ತಾರೆ. ಮುಂದುವರಿದು ಬುದ್ಧ ವೇದಾಂತವನ್ನು ವಿಶ್ಲೇಷಿದನು; ಶಂಕರರು ಅದನ್ನು ಸಂಶ್ಲೇಷನೆ ಮಾಡಿ ಒಂದು ಸಾಮರಸ್ಯಕ್ಕೆ ತಂದರು ಎನ್ನುತ್ತಾರೆ.
ಬುದ್ಧನ ಕಾಲಕ್ಕಿಂತ ಹಿಂದೆಯೂ ತತ್ತ್ವಶಾಸ್ತ್ರಜ್ಞರಿದ್ದರು. ವೇದಕ್ಕೆ ತಿರುಳನ್ನು ಉಣಬಡಿಸಿದ ಕೊಟ್ಟ ಉಪನಿಷತ್ತುಗಳು ಆ ಮೊದಲೇ ಇದ್ದವು. ವೇದದ ತಿರುಳೇ ಬ್ರಹ್ಮವನ್ನು ಕಾಣಲು ಎನ್ನುವುದನ್ನು ಉಪನಿಷತ್ತು ಸಾರುತ್ತದೆ. ಯಜ್ಞಸಂಸ್ಕೃತಿಯಲ್ಲಿ ಪ್ರಾಣಿ ಹಿಂಸೆ ಆಚರಣೆಯಲ್ಲಿದ್ದ ಕಾಲದಲ್ಲಿ ಕ್ಷತ್ರಿಯನಾದ ವಿಶ್ವಾಮಿತ್ರ ಯಜ್ಞದ ಬದಲು 24 ಅಕ್ಷರಗಳ ಗಾಯತ್ರಿ ಮಂತ್ರವನ್ನು ಕೊಟ್ಟರು.
ಹಾರೀತ ಗೌತಮರು ತಂದೆಯಾರೆನ್ನುವುದೇ ಗೊತ್ತಿಲ್ಲದ ಜಾಬಾಲಿಯನ್ನು ಮಹರ್ಷಿಯನ್ನಾಗಿ ರೂಪಿಸಿದರು. ಬೀಜದಿಂದ ಚಿಗಿತ ಗಿಡ ಸೂರ್ಯನ ಬೆಳಕಿರುವೆಡೆ ಬೆಳೆಯುವಾಗ ಅಡ್ಡವೋ ಉದ್ದವೋ ಬೆಳೆಯುತ್ತದೆ. ಸಾಗರದೆಡೆ ಹರಿಯುವ ನದಿಗೆ ಅಡ್ಡಲಾಗಿ ಬಂಡೆ ಎದುರಾದರೆ ಅದನ್ನು ಬಳಸಿ ಧಾವಿಸುತ್ತದೆ. ಇವ್ಯಾವವೂ ಬಂಡಾಯವಲ್ಲ.
ಮುಚ್ಚಿಹೋದ ಹಾದಿಯನ್ನು ಸರಿಮಾಡಿ ಸಾಗುವಿಕೆ. “ಬುದ್ಧ ಮತ್ತು ಉಪನಿಷತ್ತಿನ ಕಾಲದ ನಡುವೆ ಆದ ಮಹಾಭಾರತದ ಯುದ್ಧವೆನ್ನುವ ಒಂದು ಘನಘೋರ ದುರಂತ ಭಾರತದ ಜನಜೀವನದ ಬದುಕಿನಲ್ಲಿ ಧಾರ್ಮಿಕ ಪ್ರeಯನ್ನು ಮರೆಮಾಡಿಬಿಟ್ಟಿತ್ತು". ಅರ್ಜುನ ಗೀತೆಯ ವಿಷಾದ ಯೋಗ ದಲ್ಲಿ ಯುದ್ಧದ ಪರಿಣಾಮವನ್ನು ವಿವರಿಸಿದ್ದ. ಯುದ್ಧಾನಂತರದಲ್ಲಿ ಆಗಬಹುದಾದ ದುರಂತ ಗಳನ್ನು ವಿವರಿಸಿದ್ದ. ಭರತ ಖಂಡದ ಎಲ್ಲ ಯೋಧರನ್ನು ಕಳೆಡುಕೊಂಡ ಯುದ್ಧ ಅದು.

ಸುಮಾರು ಎರಡುವರೆ ಸಾವಿರ ವರ್ಷಗಳ ಯುದ್ಧಾನಂತರ ದಿನಗಳಲ್ಲಿ ಧರ್ಮವನ್ನು ಪರಿಪಾಲನ ಮಾಡಬೇಕಾಗಿರುವ ಕ್ಷತ್ರಿಯರ ಸಂತತಿ ಸಂಪೂರ್ಣವಾಗಿ ನಾಶವಾಗಿತ್ತು. ಧರ್ಮದ ಕುರಿತು ಪಂಡಿತರು ಪಾಮರ ರೆಲ್ಲರೂ ಅವರವರಿಗೆ ಬೇಕಾದ ವ್ಯಾಖ್ಯಾನವನ್ನು ಮಾಡಿಕೊಂಡಿದ್ದರು. ಯಜ್ಞದ ಹೆಸರಿನಲ್ಲಿ ಅನಾಚಾರಗಳು ನಡೆದರೆ, ತಾಂತ್ರಿಕರ ಹೆಸರಿನಲ್ಲಿ ವಾಮಾಚಾರ ಮಿತಿ ಮೀರಿತ್ತು.
ಕ್ಷತ್ರಿಯರ ಅವಸಾನದೊಂದಿಗೆ ಜನಪದಕ್ಕೆ ನಾಯಕರೆನ್ನುವವರೇ ಇದ್ದಿರಲಿಲ್ಲ. ಬಹುಶಃ ಇದೇ ಹೊತ್ತಿನಲ್ಲಿ ಜಾತಿಪದ್ಧತಿ ರೂಢಿಗೆ ಬರತೊಡಗಿತ್ತು. ಬ್ರಾಹಣರ ಧಾರ್ಮಿಕ ಪ್ರಾಧಾನ್ಯ ಆಚರಣೆ ಮಿತಿಮೀರಿತ್ತು. ವೇದಗಳ ನಿಜಾರ್ಥಕ್ಕಿಂತ ಅದರ ಕುರಿತು ತಪ್ಪು ವ್ಯಾಖ್ಯಾನಗಳೇ ಪ್ರಚಾರದಲ್ಲಿದ್ದವು. ವೇದವನ್ನು ಪ್ರಶ್ನಿಸುವ ಹಾಗೂ ಬ್ರಾಹ್ಮಣಿಕೆಯ ಪ್ರಶ್ನಾತೀತ ಯಜಮಾನತ್ವವನ್ನು ಒಪ್ಪದಿರುವ ಪಂಗಡಗಳೂ ಆಗಲೂ ಸಾಕಷ್ಟಿದ್ದವು.
ಇಂತಹ ಕತ್ತಲ ಯುಗದಲ್ಲಿಯೇ “ಸಂಭವಾಮಿ ಯುಗೇ ಯುಗೇ" ಎನ್ನುವಂತೆ ಕಪಿಲವಸ್ತುವಿನಲ್ಲಿ ಕ್ರಿ. ಪೂ. 560ರಲ್ಲಿ ಸಿದ್ಧಾರ್ಥನ ಜನವಾಯಿತು. ಆತನ ತಂದೆಗೆ ತನ್ನ ಈ ಮಗುವಿನ ಭವಿಷ್ಯದ ಕುರಿತು ಕುತೂಹಲ. ಜ್ಯೋತಿಷಿಗಳನ್ನು ಕೇಳಿದರೆ ಅವರು ಈತ ಒಂದೋ ಈ ಭೂಮಂಡಲದಲ್ಲಿನ ಅತ್ಯಂತ ಶ್ರೇಷ್ಠ ರಾಜನಾಗುತ್ತಾನೆ; ಇಲ್ಲಸಂಸಾರವನ್ನು ತ್ಯಜಿಸಿ ಮಹಾ ಗುರುವಾಗುತ್ತಾನೆ ಎಂದರು.
ಚಿನ್ನದ ಪಂಜರದ ಬದುಕು
ಜ್ಯೋತಿಷ್ಯವನ್ನು ನಂಬಿದ ತಂದೆಗೆ ಮಗ ಎಲ್ಲಿಯಾದರೂ ಸನ್ಯಾಸಿಯಾಗಿ ಕೈತಪ್ಪಿ ಹೋದರೆ ಎನ್ನುವ ಹೆದರಿಕೆಯಿಂದ ಚಿನ್ನದ ಪಂಜರದಲ್ಲಿ ಇಟ್ಟು ಎಲ್ಲಾ ಸುಖಭೋಗಗಳಲ್ಲಿ ಮುಳುಗೇಳು ವಂತೆ ಮಾಡಿದ. ಬದುಕಿನಲ್ಲಿ ಕಷ್ಟಗಳ ಪರಿಚಯ ಆಗದಿರುವಂತೇ ನೋಡಿಕೊಂಡ. ಸದಾ ಬೆಳಕಿ ನಲ್ಲಿರುವವರಿಗೆ ಕತ್ತಲೆಯ ಅರಿವಿರುವದಿಲ್ಲ; ಹಿಮಾಲಯದ ಹಿಮದಲ್ಲಿ ಓಡಾಡುವವನಿಗೆ ಮರು ಭೂಮಿಯ ಕಲ್ಪನೆ ಇರುವದಿಲ್ಲ. ಹಾಗೇ ಸಿದ್ಧಾರ್ಥನಿಗೆ ಪಟ್ಟಣದಲ್ಲಿ ಓಡಾಡುವತನಕ, ತಾನು ನೋಡಿದ ಬದುಕಿಗಿಂತಲೂ ಮತ್ತೊಂದು ಜಗತ್ತಿದೆ ಎನ್ನುವದು ತಿಳಿದಿಲ್ಲ.
ಬದುಕಿನ ನಶ್ವರತೆಯ ಆತನಿಗೆ ಅರ್ಥವಾಯಿತು. ಜ್ಯೋತಿಷ್ಯವನ್ನು ಅಲ್ಲಗೆಳೆದ ಬುದ್ಧನ ಭವಿಷ್ಯದ ಮುಂಗಾಣ್ಕೆ ಜ್ಯೋತಿಷಿಗಳ ಮೂಲಕವೇ ಶುದ್ಧೋಧನನಿಗೆ ತಿಳಿದಿತ್ತು ಎನ್ನುವುದು ಕಾಲದ ವೈಚಿತ್ರ್ಯ. ಅರಮನೆಯಲ್ಲಿ ಇರುವಾಗಲೇ ಸಿದ್ಧಾರ್ಥನಿಗೆ ಜ್ಞಾನದ ಹಸಿವಿತ್ತು. ಕುಲಗುರು ಅಸಿತದೇವಲನಿಂದ ತತ್ತ್ವಶಾಸ್ತ್ರ, ವೇದಾಂತವನ್ನೆಲ್ಲ ಕಲಿತರೂ ಆತನಲ್ಲಿ ಇದು ಪರಿಪೂರ್ಣ ಅನಿಸಲಿಲ್ಲ. ಬದುಕು, ಸಾವು, ಮುಕ್ತಿಯಕುರಿತು ಅವನಿಗೆ ಸಿಕ್ಕ ಉತ್ತರ ತೃಪ್ತಿಯನ್ನು ನೀಡಲಿಲ್ಲ.
ಯಾರೋ ಆತನಿಗೆ ಹಿಮಾಲಯದ ತಪ್ಪಲಿನಲ್ಲಿರುವ ಸಾಧುಗಳು ವೇದದ ಗೂಢವನ್ನು ಅರಿತಿದ್ದಾರೆ ಎನ್ನುವ ವಿಷಯ ಗಳನ್ನು ಹೇಳಿದ್ದರು. ಆತ ಮನೆಯನ್ನು ಬಿಡಲು ಇದೂ ಒಂದು ಕಾರಣವಾ ಯಿತು.
ಹಾಗೆ ಹೊರಟವ ಆರು ವರ್ಷಗಳ ಕಾಲ ತಿರುಗಿದ. ಆಲಾರಕಲಮನಲ್ಲಿ ದೇಹ ಮತ್ತು ಸಂವೇದನೆ ಯನ್ನು ನಿಯಂತ್ರಿಸುವ ಸಾಧನಾ ಮಾರ್ಗವನ್ನೂ, ಉದ್ಧತ ರಾಮಪುತ್ರನ ಹತ್ತಿದ ಸಮಾಧಿ ಸ್ಥಿತಿಗೆ ಹೋಗುವ ವಿದ್ಯೆಯನ್ನೂ ಕಲಿತ. ಆಲಾರಾಕಲಮ್ ತನ್ನ ಉತ್ತರಾಧಿಕಾರಿಯಾಗೆಂದಾಗ ಅದನ್ನು ತಿರಸ್ಕರಿಸಿದ.
ಆತನನ್ನು ಕೊರೆಯುತ್ತಿದ್ದುದು ಜನನ ಮರಣಗಳ ಭವಚಕ್ರದಿಂದ ಬಿಡುಗಡೆ ಹೊಂದಬೇಕಾದ ಮಾರ್ಗ. ಅವ್ಯಾವುದೂ ತಾನು ಕಲಿತ ವಿದ್ಯೆಗಳಿಂದ ಸಾಧ್ಯವಿಲ್ಲ ಎನ್ನುವುದನ್ನು ಅರಿತ.
ಗಯಾದ ಬೋಧಿವೃಕ್ಷದ ಕೆಳಗೆ
ಈ ಮಿತಿಯನ್ನು ಮೀರಲು ಆತ ಗಯಾಕ್ಕೆ ಬಂದು, ಅಲ್ಲಿದ್ದ ಬೋಧಿವೃಕ್ಷದ ಕೆಳಗೆ ಧ್ಯಾನ ಮಾಡುವ ಸ್ಥಿತಿಯಲ್ಲಿ ಆತನಿಗೆ ಜ್ಞಾನೋದಯವಾಯಿತು. ಜ್ಞಾನವೆನ್ನು ವದು ಪ್ರಾಪಂಚಿಕ ವಸ್ತುಗಳಿಂದ ವಿಮುಖನಾಗುವದಲ್ಲ, ನಮ್ಮ ಉಸಿರು, ಹಕ್ಕಿಯ ಹಾಡು, ಎಲೆ, ಸೂರ್ಯನ ಕಿರಣ ಇವೆಲ್ಲವೂ ಧ್ಯಾನಕ್ಕೆ ಸಾಧನವಾಗಬಹುದೆಂದು ಆತನಿಗೆ ಅನಿಸಿತು. ಒಂದು ಧೂಳಿನ ಕಣದಿಂದಲೇ ಸಮಗ್ರ ವಾಗಿ ಬ್ರಹ್ಮಾಂಡದ ಲಕ್ಷಣವನ್ನು ಅರಿಯ ಬಹುದೆನ್ನುವ ವಿಷಯ ಹೊಳೆಯಿತು.
ಜ್ಞಾನೋದಯ ವೆನ್ನುವದು ವಾಸ್ತವ ಪ್ರಪಂಚದಲ್ಲಿದೆಯೇ ಹೊರತು ಕಾಣದ ಆತ್ಮ ಅಥವಾ ಬ್ರಹ್ಮದ ವಿಷಯದಲ್ಲಿ ಇಲ್ಲ. ಆತ್ಮ ಪ್ರತ್ಯೇಕವೆನ್ನುವ ಭಾವನೆಯನ್ನು ಮೀರಿ ಪ್ರಕೃತಿಯ ಪ್ರತೀ ವಸ್ತುವಿನಲ್ಲಿ ಸೌಂದರ್ಯವಿದೆಯೆನ್ನುವದನ್ನು ಗೌತಮನ ಅರಿವಿಗೆ ಬಂತು. ಪ್ರಪಂಚವೇ ಪರಸ್ಪರ ಅವಲಂಬಿತ ಮತ್ತು ಸ್ವಯಂ ಸ್ವಭಾವವುಳ್ಳ ಸತ್ಯವೆನ್ನುವ ಸೂತ್ರ ಆತನಿಗೆ ಅರಿವಾಯಿತು.
ಜ್ಞಾನವೆನ್ನುವದು ಒಳಗಣ್ಣು ಎನ್ನುವ ಭ್ರಮೆಗಿಂತ ಹೊರಗಣ್ಣಿಗೆ ಕಾಣುವ ಪ್ರಪಂಚದ ಸಮಸ್ಥ ವಸ್ತುವಿನಲ್ಲಿ ಇದೆ ಎನ್ನುವದು ಸ್ಪಷ್ಟವಾಯಿತು. ಸಿದ್ಧಾರ್ಥ ಮನೆಯನ್ನು ಬಿಟ್ಟ ಕಾರಣವೇ ನಿರಂತರವಾಗಿ ಲೋಕವನ್ನು ಬಾಽಸುತ್ತಿರುವ ಜರಾ, ಮರಣಗಳ ಭವಚಕ್ರಗಳಿಗೆ ಕಾರಣತಿಳಿಯಲು. ಜ್ಞಾನೋದಯವ ದಾಗ ಆತನಿಗೆ ಕಂಡ ಸತ್ಯವೇ ನಾಲ್ಕು ಆರ್ಯಸತ್ಯಗಳಾಗಿ ಹೊರಹೊಮ್ಮಿರು ವುದು. ಈ ಆರ್ಯ ಸತ್ಯವೇ ಪ್ರಪಂಚದ ಎಲ್ಲದಕ್ಕೂ ಕಾರಣ ಎನ್ನುವುದನ್ನು ಮನಗಂಡ. ಮೊದಲ ನೆಯದಾಗಿ ದುಃಖವೆನ್ನುವುದಿದೆ.
ಇದಕ್ಕೆ ಕಾರಣ ಜರಾ, ಮರಣ, ಮನಸ್ಸಿನ ಕಾಮನೆಗಳು ಈಡೇರಿಸಿಕೊಳ್ಳಲಾಗದಾಗ ಆಗುವ ನೋವು. 2. ಇದಕ್ಕೆ ಕಾರಣ ಆಸೆ (ತಣ್ಹೆ), ಇಂದ್ರಿಯ ಸುಖದ ಆಸೆ (ಕಾಮ ತಣ್ಹೆ), ಅಸ್ತಿತ್ವದ ಆಸೆ (ಭವ ತಣ್ಹೆ), ಅನಸ್ತಿತ್ವದ ಆಸೆ ವಿಭವ ತಣ್ಹೆ ಎನ್ನುವ ಮೂರು ವಿಧವಾದ ತಣ್ಹೆಗಳು. 3. ದುಃಖವನ್ನು ನಿವಾರಿ ಸುವ ಸಾಧ್ಯತೆ ಇದೆ; ತಣ್ಹೆಯ ನಾಶದಿಂದ ನಿರ್ವಾಣ ಸಾಧ್ಯ. ನಿರ್ವಾಣ ಎಂದರೆ ಅಹಂಕಾರ, ಕೋಪ, ಮೋಹ ನಾಶವಾದ ಸ್ಥಿತಿ.
ಇವೆಲ್ಲದಕ್ಕು ಕಾರಣ ಮನುಷ್ಯ ತನ್ನ ಮೂಲ ರೂಪವನ್ನು ಅರಿಯದಿರುವುದು. ಈ ಅಜ್ಞಾನ ಗಳಿಂದಾಗಿಯೇ ಆತ ದೇಹ-ಮನಸ್ಸುಗಳಿಗೆ ಅಂಟಿಕೊಳ್ಳುತ್ತಾನೆ. ಈ ಕಾರ್ಯ ಕಾರಣ ಸಂಬಂಧ ದಿಂದಾಗಿ ಕರ್ಮಚಕ್ರಗಳ ಮೂಲಕ ಪುನರ್ಜನದ ಭವಚಕ್ರಗಳಿಗೆ ಸಿಕ್ಕುಬೀಳುತ್ತಾನೆ, ಈ ಯಾತನೆ ಗಳಿಗೆ ಕಾರಣ ಆಯಾ ವ್ಯಕ್ತಿಯೇ ಹೊರತೂ ವಿಧಿ, ಆಕಸ್ಮಿಕ ಇತ್ಯಾದಿಗಳೆಲ್ಲ ಸುಳ್ಳು. ಮೂರನೆಯದು
ಈ ಭವಚಕ್ರಗಳಿಂದ ಬಿಡುಗಡೆ. ಬುದ್ಧ ಇದು ಅವಿದ್ಯೆ, ಅಜ್ಞಾನಾವಸ್ಥೆಯೆನುತ್ತಾನೆ. ಲೋಕದಲ್ಲಿನ ಎಲ್ಲಾ ಅವಸ್ಥೆಗಳಿಗೂ ಇದೇ ಕಾರಣ, ಇದೇ “ಪ್ರತ್ಯೀತ್ಯ ಸಮುತ್ಪಾದ" ಸಿದ್ಧಾಂತ. ಕೊನೆಯದಾದ ನಾಲ್ಕನೆಯದು ಅದನ್ನು ನಿವಾರಿಸುವ ಮಾರ್ಗ. ಅದನ್ನು ದುಃಖ ನಿರೋಧ ಗಾಮಿನಿ ಎಂದು ಹೇಳುತ್ತಾನೆ ಇದನ್ನು ಅಷ್ಟಾಂಗಿಕ ಮಾರ್ಗಗಳಾದ ಸಮ್ಯಕ್ ದೃಷ್ಟಿ, ಸಮ್ಯಕ್ ಸಂಕಲ್ಪ, ಸಮ್ಯಕ್ ವಾಕ್ಕು, ಸಮ್ಯಕ್ ಕ್ರಿಯಾ ಸಮ್ಯಕ್ ಆಜೀವ, ಸಮ್ಯಕ್ ವ್ಯಾಯಾಮ, ಸಮ್ಯಕ್ ಸ್ಮೃತಿ ಮತ್ತು ಸಮ್ಯಕ ಸಮಾಧಿಯ ಮೂಲಕ ಸಾಧಿಸಬಹುದು.
ಯಾವಾತ ಸಮ್ಯಕ್ ಸಮಾಧಿಯನ್ನು ತಿಳಿಯುತ್ತಾನೋ ಆಗ ಬದುಕುವ ಬಯಕೆ ನಿರ್ಮೂಲ ವಾಗುವುದು. ಪುನರ್ಜ ನ್ಮದ ಬೀಜ ನಾಶವಾಗುವುದು, ಮುಂದೆ ಯಾವಜನ್ಮವೂ ಇರುವುದಿಲ್ಲ. ಈ ಧ್ಯೇಯವೇ ಸಮ್ಯಕ್ ಮುಕ್ತಿ ಅಥವಾ ನಿರ್ವಾಣ. ತೈತ್ತರೀಯೋಪನಿಷತ್ತಿನ ಬ್ರಹ್ಮಾನಂದವಲ್ಲಿ ಯಲ್ಲಿ ಬ್ರಹ್ಮವನ್ನು ಅನುಭವಿಸುವುದು ಎನ್ನುವುದು ಇದೆ ಆಗಿದೆ. ಇದನ್ನು ತಪ್ಪಾಗಿ ಅರ್ಥೈಸಿಕೊಂಡ ಪಾಶ್ಚಾತ್ಯ ವಿಮರ್ಶಕರು ಮುಖ್ಯವಾಗಿ ಷೋಪನ್ಹೋವರ್ “ಬೌದ್ಧಧರ್ಮ ನಿರಾಶಾವಾದವನ್ನು ಬೋಧಿಸುತ್ತದೆ" ಎಂದಿದ್ದಾನೆ.
ಉಪನಿಷತ್ ಋಷಿಗಳಂತೆಯೇ ಬುದ್ಧನೂ ಕೂಡ ಸತ್ಯವನ್ನು ಪ್ರತಿಯೊಬ್ಬನೂ ತಾನೇ ಅರಿಯ ಬೇಕೆಂದು ದೃಢವಾಗಿ ಹೇಳುತ್ತಾನೆ. ಶ್ವೆತಾಶ್ವರೋಪನಿಷತ್ತಿನಲ್ಲಿ ಬರುವ “ಸುವರ್ಣಕಾಂತಿ ಯಿಂದ ಕೂಡಿದ ತಮಸ್ಸಿನಾಚೆ ಇರುವ ಆ ಪುರುಷಶ್ರೇಷ್ಠನನ್ನು ನಾನು ಅರಿತಿರುವನು. ಅವನನ್ನು ಅರಿತವನು ಮಾತ್ರ ಮೃತ್ಯುವನ್ನು ಗೆಲ್ಲುತ್ತಾನೆ. ಇದಕ್ಕೆ ಬೇರಿನ್ನಾವ ಮಾರ್ಗವೂ ಇಲ್ಲ" ಎಂದಿದೆ.
ಇದನ್ನೇ ಬುದ್ಧ ತೆವಿಜ್ಜಸುತ್ತದಲಿ “ಎಲೈ ವಾಸಟ್ಟನೇ, ಬ್ರಹ್ಮವನ್ನೂ, ಬ್ರಹ್ಮದ ವಿಶ್ವವನ್ನೂ ಮತ್ತು ಅದನ್ನು ಪಡೆಯುವ ಮಾರ್ಗವನ್ನೂ ನಾನು ಅರಿತಿರುವೆನು. ನಿಜ, ಬ್ರಹ್ಮ ಜಗತ್ತನ್ನು ಪ್ರವೇಶಿಸಿ ಅದರಲ್ಲಿ ಹುಟ್ಟಿರುವವನಂತೆ ನಾನದನ್ನು ಅರಿತಿರುವನು. ಒಬ್ಬನು ಬ್ರಹ್ಮವನ್ನು ತನ್ನ ಪ್ರಯತ್ನದ ಮೂಲಕ ತನ್ನಾತ್ಮನಲ್ಲಿಯೇ ಅರಿಯಬೇಕು" ಎನ್ನುತ್ತಾನೆ.
ಇಂತಹ ಅನೇಕ ಉದಾಹರಣೆಗಳ ಮೂಲಕ ಬುದ್ಧನ ಉಪದೇಶಕ್ಕೂ, ವೇದಾಂತಕ್ಕೂ ಇರುವ ಸಾಮ್ಯ ವನ್ನು ಗುರುತಿಸಬಹುದು. ಮಹಾಪರಿನಿಬ್ಬಣದ ಸುತ್ತದಲ್ಲಿ (2-33.35) ಆನಂದನ ಹತ್ತಿರ ಮಾತು ಗಮನಾರ್ಹ. “ಆದ್ದರಿಂದ, ಎಲೈ ಆನಂದನೆ, ನಿನಗೆ ನೀನೇ ದೀಪವಾಗಿರು. ನಿನಗೆ ನೀನೇ ಆಶ್ರಯವಾಗಿರು ಯಾವ ಬಾಹ್ಯ ಆಶ್ರಯವನ್ನೂ ಅವಲಂಬಿಸಬೇಡ.
ಸತ್ಯ ಪ್ರದೀಪವನ್ನು ಭದ್ರವಾಗಿ ಹಿಡಿದುಕೊ, ಸತ್ಯವನ್ನೇ ಆಶ್ರಯವಾಗಿ ಹಿಡಿದುಕೊ ಮತ್ತು. ಎಲೈ ಆನಂದ! ಯಾರು ಈಗಲಾಗಲಿ ಅಥವಾ ನನ್ನ ಮರಣಾ ನಂತರವಾಗಲಿ ತಮಗೆ ತಾವೇ ದೀಪವಾಗಿ ತಮಗೆ ತಾವೇ ಆಶ್ರಯರಾಗಿರುವರೊ. ಯಾವ ಹೊರಗಿನ ಆಶ್ರಯವನ್ನೂ ಪಡೆಯುವುದಿಲ್ಲವೂ. ಆದರೆ ಸತ್ಯವನ್ನೇ ತಮ್ಮ ಬೆಳಕಾಗಿ, ತಮ್ಮ ಆಶ್ರಯವಾಗಿ ಭದ್ರವಾಗಿ ಹಿಡಿದುಕೊಳ್ಳುವರೊ. ತಮಗಿಂತ ಬೇರೆಯಾದ ಯಾವ ಆಶ್ರಯವನ್ನೂ ಬಯಸುವುದಿಲ್ಲವೊ ಅವರೇ, ನನ್ನ ಭಿಕ್ಷುಗಳಲ್ಲಿ ಅತ್ಯುನ್ನತ ಸ್ಥಿತಿಗೇರುವರು. ಆದರೆ ಅವರಲ್ಲಿ ಕಲಿಯುವ ಹಂಬಲವಿರಬೇಕು".
ಬುದ್ಧ ಮುಖ್ಯವಾಗುವುದು ಆತ ಜನಸಾಮಾನ್ಯರ ಆಡುಭಾಷೆಯಲ್ಲಿ ತನ್ನ ಉಪದೇಶವನ್ನು ಮಾಡಿರುವುದಕ್ಕಾಗಿ. ಬ್ರಾಹ್ಮಣರ ಕಂದಾಚಾರವನ್ನು ಆತ ನಿರ್ದಾಕ್ಷಿಣ್ಯವಾಗಿ ಖಂಡಿಸುತ್ತಾನೆ. ಆದರೆ ಬ್ರಹ್ಮಜ್ಞಾನವನ್ನಲ್ಲ. ಇದಕ್ಕೆ ಧಮ್ಮಪದದ ಬ್ರಾಹ್ಮಣ ವಗ್ಗದಲ್ಲಿ ಅನೇಕ ಉದಾಹರಣೆಗಳು ಸಿಗುತ್ತವೆ.
ಝಾಯಿಂ ವಿರಜಮಾಸೀನಂ ಕತಕಿಚ್ಚಮನಾಸವಂ | ಉತ್ತಮತ್ಥಮ್ ಅನುಪ್ಪತ್ಥಂ ತಮಹಂ ಬ್ರೂಮಿ ಬ್ರಾಹ್ಮಣಂ || (ಬ್ರಾ.ವ.-386) ‘ಯಾವನು ಧ್ಯಾನ ಮಾಡುವವನೋ, ನಿರ್ಮಲನೂ ದೋಷವಿಲ್ಲದವನೂ ಆಗಿ ಆಸನದಲ್ಲಿ ಕುಳಿತಿರುವನೋ, ಯಾವನು ಕೃತಕತ್ಯನಾಗಿ ಯಾವ ಆಸ್ರವಗಳೂ ಇಲ್ಲದೆ, ಉತ್ತಮಾರ್ಥವನ್ನು ಪಡೆದುಕೊಂಡಿರುವನೋ ಆತನನ್ನು ನಾನು ಬ್ರಾಹ್ಮಣ ನೆಂದು ಕರೆಯುತ್ತೇನೆ’ ಎಂದಿದ್ದಾನೆ. ಪ್ರಪಂಚದ ಮೊದಲ ಧರ್ಮ ಸುಧಾರಕ ಬುದ್ಧ