ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಗುಜರಾತಿನಲ್ಲಿ ಮಹಿಳಾ ಸಬಲೀಕರಣ

ಪ್ರದೀಪಕುಮಾರ ಎಂಬ ಶಿಲ್ಪಿ ನಿರ್ಮಿಸಿದ ಒಂದು ಅರ್ಥಪೂರ್ಣ ಶಿಲ್ಪವು, ವ್ಯಾಲಿ ಆಫ್ ಫ್ಲವರ‍್ಸ್‌ಗೆ ಸ್ವಾಗತಿಸುತ್ತದೆ. ವಿವಿಧ ವಿರೋಧಾತ್ಮಕ ವಿಚಾರಗಳನ್ನು ಈ ಶಿಲ್ಪವು ಪ್ರದರ್ಶಿಸುತ್ತದೆ ಎಂದು ಅಲ್ಲಿದ್ದ ಫಲಕದ ಮೇಲೆ ಬರೆಯಲಾಗಿದೆ. ವಿವಿಧ ಪ್ರಕಾರದ ಅಂದ ಚೆಂದದ ಹೂಗಳು, ವಿವಿಧ ಆಕಾರದಲ್ಲಿ ಕತ್ತರಿಸಿದ ಬಳ್ಳಿಗಳು ಇಲ್ಲಿನ ವಿಶೇಷ. ಇದರ ಕೊನೆಯಲ್ಲಿ ಏಕತಾ ಪ್ರತಿಮೆ ಕಂಡು ಬರುತ್ತದೆ.

ಗುಜರಾತಿನಲ್ಲಿ ಮಹಿಳಾ ಸಬಲೀಕರಣ

Profile Ashok Nayak Mar 23, 2025 3:36 PM

ಸಿ.ಎ.ವಿಲಾಸ ನಾ ಹುದ್ದಾರ

ಗುಜರಾತ್ ಮಾಡೆಲ್ ಎಂದು ಹಲವು ವಿಭಾಗಗಳಲ್ಲಿ ಹೆಸರು ಪಡೆದಿರುವ ಈ ರಾಜ್ಯದಲ್ಲಿ ನಮ್ಮ ರಾಜ್ಯದಿಂದ ಪ್ರವಾಸಕ್ಕೆ ಹೋದವರು ನೋಡಿ ತಿಳಿಯುವ ಹಲವು ವಿಶೇಷಗಳಿವೆ.

ಗುಜರಾತ ರಾಜ್ಯದ ಪ್ರವಾಸದಲ್ಲಿ ಮೊದಲಿಗೆ ನೋಡಲು ಹೋಗಿದ್ದು ಕೇವಡಿಯಾದಲ್ಲಿರುವ ಸರ ದಾರ ವಲ್ಲಭಬಾಯಿಯವರ ಏಕತಾ ಪ್ರತಿಮೆಯನ್ನು. ಕೇವಡಿಯಾದ ಪಾರ್ಕಿಂಗ್ ಸ್ಥಳಕ್ಕೆ ತಲುಪಿ ದಾಗ ಮುಂಜಾನೆಯ 10.00. ಪ್ರತಿಮೆಯ ಬಳಿಗೆ ಹೋಗಲು ಅಲ್ಲಿ ನಿರಂತರವಾಗಿ ಚಲಿಸುತ್ತಿರುವ ವಿದ್ಯುತ್ ಚಾಲಿತ ಬಸ್ಸುಗಳ ಸೇವೆ ಉಪಯೋಗಿಸಿದೆ. ಪ್ರತಿಮೆಯಿರುವ ಭಾಗದಲ್ಲಿ ಜಂಗಲ್ ಸಫಾರಿ, ಅಣೆಕಟ್ಟಿನ ಭಾಗ, ಸೆಲ್ಫಿ ಪಾಯಿಂಟ್, ಫ್ಲಾವರ್ ವ್ಹ್ಯಾಲಿ ಮುಂತಾದವುಗಳು ಇರುತ್ತವೆ. ಸನಿಹದ ಜಂಗಲ್ ಸಫಾರಿ ಆಕರ್ಷಿಸಿತು.

ಜಂಗಲ್ ಸಫಾರಿಯಲ್ಲಿ ವಿವಿಧ ಭಾಗಗಳಿವೆ. ಒಂದು ಭಾಗದಿಂದ ಮುಂದಿನ ಭಾಗಕ್ಕೆ ಹೋಗಲು ವಿದ್ಯುತ ಚಾಲಿತ ಸಣ್ಣ ವಾಹನಗಳಿಗೆ (ಬಗ್ಗಿ) ಆನ್ ಲೈನ್ ಚೀಟಿ ಪಡೆಯಬಹುದು. ಮೊದಲಿನ ಭಾಗದಲ್ಲಿ ಆಫ್ರ್ರಿಕಾದ ಕಾಡು ಬೆಕ್ಕು ತನ್ನ ಪಂಜರದಲ್ಲಿ ಸುತ್ತಾಡುತ್ತಿತ್ತು. ಏಷಿಯಾದ ಸಿಂಹ ಆಲಸ್ಯದಿಂದ ಮಲಗಿದಂತಿತ್ತು. ಚಿರತೆ, ಬಿಳಿ ಸಿಂಹ, ಬೆಂಗಾಲ ಹುಲಿ, ಘೆಂಡಾ ಮೃಗ ತಮ್ಮ ತಮ್ಮ ಪಂಜರದಲ್ಲಿ ಓಡಾಡುತ್ತಿದ್ದವು. ಮುಂದಿನದು ವಿವಿಧ ಹಾವುಗಳಿರುವ ವಿಭಾಗ.

ಇದನ್ನೂ ಓದಿ: Hari Paraak Column: ಹನಿ ಹನಿ 'ಫ್ರೇಮ್‌' ಕಹಾನಿ

ಪಕ್ಷಿಗಳಿರುವ ಧಾಮದಲ್ಲಿ ವಿವಿಧ ಪಕ್ಷಿ ಸಂಕುಲಗಳು ಕಂಡು ಬಂದವು. ಮುಂದಕ್ಕೆ ಸಾಗು ತ್ತಿದ್ದಂತೆಯೇ ಸಾರಂಗ,ಚಿಗರೆಗಳು ಕಾಣ ಸಿಗುವವು. ಸೋಮಾರಿ ಕರಡಿಗಳನ್ನು ಅವುಗಳ ವಿಭಾಗ ದಲ್ಲಿ ನೋಡಬಹುದು. ಮೊಸಳೆಗಳು, ಓರಾಂಗುಟನ್, ಹಿಪೋಪೊಟಾ ಮಸ್, ಸೌತ್ ಅಮೇರಿಕನ್ ಕೋಟಿ, ಕಾಡುಕೋಣಗ, ಜಿರಾಫೆ ಮೊದಲಾದ ಪ್ರಾಣಿಗಳು, ‘ನಮ್ಮನ್ನು ಏಕೆ ಇಲ್ಲಿ ಬಂಧಿಸಿದ್ದೀರಿ?’ ಎಂದು ನನ್ನನ್ನು (ಮನುಜನನ್ನು) ಕೇಳುವಂತಿತ್ತು.

ಗುಲಾಬಿ ಬಣ್ಣದ ಇ ರಿಕ್ಷಾ: ಜಂಗಲ್ ಸಫಾರಿ ಮುಗಿಸಿ ಹೊರಗಡೆ ಬಂದಾಗ ಗುಲಾಬಿ ವರ್ಣದ ಇ-ರಿಕ್ಷಾ ಸಾಲಾಗಿ ನಿಂತಿದ್ದವು. ಅವುಗಳ ಚಾಲಕರೆಲ್ಲ ಮಹಿಳೆಯರು! ಮಹಿಳಾ ಸಬಲೀಕರಣದ ಅಂಗ ವಾಗಿ ಗುಜರಾತಿನಲ್ಲಿ ಈ ವ್ಯವಸ್ಥೆ ಮಾಡಿದ್ದಾರೆ. ಈ ರಿಕ್ಷಾಗಳು ಅಣೆಕಟ್ಟಿನವರೆಗೆ ಬಿಟ್ಟು ಬರುತ್ತವೆ, ಸ್ವಲ್ಪ ಹೆಚ್ಚು ಹಣ ನೀಡಿದರೆ ಎಲ್ಲಾ ಸ್ಥಳಗಳಿಗೆ ಕರೆದುಕೊಂಡು ಹೋಗುತ್ತಾರೆ. ನಾನು ಸಂಪೂರ್ಣ ಸ್ಥಳಗಳನ್ನು ನೋಡಲು ರಿಕ್ಷಾ ಹತ್ತಿ ಕುಳಿತೆ. ನೀರಿಲ್ಲದ ಆಣೆಕಟ್ಟನ್ನು ನೋಡುವದಷ್ಟೇ ನನ್ನ ಭಾಗ್ಯವಾಯಿತು. ಅದರ ಕೆಳಗಡೆ ವಿದ್ಯುತ ಉತ್ಪಾದಿಸುವ ಕೇಂದ್ರ ಇದೆ.

ನನ್ನ ಬಲಬದಿಗೆ ಇದ್ದ ಕಾಲುವೆಯಲ್ಲಿ ನೀರು ಹರಿಯುತ್ತ ಕಣ್ಣುಗಳಿಗೆ ತಂಪನ್ನೀಯುತ್ತಿತ್ತಲ್ಲದೇ ತಂಗಾಳಿಯು ಮೈ ಮನಸ್ಸನ್ನು ಉಲ್ಹಸಿತಗೊಳಿಸಿತು. ಕಾಲುವೆಯಗುಂಟ ಇದ್ದ ಎತ್ತರದ ಪ್ರದೇಶ ದಲ್ಲಿ ಕೆಳಗಿನ ಸಾಲಿನಲ್ಲಿ ನಾನಾ ಪ್ರಕಾರದ ಹೂ ಗಿಡಗಳನ್ನು ಬೆಳೆಸಿದ್ದರು. ಮುಂದಕ್ಕೆ ಸಾಗಿದರೆ ದೋಣಿ ವಿಹಾರದ ಸ್ಥಳ ಕಂಡಿತು. ಅದರ ಪಕ್ಕದಲ್ಲಿಯೇ ಸಾಲಾಗಿ ಸೆಲ್ಫಿ ಪಾಯಿಂಟ್‌ಗಳನ್ನು ಮಾಡಿದ್ದಾರೆ.

ಅಲ್ಲಿ ವಿಶಾಲವಾಗಿ ಹರಡಿರುವ ನೀರಿನ ಹಿನ್ನೆಲೆಯಲ್ಲಿ ನಿಂತು ಒಂದು ಫೋಟೊ ತೆಗೆಸಿಕೊಂಡೆ. ರಸ್ತೆಯ ಆಚೆಯ ಬದಿಗೆ ಇರುವದೇ ಟೆಂಟ್ ಸಿಟಿ. ವಿವಿಧ ಪ್ರಕಾರದ ಚೆಂದದ ಟೆಂಟ್‌ಗಳನ್ನು ನಿರ್ಮಿಸಿ ಪ್ರವಾಸಿಗರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಕೊನೆಗೆ ಸಿಗುವದೇ ರ‍್ಯಾಫ್ಟಿಂಗ್ ಪಾಯಿಂ ಟ್. ಮೇಲಿನಿಂದ ನೋಡಿದಾಗ ರಭಸವಾಗಿ ನೀರು ಮುನ್ನಗ್ಗುತ್ತಿರುವುದು ಕಂಡು ಬಂದಿತು. ಸುಮಾರು ಒಂದು ಗಂಟೆ ಈ ಸ್ಥಳಗಳನ್ನೆಲ್ಲ ತೋರಿಸಿ ರಿಕ್ಷಾ ನನ್ನನ್ನು ವ್ಯಾಲಿ ಆಫ್‌ ಫ್ಲವರ್ಸ್ ಇರುವ ಸ್ಥಳಕ್ಕೆ ತಂದು ಬಿಟ್ಟಿತು.

ವ್ಯಾಲಿ ಆಫ್ ಫ್ಲವರ‍್ಸ್: ಪ್ರದೀಪಕುಮಾರ ಎಂಬ ಶಿಲ್ಪಿ ನಿರ್ಮಿಸಿದ ಒಂದು ಅರ್ಥಪೂರ್ಣ ಶಿಲ್ಪವು, ವ್ಯಾಲಿ ಆಫ್ ಫ್ಲವರ‍್ಸ್‌ಗೆ ಸ್ವಾಗತಿಸುತ್ತದೆ. ವಿವಿಧ ವಿರೋಧಾತ್ಮಕ ವಿಚಾರಗಳನ್ನು ಈ ಶಿಲ್ಪವು ಪ್ರದರ್ಶಿಸುತ್ತದೆ ಎಂದು ಅಲ್ಲಿದ್ದ ಫಲಕದ ಮೇಲೆ ಬರೆಯಲಾಗಿದೆ. ವಿವಿಧ ಪ್ರಕಾರದ ಅಂದ ಚೆಂದದ ಹೂಗಳು, ವಿವಿಧ ಆಕಾರದಲ್ಲಿ ಕತ್ತರಿಸಿದ ಬಳ್ಳಿಗಳು ಇಲ್ಲಿನ ವಿಶೇಷ. ಇದರ ಕೊನೆಯಲ್ಲಿ ಏಕತಾ ಪ್ರತಿಮೆ ಕಂಡು ಬರುತ್ತದೆ.

ಇಲ್ಲಿ ಸೆಲ್ಫಿ ಪಾಯಿಂಟ್ ಮಾಡಿದ್ದಾರೆ. ವ್ಯಾಲಿ ಆಫ್‌ ಫ್ಲಾವರ‍್ಸ್ ಪಕ್ಕದಲ್ಲಿ ಮೆಝ್ ಗಾರ್ಡನ್ ಇದೆ (ಭೂಲ ಭುಲೈಯಾ). ಸರದಾರ ಅವರ ಪ್ರತಿಮೆಯ ಕೆಳಗಿನ ಮಹಡಿಯಲ್ಲಿ ವಸ್ತು ಸಂಗ್ರಾಲಯವಿದೆ. ಅದರ ಹಿಂದುಗಡೆಯೆ ಒಂದು ಕಿಯೋಸ್ಕ್ ಇದ್ದು ನಿಮಗೆ ಏಕತಾ ಪ್ರತಿಮೆಯ ಕಲ್ಪನೆ, ಸ್ಥಳದ ಆಯ್ಕೆ, ಯೋಜನೆ , ನಿರ್ಮಿಸುವಾಗಿನ ಎಲ್ಲರ ಸಹಕಾರ, ನಿರ್ಮಾಣದ ಹಂತಗಳು ಮತ್ತಿತರ ವಿಷಯಗಳನ್ನು ಸಂಕ್ಷಿಪ್ತವಾಗಿ ಪರದೆಯ ಮೇಲೆ ತೋರಿಸುತ್ತ ಹೇಳುತ್ತದೆ. ಈ ವಸ್ತು ಸಂಗ್ರಹಾಲ ಯವು ಗುಜರಾತಿನ ವಿವಿಧ ಜನಾಂಗಗಳ, ಸರದಾರರ ಜೀವನದಲ್ಲಿ ನಡೆದ ಮಹತ್ವದ ಘಟ್ಟಗಳ ಮತ್ತು ಅವರ ವೈಯಕ್ತಕ ಜೀವನದ ಪರಿಚಯ ಮಾಡಿಕೊಡುತ್ತದೆ. ಕೊನೆಗೆ ಒಂದು ಸಭಾಂಗಣದಲ್ಲಿ ಅವರ ಜೀವನದ ಮುಖ್ಯ ಸಂಗತಿಗಳನ್ನು ವಿಡಿಯೋ ಮುಖಾಂತರ ಹೇಳುವ ಪ್ರಯತ್ನ ಮಾಡ ಲಾಗುತ್ತದೆ.

ಸರಳ ಜೀವನ ನಡೆಸಿ, ಸಮಯ ಬಂದಾಗ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಇವರ ವ್ಯಕ್ತಿತ್ವ ಈಗಿನ ರಾಜಕಾರಣಿಗಳು ಅಳವಡಿಸಿಕೊಂಡರೆ ಗಾಂಧೀಜಿಯ ರಾಮರಾಜ್ಯದ ಕನಸು ನನಸಾಗದೇ ಇರದು.

ಪರಿಸರ ರಕ್ಷಣೆಗೆ ಒತ್ತು: ಅಮೆರಿಕದ ಸ್ಟ್ಯಾಚ್ಯು ಆಫ್ ಲಿಬರ್ಟಿ ಹೆಸರನ್ನು ನೆನಪಿಸುವ ಸ್ಟ್ಯಾಚ್ಯು ಆಫ್ ಯುನಿಟಿ, ಸರದಾರ್ ಪಟೇಲರ ಸಾಹಸವನ್ನು ಗೌರವಿಸುತ್ತದೆ. ‌565 ಸಂಸ್ಥಾನಗಳಲ್ಲಿ ಹಂಚಿ ಹೋಗಿದ್ದ ಭಾರತವನ್ನು ಒಗ್ಗೂಡಿಸಿ ಏಕತ್ರ ಭಾರತದ ಕನಸನ್ನು ನನಸಾಗಿಸಿದರು. ಹೈದರಾಬಾದ ಮತ್ತು ಜುನಾಘಡ ಸಂಸ್ಥಾನಗಳು ಒಗ್ಗೂಡಲು ನಿರಾಕರಿಸಿದಾಗ ಶಕ್ತಿಪ್ರದರ್ಶನ ಮಾಡಿ ಏಕತೆ ಯನ್ನು ಸಾಧಿಸಿದರು. ಯುಕ್ತಿ ಮತ್ತು ಶಕ್ತಿ ಎರಡೂ ಇವರ ಸಾಮರ್ಥ್ಯ ವಾಗಿದ್ದವು. ಆದ್ದರಿಂದಲೇ ಅವರಿಗೆ ಉಕ್ಕಿನ ಮನುಷ್ಯ ಎಂದರು. ಈ ಪ್ರತಿಮೆಯ ಎತ್ತರ 183 ಮೀ. (597 ಅಡಿ) ಇದ್ದು ಜಗತ್ತಿನ ಅತೀ ಎತ್ತರದ ಪ್ರತಿಮೆ ಎಂದು ಪ್ರಸಿದ್ಧಿ ಪಡೆದಿದೆ. ಇದರ ಕಲ್ಪನೆ, ನಿರ್ಮಾಣ,ಯೋಜನೆ ಎಲ್ಲವೂ ಭಾರತೀಯ. ಲಿಫ್ಟ್ ಮುಖಾಂತರ ಪ್ರತಿಮೆಯ ಹೃದಯದ ಭಾಗಕ್ಕೆ (ಒಳಗಿನ) ಹೋದಾಗ ಹೃದಯದ ಭಾಗದಿಂದ ನೋಡಿದಾಗ ನರ್ಮದೆ ರಮಣೀಯವಾಗಿ ಮುಂದಕ್ಕೆ ಹರಿಯುತ್ತಿರುವುದು, ಆಣೆಕಟ್ಟು ಮತ್ತು ಪರ್ವತ ಶ್ರೇಣಿಗಳು ಕಂಡರೆ ಬೆನ್ನಿನ ಕಡೆಯಿಂದ ನೋಡಿ‌ ದರೆ ನರ್ಮದೆ ನಿಮ್ಮ ಕಡೆಗೇ ಹರಿಯುತ್ತಿರುವಳೋ ಎಂದು ಅನಿಸುವದು. ಈ ಪ್ರತಿಮೆಯ ಸುತ್ತಲೂ ಪರಿಸರ ರಕ್ಷಣೆಗೆ ಒತ್ತು ನೀಡಿದ್ದು ಗಮನ ಸೆಳೆಯುತ್ತದೆ.

ಬೆಳಕು ಮತ್ತು ಶಬ್ದದ ಪ್ರದರ್ಶನ ವೀಕ್ಷಿಸಲು ಪ್ರತಿಮೆಯ ಎದುರಿಗೆ ಎಡಭಾಗದಲ್ಲಿ ಬೆಂಚುಗಳನ್ನು ಅಳವಡಿಸಿದ್ದಾರೆ. ಸ್ವಲ್ಪ ಬೇಗ ಹೋಗಿ ಕುಳಿತರೆ ನಿಮಗೆ ನಿಮ್ಮ ಎಡಗಡೆಗೆ ಪರ್ವತಗಳ ನಡುವೆ ಅದ್ಭುತ ಸುರ್ಯಾಸ್ತ ಕಂಡುಬರುವದು. ನರ್ಮದಾ ಆರತಿ: ಗಂಗಾ ಆರತಿ ಮಾದರಿಯಲ್ಲಿ ನರ್ಮ ದಾ ತೀರದಲ್ಲಿ ನರ್ಮದಾ ಆರತಿ ಮತ್ತು ಬೆಳಕು ಮತ್ತು ಶಬ್ದದ ಪ್ರದರ್ಶನವನ್ನು ಏರ್ಪಡಿಸಿದ್ದಾರೆ. ನರ್ಮದೆಯ ತೀರದಲ್ಲಿ ಆಗುತ್ತಿರುವ ಆರತಿಯನ್ನು ನೋಡುತ್ತ ಮತ್ತು ಸುಂದರವಾದ ಆರತಿ ಹಾಡುಗಳನ್ನು ಕೇಳುತ್ತ ಮನವು ಭಕ್ತಿ ಭಾವದಿಂದ ತುಂಬಿ ಹೋಯಿತು. ಅಲ್ಲಿ ಮೊಳಗಿದ ಶಂಖ ನಾದ, ಗಂಟೆಯ ನಾದ, ಭಕ್ತರ ಚಪ್ಪಾಳೆ ಭಕ್ತಿಪರವಶವನ್ನಾಗಿ ಮಾಡುವವು. ಆರತಿ ಮುಗಿಯು ತ್ತಿದ್ದಂತೆಯೇ ನಮ್ಮ ಎದುರಿಗೆ ನದಿಯಲ್ಲಿ ಮೂರು ಕಾರಂಜಿಗಳು ವರ್ತುಲಾಕಾರದಲ್ಲಿ ಚಿಮ್ಮಲಾ ರಂಭಿಸಿದವು.

ಆ ಕಾರಂಜಿಗಳೇ ಪರದೆಗಳಾಗಿ ಅವುಗಳ ಮೇಲೆ ರಾವಣನ ಗರ್ವಭಂಗದ ದೃಶ್ಯಗಳು ಮತ್ತು ಶಿವನ ತಾಂಡವ ನೃತ್ಯದ ದೃಶ್ಯಗಳು ಮೂಡಲಾರಂಬಿಸಿದಾಗ ಅಲೌಕಿಕವಾದ ಭಾವನೆಗಳು ನಮ್ಮ ಹೃದ ಯವನ್ನು ಆವರಿಸಿದವು. ಶಿವ ತಾಂಡವ ನೃತ್ಯವಂತೂ ಮೈಮನಗಳನ್ನು ರೋಮಾಂಚನ ಗೊಳಿ ಸಿತು. ಆ ಪರಿಸ್ಥಿತಿಯಲ್ಲಿ ನಾವು ಅನುಭವಿಸಿದ ಭಾವಗಳನ್ನು ವರ್ಣಿಸಲು ಶಬ್ದಗಳೇ ಇಲ್ಲಾ. ಅನು ಭವಿಸಿಯೇ ತಿಳಿದುಕೊಳ್ಳಬೇಕು.

ನರ್ಮದಾ ಆರತಿ ಮುಗಿದಾಗ ರಾತ್ರಿ 9.00 ಆಗಿತ್ತು. ಪೂರ್ತಿ ದಿನ ವಿವಿಧ ಸ್ಥಳಗಳನ್ನೂ ವೀಕ್ಷಿಸಿ ದಣಿವಾಗಿದ್ದರೂ ಮನಸ್ಸಿಗಾಗಿದ್ದ ಸಂತ್ರೃಪ್ತಿ ಅದನ್ನೆಲ್ಲ ಮರೆಸಿತ್ತು.