Nanjunda Pratap Palekanda Column: ಬಿಕ್ಕಟ್ಟಿನಲ್ಲಿ ಸಿಲುಕಿರುವ ನಾವೀಗ ಚೇತರಿಸಿಕೊಳ್ಳಬೇಕಿದೆ

ಸಮಷ್ಟಿ ದೃಷ್ಟಿಕೋನ ಇಟ್ಟುಕೊಂಡು ವಿಶ್ವದ ಪ್ರಸಕ್ತ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಯತ್ನಿಸೋಣ. ಮೊದಲಿಗೆ, ಕಳೆದ 50 ವರ್ಷಗಳಿಂದೀಚೆಗೆ, ವಿಶ್ವದ ಜನಸಂಖ್ಯೆಯು ದುಪ್ಪಟ್ಟಾ ಗಿದೆ, 4 ಶತಕೋಟಿಯಿಂದ 8 ಶತಕೋಟಿಗೆ ಅದು ಬಂದು ಮುಟ್ಟಿದೆ. 100ಕ್ಕೂ ಹೆಚ್ಚು ದೇಶ ಗಳಲ್ಲಿ ಚುನಾವಣೆ ನಡೆದಿದ್ದಕ್ಕೆ ಮತ್ತು ವಿಶ್ವದ ಅರ್ಧಕ್ಕೂ ಹೆಚ್ಚಿನ ಸಂಖ್ಯೆಯ ಜನರು ಅದರಲ್ಲಿ ಪಾಲ್ಗೊಂಡಿದ್ದಕ್ಕೆ ನಾವು ಸಾಕ್ಷಿಯಾಗಿದ್ದೇವೆ

Nanjunda
Profile Ashok Nayak January 17, 2025

Source : Vishwavani Daily News Paper

ವಾಸ್ತವನೋಟ

ನಂಜುಂಡ ಪ್ರತಾಪ್‌ ಪಾಲೆಕಂಡ

ನಿಜ, ನಾವೀಗ ಬಿಕ್ಕಟ್ಟಿನಲ್ಲಿ ಸಿಲುಕಿದ್ದೇವೆ, ಅಂಥದೊಂದು ಹಾದಿಯ ಹೆಜ್ಜೆ ಹಾಕು ತ್ತಿದ್ದೇವೆ. ಇದು ಬಿಕ್ಕಟ್ಟಿನ ಹಾದಿ ಎಂದು ಗೊತ್ತಿದ್ದರೂ ನಡಿಗೆಯನ್ನು ನಿಲ್ಲಿಸಲು ನಮಗೆ ಸಾಧ್ಯವಾಗುತ್ತಿಲ್ಲ. ಹಾಗಂತ, ಇದು ನಮ್ಮೊಬ್ಬರದೇ ಸಮಸ್ಯೆ ಎಂದುಕೊಳ್ಳಬೇಕಿಲ್ಲ, ವಿಶ್ವದ ಬಹುತೇಕ ದೇಶಗಳದ್ದು ಇಂಥದೇ ಪರಿಸ್ಥಿತಿ.

ಹೀಗಾಗಿ, ಸಮಷ್ಟಿ ದೃಷ್ಟಿಕೋನ ಇಟ್ಟುಕೊಂಡು ವಿಶ್ವದ ಪ್ರಸಕ್ತ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಯತ್ನಿಸೋಣ. ಮೊದಲಿಗೆ, ಕಳೆದ 50 ವರ್ಷಗಳಿಂದೀಚೆಗೆ, ವಿಶ್ವದ ಜನ ಸಂಖ್ಯೆಯು ದುಪ್ಪಟ್ಟಾಗಿದೆ, 4 ಶತಕೋಟಿಯಿಂದ 8 ಶತಕೋಟಿಗೆ ಅದು ಬಂದು ಮುಟ್ಟಿದೆ. 100ಕ್ಕೂ ಹೆಚ್ಚು ದೇಶಗಳಲ್ಲಿ ಚುನಾವಣೆ ನಡೆದಿದ್ದಕ್ಕೆ ಮತ್ತು ವಿಶ್ವದ ಅರ್ಧಕ್ಕೂ ಹೆಚ್ಚಿನ ಸಂಖ್ಯೆಯ ಜನರು ಅದರಲ್ಲಿ ಪಾಲ್ಗೊಂಡಿದ್ದಕ್ಕೆ ನಾವು ಸಾಕ್ಷಿಯಾಗಿದ್ದೇವೆ.

ಹೀಗೆ ಚುನಾವಣೆ ನಡೆಸಿದ ದೇಶಗಳ ಪೈಕಿ ಶೇ.80ರಷ್ಟು ದೇಶಗಳಲ್ಲಿ ಆಡಳಿತಾತ್ಮಕ ಬದಲಾವಣೆ ಕಂಡುಬಂದಿದ್ದೇನೋ ಖರೆ; ಆದರೆ, ಭಾರತದಲ್ಲಿ ಹೇಳಿಕೊಳ್ಳುವಂಥ ಬದಲಾವಣೆಯೇನೂ ಆಗಲಿಲ್ಲ. ಅಂದರೆ, ಭಾರತದಲ್ಲಿನ ಚುನಾವಣಾ ಫಲಿತಾಂಶವು, ಆಡಳಿತಾರೂಢ ಪಕ್ಷಕ್ಕೆ ದಕ್ಕಿದ ಮತಗಳನ್ನು ತಗ್ಗಿಸಿದ್ದು ಬಿಟ್ಟರೆ ಹಾಗೂ ಆಡಳಿತ ವ್ಯವಸ್ಥೆ ಯ ರಚನೆಯಲ್ಲಿ ಕೊಂಚ ಮಟ್ಟಿಗಿನ ಬದಲಾವಣೆ ತಂದಿದ್ದು ಬಿಟ್ಟರೆ, ಮಿಕ್ಕ ದೇಶಗಳಂತೆ ಅಧಿಕಾರಸ್ಥರ ಸಾರಾಸಗಟು ಬದಲಾವಣೆಯನ್ನೇನೂ ಅದು ತರಲಿಲ್ಲ.

ಪ್ರಮುಖವಾದುದು ಎನ್ನಬಹುದಾದ 10 ‘ಹವಾಮಾನ ವಿಪತ್ತುಗಳು’ ಜಾಗತಿಕ ಮಟ್ಟದಲ್ಲಿ ಬರೋಬ್ಬರಿ 288 ಶತಕೋಟಿ ಡಾಲರ್‌ನಷ್ಟು ಹಾನಿಯನ್ನುಂಟು ಮಾಡಿದವು ಮತ್ತು ಈ ಬಾಬತ್ತಿನಲ್ಲಿ ಭಾರತವೊಂದರ 2803ರಷ್ಟು ಜೀವನಷ್ಟವಾದವು, ಅದಕ್ಕೆ ಪರಿಹಾರಾರ್ಥ ವಾಗಿ 15000 ಕೋಟಿ ರೂಪಾಯಿಗಳಷ್ಟು ನೆರವನ್ನು ನೀಡಬೇಕಾಗಿ ಬಂತು.

ಎಲ್ಲರಿಗೂ ಗೊತ್ತಿರುವಂತೆ, ಭಾರತದಲ್ಲಿ ಉದ್ಯೋಗಸ್ಥರ ನಿವೃತ್ತಿ ವಯಸ್ಸು 58ರಿಂದ 60ರ ವಯೋಮಾನದ ಒಳಗೆ ನಿಗದಿಯಾಗಿದೆ. ಆದರೆ, ರಾಜ್ಯದ ನ್ಯಾಯಾಲಯಗಳಲ್ಲಿನ ನ್ಯಾಯಾಧೀಶರು 62ನೇ ವರ್ಷದಲ್ಲೂ ಮತ್ತು ಸರ್ವೋಚ್ಚ ನ್ಯಾಯಾಲಯದ ನ್ಯಾಯ ಮೂರ್ತಿಗಳು 65ರ ವರ್ಷದಲ್ಲೂ ನಿವೃತ್ತಿ ಹೊಂದುತ್ತಾರೆ.

ಇನ್ನು ನಮ್ಮ ರಾಜಕಾರಣಿಗಳ ವಿಷಯವನ್ನಂತೂ ಕೇಳುವುದೇ ಬೇಡ; ಶಾಸಕರು ತಮಗೆ 92 ವರ್ಷ ವಯಸ್ಸಾಗುವವರೆಗೆ ಮತ್ತು ಸಂಸದರು 82 ವರ್ಷವಾಗುವವರೆಗೆ ಸಂಬಳವನ್ನು ಪಡೆಯುತ್ತಲೇ ಇರುವಂಥ ಸನ್ನಿವೇಶಕ್ಕೆ ನಾವು ಸಾಕ್ಷಿಯಾಗಿದ್ದೇವೆ. ಇದು, 72.23 ವರ್ಷಗಳ ಸರಾಸರಿ ಜೀವಿತಾವಧಿಯನ್ನು ಹೊಂದಿರುವ ನಮ್ಮ ರಾಷ್ಟ್ರದಲ್ಲಿ, ನಮ್ಮ ರಾಜಕಾರಣಿ ಗಳಿಗೆ ದಕ್ಕಿರುವ ವಿಶೇಷ ಸೌಲಭ್ಯ ಎನ್ನಲಡ್ಡಿಯಿಲ್ಲ.

ಕಳೆದ 50 ವರ್ಷಗಳಲ್ಲಿ, ಜನಸಂಖ್ಯೆಯು ದ್ವಿಗುಣಗೊಂಡಿದ್ದರೂ, ಸಾರ್ವಜನಿಕ ವಲಯದ ಉದ್ಯೋಗ ಗಳು ಅಥವಾ ಸರಕಾರಿ ಉದ್ಯೋಗಗಳಲ್ಲಿ ಹೆಚ್ಚಳವೇನೂ ಆಗಿಲ್ಲ; ಬದಲಿಗೆ, ಒಟ್ಟು ಉದ್ಯೋಗಾವಕಾಶಗಳ ಪ್ರಮಾಣವು ಶೇ.35ರಿಂದ ಶೇ.25ಕ್ಕೆ ಕುಗ್ಗಿದೆ ಮತ್ತು ಅದು ಕುಗ್ಗುತ್ತಲೇ ಸಾಗಿದೆ. ಸಾಲದೆಂಬಂತೆ, 2024ರಲ್ಲಿ, ಸಾರ್ವಜನಿಕ ವಲಯದ ಇನ್ನೂ ಮೂರು ಉದ್ಯಮಗಳು ಬಂಡವಾಳ ಹಿಂತೆಗೆತಕ್ಕೆ ಸಾಕ್ಷಿಯಾದವು ಹಾಗೂ ಒಟ್ಟಾರೆಯಾಗಿ ಇವು 1000 ಕ್ಕಿಂತ ಕಡಿಮೆಯಿರುವ ಉದ್ಯೋಗಗಳನ್ನು ಹೊಂದಿದ್ದವು ಎಂಬುದು ಗಮನಾರ್ಹ.

ಭಾರತ ಸರಕಾರದ 2024ರ ವಾರ್ಷಿಕ ವರದಿಯೇ ಸೂಚಿಸುವಂತೆ, ದೇಶದ ಯುವ ಪೀಳಿಗೆಯು ತನ್ನ ಕಾರ್ಯಭಾರದಲ್ಲಿ ಅರ್ಥಪೂರ್ಣವಾಗಿ ತೊಡಗಿಸಿಕೊಳ್ಳುವಂತಾಗಲು

ಭಾರತವು ವಾರ್ಷಿಕವಾಗಿ ಏನಿಲ್ಲವೆಂದರೂ 75 ಲಕ್ಷಕ್ಕೂ ಹೆಚ್ಚು ಕೃಷಿಯೇತರ (ಅಥವಾ ತೋಟಗಾರಿಕಾ ಕ್ಷೇತ್ರವನ್ನು ಹೊರತುಪಡಿಸಿದ) ವಲಯದ ಉದ್ಯೋಗಗಳನ್ನು ಸೃಷ್ಟಿಸ ಬೇಕಾದ ಅಗತ್ಯವಿದೆ.

ಪಟ್ಟೀಕರಣಕ್ಕೆ ಒಳಗಾಗಿರುವ ಅಥವಾ ‘ಲಿಸ್ಟೆಡ್’ ಭಾಗ್ಯ ದಕ್ಕಿಸಿಕೊಂಡಿರುವ ಅಗ್ರಗಣ್ಯ 100 ಕಂಪನಿಗಳ ಒಟ್ಟಾರೆ ಮಾರುಕಟ್ಟೆ ಬಂಡವಾಳದ ಪ್ರಮಾಣವು ಸುಮಾರು 5.17 ಟ್ರಿಲಿಯನ್ ಡಾಲರ್‌ನಷ್ಟು ಇದ್ದು, ಇದು ವಿಶ್ವದ ಅಗ್ರಗಣ್ಯ ಆರ್ಥಿಕತೆಗಳ ಪೈಕಿ 3ನೇ ಸ್ಥಾನದಲ್ಲಿರುವ ಜರ್ಮನಿಯಲ್ಲಿ ಕಾಣಬರುವುದಕ್ಕಿಂತ ಹೆಚ್ಚಿನದಾಗಿದೆ. ಈ ಕಂಪನಿಗಳು 2024ರ ವರ್ಷಾಂ ತ್ಯದ ವೇಳೆಗೆ ಇದ್ದಂತೆ, 50 ಲಕ್ಷಕ್ಕೂ ಸ್ವಲ್ಪವೇ ಹೆಚ್ಚು ಪ್ರಮಾಣದ ಉದ್ಯೋಗಗಳನ್ನು ಹೊಂದಿವೆ.

ಸ್ವಾತಂತ್ರ ಸಿಕ್ಕ ನಂತರ ಭಾರತವು, ಸಮಾಜವಾದಿ ಮಾದರಿಯನ್ನು ಅನುಸರಿಸಿತು ಮತ್ತು ಇದರನ್ವಯ ಸರಕಾರವು ದೇಶದಲ್ಲಿನ ಅತಿದೊಡ್ಡ ‘ಉದ್ಯೋಗ ಸೃಷ್ಟಿಕರ್ತ’ ಎನಿಸಿ ಕೊಂಡಿತು. 1991ರಲ್ಲಿ ಭಾರತದ ಆರ್ಥಿಕತೆಯನ್ನು ಮುಕ್ತವಾಗಿಸಿದ ಪರಿಣಾಮ, ವ್ಯವಸ್ಥೆ ಯ ‘ಕ್ರಿಯಾಶಾಸ್ತ್ರ’ದಲ್ಲಿ, ಸಾಮಾಜಿಕ- ಆರ್ಥಿಕ ಸ್ವರೂಪದಲ್ಲಿ ಗಮನಾರ್ಹ ಮತ್ತು ಕ್ರಾಂತಿಕಾರಕ ಬದಲಾವಣೆಗಳು ಕಾಣಲಾರಂಭಿಸಿದವು ಹಾಗೂ ಖಾಸಗಿ ವಲಯವು ಹೆಚ್ಚೆಚ್ಚು ಉದ್ಯೋಗಗಳನ್ನು ಸೃಷ್ಟಿಸಲು ಶುರುಮಾಡಿತು.

ಮೇಲೆ ಉಲ್ಲೇಖಿಸಿರುವಂತೆ, 100 ಅಗ್ರಗಣ್ಯ ಲಿಸ್ಟೆಡ್ ಕಂಪನಿಗಳಲ್ಲಿ 50 ಲಕ್ಷಕ್ಕೂ ಹೆಚ್ಚು ಉದ್ಯೋಗಗಳಿದ್ದರೆ, ಈ ಪಟ್ಟಿಯ ಕಂಪನಿಗಳ ಪೈಕಿ ಶೇ.13ರಷ್ಟಿರುವ ಸಾರ್ವಜನಿಕ ವಲಯದ ಉದ್ಯಮಗಳ ತೆಕ್ಕೆಯಲ್ಲಿರುವ ಉದ್ಯೋಗಗಳ ಪ್ರಮಾಣ ಶೇ.5ಕ್ಕಿಂತ ಕಮ್ಮಿಯಿದೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ಸಂಗತಿಯೆಂದರೆ, ಕಳೆದ 5 ವರ್ಷಗಳಲ್ಲಿ ಈ ಕಂಪನಿಗಳಿಂದ ಸೇರ್ಪಡೆ ಯಾದ ಉದ್ಯೋಗಗಳ ಒಟ್ಟು ಸಂಖ್ಯೆ, ಅಂದರೆ ೨೦೧೯ರಿಂದ 2024ರವರೆಗೆ ಉದ್ಯೋಗಾವಕಾಶಗಳಲ್ಲಿ ಆದ ಹೆಚ್ಚಳವು 9 ಲಕ್ಷಕ್ಕಿಂತ ಕಡಿಮೆಯಿದೆ.

ಇದು ಶೇ.21ರಷ್ಟು ಹೆಚ್ಚಳವನ್ನೇನೋ ದಾಖಲಿಸಿದೆ ಎನ್ನಿ. ಆದರೆ, ಇಲ್ಲಿ ಚಿಂತೆಗೆ ಕಾರಣ ವಾಗಿರುವ ಸಂಗತಿಯೆಂದರೆ, ಈ ಕಂಪನಿಗಳಲ್ಲಿ ಕಾಣಬರುವ ಸುಮಾರು ಶೇ.80ರಷ್ಟು ನೇಮಕಾತಿಗಳು, ‘ಬಾಹ್ಯವಾಗಿ’ ಮಾಡಿಕೊಂಡಂಥವು (ಅಂದರೆ, ತಮ್ಮಂಥದೇ ಮತ್ತೊಂದು ಕಂಪನಿಯಲ್ಲಿ ಅಥವಾ ಅನ್ಯಶೈಲಿಯ ಕಂಪನಿಯಲ್ಲಿ ಅದೇ ಸ್ವರೂಪದ ಉದ್ಯೋಗವನ್ನು ನಿರ್ವಹಿಸುತ್ತಿರುವವರನ್ನು ಹೆಕ್ಕಿ ನೇಮಿಸಿಕೊಳ್ಳುವಿಕೆ) ಆಗಿವೆ; ಹೀಗೆ ಮಾಡುವ ಮೂಲಕ ಸದರಿ ಕಂಪನಿಗಳು ತಮ್ಮ ತೆಕ್ಕೆಗೆ ‘ಅನುಭವಿ ಕಾರ್ಯಪಡೆ’ಯನ್ನು ಸೇರ್ಪಡೆ ಮಾಡಿ ಕೊಳ್ಳುತ್ತಿವೆ, ಅಷ್ಟೇ.

ಹೀಗಾಗಿ, ‘ಹೊಸತು’ ಎಂಬ ಹಣೆಪಟ್ಟಿ ಹೊತ್ತಿರುವ ಉದ್ಯೋಗಗಳ ಸಂಖ್ಯೆ ಕೇವಲ ಶೇ.20ರಷ್ಟು ಅಥವಾ ಅದಕ್ಕಿಂತ ಕಮ್ಮಿ ಎನ್ನಲಡ್ಡಿಯಿಲ್ಲ. ಅಂದರೆ, ಕಳೆದ 5 ವರ್ಷ

ಗಳಲ್ಲಿ ಹೊಮ್ಮಿರುವ ಹೊಸ ಉದ್ಯೋಗಗಳ ಸಂಖ್ಯೆ 2 ಲಕ್ಷಕ್ಕಿಂತಲೂ ಕಮ್ಮಿ. ಪರಿಸ್ಥಿತಿ ಹೀಗಿರುವಾಗ, ಭಾರತದ ಕಾರ್ಪೊರೇಟ್ ಪ್ರಪಂಚವು (ಅಂದರೆ ಬೃಹತ್ ಉದ್ಯಮಗಳು) ದೇಶದ ಯುವಪೀಳಿಗೆಗಾಗಿ ಹೆಚ್ಚೆಚ್ಚು ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ಸರಕಾರವು ಹೇಗೆ ತಾನೇ ಆಲೋಚಿಸುತ್ತಾ ಕೂರಲು ಸಾಧ್ಯ? ಸರಕಾರವು ಸೃಷ್ಟಿಸುತ್ತಿರುವ ಉದ್ಯೋಗಗಳ ಸಂಖೆಯು ಕಮ್ಮಿಯಿದೆ ಮತ್ತು ಆ ಪ್ರಮಾಣವು ಖಾಸಗಿ ವಲಯವು ಸೃಷ್ಟಿಸುತ್ತಿರುವುದಕ್ಕಿಂತಲೂ ತುಂಬಾ ಕಮ್ಮಿಯಿದೆ ಎಂಬ ವಾಸ್ತವವನ್ನು ನಾವು

ಅರ್ಥ ಮಾಡಿಕೊಳ್ಳಬೇಕಿದೆ.

ಭಾರತದಲ್ಲಿ ‘ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ’ ಉದ್ಯಮಗಳ ಅಭಿವೃದ್ಧಿಗೆ ಸಮರ್ಪಿತವಾದ ‘ಎಂಎಸ್‌ಎಂಇ’ ಸಚಿವಾಲಯವು ಪ್ರಾರಂಭವಾಗಿ 25 ವರ್ಷ ಗಳಾಗಿವೆ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳು (ಎಂಎಸ್‌ಎಂಇಗಳು) ಹೆಚ್ಚಿನ

ಉದ್ಯೋಗಗಳನ್ನು ಸತತವಾಗಿ ಸೃಷ್ಟಿಸುವಲ್ಲಿ ಸಮರ್ಥವಾಗಿವೆ. ತುಲನಾತ್ಮಕವಾಗಿ ಹೇಳುವುದಾದರೆ, 2019ರ ವರ್ಷದಲ್ಲಿ ಎಂಎಸ್‌ಎಂಇ ವಲಯದಿಂದ 11.4 ಕೋಟಿಯಷ್ಟು ಉದ್ಯೋಗಗಳು ಸೃಷ್ಟಿಯಾಗಿದ್ದರೆ, 2024ರಲ್ಲಿ ಈ ಪ್ರಮಾಣವು ದುಪ್ಪಟ್ಟಿ ಗಿಂತ ಹೆಚ್ಚಾಗಿ 24.3 ಕೋಟಿಯನ್ನು ಮುಟ್ಟಿತು.

ಸರಕಾರವು ತನ್ನ ನಿವ್ವಳ ಸಾಲದ ಶೇ.40 ರಷ್ಟು ಭಾಗವು ಆದ್ಯತಾ ವಲಯಗಳಿಗೆ ತಲುಪು ವಂತಾಗುವುದನ್ನು ಕಡ್ಡಾಯಗೊಳಿಸುತ್ತದೆ ಮತ್ತು ಈ ಪೈಕಿಯ ಸಿಂಹಪಾಲನ್ನು ಎಂಎಸ್‌ ಎಂಇ ವಲಯಕ್ಕಾಗಿ ಮೀಸಲಿಡುತ್ತದೆ. ಮೇಲ್ನೋಟಕ್ಕೆ ಇದು ಉತ್ತೇಜಕವಾಗಿ ಕಂಡು ಬಂದರೂ, 2023ರಲ್ಲಿ ಎಂಎಸ್‌ಎಂಇ ವಲಯಕ್ಕೆ ನೀಡಲಾದ ಸಾಲದ ಅನುಪಾತ ವು ಶೇ14.9ರಷ್ಟಿತ್ತು.

ಅಂದರೆ, ಅದು ನಿಗದಿಪಡಿಸಲಾದ ಪ್ರಮಾಣದ ಶೇ.50ರಷ್ಟು ಕೂಡ ಇರಲಿಲ್ಲ. 2024ರಲ್ಲಿ ಈ ಪ್ರಮಾಣ ಶೇ.15.5 ರಷ್ಟಿತ್ತು; ಹಿಂದಿನ ವರ್ಷಕ್ಕೆ ಹೋಲಿಸಿದರೆ ಪ್ರಮಾಣದಲ್ಲಿ ಆಂಶಿಕ ಹೆಚ್ಚಳ ಆಗಿರುವುದೇನೋ ಖರೆ, ಆದರೆ ಅಷ್ಟಾಗಿಯೂ ಅದು ಸರಕಾರವು ಕಡ್ಡಾಯ ಪಡಿಸಿರುವ ಪ್ರಮಾಣದ ಅರ್ಧಕ್ಕಿಂತಲೂ ಕಡಿಮೆಯಿದೆ ಎಂಬುದು ವಾಸ್ತವ. ಈ ಎಲ್ಲ ಅಂಶಗಳನ್ನು ಅವಲೋಕಿಸಿದಾಗ, ಬಂಡ ವಾಳದ ‘ಸಮರ್ಥ’ ಲಭ್ಯತೆ ಎಂಬುದು ಎಂಎಸ್‌ಎಂಇಗಳ ಪಾಲಿಗೆ ಒಂದು ದೊಡ್ಡ ಸವಾಲಾಗೇ ಉಳಿದಿರುವುದು ಅರಿವಾಗುತ್ತದೆ.

2019ರ ವರ್ಷ ದಿಂದ ಈಚೆಗೆ, 35000ಕ್ಕೂ ಹೆಚ್ಚಿನ ಎಂಎಸ್‌ಎಂಇ ಗಳು ಬಾಗಿಲು ಬಡಿದು ಕೊಂಡಿವೆ. ಈ ಪೈಕಿ ಮೂರನೇ ಎರಡರಷ್ಟು ಭಾಗದವು ಬಂದ್ ಆಗಿದ್ದು ಕೋವಿಡ್ ಪಿಡುಗಿನ ಕಾರಣದಿಂದಾಗಿ. ವ್ಯಾಪಾರ- ವ್ಯವಹಾರದ ವಿಧಾನಕ್ಕೆ ಸಂಬಂಧಿಸಿದ ಮತ್ತು 2019ರ ಅಕ್ಟೋಬರ್ ನಲ್ಲಿ ಪ್ರಕಟಗೊಂಡ, ‘ಡೂಯಿಂಗ್ ಬಿಸಿನೆಸ್ ರಿಪೋರ್ಟ್, 2020’ (ಡಿಬಿಆರ್) ಎಂಬ ವಿಶ್ವ ಬ್ಯಾಂಕಿನ ವರದಿಯಲ್ಲಿ ಭಾರತವು 63ನೇ ಸ್ಥಾನವನ್ನು ದಕ್ಕಿಸಿ ಕೊಂಡಿತ್ತು.

2014ರ ವರ್ಷಕ್ಕೆ ಸಂಬಂಧಿಸಿ ಈ ಡಿಬಿಆರ್ ವರದಿಯಲ್ಲಿ 142ನೇ ಶ್ರೇಯಾಂಕದಲ್ಲಿದ್ದ

ಭಾರತವು ಕಾಲ ಕ್ರಮೇಣ ಸುಧಾರಣೆಗೊಂಡು 2019ರಲ್ಲಿ 63ನೇ ಸ್ಥಾನವನ್ನು ಮುಟ್ಟಿದೆ ಎಂಬುದನ್ನಿಲ್ಲಿ ಗಮನಿಸಬೇಕು. ಈ ಬೆಳವಣಿಗೆಯನ್ನು ನಾವು ಸಂಭ್ರಮಿಸಲೂ ಬಹುದು ಅಥವಾ ನಾವು ಏಕೆ ಮತ್ತು ಎಲ್ಲಿ ಹಿಂದುಳಿದಿದ್ದೇವೆ ಎಂಬ ಸೂಕ್ಷ್ಮ ಅವಲೋಕನದ ಲೆಕ್ಕಾಚಾರವನ್ನೂ ಮಾಡಬಹುದು.

ಉತ್ಪಾದಕತೆಯ ಹೆಚ್ಚಳವು ಬೃಹತ್ ಕಂಪನಿಗಳ ಪಾಲಿಗೆ ಮೌಲ್ಯದ ಸೃಷ್ಟಿಯಲ್ಲಿ ತನದೇ ಆದ ಕೊಡುಗೆ ನೀಡುತ್ತಿರುವುದರ ಜತೆಗೇ, ಹೊಸ ಉದ್ಯೋಗಗಳ ಸೃಷ್ಟಿಯ ಮೇಲೆ ನಕಾರಾ ತ್ಮಕ ಪ್ರಭಾವ ಉಂಟಾಗುತ್ತಿರುವುದನ್ನೂ ಎತ್ತಿ ತೋರಿಸುತ್ತಿದೆ.

‘ಉದ್ಯಮ-ಪೂರಕ ವಾತಾವರಣ’ ಕಲ್ಪಿಸುವ ಅಥವಾ ವ್ಯವಹಾರವನ್ನು ಸುಲಭಗೊಳಿಸುವ

‘ Ease of Doing Business ’ ಎಂಬ ಪರಿಕಲ್ಪನೆಯು, ಎಂಎಸ್‌ಎಂಇಗಳ ಮೇಲೆ ಬೀರು ವಷ್ಟರ ಮಟ್ಟಿನ ಪರಿಣಾಮವನ್ನು ಬೃಹತ್ ಉದ್ಯಮಗಳ ಮೇಲೇನೂ ಬೀರುವುದಿಲ್ಲ.

ಎಂಎಸ್‌ಎಂಇಗಳು ಉದ್ಯೋಗ ಸೃಷ್ಟಿಗೆ ಗಣನೀಯ ಕೊಡುಗೆಯನ್ನು ನೀಡುತ್ತಿರುವುದು ಹೌದಾದರೂ, ಅದೇ ವೇಳೆಗೆ ವ್ಯವಹಾರವನ್ನು ಮುಂದುವರಿಸಿಕೊಂಡು ಹೋಗುವ ನಿಟ್ಟಿನಲ್ಲಿ ಪ್ರತಿಯೊಂದು ಸಂಭಾವ್ಯ ಕಷ್ಟಗಳನ್ನು ಕೂಡ ಎದುರಿಸುತ್ತಲೇ ಇರುತ್ತವೆ. ಭಾರಿ ಮೌಲ್ಯದ ಯೋಜನೆಗಳನ್ನು ಘೋಷಿಸಿಬಿಟ್ಟರೆ ಹೆಚ್ಚೆಚ್ಚು ಸಂಖ್ಯೆಯ ಉದ್ಯೋಗಾ ವಕಾಶಗಳನ್ನು ಅವು ಹೊತ್ತು ತರುತ್ತವೆ ಎಂದು ಸರಕಾರವು ಭಾವಿಸಿರುವಂತೆ ತೋರುತ್ತದೆ. ಕೆಲ ವರ್ಷಗಳ ಹಿಂದೆ, ಓಲಾ ಇಲೆಕ್ಟ್ರಿಕ್ ಕಂಪನಿಯು ದೈತ್ಯ ಗಾತ್ರದ ಕಾರ್ಖಾನೆಯೊಂದರ

ಸ್ಥಾಪನೆಯ ಕುರಿತು ಘೋಷಿಸಿ, ಅದೊಂದು ಕಾರ್ಖಾನೆಯ ಬರೋಬ್ಬರಿ 1000 ಮಹಿಳೆಯ ರಿಗೆ ಉದ್ಯೋಗ ನೀಡುವ ಕುರಿತು ಹೇಳಿಕೊಂಡಿತ್ತು.

ತಮಾಷೆಯೇನು ಗೊತ್ತಾ? ಉತ್ಪಾದನೆ, ತಂತ್ರಜ್ಞಾನ, ಮಾರಾಟ ಮತ್ತು ಕಾರ್ಯಾಚರಣೆ ಗಳು ಸೇರಿದಂತೆ ಭಾರತದಾದ್ಯಂತದ ತನ್ನ ಎಲ್ಲ ಕಾರ್ಯಚಟುವಟಿಕೆಗಳಿಗೆ ಸಂಬಂಧಿಸಿ 2024ರ ಆರಂಭದಲ್ಲಿ ಹತ್ತತ್ತಿರ ಇಂಥ 400 ನೆಲೆಗಳನ್ನು ಹೊಂದಿದ್ದ ಆ ಕಂಪನಿಯು ಆ ವರ್ಷಾಂತ್ಯದೊಳಗೆ 500 ಮಂದಿಯನ್ನು ಮನೆಗೆ ಕಳಿಸಿತು. ಇದು ಮತ್ತೇನಲ್ಲ, ವ್ಯವಹಾರ ಜಗತ್ತಿನ ಕಠೋರ ವಾಸ್ತವತೆಗಳ ಒಂದು ತುಣುಕಷ್ಟೇ.

2023ರ ಅಂತ್ಯದ ವೇಳೆಗೆ ಆ ಕಂಪನಿಯು 2300 ಕೋಟಿ ರುಪಾಯಿಗಳಷ್ಟು ಎತ್ತುವಳಿ ಮಾಡಿತ್ತು. ಕನ್ನಡಕ, ಕಾಂಟ್ಯಾಕ್ಟ್ ಲೆನ್ಸ್ ಮುಂತಾದ ದೃಶ್ಯ ಸಾಧನಗಳನ್ನು ತಯಾರಿಸ‌ ಲೆಂದು ವಿಶ್ವದ ಅತಿದೊಡ್ಡ ಕಾರ್ಖಾನೆಯನ್ನು ಸ್ಥಾಪಿಸುವುದಾಗಿ ಘೋಷಿಸಿದ ಲೆನ್ಸ್ ಕಾರ್ಟ್ ಕಂಪನಿಯು ತೆಲಂಗಾಣ ಸರಕಾರ ದೊಂದಿಗೆ ಇತ್ತೀಚೆಗೆ ಒಡಂಬಡಿಕೆಗೆ ಸಹಿಹಾಕಿತು.‌

ಇದಕ್ಕಾಗಿ ಸುಮಾರು 1500 ಕೋಟಿ ರುಪಾಯಿಗಳನ್ನು ಹೂಡಲಾಗುತ್ತದೆ ಮತ್ತು ಈ ಕಾರ್ಖಾನೆಯಿಂದಾಗಿ 2500 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂಬ ಭರವಸೆಯೂ ಹೊಮ್ಮಿತು. ಈ ಕಂಪನಿಯು ರಾಜಸ್ಥಾನದ ಭಿವಂಡಿಯಲ್ಲಿ ಈಗಾಗಲೇ ಒಂದು ಕಾರ್ಖಾನೆ ಯನ್ನು ನಡೆಸುತ್ತಿದೆ; ಉನ್ನತ ತಾಂತ್ರಿಕತೆಯ ಸ್ವಯಂಚಾಲಿತ ವ್ಯವಸ್ಥೆಯನ್ನು ಹೊಂದಿ ರುವ ಈ ಘಟಕವು, ಸರಬರಾಜು ಸರಪಳಿ ಮತ್ತು ಉತ್ಪಾದನೆಗೆ ಸಂಬಂಧಿಸಿದ ಸುಮಾರು 300 ಮಂದಿಯನ್ನು ತೊಡಗಿಸಿಕೊಂಡಿದೆ.

ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಅಖಾಡಕ್ಕಿಳಿದ ಉದ್ಯಮದ ಅನುಭವಿ ಹಾಗೂ ಪ್ರಸಿದ್ಧ ಹೂಡಿಕೆ ದಾರರೊಬ್ಬರು, “ಇಂಥ ಅವಕಾಶಗಳನ್ನು ಆಕರ್ಷಿ ಸುವಲ್ಲಿ ಅಥವಾ ಉಳಿಸಿ ಕೊಳ್ಳುವಲ್ಲಿ ಕರ್ನಾಟಕ ಸರಕಾರವು ವಿಫಲವಾಗಿದೆ" ಎಂದು ತರಾಟೆಗೆ ತೆಗೆದುಕೊಂಡಿದ್ದರ

ಜತೆಗೆ, “ಇದು ಕರ್ನಾಟಕಕ್ಕೆ ಆದ ನಷ್ಟ" ಎಂದೂ ಪ್ರತಿಪಾದಿಸಿದರು. ಈ ಎಲ್ಲ ಅಂಶ ಗಳೂ ಈಗಾಗಲೇ ಹಲವು ರೀತಿಗಳಲ್ಲಿ ಬಿಂಬಿತವಾಗಿ, ತಮ್ಮ ವರಸೆ ಯನ್ನು ತೋರಿಸುತ್ತಿವೆ.

500ಕ್ಕೂ ಹೆಚ್ಚು ಮಿಲಿಯನೇರ್‌ಗಳು ಅರಬ್ ಸಂಯುಕ್ತ ಗಣ ರಾಜ್ಯದಂಥ (ಯುಎಇ) ಇತರ ದೇಶಗಳ ಪೌರತ್ವ ವನ್ನು ತೆಗೆದುಕೊಂಡಿರುವುದು ಇಂಥ ಅಂಶಗಳಂದು. ಇವರೆ ಸಾಮಾನ್ಯವಾಗಿ, ನವೋದ್ಯಮಶೀಲರು ಹಾಗೂ ಸಣ್ಣ ಮತ್ತು ಮಾಧ್ಯಮ ಗಾತ್ರದ ವ್ಯಾಪಾ

ರೋದ್ದಿಮೆಗಳ ಮಾಲೀಕರಾಗಿದ್ದು, ಭಾರತದಲ್ಲಿ ವ್ಯವಹಾರವನ್ನು ಮುಂದುವರಿಸಲು ಬಂಡವಾಳ ಲಭ್ಯತೆಗೆ, ತೆರಿಗೆ ಕಾನೂನುಗಳಿಗೆ ಸಂಬಂಧಿಸಿದ ಸಾಕಷ್ಟು ಸವಾಲುಗಳನ್ನು ಎದುರಿಸ ಬೇಕಾಗಿಬಂದಿದೆ.

ಹೀಗಾಗಿ ಅವರು ದೇಶದಿಂದ ನಿರ್ಗಮಿಸುತ್ತಿದ್ದಾರೆ ಎನ್ನಲಡ್ಡಿಯಿಲ್ಲ. ‘ಬೃಹತ್ ಉದ್ದಿಮೆ ಗಳೇ ಉತ್ತಮ’ ಎಂಬ ದೃಷ್ಟಿಕೋನವನ್ನು ಹೊಂದಿರುವುದೇ ನಮ್ಮವರ ಸಮಸ್ಯೆ; ‘ಸಣ್ಣ ಗಾತ್ರದ ಉದ್ದಿಮೆಗಳು ಸುಸ್ಥಿರವಾಗಿರುತ್ತವೆ’ ಎಂಬುದನ್ನು ಭಾರತವು ಪ್ರಸ್ತುತ ಮನವರಿಕೆ ಮಾಡಿಕೊಳ್ಳಬೇಕಿದೆ. ಇಲ್ಲವಾದಲ್ಲಿ, ನಾವು ಮತ್ತಷ್ಟು ದೊಡ್ಡ ಬಿಕ್ಕಟ್ಟಿಗೆ ಸಿಲುಕುವುದು

ಕಟ್ಟಿಟ್ಟಬುತ್ತಿ. ಜತೆಗೆ, ಅದರಿಂದ ಚೇತರಿಸಿಕೊಳ್ಳುವುದು ಮತ್ತಷ್ಟು ಸವಾಲಿನ ಸಂಗತಿ ಯಾಗಿ ಬಿಡುತ್ತದೆ ಎಂಬುದರಲ್ಲಿ ಸಂದೇಹವಿಲ್ಲ.

(ಲೇಖಕರು ವಾಣಿಜ್ಯೋದ್ಯಮಿ ಹಾಗೂ ಸ್ಟಾರ್ಟಪ್ ಉದ್ಯಮಗಳ ಸಲಹೆಗಾರರು)

ಇದನ್ನೂ ಓದಿ: Turuvekere Prasad Column: ಇದೊಂದು ಪ್ರಕೃತಿ ಶಾಲೆ

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ