ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬಿಎಸ್’ವೈ ಪ್ರವಾಸ, ಬಿಜೆಪಿಗೆ ಪ್ರಯಾಸ

ಬಿಎಸ್’ವೈ ಪ್ರವಾಸ, ಬಿಜೆಪಿಗೆ ಪ್ರಯಾಸ

ಬಿಎಸ್’ವೈ ಪ್ರವಾಸ, ಬಿಜೆಪಿಗೆ ಪ್ರಯಾಸ

Profile Vishwavani News Aug 27, 2021 11:54 AM
image-a1ca2586-8c74-4c5d-8666-056b78d2dcca.jpg
ವಿಶ್ವವಾಣಿ ವಿಶೇಷ ಪ್ರವಾಸಕ್ಕಾಗಿ ಪ್ರತ್ಯೇಕ ಕಾರು ಖರೀದಿಸಿದ ಮಾಜಿ ಮುಖ್ಯಮಂತ್ರಿ ಶುಕ್ರವಾರ ಶಿವಮೊಗ್ಗಕ್ಕೆ ಭೇಟಿ ನೀಡಲಿರುವ ಯಡಿಯೂರ ವಿಶೇಷ ವರದಿ: ರಂಜಿತ್ ಎಚ್. ಅಶ್ವತ್ಥ ಬೆಂಗಳೂರು ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ಬಳಿಕವೂ ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ರಾಜ್ಯ ಪ್ರವಾಸ ಮಾಡುವ ಯಡಿಯೂರಪ್ಪ ಅವರ ಉತ್ಸಾಹ ಇದೀಗ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. 2023ರ ಚುನಾವಣೆಗೆ ಸಂಘಟನೆ ಮಾಡಲು ಈಗಿನಿಂದಲೇ ಏಕಾಂಕಿಯಾಗಿ ರಾಜ್ಯ ಪ್ರವಾಸ ಮಾಡಲು ಯಡಿಯೂರಪ್ಪ ನಿರ್ಧರಿಸಿದ್ದಾರೆ. ಆದರೆ ಈ ರೀತಿ ಮಾಡುವುದರಿಂದ ಪಕ್ಷದ ಸಂಘಟನೆ ಗಿಂತ ಯಡಿಯೂರಪ್ಪ ಅವರು ಮೇಲುಗೈ ಸಾಧಿಸುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಯಡಿಯೂರಪ್ಪ ಅವರ ಪ್ರವಾಸಕ್ಕೆ ಒಪ್ಪಿಗೆ ನೀಡಬೇಕೋ ಬೇಡವೋ ಎನ್ನುವ ಗೊಂದಲದಲ್ಲಿ ವರಿಷ್ಠರಿದ್ದಾರೆ ಎಂದು ಮೂಲಗಳು ತಿಳಿಸಿವೆ. ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಯಡಿಯೂರಪ್ಪ ಅವರ ಪ್ರವಾಸ ಅನಿವಾರ್ಯ. ಆದರೆ ಅವರು ಏಕಾಂಗಿಯಾಗಿ ಪ್ರವಾಸ ಮಾಡಿದರೆ ತಮ್ಮ ಮಾಸ್ ಲೀಡರ್ ವ್ಯಕ್ತಿತ್ವದಿಂದ ತಮ್ಮ ಹಿಡಿತವನ್ನು ಹೆಚ್ಚಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಹಾಗೆಂದು, ಅವರು ಸಂಘಟನಾ ಪ್ರವಾಸ ಮಾಡದಿದ್ದರೆ ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ಸಿಗುವ ಸಾಧ್ಯತೆ ಕಡಿಮೆಯಿದೆ. ಇದನ್ನು ಗಮನದಲ್ಲಿರಿಸಿಕೊಂಡು, ಅತ್ತ ಯಡಿಯೂರಪ್ಪ ಅವರಿಗೂ ಬೇಸರವಾಗದಂತೆ, ಇತ್ತ ಪಕ್ಷಕ್ಕೂ ಡ್ಯಾಮೇಜ್ ಆಗದ ರೀತಿಯಲ್ಲಿ ಈ ಪ್ರವಾಸವನ್ನು ರೂಪಿಸುವ ಲೆಕ್ಕಾಚಾರದಲ್ಲಿ ವರಿಷ್ಠರಿದ್ದಾರೆ. ಏಕಾಂಗಿ ಪ್ರವಾಸ ಬೇಡ: ಗಣೇಶ ಚತುರ್ಥಿ ಬಳಿಕ ರಾಜ್ಯಾದ್ಯಂತ ಪ್ರವಾಸ ಮಾಡುವ ಇರಾದೆ ವ್ಯಕ್ತಪಡಿಸಿರುವ ಯಡಿಯೂರಪ್ಪ ಅವರಿಗೆ, ಈ ಪ್ರವಾಸಕ್ಕೆ ಅವಕಾಶ ನೀಡಲಾಗುತ್ತದೆ. ಆದರೆ ಏಕಾಂಗಿಯಾಗಿ ಪ್ರವಾಸ ಮಾಡುವಂತಿಲ್ಲ. ಪಕ್ಷ ಪ್ರವಾಸಕ್ಕೆಂದೇ ಪ್ರತ್ಯೇಕ ಕಾರು ಖರೀದಿ ಯಡಿಯೂರಪ್ಪ ಅವರು ರಾಜ್ಯ ಪ್ರವಾಸಕ್ಕಾಗಿ ಸುಮಾರು ಒಂದು ಕೋಟಿ ಬೆಲೆ ಬಾಳುವ ಐಷಾರಾಮಿ ಟೊಯೋಟಾ ವೆಲ್ ಫೈರ್ ಕಾರು ಖರೀದಿಸಿದ್ದಾರೆ. ಈಗಾಗಲೇ ಹೊಸ ಕಾರಿನಲ್ಲಿ ಘಾಟಿ ಸುಬ್ರಮಣ್ಯ ದೇವಾಲಯಕ್ಕೆ ಹೋಗಿ ಬಂದಿದ್ದಾರೆ. ವಿದೇಶ ಪ್ರವಾಸ ಮುಗಿಸಿ ವಾಪಸ್ಸಾದ ಅವರು ವಿಮಾನ ನಿಲ್ದಾಣದಿಂದ ಇದೇ ಕಾರಿನಲ್ಲಿ ಕಾವೇರಿಗೆ ಆಗಮಿಸಿದ್ದರು. ಪ್ರಸ್ತುತ ಯಡಿಯೂರಪ್ಪ ಅವರು ಖರೀದಿ ಮಾಡಿರುವ ಕಾರಿನ ಬೆಲೆ 87 ಲಕ್ಷವಾಗಿದ್ದು, ತೆರಿಗೆ ಸೇರಿ ಒಟ್ಟಾರೆ ಕಾರಿನ ಬೆಲೆ 1 ಕೋಟಿ ರು. ಆಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ. ಈ ಕಾರು ಏಳು ಸೀಟಿನ ಸಾಮರ್ಥ್ಯವಿದ್ದು, ಕಾರಿನೊಳಗೆ ಹೆಚ್ಚು ಜಾಗವಿದೆ. ಆದ್ದರಿಂದ ಇಳಿ ವಯಸ್ಸಿನಲ್ಲಿ ಸುಖಕರ ಪ್ರಯಾಣ ಮಾಡಲು ಸಹಾಯವಾಗಲಿದೆ ಎಂದು ಹೇಳಲಾಗಿದೆ.