ನಿಮ್ಮನ್ನು ಟೀಕಿಸುವವರ ಬಗ್ಗೆ ನೀವು ತಕ್ಷಣ ದ್ವೇಷ ಭಾವ ಬೆಳೆಸಿಕೊಳ್ಳುತ್ತೀರಿ. ಈ ಭಾವವನ್ನು ಅಲ್ಲಿಯೇ ಹೊಸಕಿ ಹಾಕದಿದ್ದರೆ, ಆ ದ್ವೇಷ ನಿಮ್ಮನ್ನು ಸುಡಲಾರಂಭಿಸುತ್ತದೆ. ನಿಮ್ಮ ಟೀಕಾಕಾರರನ್ನು ಸಹಿಸಿಕೊಳ್ಳುವ, ಒಪ್ಪಿಕೊಳ್ಳುವ ಭಾವ ಬೆಳೆಸಿಕೊಳ್ಳಬೇಕು.
ಸಹನೆ ಅಂದ್ರೆ ಕಾಯುವ ಸಾಮರ್ಥ್ಯ ಅಲ್ಲ. ಆದರೆ ಕಾಯುವಾಗ ಉತ್ತಮ ವರ್ತನೆಯನ್ನು ಮೆರೆಯುವುದು. ತಾನು ಕಾಯುತ್ತಿದ್ದೇನೆ ಎಂಬ ಕಿಂಚಿತ್ ಭಾವನೆಯನ್ನು ವ್ಯಕ್ತಪಡಿಸದೇ ಇರುವುದು. ತನ್ನನ್ನು ಕಾಯಿಸಿದವರಿಗೆ ಹಿಡಿಶಾಪ...
ಯಾರಲ್ಲೂ ಇಲ್ಲದ ಬೆಲೆ ಬಾಳುವ ವಸ್ತುಗಳನ್ನು ಖರೀದಿಸಿ ಬೇರೆಯವರ ಮುಂದೆ ಪ್ರದರ್ಶಿಸಿ ದೊಡ್ಡವರಾಗಲು ಹೋಗಬಾರದು. ಕಾರಣ ಹಾಗೆ ಮಾಡುವುದರಿಂದ ಅವರು ನಿಮ್ಮನ್ನು ಇಷ್ಟಪಡುವ ಬದಲು ದ್ವೇಷಿಸಲಾರಂಭಿಸುತ್ತಾರೆ. ನಿಮ್ಮ...
ನೀವು ಬಯಸಿದ್ದೆಲ್ಲವೂ ಸಿಗುವುದಿಲ್ಲ. ಆದ್ದರಿಂದ ಏನು ಸಿಕ್ಕಿದೆಯೋ ಅಷ್ಟಕ್ಕೇ ಸಂತೃಪ್ತರಾಗುವ ಭಾವ ಬೆಳೆಸಿಕೊಳ್ಳಬೇಕು. ಇಲ್ಲದಿದ್ದರೆ ಸದಾ ಬೇಸರದಲ್ಲಿಯೇ ಇರಬೇಕಾಗುತ್ತದೆ. ನಿಮಗೆ ಸಿಗಬೇಕಾದುದು ಸಿಕ್ಕೇ...
ನೀವು ಮಾತಾಡುವ ಮುನ್ನ ಈ ನಾಲ್ಕು ಸಂಗತಿಗಳನ್ನು ಗಮನದಲ್ಲಿರಿಸಿಕೊಳಬೇಕು.ಅವು ಯಾವವೆಂದರೆ, ಈಗ ಮಾತಾಡುವ ಅಗತ್ಯವಿದೆಯಾ, ಮನವೇ ಹಿತವಾ, ನಾನು ಮಾತಾಡಿದ್ದು ಪ್ರಸ್ತುತ, ಸತ್ಯವಾ ಮತ್ತು ನನ್ನ ಮಾತು...
ಒಮ್ಮೆ ನಂಬಿಕೆ ಹೊರಟು ಹೋದರೆ, ನೀವು ಎಷ್ಟೇ ಕ್ಷಮಾಪಣೆ ಕೋರಿದರೂ ಅದರಿಂದ ಪ್ರಯೋಜನವಿಲ್ಲ. ಯಾವ ಕಾರಣಕ್ಕೂ ನಿಮ್ಮ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳಬಾರದು. ವಿಶ್ವಾಸಾರ್ಹತೆ ಮತ್ತು ನಂಬಿಕೆಯೇ...
ಒಬ್ಬ ವ್ಯಕ್ತಿಯ ಹಿನ್ನೆಲೆಯೊಂದನ್ನೇ ಮುಖ್ಯವಾಗಿಟ್ಟುಕೊಂಡು ಅವನನ್ನು ಸದಾ ಅಳೆಯಬಾರದು. ಕಾರಣ ಒಬ್ಬ ವ್ಯಕ್ತಿ ಯಾವತ್ತೂ ಹೊಸ ಅವಿಷಯ ಕಲಿತು, ತನ್ನ ಬಗ್ಗೆ ಪರಾಮರ್ಶೆ ಮಾಡಿಕೊಂಡು ಬದಲಾಗಬಹುದು. ಒಂದು...
ಅದೆಂಥದೇ ಕ್ಲಿಷ್ಟಕರ ಅಥವಾ ಸಂಕಷ್ಟದ ಸಮಯದಲ್ಲಿ ಶಾಂತವಾಗಿರುವುದನ್ನು ರೂಢಿಸಿಕೊಳ್ಳಬೇಕು. ಶಾಂತವಾಗಿರುವುದಕ್ಕೂ ಅಗಾಧವಾದ ಶಕ್ತಿಬೇಕು. ಶಾಂತ ಸ್ವಭಾವವನ್ನು ರೂಢಿಸಿಕೊಳ್ಳುವುದು ಮನಸ್ಸಿನ ಹತೋಟಿಯ ಸಂಕೇತ. ಅದನ್ನು ಒಂದು ವ್ರತದಂತೆ ಪಾಲಿಸಬೇಕು....
ಸಂತಸದ ಜೀವನಕ್ಕೆ ಎರಡು ಸೂತ್ರಗಳಿವೆ. ಮೊದಲನೆಯದು, ವಸ್ತುಗಳನ್ನು ಬಳಸಬೇಕೇ ಹೊರತು, ಜನರನ್ನಲ್ಲ ಮತ್ತು ಎರಡನೆಯದು, ಜನರನ್ನು ಪ್ರೀತಿಸಬೇಕೇ ಹೊರತು ವಸ್ತುಗಳನ್ನೆಲ್ಲ. ಸಾಧ್ಯವಾದರೆ ಈ ಸೂತ್ರಗಳನ್ನು ಪಾಲಿಸಿ....
ಅತಿಯಾದ ಒತ್ತಡ, ನಿಮ್ಮ ಆತ್ಮಸ್ಥೈರ್ಯವನ್ನು ಕುಗ್ಗಿಸುವುದಿಲ್ಲ. ಆದರೆ ಆ ಒತ್ತಡಕ್ಕೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ ಎಂಬುದರ ಮೇಲೆ ನಿಮ್ಮ ಆತ್ಮಸ್ಥೈರ್ಯ ನಿರ್ಧರಿತವಾಗುತ್ತದೆ. ಕೆಲವು ಸಲ ಒತ್ತಡಕ್ಕಿಂತ ನಿಮ್ಮ...