ಬಹಳ ಕಷ್ಟಕರವಾದ ಕೆಲಸವೆಂದರೆ ಎಲ್ಲರನ್ನೂ ಖುಷಿಪಡಿಸುವುದು. ಬಹಳ ಸುಲಭವಾದ ಕೆಲಸವೆಂದರೆ, ಎಲ್ಲರೊಂದಿಗೂ ಖುಷಿಯಾಗಿರುವುದು. ಎಲ್ಲರನ್ನು ಖುಷಿಪಡಿಸಲು ಸಾಧ್ಯವಿಲ್ಲ. ಎಲ್ಲರೊಂದಿಗೂ ಖುಷಿಯಾಗಿರುವುದು ಸಾಧ್ಯವಿದೆ. ಅದನ್ನೇ ಮಾಡೋಣ.
ಜನ ನಿಮ್ಮ ವರ್ಚಸ್ಸಿಗೆ ಧಕ್ಕೆ ತರಬಹುದು, ವ್ಯಕ್ತಿತ್ವಕ್ಕೆ ಕುಂದುಂಟು ಮಾಡಬಹುದು. ಆದರೆ ಅವರು ನಿಮ್ಮಲ್ಲಿರುವ ನಿಮ್ಮತನಕ್ಕೆ ಘಾಸಿಯುಂಟು ಮಾಡಲಾರರು. ಯಾವತ್ತೂ ನಿಮ್ಮತನವನ್ನು ಕಾಪಾಡಿಕೊಳ್ಳಬೇಕು....
ನಾನು ನದಿಯ ನೀರಿನಂತೆ ಹರಿಯುವ ನೀರು ಎಂದು ಭಾವಿಸಿ. ಆಗ ನೀವು ಯಾವುದೇ ಕಲ್ಲು, ಬಂಡೆಗಳನ್ನು ದಾಟಿಕೊಂಡು, ಅಡೆ – ತಡೆಗಳನ್ನು ಮೀರಿ ಮುನ್ನುಗ್ಗುತ್ತಲೇ ಇರುತ್ತೀರಿ. ನೀವು...
ಕೆಲವರು ಸದಾ ನಗುತ್ತಲೇ ಇರುತ್ತಾರೆ. ಅದರ ಅರ್ಥ ಅವರಿಗೆ ಸಮಸ್ಯೆ ಇಲ್ಲವೆಂದಲ್ಲ. ಅವರು ತಮ್ಮ ಸಮಸ್ಯೆಗಿಂತ ಆ ಕ್ಷಣದ ಸಮಾಧಾನ ಮತ್ತು ನೆಮ್ಮದಿ ಯನ್ನು ಕಳೆದುಕೊಳ್ಳಲು ಸಿದ್ಧರಿರುವುದಿಲ್ಲ...
ನಿಮ್ಮ ಮನಸ್ಸಿನಲ್ಲಿ ಆಗಾಗ ಏಳುವ ನಕಾರಾತ್ಮಕ ಭಾವನೆಗಳನ್ನು ನೀವೇ ಬಡಿದು ಸಾಯಿಸಬೇಕು. ಈ ಕೆಲಸವನ್ನು ಬೇರೆಯವರು ಮಾಡುತ್ತಾರೆ ಎಂದು ಕಾಯುತ್ತಾ ಇರಬಾರದು. ಕಾರಣ ಅದನ್ನು ಮಾಡಬೇಕಾದವರು...
ನಿಮ್ಮ ಖುಷಿ ಎಲ್ಲಿದೆ ಮತ್ತು ಅದನ್ನು ಹೇಗೆ ಗಿಟ್ಟಿಸಿಕೊಳ್ಳಬೇಕು ಎಂಬುದು ನಿಮಗೆ ಗೊತ್ತಿರಬೇಕು. ಇದಕ್ಕೆ ಬೇರೆಯವರನ್ನು ಅವಲಂಬಿಸಿದರೆ, ನೀವು ಅವರ ಮರ್ಜಿಗಾಗಿ ಕಾಯಬೇಕಾಗುತ್ತದೆ. ನಿಮ್ಮ ಆನಂದದ ಮೂಲ...
ನಿಮಗೆ ಯಾವ ಕೆಲಸದಲ್ಲಿ ಖುಷಿ ಮತ್ತು ನೆಮ್ಮದಿ ಸಿಗುವುದೋ, ಅಲ್ಲಿ ನಿಮ್ಮ ಸಂಪೂರ್ಣ ಶಕ್ತಿ, ಏಕಾಗ್ರತೆಯನ್ನು ತೊಡಗಿಸಿ. ಅದರಿಂದ ದೊರಕುವ ಫಲಿತಾಂಶ ಯಾವತ್ತೂ ಮತ್ತಷ್ಟು ಉತ್ಸಾಹವನ್ನು ನೀಡುತ್ತದೆ....
ಯಾವುದಾದರೂ ಇಷ್ಟದ ಕೆಲಸವನ್ನು ಮಾಡಲೇಬೇಕು ಎಂದು ನೀವು ನಿರ್ಧರಿಸಿದರೆ ಮಾಡಿಯೇ ತೀರುತ್ತೀರಿ. ಇಷ್ಟವಿಲ್ಲದಿದ್ದರೆ ನೆಪಗಳನ್ನು ಹೇಳುತ್ತೀರಿ. ಯಾರಾದರೂ ನೆಪ ಹೇಳಿದರೆ ಅವರಿಗೆ ಆ ಕೆಲಸ ಇಷ್ಟ ಇಲ್ಲವೆಂದು...
ನಿಮ್ಮ ದೌರ್ಬಲ್ಯಗಳು ನಿಮಗೆ ಗೊತ್ತಿದ್ದರೆ ನೀವು ಸಶಕ್ತರು. ನಿಮ್ಮ ಕುರೂಪ ನಿಮಗೆ ಅರ್ಥವಾದರೆ ನೀವು ಸೌಂದರ್ಯವಂತರು. ನಿಮ್ಮ ಪ್ರಮಾದಗಳಿಂದ ಕಲಿತರೆ, ನೀವು...
ನೀವು ಹುಟ್ಟುವಾಗಲೇ ಬುದ್ಧಿವಂತರಾಗಿರುವುದಿಲ್ಲ. ಪ್ರತಿಯೊಂದನ್ನೂ ತಿಳಿದುಕೊಳ್ಳುತ್ತೀರಿ, ಕಲಿಯುತ್ತೀರಿ. ನಂತರ ಸತತ ಪ್ರಯತ್ನದ ಮೂಲಕ ಗೆಲ್ಲುತ್ತೀರಿ. ಈ ವಿಧಾನವನ್ನು ಅನುಸರಿಸಿದರೆ, ಏನನ್ನು ಬೇಕಾದರೂ ಕಲಿಯಬಹುದು ಮತ್ತು...