Ranya Roa: ದುಬೈನಿಂದ 17 ಚಿನ್ನದ ಗಟ್ಟಿಯನ್ನು ತಂದಿದ್ದೇನೆ; ವಿಚಾರಣೆಯ ವೇಳೆಯಲ್ಲಿ ಬಾಯ್ಬಿಟ್ಟ ರನ್ಯಾ
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಿನ್ನದ ಕಳ್ಳಸಾಗಣೆ ಮಾಡುವಾಗ ಸಿಕ್ಕಿಬಿದ್ದ ನಟಿ ರನ್ಯಾ ರಾವ್ ವಿಚಾರಣೆಯನ್ನು ಅಧಿಕಾರಿಗಳು ನಡೆಸುತ್ತಿದ್ದಾರೆ. ಬಂಧನದ ನಂತರ ಅಧಿಕಾರಿಗಳಿಗೆ ನೀಡಿದ ತಪ್ಪೊಪ್ಪಿಗೆಯಲ್ಲಿ ಆಕೆ ದುಬೈನಿಂದ 17 ಚಿನ್ನದ ಗಟ್ಟಿಯನ್ನು ತೆಗೆದುಕೊಂಡು ಬಂದಿದ್ದಾಗಿ ಆರೋಪಿ ತಿಳಿಸಿದ್ದಾಳೆ.

ರನ್ಯಾ ರಾವ್

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ (Kempegowda International Airport) ನಿಲ್ದಾಣದಲ್ಲಿ ಚಿನ್ನದ ಕಳ್ಳಸಾಗಣೆ (Gold smuggling) ಮಾಡುವಾಗ ಸಿಕ್ಕಿಬಿದ್ದ ನಟಿ ರನ್ಯಾ ರಾವ್ (Ranya Roa) ವಿಚಾರಣೆಯನ್ನು ಅಧಿಕಾರಿಗಳು ನಡೆಸುತ್ತಿದ್ದಾರೆ. ಬಂಧನದ ನಂತರ ಅಧಿಕಾರಿಗಳಿಗೆ ನೀಡಿದ ತಪ್ಪೊಪ್ಪಿಗೆಯಲ್ಲಿ ಆಕೆ ದುಬೈನಿಂದ 17 ಚಿನ್ನದ ಗಟ್ಟಿಯನ್ನು ತೆಗೆದುಕೊಂಡು ಬಂದಿದ್ದಾಗಿ ಆರೋಪಿ ತಿಳಿಸಿದ್ದಾಳೆ. ಮಧ್ಯಪ್ರಾಚ್ಯ, ದುಬೈ ಮತ್ತು ಕೆಲವು ಪಾಶ್ಚಿಮಾತ್ಯ ದೇಶಗಳನ್ನು ಒಳಗೊಂಡಂತೆ ಅಂತರಾಷ್ಟ್ರೀಯ ಪ್ರವಾಸಗಳ ವಿವರಗಳನ್ನು ಅಧಿಕಾರಿಗಳ ಎದುರು ಬಹಿರಂಗಗೊಳಿಸಿದ್ದಾಳೆ ಎಂದು ಮೂಲಗಳು ತಿಳಿಸಿವೆ.
ನಾನು ಇತ್ತೀಚೆಗೆ ಯುರೋಪ್, ಅಮೆರಿಕ ಮತ್ತು ಮಧ್ಯಪ್ರಾಚ್ಯಕ್ಕೆ ಪ್ರಯಾಣಿಸಿದ್ದೇನೆ ಮತ್ತು ದುಬೈ, ಸೌದಿ ಅರೇಬಿಯಾಕ್ಕೆ ಭೇಟಿ ನೀಡಿದ್ದೆ ಎಂದು ರನ್ಯಾ ಹೇಳಿದ್ದಾಳೆ. ಆಕೆ ತನ್ನ ಕುಟುಂಬದ ಬಗ್ಗೆ ಹೇಳಿದ್ದು, ತನ್ನ ತಂದೆ ಕೆ.ಎಸ್. ಹೆಗ್ದೇಶ್, ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದಾರೆ. ನಾನು ಜತಿನ್ ಹುಕ್ಕೇರಿ ಎಂಬ ಉದ್ಯಮಿ ಜೊತೆ ಮದುವೆಯಾಗಿದ್ದು, ಅವರ ಜೊತೆ ಬೆಂಗಳೂರಿನಲ್ಲಿ ವಾಸವಿದ್ದೆ ಎಂದು ಹೇಳಿದ್ದಾಳೆ. ರನ್ಯಾ ರಾವ್ ಮಲ ತಂದೆ ರಾಮಚಂದ್ರ ರಾವ್, ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿಗಮದ ಪೊಲೀಸ್ ಮಹಾನಿರ್ದೇಶಕರು.
ಪ್ರಕರಣದಲ್ಲಿ ಬಂಧನ ಬಳಿಕ ವಿಶೇಷ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದ ವೇಳೆ ‘ನಾನು ಟ್ರ್ಯಾಪ್‌ಗೊಳಗಾಗಿದ್ದೇನೆ, ನನ್ನದೇನೂ ತಪ್ಪಿಲ್ಲ’ ರನ್ಯಾ ಹೇಳಿದ್ದಳು. . ಈ ಹೇಳಿಕೆ ಬೆನ್ನಲ್ಲೇ ಕಾರ್ಯಾಚರಣೆ ಚುರುಕುಗೊಳಿಸಿರುವ ಡಿಆರ್‌ಐ ಅಧಿಕಾರಿಗಳು, ನಟಿ ಸಂಪರ್ಕ ಜಾಲದ ಕುರಿತು ಶೋಧ ಆರಂಭಿಸಿದೆ ಟ್ರ್ಯಾಪ್ ಎಂದಿರುವ ಕಾರಣಕ್ಕೆ ಆಕೆಯನ್ನು ವಿಚಾರಣೆ ನಡೆಸಲು ಕಸ್ಟಡಿಗೆ ನೀಡುವಂತೆ ಡಿಆರ್‌ಇ ಮೂಲಕ ಕೋರ್ಟ್‌ಗೆ ಕೋರಲಾಗಿದೆ ಎಂದು ಮೂಲಗಳು ಹೇಳಿವೆ.ಚಿನ್ನ ಕಳ್ಳಸಾಗಣೆ ಪ್ರಕರಣ ಸಂಬಂಧ ರನ್ಯಾ ಮೊಬೈಲ್ ಹಾಗೂ ಲ್ಯಾಪ್‌ಟಾಪ್ ವಶಕ್ಕೆ ಪಡೆದು ಡಿಆರ್‌ಐ ಅಧಿಕಾರಿಗಳು ಜಾಲಾಡಿದ್ದಾರೆ. ನಟಿ ಜತೆ ನಿರಂತರ ಸಂಪರ್ಕದಲ್ಲಿದ್ದವರ ಪಟ್ಟಿ ತಯಾರಿಸಿ, ಪ್ರಕರಣದ ತನಿಖೆ ನಡೆಯುತ್ತಿದೆ.
ಈ ಸುದ್ದಿಯನ್ನೂ ಓದಿ: Jatin Hukkeri: ರನ್ಯಾ ರಾವ್ ಪತಿ ಜತಿನ್ ಹುಕ್ಕೇರಿ ವಿರುದ್ಧವೂ ತನಿಖೆ; ಯಾರೀತ? ಏನಿವರ ಪಾತ್ರ?
ಆರು ತಿಂಗಳ ಅವಧಿಯಲ್ಲಿ 27ಕ್ಕೂ ಹೆಚ್ಚು ಬಾರಿ ದುಬೈಗೆ ರನ್ಯಾ ಪಯಣಿಸಿದ್ದು, ಆಕೆಯ ಪ್ರವಾಸದ ಕುರಿತು ವಿವರ ಕಲೆ ಹಾಕುವ ಕಾರ್ಯದಲ್ಲಿ ಡಿಆರ್‌ಐ ಅಧಿಕಾರಿಗಳು ತೊಡಗಿದ್ದಾರೆ.