Jevargi Bandh: ಬೆಳಗ್ಗೆಯಿಂದಲೇ ಜೇವರ್ಗಿ ಬಂದ್
ಬೆಳಿಗ್ಗೆಯಿಂದಲೇ ಜೇವರ್ಗಿ ಪಟ್ಟಣದಲ್ಲಿ ಬಂದ್ ಆಚರಣೆ ಶುರುವಾಗಿದ್ದು, ಜೇವರ್ಗಿ ಬಂದ್ ಗೆ ಎಲ್ಲೆಡೆ ಬಾರಿ ಬೆಂಬಲ ವ್ಯಕ್ತವಾಗಿದ್ದು, ಪಟ್ಟಣದ ಪ್ರಮುಖ ಬೀದಿಗಳನ್ನು ಸಂಪೂರ್ಣ ಮುಚ್ಚ ಲಾಗಿದೆ. ಪ್ರತಿಭಟನಾಕಾರರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟೈರ್ ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ
Source : Kalaburagi reporter
ಅನ್ಯಕೋಮಿನ ಯುವಕನ ಕಿರುಕುಳ ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಪ್ರಕರಣ
ಕಲಬುರಗಿ: ಜಿಲ್ಲೆಯ ಜೇವರ್ಗಿ ಪಟ್ಟಣದಲ್ಲಿ ಇತ್ತೀಚಿಗೆ ಅನ್ಯಕೋಮಿನ ಯುವಕನ ಕಿರು ಕುಳಕ್ಕೆ ಬೇಸತ್ತು ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಮಾಡಿಕೊಂಡದ್ದನ್ನು ಖಂಡಿಸಿ ಗುರುವಾರ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ವಿವಿಧ ಹಿಂದೂ ಪರ ಸಂಘಟನೆಗಳು ಜೇವರ್ಗಿ ಬಂದ್(Jevargi bandh) ಕರೆ ನೀಡಿದ್ದವು.
ಬೆಳಿಗ್ಗೆಯಿಂದಲೇ ಜೇವರ್ಗಿ ಪಟ್ಟಣದಲ್ಲಿ ಬಂದ್ ಆಚರಣೆ ಶುರುವಾಗಿದ್ದು, ಜೇವರ್ಗಿ ಬಂದ್ ಗೆ ಎಲ್ಲೆಡೆ ಬಾರಿ ಬೆಂಬಲ ವ್ಯಕ್ತವಾಗಿದ್ದು, ಪಟ್ಟಣದ ಪ್ರಮುಖ ಬೀದಿಗಳನ್ನು ಸಂಪೂರ್ಣ ಮುಚ್ಚಲಾಗಿದೆ. ಪ್ರತಿಭಟನಾಕಾರರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟೈರ್ ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅಪ್ರಾಪ್ತ ಬಾಲಕಿಗೆ ಪ್ರೀತಿ ಮಾಡು ಎಂದು ಕಿರುಕುಳ ನೀಡಿ, ಆಕೆಯ ಆತ್ಮಹತ್ಯೆಗೆ ಕಾರಣ ವಾದ ಮೆಹಬೂಬ್ ಮುಲ್ಲಾ ಆತನಿಗೆ ಕೇವಲ ಬಂಧಿಸಿದರೇ ಸಾಲದು, ಕಠಿಣ ಶಿಕ್ಷೆ ನೀಡ ಬೇಕು. ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ತಾಲೂಕು ಹಾಗು ಜಿಲ್ಲಾ ಮಟ್ಟದ ಪ್ರಮುಖ ಮುಖಂಡರು ಆಗ್ರಹಿಸಿದ್ದಾರೆ.
ಇನ್ನೂ, ಜೇವರ್ಗಿ ಬಂದ್, ಕರೆಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ(akhilabharataveerashaivalingayatmahasabha), ಭಾರತೀಯ ಜನತಾ ಪಕ್ಷ(Bharatiya Janatha party), ವಿವಿಧ ಹಿಂದೂ ಪರ ಸಂಘಟನೆಗಳು(Hindu Organization), ಲಿಂಗಾಯತ ಪರ ಸಂಘಟನೆಗಳು ಸೇರಿ ತಾಲೂಕಿನ ಸಾರ್ವಜನಿಕರು ಬೆಂಬಲ ಸೂಚಿಸಿದ್ದಾರೆ.