Suresh Raina: ತಮಿಳು ಸಿನೆಮಾದಲ್ಲಿ ಕಮಾಲ್ ಮಾಡಲು ಸಜ್ಜಾದ ಕ್ರಿಕೆಟಿಗ ಸುರೆಶ್ ರೈನಾ
ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಡುತ್ತಿದ್ದ ರೈನಾಗೆ ಚೆನ್ನೈಯಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ರೈನಾಗೂ ಚೆನ್ನೈ ಎಂದರೆ ಅಚ್ಚುಮೆಚ್ಚು. ಡಿ. ಶರವಣ ಕುಮಾರ್ ಪ್ರಸ್ತುತಪಡಿಸುತ್ತಿರುವ ಹೆಸರಿಡದ ಈ ಚಿತ್ರವನ್ನು ಲೋಗನ್ ನಿರ್ದೇಶಿಸಿದ್ದಾರೆ. ಸಂತೋಷ್ ನಾರಾಯಣನ್ ಸಂಗೀತ ಸಂಯೋಜಿಸಲಿದ್ದಾರೆ.


ಚೆನ್ನೈ: ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ(Suresh Raina) ಅವರು ಬಣ್ಣದ ಲೋಕಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ತಮಿಳು ಚಿತ್ರವೊಂದರಲ್ಲಿ(Kollywood) ಅವರು ನಟಿಸಲಿದ್ದಾರೆ ಎಂದು ತಿಳಿದುಬಂದಿದೆ. ಮೊದಲ ಬಾರಿಗೆ ಚಿತ್ರ ನಿರ್ಮಾಣ ಮಾಡುತ್ತಿರುವ ಪ್ರೊಡಕ್ಷನ್ ಬ್ಯಾನರ್, ‘ಡ್ರೀಮ್ ನೈಟ್ ಸ್ಟೋರೀಸ್’ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ಸುದ್ದಿಯನ್ನು ಹಂಚಿಕೊಂಡಿದೆ. ‘ಚಿನ್ನ ತಲಾ’ಸುರೇಶ್ ರೈನಾ ಅವರಿಗೆ DKSProductionNo1ಗೆ ಸ್ವಾಗತ’ಎಂದು ನಿರ್ಮಾಣ ಸಂಸ್ಥೆ ಬರೆದುಕೊಂಡಿದೆ.
ಸುರೇಶ್ ರೈನಾ ಅವರು ತಮ್ಮ ಟ್ವಿಟರ್ ಎಕ್ಸ್ ಖಾತೆಯಲ್ಲಿ ʼಕ್ರಿಕೆಟ್ ಮೈದಾನದಿಂದ ಕಾಲಿವುಡ್ ಫ್ರೇಮ್ಸ್‌ಗೆ ಚೆನ್ನೈ ಸ್ಫೂರ್ತಿಯನ್ನು ನನ್ನೊಂದಿಗೆ ತರುತ್ತಿದ್ದೇನೆ. ಈ ಹೊಸ ಪಯಣ ಆರಂಭಿಸಲು ಹೆಮ್ಮೆಯಾಗುತ್ತಿದೆʼ ಎಂದು ಬರೆದುಕೊಂಡಿದ್ದಾರೆ.
ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಡುತ್ತಿದ್ದ ರೈನಾಗೆ ಚೆನ್ನೈಯಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ರೈನಾಗೂ ಚೆನ್ನೈ ಎಂದರೆ ಅಚ್ಚುಮೆಚ್ಚು. ಡಿ. ಶರವಣ ಕುಮಾರ್ ಪ್ರಸ್ತುತಪಡಿಸುತ್ತಿರುವ ಹೆಸರಿಡದ ಈ ಚಿತ್ರವನ್ನು ಲೋಗನ್ ನಿರ್ದೇಶಿಸಿದ್ದಾರೆ. ಸಂತೋಷ್ ನಾರಾಯಣನ್ ಸಂಗೀತ ಸಂಯೋಜಿಸಲಿದ್ದಾರೆ.
Welcoming Chinna Thala @ImRaina ❤️ on board for #DKSProductionNo1! 💥🗡️@Logan__you @Music_Santhosh @supremesundar @resulp @muthurajthangvl @sandeepkvijay_ @saravananskdks @TibosSolutions @kgfsportz #sureshraina #chinnathala #dreamknightstories pic.twitter.com/8FnkmNdIeY
— Dream Knight Stories Private Limited (@DKSoffl) July 4, 2025
ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದಂದೇ ರೈನಾ ಕೂಡ ತಮ್ಮ ನಿವೃತ್ತಿ ಘೋಷಿಸಿದ್ದರು. ಉತ್ತರ ಪ್ರದೇಶದ ಸುರೇಶ್ ರೈನಾ, 18 ಟೆಸ್ಟ್ ಪಂದ್ಯಗಳಿಂದ 768 ರನ್ ಕಲೆಹಾಕಿದ್ದರೆ, 226 ಏಕದಿನ ಪಂದ್ಯಗಳಿಂದ 5 ಶತಕ ಸೇರಿದಂತೆ 5615ರನ್, 78 ಟಿ20 ಪಂದ್ಯಗಳಿಂದ 1 ಶತಕ, 5 ಅರ್ಧಶತಕ 1605 ರನ್ ಬಾರಿಸಿದ್ದಾರೆ. 2011ರ ಏಕದಿನ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದರು.
ಇದನ್ನೂ ಓದಿ India-Pakistan: ಏಷ್ಯಾ ಕಪ್‌ನಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿ ಸಾಧ್ಯತೆ
ಐಪಿಎಲ್ ಆರಂಭದಿಂದಲೂ ಧೋನಿ ಜತೆಯಲ್ಲೇ ಸಿಎಸ್‌ಕೆ ತಂಡದಲ್ಲಿದ್ದ ರೈನಾ 2013ರ ಸ್ಪಾಟ್ ಫಿಕ್ಸಿಂಗ್‌ನಿಂದಾಗಿ ಸಿಎಸ್‌ಕೆ ಎರಡು ವರ್ಷ ನಿಷೇಧದಲ್ಲಿದ್ದಾಗ ರೈನಾ ಗುಜರಾತ್ ತಂಡದಲ್ಲಿದ್ದರೆ, ಧೋನಿ ಪುಣೆ ತಂಡದ ಪರ ಆಡಿದ್ದರು.