ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vaibhav Suryavanshi: ಮುಂದಿನ ಪಂದ್ಯದಲ್ಲಿ 200 ರನ್‌ ಬಾರಿಸುವೆ ಎಂದ ಉದಯೋನ್ಮುಖ ತಾರೆ ಸೂರ್ಯವಂಶಿ

ಒಟ್ಟು 78 ಎಸೆತ ಎದುರಿಸಿದ ವೈಭವ್‌ 143 ರನ್‌ ಪೇರಿಸಿದರು. ಈ ಇನ್ನಿಂಗ್ಸ್‌ ನಲ್ಲಿ ಅವರು 13 ಫೋರ್‌ ಮತ್ತು 10 ಸಿಕ್ಸರ್‌ ಬಾರಿಸಿದರು. ನಾಲ್ಕು ಪಂದ್ಯಗಳಲ್ಲಿ 306 ರನ್ ಗಳಿಸಿರುವ ವೈಭವ್‌ ಸೂರ್ಯವಂಶಿ ಸರಣಿಯಲ್ಲಿ ಇದುವರೆಗಿನ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಮುಂದಿನ ಪಂದ್ಯದಲ್ಲಿ 200 ರನ್‌ ಬಾರಿಸುವೆ ಎಂದ ಸೂರ್ಯವಂಶಿ

Profile Abhilash BC Jul 6, 2025 2:38 PM

ಲಂಡನ್‌: ಇಂಗ್ಲೆಂಡ್‌ ಅಂಡರ್‌ 19(England U19) ನಡುವಿನ ಯೂತ್‌ ಏಕದಿನ ಪಂದ್ಯದಲ್ಲಿ ಅತ್ಯಂತ ವೇಗದ ಶತಕ ಬಾರಿಸಿ ವಿಶ್ವದಾಖಲೆ ಬರೆದಿರುವ ಭಾರತದ 14ರ ಹರೆಯದ ಬ್ಯಾಟಿಂಗ್‌ ಸೆನ್ಸೇಶನ್‌ ವೈಭವ್‌ ಸೂರ್ಯವಂಶಿ(Vaibhav Suryavanshi), ಶುಭಮನ್ ಗಿಲ್(Shubman Gill) ರೀತಿಯಲ್ಲಿ ಹೆಚ್ಚು ದೀರ್ಘವಾಗಿ ಬ್ಯಾಟಿಂಗ್ ಮಾಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.

ಇಂಗ್ಲೆಂಡ್ ವಿರುದ್ಧ ನಡೆದಿದ್ದ 19 ವರ್ಷದೊಳಗಿನ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಸೂರ್ಯವಂಶಿ ಕೇವಲ 78 ಎಸೆತಗಳಲ್ಲಿ 143 ರನ್ ಗಳಿಸಿ ಅಬ್ಬರಿಸಿದ್ದರು. 52 ಎಸೆತಗಳಿಂದ ಶತಕ ಬಾರಿಸಿದ ಸೂರ್ಯವಂಶಿ ಯುವ ಏಕದಿನ ಕ್ರಿಕೆಟ್‌ನ ಅತಿ ವೇಗದ ಶತಕ ದಾಖಲಿಸಿದರು. ಹಾಗೆಯೇ ಯುವ ಏಕದಿನ ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ವಿಶ್ವದ ಅತಿ ಕಿರಿಯ ಆಟಗಾರ ಎನಿಸಿದರು. ಪಾಕಿಸ್ತಾನದ ಕಮ್ರಾಮ್ ಗುಲಾಮ್ ಅವರು 53 ಎಸೆತಗಳಲ್ಲಿ ಶತಕ ಬಾರಿಸಿದ್ದು ಇದುವರೆಗೆ ದಾಖಲೆಯಾಗಿತ್ತು.

ಒಟ್ಟು 78 ಎಸೆತ ಎದುರಿಸಿದ ವೈಭವ್‌ 143 ರನ್‌ ಪೇರಿಸಿದರು. ಈ ಇನ್ನಿಂಗ್ಸ್‌ ನಲ್ಲಿ ಅವರು 13 ಫೋರ್‌ ಮತ್ತು 10 ಸಿಕ್ಸರ್‌ ಬಾರಿಸಿದರು. ನಾಲ್ಕು ಪಂದ್ಯಗಳಲ್ಲಿ 306 ರನ್ ಗಳಿಸಿರುವ ವೈಭವ್‌ ಸೂರ್ಯವಂಶಿ ಸರಣಿಯಲ್ಲಿ ಇದುವರೆಗಿನ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ Vaibhav Suryavanshi: ಪೋರನಲ್ಲ, ದಾಖಲೆ ಶಿಖರವೇರಿದ ಪ್ರಖರ ಸೂರ್ಯ

ಪಂದ್ಯದ ಬಳಿಕ ಮಾತನಾಡಿದ ಸೂರ್ಯವಂಶಿ, ನಾನು ಗಿಲ್ ಅವರ ಆಟವನ್ನು ನೋಡಿದ್ದೇನೆ. ಅವರು ನಿರಾತಂಕವಾಗಿ ಆಡುವುದನ್ನು ನೋಡಿ ಸ್ಫೂರ್ತಿ ಪಡೆದಿದ್ದೇನೆ. ಶತಕ ಹಾಗೂ ದ್ವಿಶತಕ ಗಳಿಸಿದ ಬಳಿಕವೂ ಅವರು ಆಟವನ್ನು ಅರ್ಧಕ್ಕೆ ನಿಲ್ಲಿಸಲಿಲ್ಲ. ತಂಡವನ್ನು ಮುನ್ನಡೆಸಿದರು. ಭವಿಷ್ಯದಲ್ಲಿ ಗಿಲ್ ಅವರನ್ನು ಅನುಕರಿಸಲು ಬಯಸುತ್ತೇನೆ. ಜತೆಗೆ ಮುಂದಿನ ಪಂದ್ಯದಲ್ಲಿ ದ್ವಿಶತಕ ಬಾರಿಸುವೆ' ಎಂದು ಹೇಳಿದ್ದಾರೆ.