ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Fire Alert: ವಿಮಾನ ಟೇಕ್‌ಆಫ್‌ ಮುನ್ನ ಮೊಳಗಿದ ಅಲರ್ಟ್‌; ಭಯದಿಂದ ಹೊರಗೆ ಜಿಗಿದ ಪ್ರಯಾಣಿಕರು: ವಿಡಿಯೊ ವೈರಲ್‌

ಸ್ಪೇನ್‌ನಲ್ಲಿ ಟೇಕ್‌ಆಫ್‌ ಮುನ್ನ ವಿಮಾನದಲ್ಲಿ ಬೆಂಕಿಯ ಸೂಚನೆ ಮೊಳಗಿದ್ದು, ಪ್ರಯಾಣಿಕರು ಭಯಭೀತರಾಗಿ ಹೊರಗೆ ಜಿಗಿದಿರುವ ಘಟನೆ ನಡೆದಿದೆ. ಈ ವೇಳೆ ಸುಮಾರು 18 ಮಂದಿಗೆ ಸಣ್ಣ ಪುಟ್ಟ ಗಾಯವಾಗಿದ್ದು, ದೊಡ್ಡ ದುರಂತವೊಂದು ತಪ್ಪಿದಂತಾಗಿದೆ. ಸದ್ಯ ಪ್ರಯಾಣಿಕರು ವಿಮಾನದ ರೆಕ್ಕೆ ತೆರಳಿ ಅಲ್ಲಿಂದ ಜಿಗಿಯುತ್ತಿರುವ ವಿಡಿಯೊ ವೈರಲ್‌ ಆಗಿದೆ.

ವಿಮಾನ ಟೇಕ್‌ಆಫ್‌ ಮುನ್ನ ಮೊಳಗಿದ ಅಲರ್ಟ್‌; ತಪ್ಪಿದ ಭಾರಿ ದೊಡ್ಡ ಅನಾಹುತ

Profile Ramesh B Jul 6, 2025 4:15 PM

ಮ್ಯಾಡ್ರಿಡ್‌: ಕಳೆದ ತಿಂಗಳು ಗುಜರಾತ್‌ನಲ್ಲಿ ಏರ್‌ ಇಂಡಿಯಾ ವಿಮಾನ ಪತನವಾಗಿ 260ಕ್ಕೂ ಹೆಚ್ಚು ಮಂದಿ ಮೃತಪಟ್ಟ ಘಟನೆಯ ಶಾಕ್‌ನಿಂದ ಇನ್ನೂ ಜಗತ್ತು ಹೊರಬಂದಿಲ್ಲ. ಈ ಮಧ್ಯೆ ಸ್ಪೇನ್‌ನಲ್ಲಿ ಟೇಕ್‌ಆಫ್‌ ಮುನ್ನ ವಿಮಾನದಲ್ಲಿ ಬೆಂಕಿಯ ಸೂಚನೆ ಮೊಳಗಿದ್ದು, ಪ್ರಯಾಣಿಕರು ಭಯಭೀತರಾಗಿ ಹೊರಗೆ ಜಿಗಿದಿರುವ ಘಟನೆ ನಡೆದಿದೆ. ಈ ವೇಳೆ ಸುಮಾರು 18 ಮಂದಿಗೆ ಸಣ್ಣ ಪುಟ್ಟ ಗಾಯವಾಗಿದ್ದು, ದೊಡ್ಡ ದುರಂತವೊಂದು ತಪ್ಪಿದಂತಾಗಿದೆ. ಸ್ಪೇನ್‌ನ ಪಾಲ್ಮಾ ಡಿ ಮಲ್ಲೋರ್ಕಾ (Palma de Mallorca Airport) ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ರಯಾನ್‌ಏರ್‌ ಬೋಯಿಂಗ್‌ 737 (Ryanair Boeing 737) ವಿಮಾನವು ಮ್ಯಾಂಚೆಸ್ಟರ್‌ಗೆ ಹಾರಲು ತಯಾರಿ ನಡೆಸುತ್ತಿದ್ದಾಗ, ಟೇಕ್‌ಆಪ್‌ ವೇಳೆ ಬೆಂಕಿಯ ಅಲರ್ಟ್‌ ಮೊಳಗಿತು. ಇದರಿಂದಾಗಿ ಪ್ರಯಾಣಿಕರು ತುರ್ತು ನಿರ್ಗಮನದ ಮೂಲಕ ವಿಮಾನದ ರೆಕ್ಕೆಗಳ ಮೇಲೆ ಹತ್ತಿ ಅಲ್ಲಿಂದ ಕಳಗೆ ಹಾರಿದರು.

ಸದ್ಯ ಪ್ರಯಾಣಿಕರು ವಿಮಾನದಿಂದ ಜಿಗಿಯುತ್ತಿರುವ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ವೈರಲ್‌ ಆಗಿದೆ. ಅರಬ್ ಟೈಮ್ಸ್ ವರದಿ ಪ್ರಕಾರ, ಘಟನೆ ಬಗ್ಗೆ ತಕ್ಷಣ ತುರ್ತು ವಿಭಾಗಕ್ಕೆ ತಿಳಿಸಲಾಯಿತು ಮತ್ತು ಅವರು ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಹೆಚ್ಚಿನ ಅನಾಹುತ ಸಂಭವಿಸಿಲ್ಲ ಎಂದು ಮೂಲಗಳು ತಿಳಿಸಿವೆ. ಗಾಯಗೊಂಡ 18 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ವೈರಲ್‌ ವಿಡಿಯೊ:



ʼʼಜು. 4ರಂದು ಪಾಲ್ಮಾದಿಂದ ಮ್ಯಾಂಚೆಸ್ಟರ್‌ಗೆ ಹಾರುತ್ತಿದ್ದ ವಿಮಾನದಲ್ಲಿ ಬೆಂಕಿಯ ಅಲರ್ಟ್‌ ಮೊಳಗಿತು. ಹೀಗಾಗಿ ಟೇಕ್‌ಆಫ್ ಆಗುತ್ತಿದ್ದ ವಿಮಾನವನ್ನು ತಡೆಹಿಡಿಯಲಾಯಿತುʼʼ ಎಂದು ವಿಮಾನಯಾನ ಸಂಸ್ಥೆ ದೃಢಪಡಿಸಿದೆ. ಈ ಬಗ್ಗೆ ತನಿಖೆ ನಡೆಸಲು ಆದೇಸ ಹೊರಡಿಸಲಾಗಿದೆ.

ಈ ಸುದ್ದಿಯನ್ನೂ ಓದಿ: Air India: ವಿಮಾನದಲ್ಲೇ ಕುಸಿದು ಬಿದ್ದ ಪೈಲಟ್‌, ಬೆಂಗಳೂರು- ದಿಲ್ಲಿ ವಿಮಾನ ವಿಳಂಬ

ಕಳೆದ ವಾರ, ಅಮೇರಿಕನ್ ಏರ್‌ಲೈನ್ಸ್ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿತು. ಹೀಗಾಗಿ 153 ಪ್ರಯಾಣಿಕರು ಮತ್ತು 6 ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ವಿಮಾನವನ್ನು ಲಾಸ್ ವೇಗಾಸ್‌ನಲ್ಲಿ ತುರ್ತು ಲ್ಯಾಂಡಿಂಗ್ ಮಾಡಬೇಕಾಯಿತು.

900 ಅಡಿಯಿಂದ ಕುಸಿದಿತ್ತು ಮತ್ತೊಂದು ಏರ್‌ ಇಂಡಿಯಾ ವಿಮಾನ!

ಹೊಸದಿಲ್ಲಿ: ಗುಜರಾತ್‌ ವಿಮಾನ ದುರಂತ ನಡೆದ ಎರಡೇ ದಿನ ಮತ್ತೊಂದು ಏರ್‌ ಇಂಡಿಯಾ ವಿಮಾನ 900 ಅಡಿ ಎತ್ತರದಿಂದ ಕುಸಿದಿತ್ತು. ಆದರೆ ಅದೃಷ್ಟವಶಾತ್‌ ಯಾವುದೇ ಅನಾಹುತ ಸಂಭವಿಸಿರಲಿಲ್ಲ. ಜೂ. 14ರಂದು ದಿಲ್ಲಿಯಿಂದ ವಿಯೆನ್ನಾಗೆ ಹೊರಟಿದ್ದ AI 187 ಬೋಯಿಂಗ್‌ 777 ವಿಮಾನ ಟೇಕ್‌ಆಫ್‌ ಆದ ಕೆಲವೇ ಕ್ಷಣಗಳಲ್ಲಿ 900 ಅಡಿ ಎತ್ತರದಿಂದ ಕುಸಿದಿತ್ತು. ಅದಾಗ್ಯೂ ಪೈಲಟ್‌ಗಳು ವಿಮಾನವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ಸುರಕ್ಷಿತವಾಗಿ ವಿಯೆನ್ನಾಗೆ ಕೊಂಡೊಯ್ದಿದ್ದರು. ಹೀಗೆ ಬಹುದೊಡ್ಡ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿತ್ತು.

ಜೂ. 12ರ ದುರಂತ

ಏರ್ ಇಂಡಿಯಾದ AI171 ವಿಮಾನವು ಜೂ. 12ರಂದು ಅಹಮದಾಬಾದ್‌ನಿಂದ ಲಂಡನ್‌ನ ಗ್ಯಾಟ್‌ವಿಕ್ ವಿಮಾನ ನಿಲ್ದಾಣಕ್ಕೆ ಟೇಕ್‌ಆಫ್ ಆದ ಕೆಲವೇ ನಿಮಿಷಗಳಲ್ಲಿ ಅಪಘಾತಕ್ಕೀಡಾಗಿತ್ತು. ವಿಮಾನದಲ್ಲಿದ್ದ ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿದಂತೆ 242 ಜನರಲ್ಲಿ 241 ಮಂದಿ ಸಾವನ್ನಪ್ಪಿದ್ದರು. ಓರ್ವ ಪ್ರಯಾಣಿಕ ಮಾತ್ರ ಈ ಭೀಕರ ಅಪಘಾತದಿಂದ ಪವಾಡಸದೃಶ್ಯವಾಗಿ ಬದುಕುಳಿದಿದ್ದಾರೆ.