Viral News: ಪಂಜಾಬಿ ನಟಿಯ ತಂದೆ ಮೇಲೆ ಗುಂಡಿನ ದಾಳಿ- ಕೇಸ್ ದಾಖಲು
ಪಂಜಾಬಿ ಖ್ಯಾತ ಚಲನಚಿತ್ರ ನಟಿ ತಾನಿಯಾ ಅವರ ತಂದೆ ಡಾ. ಅನಿಲ್‌ಜಿತ್ ಕಾಂಬೋಜ್ ಅವರ ಮೇಲೆ ಅಪರಿಚಿತ ವ್ಯಕ್ತಿಗಳು ಹಲ್ಲೆ ನಡೆಸಿದ್ದಾರೆ. ಅನಿಲ್ ಜಿತ್ ಕಾಂಬೋಜ್ ಅವರ ಎದೆ ಮತ್ತು ಕೈಗೆ ಗುಂಡು ಹಾರಿಸಲಾಗಿದ್ದು ಗುಂಡು ತಗಲಿದ್ದ ಬಳಿಕ ಅವರು ಸ್ಥಳದಲ್ಲೇ ಅಸ್ವಸ್ಥರಾಗಿ ಬಿದ್ದಿದ್ದು ಕಂಡು ಆರೋಪಿಗಳು ಅಲ್ಲಿಂದ ಕೂಡಲೇ ಪರಾರಿಯಾಗಿದ್ದಾರೆ. ಡಾ. ಅನಿಲ್‌ಜಿತ್ ಕುರ್ಚಿಯಿಂದ ಬೀಳುತ್ತಿದ್ದಂತೆ ಆರೋಪಿತ ಇಬ್ಬರು ವ್ಯಕ್ತಿಗಳು ಓಡಿ ಹೋದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.


ನವದೆಹಲಿ: ಪಂಜಾಬಿ ಖ್ಯಾತ ಚಲನಚಿತ್ರ ನಟಿ ತಾನಿಯಾ (Taneya) ಅವರ ತಂದೆ ಡಾ. ಅನಿಲ್‌ಜಿತ್ ಕಾಂಬೋಜ್ (Aniljit Kamboj) ಅವರ ಮೇಲೆ ಅಪರಿಚಿತ ವ್ಯಕ್ತಿಗಳು ಹಲ್ಲೆ ನಡೆಸಿದ್ದಾರೆ. ಅನಿಲ್ ಜಿತ್ ಕಾಂಬೋಜ್ ಅವರ ಎದೆ ಮತ್ತು ಕೈಗೆ ಗುಂಡು ಹಾರಿಸಲಾಗಿದ್ದು ಗುಂಡು ತಗಲಿದ್ದ ಬಳಿಕ ಅವರು ಸ್ಥಳದಲ್ಲೇ ಅಸ್ವಸ್ಥರಾಗಿ ಬಿದ್ದಿದ್ದು ಕಂಡು ಆರೋಪಿಗಳು ಅಲ್ಲಿಂದ ಕೂಡಲೇ ಪರಾರಿ ಯಾಗಿದ್ದಾರೆ. ಡಾ. ಅನಿಲ್‌ಜಿತ್ ಕುರ್ಚಿಯಿಂದ ಬೀಳುತ್ತಿದ್ದಂತೆ ಆರೋಪಿತ ಇಬ್ಬರು ವ್ಯಕ್ತಿಗಳು ಓಡಿ ಹೋದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅನಿಲ್ ಅವರ ಪುತ್ರ ಚಾಹತ್ ಕಾಂಬೋಜ್ ಅವರು ಮೋಗಾ ಜಿಲ್ಲೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಿದ್ದಾರೆ.
ಡಾ. ಅನಿಲ್ ಜಿತ್ ಅವರು ಮೋಗಾ ಜಿಲ್ಲೆಯಲ್ಲಿ ಸ್ವಂತ ಹರ್ಬನ್ಸ್ ನರ್ಸಿಂಗ್ ಹೋಂ ನಡೆ ಸುತ್ತಿದ್ದರು. ಜೂನ್ 4ರಬೆಳಗ್ಗೆ 10 ಗಂಟೆಗೆ ಆರೋಪಿಗಳು ಡಾ. ಅನಿಲ್ ಜಿತ್ ಅವರ ಕ್ಲೀನಿಕ್ ಗೆ ಬಂದಿದ್ದರು. ಅಲ್ಲಿ ಡಾ. ಅನೀಲ್ ಆ ಸಮಯಕ್ಕೆ ಇಲ್ಲದಿದ್ದನ್ನು ಗಮನಿಸಿ ವಾಪಾಸು ತೆರಳಿದ್ದರಂತೆ. ಬಳಿಕ ಪುನಃ ಮಧ್ಯಾಹ್ನ 12.50 ಕ್ಕೆ ಅದೇ ಕ್ಲೀನಿಕ್ ಗೆ ಬಂದಿದ್ದಾರೆ.
ಆರೋಪಿಗಳಿಬ್ಬರು ರೋಗಿಗಳಂತೆ ನಟಿಸುತ್ತಾ ಕ್ಲಿನಿಕ್‌ಗೆ ಬಂದಿದ್ದಾರೆ. ಅವರಲ್ಲಿ ಒಬ್ಬ ತನ್ನ ಕಾಲಿ ನಲ್ಲಿ ಸೋಂಕು ಇದೆ, ಅದನ್ನು ಪರೀಕ್ಷಿಸಬೇಕಾಗಿದೆ ಎಂದು ಡಾ. ಅನಿಲ್ ಅವರಲ್ಲಿ ಮನವಿ ಮಾಡಿದ್ದಾರೆ. ಹೀಗಾಗಿ ಅನಿಲ್ ಅವರು ವೈದ್ಯಕೀಯ ಪರೀಕ್ಷೆ ಮಾಡುತ್ತಿದ್ದಾಗಲೇ ಏಕಾಏಕಿಯಾಗಿ ಅವರ ಮೇಲೆ ಗುಂಡು ಹಾರಿಸಿ ಆರೋಪಿಗಳು ಪರಾರಿಯಾಗಿದ್ದಾರೆ. ಡಾ. ಅನಿಲ್ ಪುತ್ರ ಚಾಹತ್ ಅವರ ಹೇಳಿಕೆ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳು ಸುಮಾರು 30 ವರ್ಷ ವಯಸ್ಕರಾಗಿದ್ದು ಈ ವಿಚಾರದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳನ್ನು ಶೀಘ್ರದಲ್ಲೇ ಪತ್ತೆ ಹಚ್ಚುವುದಾಗಿ ಮೇಗಾ ಹಿರಿಯ ಪೊಲೀಸ್ ಅಧಿಕಾರಿ ಅಜಯ್ ಗಾಂಧಿ ಹೇಳಿದ್ದಾರೆ.
ಘಟನೆಯ ಬಳಿಕ ನಟಿ ತಾನಿಯಾ ಅವರ ತಂದೆ ಡಾ. ಅನಿಲ್‌ಜಿತ್ ಕಾಂಬೋಜ್ ಅವರನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. 3 ಗಂಟೆಗಳ ಶಸ್ತ್ರಚಿಕಿತ್ಸೆಯ ನಂತರ ಗುಂಡನ್ನು ಹೊರ ತೆಗೆದುಹಾಕಲಾಗಿದೆ. ಆದರೆ ಅವರ ಸ್ಥಿತಿ ತುಂಬಾ ಗಂಭೀರವಾಗಿದೆ. ರೋಗಿಯು ಪ್ರಸ್ತುತ ಐಸಿಯುನಲ್ಲಿದ್ದಾರೆ ಎಂದು ಚಿಕಿತ್ಸೆ ನೀಡಿದ ವೈದ್ಯರಾದ ಡಾ. ವಿಜಯ್ ಕಲ್ರಾ ಅವರು ತಿಳಿಸಿದರು.
ಡಾ. ಅನಿಲ್‌ಜಿತ್ ಕಾಂಬೋಜ್ ಅವರಿಗೆ ಈ ಹಿಂದೆ 2022 ರಲ್ಲಿ ಬೆದರಿಕೆ ಕರೆ ಬಂದಿದ್ದು ಹಣ ಕಾಸಿನ ಬೇಡಿಕೆ ಇಡಲಾಗಿತ್ತು ಎಂದು ಈ ಹಿಂದೆ ಎಫ್‌ಐಆರ್ ಕೂಡ ದಾಖಲಿಸಲಾಗಿತ್ತು. ಈ ಬೆದರಿಕೆ ಕರೆಯು ಗ್ಯಾಂಗ್‌ಸ್ಟರ್ ಲಖ್‌ಬೀರ್ ಸಿಂಗ್ ಲಾಂಡಾ ಅವರಿಂದ ಬಂದಿದೆ ಎಂದು ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಈಗ ಡಾ. ಅನಿಲ್ ಮೇಲೆ ದಾಳಿ ನಡೆದಿದ್ದಕ್ಕೂ ಈ ಗ್ಯಾಂಗ್ ಸ್ಟರ್ ಗೂ ಸಂಬಂಧ ಇದೆಯೇ ಎಂದು ತನಿಖೆ ಮಾಡುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.