ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kichcha Sudeep: ಕಾರ್‌ ರೇಸ್‌ ತಂಡ ಖರೀದಿಸಿದ ನಟ ಕಿಚ್ಚ ಸುದೀಪ್‌

Indian Racing Festival: ಚಾಂಪಿಯನ್‌ಶಿಪ್‌ನಲ್ಲಿ ಬೆಂಗಳೂರು, ದೆಹಲಿ, ಹೈದರಾಬಾದ್‌, ಕೋಲ್ಕತಾ, ಚೆನ್ನೈ, ಗೋವಾ ಫ್ರಾಂಚೈಸಿಗಳು ಭಾಗಿಯಾಗಲಿವೆ. ಇಂಡಿಯನ್‌ ರೇಸಿಂಗ್‌ ಲೀಗ್‌ನ ವೆಬ್‌ಸೈಟ್‌ನಲ್ಲಿರುವ ಮಾಹಿತಿ ಪ್ರಕಾರ, ಈ ವರ್ಷದ ಚಾಂಪಿಯನ್‌ಶಿಪ್‌ನಲ್ಲಿ ಒಟ್ಟು 5 ಸುತ್ತುಗಳು ನಡೆಯಲಿವೆ.

ಕಾರ್‌ ರೇಸ್‌ ತಂಡ ಖರೀದಿಸಿದ ನಟ ಕಿಚ್ಚ ಸುದೀಪ್‌

Profile Abhilash BC Jul 6, 2025 3:42 PM

ಬೆಂಗಳೂರು: ನಟ ಕಿಚ್ಚ ಸುದೀಪ್(Kichcha Sudeep) ಅವರು ಇಂಡಿಯನ್‌ ರೇಸಿಂಗ್‌(Indian Racing Festival) ಲೀಗ್‌ನ ಭಾಗವಾಗಿರುವ ಇಂಡಿಯನ್‌ ರೇಸಿಂಗ್‌ ಫೆಸ್ಟಿವಲ್‌ನಲ್ಲಿ ಬೆಂಗಳೂರು ತಂಡವನ್ನು ಖರೀದಿಸಿದ್ದಾರೆ. ಇದು ಎಫ್‌4 (ಫಾರ್ಮುಲಾ 4) ದರ್ಜೆಯ ರೇಸ್‌ ಆಗಿದೆ. ತಂಡಕ್ಕೆ ಸುದೀಪ್‌, ಕಿಚ್ಚಾಸ್‌ ಕಿಂಗ್ಸ್‌ ಬೆಂಗಳೂರು(ಕೆಕೆಬಿ)ಎಂದು ಹೆಸರಿಟ್ಟಿದ್ದಾರೆ. ಈ ವರ್ಷದ ರೇಸ್‌ಗಳು ಆಗಸ್ಟ್‌ನಿಂದ ಆರಂಭವಾಗಲಿದೆ.

ಚಾಂಪಿಯನ್‌ಶಿಪ್‌ನಲ್ಲಿ ಬೆಂಗಳೂರು, ದೆಹಲಿ, ಹೈದರಾಬಾದ್‌, ಕೋಲ್ಕತಾ, ಚೆನ್ನೈ, ಗೋವಾ ಫ್ರಾಂಚೈಸಿಗಳು ಭಾಗಿಯಾಗಲಿವೆ. ಇಂಡಿಯನ್‌ ರೇಸಿಂಗ್‌ ಲೀಗ್‌ನ ವೆಬ್‌ಸೈಟ್‌ನಲ್ಲಿರುವ ಮಾಹಿತಿ ಪ್ರಕಾರ, ಈ ವರ್ಷದ ಚಾಂಪಿಯನ್‌ಶಿಪ್‌ನಲ್ಲಿ ಒಟ್ಟು 5 ಸುತ್ತುಗಳು ನಡೆಯಲಿವೆ. ಮೊದಲ ಸುತ್ತಿನ ರೇಸ್‌ ಆ.15ರಿಂದ 17ರ ವರೆಗೂ ಕೊಯಮತ್ತೂರಿನ ಕರಿ ಮೋಟಾರ್‌ ಸ್ಪೀಡ್‌ ವೇ ರೇಸ್‌ ಟ್ರ್ಯಾಕ್‌ , 2ನೇ ಸುತ್ತು ಆ.22-24ರ ವರೆಗೂ ಚೆನ್ನೈನಲ್ಲಿರುವ ಮದ್ರಾಸ್‌ ಅಂತಾರಾಷ್ಟ್ರೀಯ ಸರ್ಕ್ಯೂಟ್‌, 3ನೇ ಸುತ್ತು ಅ.3ರಿಂದ 5ರ ವರೆಗೂ ಬೆಂಗಳೂರು ಹೊರವಲಯದಲ್ಲಿರುವ ಬ್ರೆನ್‌ ರೇಸ್‌ವೇನಲ್ಲಿ ನಡೆಯಲಿದೆ.

ಬಿಗ್‌ಬಾಸ್‌ಗೆ ಮತ್ತೆ ಬಾದ್‌ಷಾ

ಕಳೆದ ಸೀಸನ್‌ನಲ್ಲಿ ಇದೇ ತನ್ನ ಲಾಸ್ಟ್‌ ಸೀಸನ್‌ ನಿರೂಪಣೆ ಎಂದು ಹೇಳಿ ಸುದೀಪ್‌ ತಿಳಿಸಿದ್ದರು. ಇದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತ್ತು. ಆದರೆ ಫೈನಲಿ, ಕಿಚ್ಚ ಸುದೀಪ್ 'ಬಿಗ್ ಬಾಸ್ ಕನ್ನಡ ಸೀಸನ್​​ 12' ನಿರೂಪಣೆ ಮಾಡೋದು ಅಧಿಕೃತಗೊಂಡಿದೆ. ಕಲರ್ಸ್ ಕನ್ನಡದ ಮುಖ್ಯಸ್ಥರು ಕಿಚ್ಚ ಸುದೀಪ್ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಿಚ್ಚ ಸುದೀಪ್ ಸೇರಿ ಬಿಗ್ ಬಾಸ್ ತಂಡ ಈ ಬಗ್ಗೆ ಮಾಹಿತಿ ಒದಗಿಸಿದೆ.