ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Global Equality Index: ಜಾಗತಿಕ ಸಮಾನತೆ ಸೂಚ್ಯಂಕ; ಭಾರತಕ್ಕೆ ನಾಲ್ಕನೇ ಸ್ಥಾನ

ಜಾಗತಿಕ ಸಮಾನತೆ ಸೂಚ್ಯಂಕವನ್ನು (Global Equality Index) ಬಿಡುಗಡೆ ಮಾಡಿರುವ ವಿಶ್ವಸಂಸ್ಥೆ ಭಾರತಕ್ಕೆ 25.5 ಅಂಕಗಳನ್ನು ನೀಡಿದ್ದು, ಈ ಮೂಲಕ ಭಾರತವು ಸ್ಲೊವಾಕಿಯಾ, ಸ್ಲೊವೇನಿಯಾ ಮತ್ತು ಬೆಲಾರಸ್‌ ದೇಶಗಳ ಅನಂತರ ನಾಲ್ಕನೇ ಸ್ಥಾನ ಪಡೆದಿದೆ. ಸ್ಲೊವಾಕಿಯಾ, ಸ್ಲೊವೇನಿಯಾ ಮತ್ತು ಬೆಲಾರಸ್‌ ದೇಶಗಳು ಕ್ರಮವಾಗಿ 24.1, 24.3 ಮತ್ತು 24.4 ಅಂಕಗಳನ್ನು ಪಡೆದಿವೆ.

ಸಮಾನತೆ ಸೂಚ್ಯಂಕ: ಅಮೆರಿಕ, ಬ್ರಿಟನ್‌, ಚೀನಾವನ್ನು ಹಿಂದಿಕ್ಕಿದ ಭಾರತ

ನವದೆಹಲಿ: ಜಾಗತಿಕ ಸಮಾನತೆ ಸೂಚ್ಯಂಕದಲ್ಲಿ (Global Equality Index) ಅಮೆರಿಕ, ಬ್ರಿಟನ್‌ ಮತ್ತು ಚೀನಾ ದೇಶಗಳನ್ನು ಹಿಂದಿಕ್ಕಿರುವ ಭಾರತ ( Global Equality Index India rank) ನಾಲ್ಕನೇ ಸ್ಥಾನಕ್ಕೆ ಏರಿದೆ. ಮೊದಲ ಮೂರು ಸ್ಥಾನಗಳನ್ನು ಸ್ಲೊವಾಕಿಯಾ, ಸ್ಲೊವೇನಿಯಾ ಮತ್ತು ಬೆಲಾರಸ್‌ ದೇಶಗಳು ಪಡೆದುಕೊಂಡಿವೆ. ವಿಶ್ವಸಂಸ್ಥೆಯು (World Bank) ಇತ್ತೀಚೆಗೆ ಜಾಗತಿಕ ಸಮಾನತೆ ಸೂಚ್ಯಂಕವನ್ನು (Gini Index) ಪ್ರಕಟಿಸಿದ್ದು, ಇದರಲ್ಲಿ ಭಾರತ 25.5 ಅಂಕಗಳನ್ನು ಪಡೆದು ಮೊದಲ ಐದು ದೇಶಗಳಲ್ಲಿ ಸ್ಥಾನ ಪಡೆದುಕೊಂಡಿದೆ. ದೇಶದ ಕುಟುಂಬ, ವ್ಯಕ್ತಿಗಳ ಆದಾಯ, ಸಂಪತ್ತು ಮತ್ತು ಬಳಕೆಯನ್ನು ಆಧರಿಸಿ ವಿಶ್ವಸಂಸ್ಥೆ ಈ ಸೂಚ್ಯಂಕವನ್ನು ಬಿಡುಗಡೆ ಮಾಡುತ್ತದೆ.

ಜಾಗತಿಕ ಸಮಾನತೆ ಸೂಚ್ಯಂಕವನ್ನು ಬಿಡುಗಡೆ ಮಾಡಿರುವ ವಿಶ್ವಸಂಸ್ಥೆ ಭಾರತಕ್ಕೆ 25.5 ಅಂಕಗಳನ್ನು ನೀಡಿದ್ದು, ಈ ಮೂಲಕ ಭಾರತವು ಸ್ಲೊವಾಕಿಯಾ, ಸ್ಲೊವೇನಿಯಾ ಮತ್ತು ಬೆಲಾರಸ್‌ ದೇಶಗಳ ಅನಂತರ ನಾಲ್ಕನೇ ಸ್ಥಾನ ಪಡೆದಿದೆ. ಸ್ಲೊವಾಕಿಯಾ, ಸ್ಲೊವೇನಿಯಾ ಮತ್ತು ಬೆಲಾರಸ್‌ ದೇಶಗಳು ಕ್ರಮವಾಗಿ 24.1, 24.3 ಮತ್ತು 24.4 ಅಂಕಗಳನ್ನು ಪಡೆದಿವೆ. 2011 ರಲ್ಲಿ 28.8 ಅಂಕಗಳನ್ನು ಪಡೆದಿದ್ದ ಭಾರತವು ಈ ಬಾರಿ 25.5 ಅಂಕಗಳನ್ನು ಪಡೆದು ವಿಶ್ವದ ಅತ್ಯಂತ ಶ್ರೀಮಂತ ರಾಷ್ಟ್ರಗಳಾದ ಅಮೆರಿಕ, ಬ್ರಿಟನ್‌ ಮತ್ತು ಚೀನಾವನ್ನು ಹಿಂದಿಕ್ಕಿದೆ. ಅತ್ಯಂತ ದೊಡ್ಡ ಮತ್ತು ವೈವಿಧ್ಯಮಯ ದೇಶದಲ್ಲಿ ಇದು ಅತ್ಯಂತ ಮಹತ್ವದ ಸಾಧನೆಯಾಗಿದೆ.

35.7, ಯುನೈಟೆಡ್ ಸ್ಟೇಟ್ಸ್ 41.8 ಅಂಕಗಳನ್ನು ಪಡೆದಿದೆ. ಈ ಸೂಚ್ಯಂಕದಲ್ಲಿ ಅಸಮಾನತೆ ದೇಶಗಳ ಪಟ್ಟಿಯಲ್ಲಿ ಐಸ್ ಲ್ಯಾಂಡ್, ನಾರ್ವೆ, ಫಿನ್ ಲ್ಯಾಂಡ್ ಮತ್ತು ಬೆಲ್ಜಿಯಂನಂತಹ ಯುರೋಪಿಯನ್ ರಾಷ್ಟ್ರಗಳು ಹಾಗೂ ಯುಎಇ ಮತ್ತು ಪೋಲೆಂಡ್ ಸೇರಿವೆ. ವಿಶ್ವಸಂಸ್ಥೆಯು ಜಾಗತಿಕ ಮಟ್ಟದಲ್ಲಿ ದೇಶದ ಕುಟುಂಬ, ವ್ಯಕ್ತಿಗಳ ಆದಾಯ, ಸಂಪತ್ತು ಮತ್ತು ಬಳಕೆಯನ್ನು ಆಧರಿಸಿ ಈ ಸೂಚ್ಯಂಕವನ್ನು ನೀಡುತ್ತದೆ. ಇದರಲ್ಲಿ 100 ಮತ್ತು ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆಯುವ ದೇಶಗಳಲ್ಲಿ ಅತ್ಯಂತ ಹೆಚ್ಚು ಅಸಮಾನತೆ ಇದೆ ಎಂದು ಪರಿಗಣಿಸಲಾಗುತ್ತದೆ.

ಈ ಬಾರಿ ಭಾರತ 25.5 ಅಂಕಗಳನ್ನು ಪಡೆದು 4ನೇ ಸ್ಥಾನಕ್ಕೆ ಏರಿಕೆಯಾಗಿದ್ದು, ಇದಕ್ಕೆ ಕಳೆದೊಂದು ದಶಕದಲ್ಲಿ ಕಡುಬಡತನ ಇಳಿಕೆಗೆ ಕೈಗೊಂಡ ಕ್ರಮಗಳು ಮುಖ್ಯ ಕಾರಣ ಎಂದು ಭಾರತ ಸರ್ಕಾರ ತಿಳಿಸಿದೆ.

ಹೇಗಿದೆ ಭಾರತದಲ್ಲಿ ಬಡತನದ ಪರಿಸ್ಥಿತಿ?

ಜಾಗತಿಕ ಸಮಾನತೆ ಸೂಚ್ಯಂಕದಲ್ಲಿ ಭಾರತ ನಾಲ್ಕನೇ ಸ್ಥಾನಕ್ಕೆ ಏರಿದ್ದರೂ 35 ಕೋಟಿ ಜನರು ಗುಣಮಟ್ಟದ ಜೀವನದಿಂದ ವಂಚಿತರಾಗಿಯೇ ಬದುಕುತ್ತಿದ್ದಾರೆ. ಕಡುಬಡತನದ ಪ್ರಮಾಣ ಇಳಿಕೆಯಾಗಿದ್ದರೂ ದೇಶದ ಪ್ರತಿ ನಾಲ್ವರಲ್ಲಿ ಒಬ್ಬರು ಗುಣಮಟ್ಟದ ಜೀವನದಿಂದ ವಂಚಿತರಾಗಿದ್ದಾರೆ. ಇಲ್ಲಿ ಗುಣಮಟ್ಟದ ಜೀವನ ಎಂದರೆ ಪೌಷ್ಟಿಕ ಆಹಾರ, ಸುರಕ್ಷಿತ ಮನೆ, ಆರೋಗ್ಯ ಸೇವೆ ಮತ್ತು ಶಿಕ್ಷಣ ಸೇರಿದೆ. ಭಾರತದಲ್ಲಿ ಬಡತನದ ಪರಿಸ್ಥಿತಿ 2011ರಿಂದ ಸುಧಾರಣೆಯಾಗಿದೆ. ಪ್ರಸ್ತುತ ಶೇ. 5ರಷ್ಟು ಮಂದಿ ಮಾತ್ರ ತೀವ್ರ ಬಡತನದಲ್ಲಿ ವಾಸಿಸುತ್ತಿದ್ದಾರೆ ಎಂದು ವಿಶ್ವಬ್ಯಾಂಕ್‌ ವರದಿ ತಿಳಿಸಿದೆ.

ವಿಶ್ವ ಬ್ಯಾಂಕ್ ಸೂಚ್ಯಂಕದ ಪ್ರಕಾರ ಶೇ.1ರಷ್ಟು ಶ್ರೀಮಂತರು ದೇಶದ ಸಂಪತ್ತಿನ ಶೇ. 40ರಷ್ಟನ್ನು ಹೊಂದಿದ್ದಾರೆ ಎಂದು ತಿಳಿಸಿದೆ.

ಇದನ್ನೂ ಓದಿ: Abhishek Bachchan: ಡಿವೋರ್ಸ್‌ ವದಂತಿಯನ್ನು ಗಂಭೀರವಾಗಿ ಪರಿಗಣಿಸಬೇಡಿ... ರೂಮರ್ಸ್‌ಗೆ ಬ್ರೇಕ್‌ ಹಾಕಿದ ಅಭಿಷೇಕ್‌ ಬಚ್ಚನ್‌!

ಏನು ಕಾರಣ?

ಭಾರತದಲ್ಲಿ ಎಲ್ಲರಿಗೂ ಗುಣಮಟ್ಟದ ಜೀವನ ಸಿಗದೇ ಇರಲು ಮುಖ್ಯ ಕಾರಣ ನಗರದಲ್ಲಿ ಬಾಡಿಗೆ, ಸ್ಥಿರವಲ್ಲದ ಉದ್ಯೋಗವಾದರೆ ಗ್ರಾಮೀಣ ಪ್ರದೇಶಗಳಲ್ಲಿ ಆದಾಯದ ಅಸ್ಥಿರತೆಯಾಗಿದೆ.

ಭಾರತಕ್ಕೆ ವಿಶ್ವಬ್ಯಾಂಕ್ ಸಲಹೆ

ಜಾಗತಿಕವಾಗಿ ಗುಣಮಟ್ಟ ಜೀವನಕ್ಕೆ 250 ರೂ. ಅಗತ್ಯ ಎಂದು ಗುರುತಿಸಲಾಗಿದ್ದರೂ ಭಾರತದಲ್ಲಿ ಇದು ಶೇ. 5ರಷ್ಟು ಮಂದಿಗೆ ಮಾತ್ರ ಸಿಗುತ್ತಿದೆ. ಆದ್ದರಿಂದ ಭಾರತದಂತಹ ಮುಂದುವರೆಯುತ್ತಿರುವ ರಾಷ್ಟ್ರಗಳಿಗೆ ಗುಣಮಟ್ಟದ ಜೀವನಕ್ಕೆ 350 ರೂ. ಅಗತ್ಯವಿದೆ ಎಂದು ವಿಶ್ವಬ್ಯಾಂಕ್ ತಿಳಿಸಿದೆ.