ENG vs IND: ಭಾರತದ ಐತಿಹಾಸಿಕ ಟೆಸ್ಟ್ ಗೆಲುವಿಗೆ ಮಳೆ ಅಡ್ಡಿ
ಶತಕ ಬಾರಸಿದ ಗಿಲ್ ಟೆಸ್ಟ್ ಪಂದ್ಯವೊಂದರಲ್ಲಿ ದ್ವಿಶತಕ ಮತ್ತು ಶತಕ ಗಳಿಸಿದ ಭಾರತದ ಎರಡನೇ ಆಟಗಾರ ಮತ್ತು ವಿಶ್ವದ ಒಂಬತ್ತನೇ ಆಟಗಾರ ಎಂಬ ಹಿರಿಮೆಗೆ ಪಾತ್ರರಾದರು. ಸುನಿಲ್ ಗಾವಸ್ಕರ್ ಈ ಸಾಧನೆಗೆ ಪಾತ್ರರಾದ ಭಾರತದ ಮೊದಲ ಆಟಗಾರ. ಒಂದೇ ಪಂದ್ಯದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಗಾವಸ್ಕರ್ ಅವರ ದಾಖಲೆಯನ್ನು ಗಿಲ್ ಮುರಿದಿದ್ದಾರೆ.


ಬರ್ಮಿಂಗ್‌ಹ್ಯಾಮ್: ಭಾರತ ಮತ್ತು ಇಂಗ್ಲೆಂಡ್(ENG vs IND) ನಡುವಣ ದ್ವಿತೀಯ ಟೆಸ್ಟ್ ಪಂದ್ಯದ ಅಂತಿಮ ದಿನದಾಟಕ್ಕೆ ನಿರೀಕ್ಷೆಯಂತೆ ಮಳೆ ಅಡ್ಡಿಪಡಿಸಿದೆ. ಮಳೆಯಿಂದ ಭಾರತದ ಐತಿಹಾಸಿಕ ಗೆಲುವಿಗೆ ಹಿನ್ನಡೆಯಾದರೆ, ಸೋಲಿನ ಭೀತಿಯಲ್ಲಿದ್ದ ಇಂಗ್ಲೆಂಡ್ ಈ ಸಂಕಷ್ಟದಿಂದ ಪಾರಾಗಲಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 180 ರನ್ ಮುನ್ನಡೆ ಪಡೆದಿದ್ದ ಭಾರತ, 2ನೇ ಇನ್ನಿಂಗ್ಸ್‌ನಲ್ಲಿ 3ನೇ ದಿನದಂತ್ಯಕ್ಕೆ 1 ವಿಕೆಟ್‌ಗೆ 64 ರನ್ ಗಳಿಸಿತ್ತು. ಪಂದ್ಯದ 4ನೇ ದಿನವಾದ ಶನಿವಾರವೂ ಭಾರತ ಬ್ಯಾಟಿಂಗ್‌ನಲ್ಲಿ ವಿಜೃಂಭಿಸಿತು. 83 ಓವರ್‌ಗಳಲ್ಲಿ 6 ವಿಕೆಟ್‌ಗೆ 427 ರನ್ ಗಳಿಸಿ ಡಿಕ್ಲೇರ್ ಘೋಷಿಸಿತ್ತು.
ಭಾರತ ತಂಡವು ಎಡ್ಜ್‌ಬಾಸ್ಟನ್‌ನಲ್ಲಿ ಮೊದಲ ಬಾರಿಗೆ ಆಡಿದ್ದು,1967 ರಲ್ಲಿ. ಈವರೆಗೆ ಈ ಸ್ಥಳದಲ್ಲಿ ಏಳು ಪಂದ್ಯಗಳನ್ನು ಆಡಿದ್ದು ಎಲ್ಲ ಪಂದ್ಯಗಳಲ್ಲಿಯೂ ಸೋಲು ಕಂಡಿದೆ. ಈ ಬಾರಿಯದ್ದು 8ನೇ ಟೆಸ್ಟ್ ಪಂದ್ಯವಾಗಿದೆ. ಗೆದ್ದರೆ 58 ವರ್ಷಗಳ ಸೋಲಿನ ಕೊಂಡಿ ಕಳಚಿ ಐತಿಹಾಸಿಕ ಗೆಲುವು ಕಂಡ ಸಾಧನೆ ಮಾಡಲಿದೆ.
ಭಾರತ ನೀಡಿದ 608 ರನ್‌ಗಳ ಕಠಿಣ ಗುರಿ ಬೆನ್ನಟ್ಟುತ್ತಿರುವ ಇಂಗ್ಲೆಂಡ್ 72 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. 4ನೇ ವಿಕೆಟ್‌ಗೆ ಜೊತೆಯಾದ ಗಿಲ್ ಹಾಗೂ ರಿಷಭ್ ಪಂತ್ 103 ಎಸೆತಕ್ಕೆ 110 ರನ್ ಜೊತೆಯಾಟವಾಡಿದರು. ರಿಷಭ್ 65 ರನ್ ಗಳಿಸಿದರು. ಬಳಿಕ ಗಿಲ್-ಜಡೇಜಾ 175 ರನ್ ಸೇರಿಸಿ ತಂಡದ ಮುನ್ನಡೆಯನ್ನು 600ಕ್ಕೆ ಹೆಚ್ಚಿಸಿದರು. ಸ್ಫೋಟಕ ಆಟವಾಡುತ್ತಿದ್ದ ಗಿಲ್ ಮತ್ತೊಂದು ದ್ವಿಶತಕದ ನಿರೀಕ್ಷೆಯಲ್ಲಿದ್ದರೂ, 162 ಎಸೆತಗಳಲ್ಲಿ 13 ಬೌಂಡರಿ, 8 ಸಿಕ್ಸರ್‌ಗಳೊಂದಿಗೆ 161 ರನ್ ಸಿಡಿಸಿ ಔಟಾದರು. ಜಡೇಜಾ ಔಟಾಗದೆ 69 ರನ್ ಗಳಿಸಿದ್ದಾಗ ಇನ್ನಿಂಗ್ಸ್ ಡಿಕ್ಲೇರ್ ಘೋಷಿಸಲಾಗಿತ್ತು.
ಇದನ್ನೂ ಓದಿ IND vs ENG: ಶುಭಮನ್ ಗಿಲ್ ಭರ್ಜರಿ ಶತಕ, ಗೆಲುವಿನ ಹಾದಿಯಲ್ಲಿ ಟೀಮ್ ಇಂಡಿಯಾ!
ಶತಕ ಬಾರಸಿದ ಗಿಲ್ ಟೆಸ್ಟ್ ಪಂದ್ಯವೊಂದರಲ್ಲಿ ದ್ವಿಶತಕ ಮತ್ತು ಶತಕ ಗಳಿಸಿದ ಭಾರತದ ಎರಡನೇ ಆಟಗಾರ ಮತ್ತು ವಿಶ್ವದ ಒಂಬತ್ತನೇ ಆಟಗಾರ ಎಂಬ ಹಿರಿಮೆಗೆ ಪಾತ್ರರಾದರು. ಸುನಿಲ್ ಗಾವಸ್ಕರ್ ಈ ಸಾಧನೆಗೆ ಪಾತ್ರರಾದ ಭಾರತದ ಮೊದಲ ಆಟಗಾರ. ಒಂದೇ ಪಂದ್ಯದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಗಾವಸ್ಕರ್ ಅವರ ದಾಖಲೆಯನ್ನು ಗಿಲ್ ಮುರಿದಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ 1971ರ ಏಪ್ರಿಲ್‌ನಲ್ಲಿ ಪೋರ್ಟ್ ಆಫ್ ಸ್ಪೇನ್ ಟೆಸ್ಟ್ ಪಂದ್ಯದಲ್ಲಿ ಗಾವಸ್ಕರ್ 344 ರನ್ (124 ಮತ್ತು 220 ರನ್) ಬಾರಿಸಿದ್ದರು. ಈಗ ಗಿಲ್ (430 ರನ್) ಆ ದಾಖಲೆ ಮೀರಿದ್ದಾರೆ.
ಇದು ಮಾತ್ರವಲ್ಲದೆ ವಿರಾಟ್ ಕೊಹ್ಲಿ ಅವರ ಬಳಿಕ, ನಾಯಕನಾಗಿ ಮೊದಲ ಎರಡು ಟೆಸ್ಟ್‌ಗಳಲ್ಲಿ ಮೂರು ಶತಕ ಬಾರಿಸಿದ ಎರಡನೇ ಆಟಗಾರ ಎಂಬ ಹಿರಿಮೆಯೂ ಗಿಲ್ ಪಾಲಾಯಿತು. ಈ ಎಲ್ಲವೂ ಕೇವಲ 25ರ ವಯಸ್ಸಿನಲ್ಲಿ ದಾಖಲಾಯಿತು.