Abhishek Bachchan: ಡಿವೋರ್ಸ್ ವದಂತಿಯನ್ನು ಗಂಭೀರವಾಗಿ ಪರಿಗಣಿಸಬೇಡಿ... ರೂಮರ್ಸ್‌ಗೆ ಬ್ರೇಕ್ ಹಾಕಿದ ಅಭಿಷೇಕ್ ಬಚ್ಚನ್!
ನಟಿ ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಅವರು ಪ್ರೀತಿಸಿ ವಿವಾಹವಾಗಿದ್ದು ಇದೀಗ ಅವರ ನಡುವೆ ಭಿನ್ನಾಭಿಪ್ರಾಯ ಏರ್ಪಡುತ್ತಿದೆ. ಹೀಗಾಗಿ ವಿಚ್ಛೇದನ ಪಡೆಯುತ್ತಾರೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದಲೂ ಕೇಳಿ ಬರುತ್ತಿದೆ. ಈ ಬಗ್ಗೆ ಅನೇಕ ಸಲ ವದಂತಿ ಹರಿದಾಡಿದರೂ ನಟ ಅಭಿಷೇಕ್ ಹಾಗೂ ನಟಿ ಐಶ್ವರ್ಯ ಪ್ರತಿಕ್ರಿಯೆ ನೀಡಿರಲಿಲ್ಲ. ಹೀಗಾಗಿ ಇವರ ಡಿವೋರ್ಸ್ ವಿಚಾರ ಸತ್ಯವೆಂದೇ ನಂಬಲಾಗಿತ್ತು. ಇದೀಗ ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಈ ಎಲ್ಲ ವದಂತಿಗಳಿಗೆ ಸ್ಪಷ್ಟಣೆ ನೀಡಿದ್ದಾರೆ.


ನವದೆಹಲಿ: ನಟಿ ಐಶ್ವರ್ಯ ರೈ (Aishwarya) ಮತ್ತು ಅಭಿಷೇಕ್ ಬಚ್ಚನ್ (Abhishek Bachchan) ಅವರು ಬಾಲಿವುಡ್ ನ ಮೋಸ್ಟ್ ಕ್ಯೂಟ್ ಕಪಲ್ ಎಂದೇ ಖ್ಯಾತಿ ಪಡೆದಿದ್ದಾರೆ. ನಟಿ ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಅವರು ಪ್ರೀತಿಸಿ ವಿವಾಹವಾಗಿದ್ದು ಇದೀಗ ಅವರ ನಡುವೆ ಭಿನ್ನಾಭಿಪ್ರಾಯ ಏರ್ಪಡುತ್ತಿದೆ. ಹೀಗಾಗಿ ವಿಚ್ಛೇದನ ಪಡೆಯುತ್ತಾರೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದಲೂ ಕೇಳಿ ಬರುತ್ತಿದೆ. ಈ ಬಗ್ಗೆ ಅನೇಕ ಸಲ ವದಂತಿ ಹರಿದಾಡಿದರೂ ನಟ ಅಭಿಷೇಕ್ ಹಾಗೂ ನಟಿ ಐಶ್ವರ್ಯ ಪ್ರತಿಕ್ರಿಯೆ ನೀಡಿರಲಿಲ್ಲ. ಹೀಗಾಗಿ ಇವರ ಡಿವೋರ್ಸ್ ವಿಚಾರ ಸತ್ಯವೆಂದೇ ನಂಬಲಾಗಿತ್ತು. ಇದೀಗ ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಈ ಎಲ್ಲ ವದಂತಿಗಳಿಗೆ ಸ್ಪಷ್ಟಣೆ ನೀಡಿದ್ದಾರೆ.
ನಟ ಅಭಿಷೇಕ್ ಬಚ್ಚನ್ ಬಾಲಿವುಡ್ ಕ್ಷೇತ್ರದಲ್ಲಿ ಖ್ಯಾತಿ ಪಡೆಯುವುದಕ್ಕೂ ಮೊದಲೇ ನಟಿ ಐಶ್ವರ್ಯ ರೈ ಫೇಮಸ್ ಆಗಿದ್ದರು. ಸಿನಿಮಾ , ಫ್ಯಾಷನ್ ಇವೆಂಟ್, ಜಾಹೀರಾತಿನಿಂದ ಹೆಚ್ಚು ಗುರುತಿಸಿ ಕೊಂಡ ಅವರು ಮದುವೆಯಾದ ಬಳಿಕ ಸಿನಿಮಾ ಕ್ಷೇತ್ರದಿಂದ ಬಹುತೇಕ ದೂರ ಉಳಿ ದಿದ್ದಾರೆ. ಈ ಮೂಲಕ ಮಗಳು ಆರಾಧ್ಯಳ ಜೊತೆಗೆ ಅತೀ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಮಗಳು ಆರಾಧ್ಯಳ ಸಂಪೂರ್ಣ ಜವಾಬ್ದಾರಿಯನ್ನು ತಮ್ಮ ಪತ್ನಿ ಐಶ್ವರ್ಯ ವಹಿಸಿಕೊಂಡ ಬಗ್ಗೆ ನಟ ಅಭಿಷೇಕ್ ಬಚ್ಚನ್ ಅವರು ಮನಬಿಚ್ಚಿ ಮಾತನಾಡಿದ್ದಾರೆ.
ನಟ ಅಭಿಷೇಕ್ ಬಚ್ಚನ್ ಅವರು ಸಂದರ್ಶನ ಒಂದರಲ್ಲಿ ಪಾಲ್ಗೊಂಡು ತಮ್ಮ ಪತ್ನಿಯ ಬಗ್ಗೆ ಮಾತನಾಡಿದ್ದಾರೆ. ನನ್ನ ಕುಟುಂಬದ ಬಗ್ಗೆ ನನಗೆ ಗೌರವವಿದೆ. ನನ್ನ ಪತ್ನಿ ಕುಟುಂಬದ ಹೊಣೆಯನ್ನು ಚೆನ್ನಾಗಿ ನಿಭಾಯಿಸುತ್ತಿದ್ದಾರೆ. ಮಗಳು ಆರಾಧ್ಯ ಅವರ ಲಾಲನೆ ಪಾಲನೆ ಎಲ್ಲದ್ದಕ್ಕೂ ನನ್ನ ಪತ್ನಿ ಬೆಂಬಲಿಸುತ್ತಿದ್ದಾರೆ. ಕುಟುಂಬ ಆರೈಕೆಗೆ ಹೆಚ್ಚು ಸಮಯ ನೀಡುವ ಐಶ್ವರ್ಯ ಸಿನಿಮಾದಿಂದ ದೂರ ಸರಿದಿದ್ದಾರೆ. ಅವರ ತ್ಯಾಗಕ್ಕೆ ನಾನೆಂದೂ ಚಿರಋಣಿ ಎಂದಿದ್ದಾರೆ.
ಬಳಿಕ ಸಂದರ್ಶಕನು ಡಿವೋರ್ಸ್ ವದಂತಿಗಳ ಬಗ್ಗೆ ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸಿ, ನಾನು ಈ ಚಿತ್ರರಂಗದಲ್ಲಿ ಬೆಳೆದಿದ್ದೇನೆ, ಆದ್ದರಿಂದ ಇಲ್ಲಿ ಯಾವುದನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಯಾವುದನ್ನು ಗಂಭೀರವಾಗಿ ಪರಿಗಣಿಸಬಾರದು ಎಂಬುದು ನನಗೆ ತಿಳಿದಿದೆ. ಸಾಮಾಜಿಕ ಮಾಧ್ಯಮದಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ನನಗೆ ಚಿಂತೆ ಇಲ್ಲ ಎಂದು ಅಭಿಷೇಕ್ ಹೇಳಿದರು.
ಕಳೆದ ವರ್ಷ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹದಲ್ಲಿ ಅಭಿಷೇಕ್ ಮತ್ತು ಐಶ್ವರ್ಯ ಪ್ರತ್ಯೇಕವಾಗಿ ಕಾಣಿಸಿಕೊಂಡಿದ್ದರು. ಅದಾದ ನಂತರ ಐಶ್ವರ್ಯಾ ಮಗಳು ಆರಾಧ್ಯ ಅವರ ಹುಟ್ಟುಹಬ್ಬದ ಪಾರ್ಟಿಯ ಸಂದರ್ಭ ಅಭಿಷೇಕ್ ಸೇರಿದಂತೆ ಬಚ್ಚನ್ ಕುಟುಂಬದ ಯಾವುದೇ ಸದ ಸ್ಯರು ಭಾಗವಹಿಸಲಿಲ್ಲ. ಹೀಗಾಗಿ ಡಿವೋರ್ಸ್ ಪಡೆಯುತ್ತಿದ್ದಾರೆ ಎಂಬ ವದಂತಿ ಹಬ್ಬಿದ್ದು ಇವೆಲ್ಲದ್ದಕ್ಕೂ ಸದ್ಯ ನಟ ಅಭಿಷೇಕ್ ಅವರು ಸ್ಪಷ್ಟನೆ ನೀಡಿದ್ದಾರೆ.