ಡಿ.16 ಮತ್ತು 20ರಂದು ಉದ್ಯೋಗ ಮೇಳ
ಡಿ.16 ಮತ್ತು 20ರಂದು ಉದ್ಯೋಗ ಮೇಳ
Vishwavani News
December 15, 2022
ಕೊಡಗು: ಜಿಲ್ಲೆಯಲ್ಲಿ ಉದ್ಯೋಗ ಮೇಳ ಆಯೋಜನೆ ಮಾಡಲಾಗಿದ್ದು, ಡಿ.16 ಮತ್ತು 20ರಂದು ಉದ್ಯೋಗ ಮೇಳ ನಡೆಯ ಲಿದೆ.
ಡಿಸೆಂಬರ್ 16, ಮಡಿಕೇರಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಹಾಗೂ ಡಿಸೆಂಬರ್ 20, ಗೋಣಿಕೊಪ್ಪಲು ಕಾವೇರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉದ್ಯೋಗ ಮೇಳ ನಡೆಯಲಿದೆ.
ಆಸಕ್ತ ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದ್ದು, ಉದ್ಯೋಗ ಮೇಳ ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯ ತನಕ ನಡೆಯಲಿದೆ. \
ಉದ್ಯೋಗ ಮೇಳದಲ್ಲಿ ಎಸ್‌ಎಸ್‌ಎಲ್ಸಿ, ಐಟಿಐ, ಡಿಪ್ಲೊಮಾ, ಯಾವುದೇ ಪದವಿ, ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳು ಪಾಲ್ಗೊಳ್ಳಬಹುದಾಗಿದ್ದು, ನೊಂದಣಿ ಮಾಡಿಕೊಳ್ಳದ ಅಭ್ಯರ್ಥಿಗಳು ಕೂಡ ನೇರವಾಗಿ ಸಂದರ್ಶನದಲ್ಲಿ ಭಾಗಿಯಾಗ ಬಹುದಾಗಿದೆ.