Actor Darshan: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಇಂದು ಕೋರ್ಟ್ ಮುಂದೆ ದರ್ಶನ್, ಪವಿತ್ರಾ ಸೇರಿ 17 ಆರೋಪಿಗಳು
ಕೊಲೆ ಪ್ರಕರಣಕ್ಕೆ ಸಂಬಂಧಸಿದಂತೆ ಇಂದು ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್‌ಗೆ ನಟ ದರ್ಶನ್ ಹಾಜರಾಗಲಿದ್ದಾರೆ. ಅಲ್ಲದೇ A1 ಆರೋಪಿ ಪವಿತ್ರ ಗೌಡ ಹಾಗೂ A2 ದರ್ಶನ್ ಮುಖಾಮುಖಿ ವಿಚಾರಣೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಎಲ್ಲಾ ಆರೋಪಿಗಳನ್ನು ಕೂಡ ಪೊಲೀಸರು ಇಂದು ಕೋರ್ಟಿಗೆ ಹಾಜರುಪಡಿಸಲಿದ್ದಾರೆ.


ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ (Renuka Swamy Murder Case) ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಜಾಮೀನು (Bail) ಪಡೆದು ಬಿಡುಗಡೆಯಾಗಿರುವ ನಟ ದರ್ಶನ್ (Actor Darshan) ಹಾಗೂ ಕೊಲೆ ಪ್ರಕರಣದ A1 ಆರೋಪಿ ಪವಿತ್ರಾ ಗೌಡ (Pavithra Gowda) ಸೇರಿದಂತೆ ಎಲ್ಲ ಆರೋಪಿಗಳು ಇಂದು ಕೋರ್ಟ್‌ಗೆ (Court) ಹಾಜರಾಗಲಿದ್ದಾರೆ.
ಕೊಲೆ ಪ್ರಕರಣಕ್ಕೆ ಸಂಬಂಧಸಿದಂತೆ ಇಂದು ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್‌ಗೆ ನಟ ದರ್ಶನ್ ಹಾಜರಾಗಲಿದ್ದಾರೆ. ಅಲ್ಲದೇ A1 ಆರೋಪಿ ಪವಿತ್ರ ಗೌಡ ಹಾಗೂ A2 ದರ್ಶನ್ ಮುಖಾಮುಖಿ ವಿಚಾರಣೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಎಲ್ಲಾ ಆರೋಪಿಗಳನ್ನು ಕೂಡ ಪೊಲೀಸರು ಇಂದು ಕೋರ್ಟಿಗೆ ಹಾಜರುಪಡಿಸಲಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ & ಗ್ಯಾಂಗ್ ವಿಚಾರಣೆ ಫೆ.25 ಕ್ಕೆ ಮುಂದೂಡಿ ಬೆಂಗಳೂರಿನ 57 ನೇ ಸಿಸಿಹೆಚ್ ಕೋರ್ಟ್ ಆದೇಶ ಹೊರಡಿಸಿತ್ತು. ಒಂದು ವೇಳೆ ಕೋರ್ಟಿಗೆ ಹಾಜರಾಗದಿದ್ದಲ್ಲಿ ವಿನಾಯಿತಿ ಕೋರಿ ಅರ್ಜಿ ಸಲ್ಲಿಸಬೇಕು. ಇಂದು ಅಕಸ್ಮಾತ್ ಕೋರ್ಟ್‌ಗೆ ದರ್ಶನ್ ಹಾಜರಾದರೆ, ನಟ ದರ್ಶನ್ ಹಾಗೂ ಪವಿತ್ರ ಗೌಡ ಮುಖಾಮುಖಿ ವಿಚಾರಣೆ ಎದುರಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ದರ್ಶನ್ ಮತ್ತಿತರರಿಗೆ ಹೈಕೋರ್ಟ್ ಜಾಮೀನು ನೀಡಿದೆ. ಈ ಜಾಮೀನು ಪ್ರಶ್ನಿಸಿ ಕರ್ನಾಟಕ ಪೊಲೀಸರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ತಮ್ಮ ಪರ ವಾದಿಸಲು ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅವರನ್ನು ದರ್ಶನ್ ಕಡೆಯವರು ಒಪ್ಪಿಸಿದ್ದಾರೆ ಎನ್ನಲಾಗಿದೆ.
ದರ್ಶನ್ ಅವರು ‘ಡೆವಿಲ್’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಳ್ಳಬೇಕಿದೆ. ಸದ್ಯ ಅವರು ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಶೀಘ್ರವೇ ಆರಂಭ ಆಗಬೇಕಿದೆ. ಈ ಚಿತ್ರದ ಬಳಿಕ ಪ್ರೇಮ್ ಜೊತೆಯೂ ದರ್ಶನ್ ಸಿನಿಮಾ ಮಾಡುತ್ತಿದ್ದಾರೆ. ಅತ್ತ ಪವಿತ್ರಾ ಗೌಡ ಕೂಡ ಹೊಸ ಸ್ಟುಡಿಯೋವನ್ನು ಇತ್ತೀಚೆಗೆ ಓಪನ್ ಮಾಡುವ ಮೂಲಕ ಹೊಸ ಬದುಕಿಗೆ ನಾಂದಿ ಹಾಡುತ್ತಿದ್ದಾರೆ.
ಇದನ್ನೂ ಓದಿ: Actor Darshan: ದರ್ಶನ್‌ಗೆ ಮತ್ತೊಂದು ರಿಲೀಫ್; ಮೈಸೂರಿಗೆ ತೆರಳಲು ಕೋರ್ಟ್‌ನಿಂದ ಅನುಮತಿ