Viral News: ಆಕಾಶದಲ್ಲಿ ಹಾರಾಡಿದ ನಿಗೂಢ ವಸ್ತು; ಏನಿದು...?
ಝಾನ್ಸಿಯಲ್ಲಿ ನಿಗೂಢ ವಸ್ತುವೊಂದು ಆಕಾಶಕ್ಕೆ ಹಾರುತ್ತಿರುವ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ಝಾನ್ಸಿಯ ರಾಟೋಸಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಸ್ಥಳೀಯ ರೈತ ರಾಜು ಲಮ್ಮರ್ದಾರ್ ತನ್ನ ಹೊಲದಲ್ಲಿ ಕೆಲಸ ಮಾಡುವಾಗ ಇದನ್ನು ಗಮನಿಸಿದ್ದಾರೆ ಎಂದು ಸುದ್ಧಿಯಾಗಿದೆ. ಇದು ಚರ್ಚೆಗೆ ಕಾರಣವಾಗಿದ್ದು, ವಿಡಿಯೊ ಕೂಡ ನಕಲಿಯೇ? ಅಥವಾ ಅಸಲಿಯೇ? ಎಂದು ಪರಿಶೀಲನೆ ಮಾಡಲಾಗುತ್ತಿದೆ.


ಇತ್ತೀಚಿನ ದಿನಗಳಲ್ಲಿ ಏಲಿಯನ್‍ಗಳು ಭೂಮಿಗೆ ಬಂದಿರುವ ಬಗ್ಗೆ ಹಲವಾರು ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಇದೀಗ ಝಾನ್ಸಿಯಲ್ಲಿ ನಿಗೂಢ ವಸ್ತುವೊಂದು ಆಕಾಶದಲ್ಲಿ ಹಾರುವುದನ್ನು ರೈತನೊಬ್ಬ ನೋಡಿದ್ದು, ಅದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿ ಸಿಕ್ಕಾಪಟ್ಟೆ ವೈರಲ್(Viral News) ಆಗಿದೆ. ಝಾನ್ಸಿ ಗ್ರಾಮದಲ್ಲಿ ನಡೆದ ಈ ಘಟನೆಯು ಅಲ್ಲಿನ ನಿವಾಸಿಗಳಲ್ಲಿ ಭಯವನ್ನು ಹುಟ್ಟುಹಾಕಿದೆ ಎನ್ನಲಾಗಿದೆ. ಝಾನ್ಸಿಯ ರಾಟೋಸಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸ್ಥಳೀಯ ರೈತ ರಾಜು ಲಮ್ಮರ್ದಾರ್ ತನ್ನ ಹೊಲದಲ್ಲಿ ಕೆಲಸ ಮಾಡುವಾಗ ಈ ನಿಗೂಢ ಸಂಗತಿಯನ್ನು ನೋಡಿದ್ದಾರಂತೆ.
ಈ ಘಟನೆಯ ನಂತರ, ಗ್ರಾಮಸ್ಥರು ಆ ವಸ್ತುವಿನ ಬಗ್ಗೆ ಊಹಾಪೋಹಗಳನ್ನು ಹರಡಲು ಶುರುಮಾಡಿದ್ದಾರೆ. ಕೆಲವರು ಇದು ಏಲಿಯನ್ ಆಗಿರಬಹುದು ಎಂದು ಕೆಲವರು ಹೇಳಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಎಲ್ಲೆಡೆ ವೈರಲ್ ಆಗಿ ತೀವ್ರ ಚರ್ಚೆಗೆ ಕಾರಣವಾಗಿದೆ.ಈ ವಿಡಿಯೊ ನಕಲಿಯೇ? ಅಥವಾ ಅಸಲಿಯೇ? ಎಂದು ಪರಿಶೀಲನೆ ಮಾಡಲಾಗುತ್ತಿದೆ ಎನ್ನಲಾಗಿದೆ. ಈ ಹಿಂದೆ ರಾಜಸ್ಥಾನದಲ್ಲಿ ಇದೇ ರೀತಿಯ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದು, ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿತ್ತು. ಈ ವಿಡಿಯೊದಲ್ಲಿ ಹಾರುವ ತಟ್ಟೆ (UFO) ಅನ್ನು ತೋರಿಸಲಾಗಿದೆ. ಇದು ಭೂಮಿಯ ಮೇಲೆ ಏಲಿಯನ್ ಆಗಮನದ ಪುರಾವೆಯಾಗಿದೆ ಎಂದು ಅನೇಕರು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ನೊಯ್ಡಾದಿಂದ ಮೀರತ್‍ವರೆಗೆ ಗೋಡೆ ಹಾಗೂ ಕಂಬಗಳ ಮೇಲೆ ನಿಗೂಢ ಪೋಸ್ಟರ್; ಏನಿದು?
ವ್ಯಕ್ತಿಗಳು ಕಾಣೆಯಾದಾಗ ಅವರನ್ನು ಹುಡುಕಲು ಸಾರ್ವಜನಿಕ ಸ್ಥಳಗಳಲ್ಲಿ ಗೋಡೆಗಳ ಮೇಲೆ ಅವರ ಪೋಟೊ ಪೋಸ್ಟರ್ ಅಂಟಿಸಿರುವುದನ್ನು ಸಾಮಾನ್ಯವಾಗಿ ನೋಡಿರುತ್ತೇವೆ. ಆದರೆ ನೋಯ್ಡಾ ಮತ್ತು ಮೀರತ್‍ನ ಪ್ರಮುಖ ರಸ್ತೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ 'ಕ್ಷಮಿಸು ಬಾಬು' ಎಂಬ ಬರಹಗಳಿರುವ ನಿಗೂಢ ಪೋಸ್ಟರ್‌ಗಳು ಕಂಡುಬಂದಿವೆ. ಇದನ್ನು ನೋಡಿ ಅಲ್ಲಿನ ನಿವಾಸಿಗಳು ಆಶ್ಚರ್ಯಚಕಿತರಾಗಿದ್ದಾರೆ. ಯಾರು ಮತ್ತು ಯಾರಿಗೆ ಕ್ಷಮೆಯಾಚಿಸುತ್ತಿದ್ದಾರೆಂದು ತಿಳಿದಿಲ್ಲ, ಮತ್ತು"ಬಾಬು" ಪದದ ಕಾಗುಣಿತ ಕೂಡ ತಪ್ಪಾಗಿದೆ. ಬಾಬು ಬದಲು ʻಬೂಬುʼ ಎಂದು ಬರೆದಿದ್ದಾರೆ. ನೊಯ್ಡಾದಿಂದ ಮೀರತ್‍ವರೆಗೆ ಅನೇಕ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ. ಆದರೆ, ಈ ಪೋಸ್ಟರ್‌ಗಳನ್ನು ಹಾಕಿದ ವ್ಯಕ್ತಿ ಯಾರು ಎಂಬುದು ತಿಳಿದಿಲ್ಲ. ಈ ಸುದ್ದಿ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.
ನೊಯ್ಡಾದಲ್ಲಿ, ಬೊಟಾನಿಕಲ್ ಗಾರ್ಡನ್ ಮೆಟ್ರೋ ನಿಲ್ದಾಣದ ಬಳಿ ಪಾದಚಾರಿ ಮೇಲ್ಸೇತುವೆಯಲ್ಲಿ (ಎಫ್ಒಬಿ) ಇಂತಹ ಸುಮಾರು 30ರಿಂದ 40 ಪೋಸ್ಟರ್‌ಗಳು ಕಂಡುಬಂದಿವೆ. ಈ ಪೋಸ್ಟರ್‌ಗಳ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ಗಮನ ಸೆಳೆದಿವೆ. ಇದು ಕಿಡಿಗೇಡಿ ವ್ಯಕ್ತಿಯ ಕೃತ್ಯವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದು, ಈ ಬಗ್ಗೆ ತನಿಖೆ ಶುರುಮಾಡಿದ್ದಾರೆ. ಕುತೂಹಲಕಾರಿ ಸಂಗತಿಯೆಂದರೆ, "ಕ್ಷಮಿಸಿ ಬುಬು" ಎಂಬ ಪದಗಳನ್ನು ಹೊರತುಪಡಿಸಿ, ಪೋಸ್ಟರ್‌ಗಳಲ್ಲಿ ಯಾವುದೇ ಹೆಚ್ಚುವರಿ ಮಾಹಿತಿ ಇಲ್ಲ. ಅವುಗಳ ಮೇಲೆ ಎರಡು ಕಾರ್ಟೂನ್ ಚಿತ್ರಗಳನ್ನು ಬಿಡಿಲಾಗಿದೆ. ಆದರೆ ಕಾಗುಣಿತ ತಪ್ಪಾಗಿರುವುದರಿಂದ, ರಹಸ್ಯವನ್ನು ಪರಿಹರಿಸಲು ಪೊಲೀಸರಿಗೆ ಕಷ್ಟವಾಗುತ್ತಿದೆ ಎನ್ನಲಾಗಿದೆ.