ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Viral Video: ಗುಂಡಿನ ಮತ್ತಿನಲ್ಲಿ ಈ ವರ ಹಸೆಮಣೆಯಲ್ಲಿ ಮಾಡಿದ್ದೇನು ಗೊತ್ತಾ? ಇಲ್ಲಿದೆ ವಿಡಿಯೊ

ಉತ್ತರ ಪ್ರದೇಶದ ಬರೇಲಿಯ ಕ್ಯೋಲ್ಡಿಯಾದಲ್ಲಿ ನಡೆದ ಮದುವೆಯಲ್ಲಿ ವರ ಕುಡಿದ ಮತ್ತಿನಲ್ಲಿ ಮದುವೆ ಹಾರವನ್ನು ವಧುವಿನ ಬದಲು ಸ್ನೇಹಿತನ ಕೊರಳಿಗೆ ಹಾಕಿದ್ದಾನೆ. ಇದರಿಂದ ಕೋಪಗೊಂಡ ವಧು ಮದುವೆಯನ್ನು ರದ್ದುಗೊಳಿಸಿದ್ದಾಳೆ. ಈ ಬಗ್ಗೆ ಪೊಲೀಸ್ ಪ್ರಕರಣ ದಾಖಲಾಗಿದ್ದು, ಪೊಲೀಸರು ವರನ ಕಡೆಯವರನ್ನು ವಿಚಾರಿಸಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ʻಮತ್ತಿನ ಹುಡುಗʼನ ಗಮ್ಮತ್ತಿಗೆ ಸಿಟ್ಟಿಗೆದ್ದ ವಧು; ಮದ್ವೆ ಕ್ಯಾನ್ಸಲ್‌!

Profile pavithra Feb 25, 2025 11:54 AM

ಲಖನೌ: ಮದ್ಯದ ಅಮಲಿನಲ್ಲಿದ್ದ ವರನೊಬ್ಬ ಮದುವೆಯ ಹಾರವನ್ನು ವಧುವಿನ ಕೊರಳಿಗೆ ಹಾಕುವ ಬದಲು ಆತನ ಸ್ನೇಹಿತನ ಕೊರಳಿಗೆ ಹಾಕಿದ ಅಘಾತಕಾರಿ ಘಟನೆ ನಡೆದಿದೆ. ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ಈ ಘಟನೆ ನಡೆದಿರುವುದಾಗಿ ಬೆಳಕಿಗೆ ಬಂದಿದೆ. ವರನು ಕುಡಿದು ಮತ್ತಿನಲ್ಲಿ ತೂರಾಡುವುದನ್ನು ನೋಡಿದ ವಧು ಕೋಪಗೊಂಡು, ಅವನನ್ನು ಮದುವೆಯಾಗಲು ಆಕೆ ನಿರಾಕರಿಸಿದ್ದಾಳೆ. ಹೀಗಾಗಿ ಮದುವೆಯನ್ನು ರದ್ದುಗೊಳಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ವರನ ಕಡೆಯವರ ಮೇಲೆ ಪ್ರಕರಣ ದಾಖಲಾಗಿದೆ. ಹಾಗಾಗಿ ವರನ ಕಡೆಯವರ ಬಳಿ ಪೊಲೀಸರು ಮಾತುಕತೆ ನಡೆಸಿದ್ದು, ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video)ಆಗಿದೆ.

ಶನಿವಾರ (ಫೆಬ್ರವರಿ 22) ರಾತ್ರಿ ಮದುವೆ ಮೆರವಣಿಗೆ ಬಂದಾಗ ಈ ಘಟನೆ ನಡೆದಿದೆ. ವರಮಾಲೆ ಸಂದರ್ಭದಲ್ಲಿ ವಧು ವರನ ಕುತ್ತಿಗೆಗೆ ಹಾರವನ್ನು ಹಾಕಿದ್ದಾಳೆ. ಆದರೆ, ಕುಡಿದ ಅಮಲಿನಲ್ಲಿ, ವರನು ತಪ್ಪಾಗಿ ತನ್ನ ಸ್ನೇಹಿತನ ಕುತ್ತಿಗೆಗೆ ಹಾರವನ್ನು ಹಾಕಿದ್ದಾನೆ. ಇದರಿಂದ ಕೋಪಗೊಂಡ ವಧು ಆತನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ.



ವಧುವಿನ ಕುಟುಂಬ ಸದಸ್ಯರು ಮದುವೆಗೆ ಅವಳನ್ನು ಮನವೊಲಿಸಲು ಪ್ರಯತ್ನಿಸಿದ್ದಾರೆ, ಆದರೆ ಆಕೆ ವರನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ. ಈ ಬಗ್ಗೆ ವಧುವಿನ ತಂದೆ ಪೊಲೀಸರಿಗೆ ದೂರು ನೀಡಿದ್ದು, ಅವರ ದೂರಿನ ಆಧಾರದ ಮೇಲೆ ವರ ಮತ್ತು ಅವನ ಕುಟುಂಬ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ವರ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ಸಾರ್ವಜನಿಕ ಅವಮಾನದ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಂಡು ವರ ಮತ್ತು ಆತನ ಕುಟುಂಬ ಸದಸ್ಯರಿಗೆ ದಂಡ ವಿಧಿಸಿದ್ದಾರೆ. ವರ, ಅವನ ತಂದೆ ಮತ್ತು ಇತರ ಮೂವರು ಕುಟುಂಬ ಸದಸ್ಯರು ಸೇರಿದಂತೆ ಒಟ್ಟು ಐದು ಜನರಿಗೆ ದಂಡ ವಿಧಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈ ಬಗ್ಗೆ ತನಿಖೆಯನ್ನು ಸಹ ಶುರುಮಾಡಿದ್ದಾರೆ ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ:Viral Video: ಮದುವೆ ಮಂಟಪದಲ್ಲೇ ರಮ್‌ ಕುಡಿದ ವರ.... ಆಮೇಲೆ ಆಗಿದ್ದೇ ಬೇರೆ! ವಿಡಿಯೊ ವೈರಲ್

ಪ್ರತ್ಯೇಕ ಘಟನೆಯಲ್ಲಿ ವೇದಿಕೆ ಮೇಲೆ ಕುಳಿತಿದ್ದ ವರನಿಗೆ ಫ್ರೂಟಿ ಜ್ಯೂಸ್ ಪ್ಯಾಕೆಟ್‍ನೊಳಗೆ ರಮ್ ತುಂಬಿಸಿ ನೀಡಿದ್ದಾನೆ. ಈ ವಿಡಿಯೊ ಸೋಶೀಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಅಬೀರ್ ಬಿಸ್ವಾಸ್ ಎಂಬ ಇನ್‌ಸ್ಟಾಗ್ರಾಮರ್‌ ಈ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ. ವಿಡಿಯೊ ಶುರುವಿನಲ್ಲಿ ಅಬೀರ್ ಫ್ರೂಟಿ ಪ್ಯಾಕ್ ಅನ್ನು ರಮ್ ಬಾಟಲಿಯ ಪಕ್ಕದಲ್ಲಿ ಇಡುವುದು ಸೆರೆಯಾಗಿದೆ. ರಮ್ ಅನ್ನು ಜ್ಯೂಸ್ ಪ್ಯಾಕ್‍ಗೆ ಹಾಕಿ ವರನಿಗೆ ನೀಡಿದ್ದಾನೆ. ಆದರೆ ಜ್ಯೂಸ್ ತೆಗೆದುಕೊಂಡ ವರನು ಒಂದು ಗುಟುಕನ್ನು ಕುಡಿದು ಅದರಲ್ಲಿ ಆಲ್ಕೋಹಾಲ್ ಇರುವುದು ಗೊತ್ತಾಗಿ ಸ್ನೇಹಿತನಿಗೆ ನೀಡಿದ್ದಾನೆ.

ಸ್ನೇಹಿತನ ತಮಾಷೆಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಇದನ್ನು ತಮಾಷೆಯಾಗಿ ಕಂಡರೆ, ಇತರರು ಮದುವೆಯ ಆಚರಣೆಗಳು ನಡೆಯುತ್ತಿದ್ದ ವೇದಿಕೆಗೆ ಮದ್ಯವನ್ನು ತಂದಿದಕ್ಕೆ ಖಂಡಿಸಿದ್ದಾರೆ. "ಹಾಗೆ ಮಾಡಬೇಡ. ಮದುವೆ ಸಮಾರಂಭವು ನಾಟಕವಲ್ಲ, ಅದು ಒಂದು ಆಚರಣೆ" ಎಂದು ನೆಟ್ಟಿಗರೊಬ್ಬರು ಬರೆದಿದ್ದಾರೆ. "ಅವನು ಪೂಜೆಯಲ್ಲಿ ಕುಳಿತಿದ್ದಾನೆ. ಈ ವೇಳೆ ನೀವು ಅವನಿಗೆ ಮದ್ಯವನ್ನು ನೀಡಿದ್ದಕ್ಕೆ ನಿಮಗೆ ನಾಚಿಕೆಯಾಗಬೇಕು" ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ಇತರರು ವಿಡಿಯೊಗೆ ‘ಸ್ಮೈಲ್’ ಎಮೋಜಿಗಳೊಂದಿಗೆ ಪ್ರತಿಕ್ರಿಯಿಸಿದ್ದಾರೆ. ವಿಶೇಷವೆಂದರೆ, ಈ ಇನ್‌ಸ್ಟಾಗ್ರಾಂ ರೀಲ್ 64 ದಶಲಕ್ಷಕ್ಕೂ ಹೆಚ್ಚು ವ್ಯೂವ್ಸ್ ಗಳಿಸಿದೆ.