Roopa Gururaj Column: ತಲ್ಲಣಿಸದಿರು ಕಂಡ್ಯ ತಾಳು ಮನವೇ...
‘ಎಷ್ಟೊಂದು ದಿನದಿಂದ ಇದನ್ನೇ ಮಾಡುತ್ತಿರುವೆ, ಒಂದು ದಿನ ಸತ್ತು ಹೇಗೂ ಮಣ್ಣಿನಲ್ಲಿ ಸೇರುವುದು ಇದ್ದೇ ಇದೆ. ಅದಕ್ಕಾಗಿ ನಾನು ಇಷ್ಟೆಲ್ಲಾ ಏಕೆ ಕಷ್ಟಪಡಬೇಕು? ಈ ಜೀವನ ಯಾಕೋ ಸಾಕಾಗಿ ಹೋಗಿದೆ, ಮುಂದೊಂದು ದಿನ ಬರುವ ಸಾವು ಇಂದೇ ಏಕೆ ಬರಬಾ ರದು?’ ಎಂದು ನೊಂದುಕೊಂಡು, “ಓ ಸಾವೇ, ನೀನು ಇಂದೇ ಬರಬಾರದೇ? ನಾನು ಬಹಳ ನೊಂದಿ ರುವೆ, ಈ ಬದುಕು ನನಗೆ ಸಾಕಾಗಿಹೋಗಿದೆ. ಕೃಪೆಮಾಡಿ ನನಗೆ ಇದರಿಂದ ಮುಕ್ತಿ ಕೊಡು" ಎಂದುಬಿಟ್ಟ.


ಒಂದೊಳ್ಳೆ ಮಾತು
ವ್ಯಕ್ತಿಯೊಬ್ಬ ಬಹಳ ವರ್ಷಗಳಿಂದ ಕಟ್ಟಿಗೆ ಮಾರಿ ಜೀವನ ನಡೆಸುತ್ತಿದ್ದ. ಪ್ರತಿದಿನ ಕಾಡಿಗೆ ಹೋಗಿ ಕಟ್ಟಿಗೆ ಒಡೆದು ತರುವುದು, ಮಾರುಕಟ್ಟೆಯಲ್ಲಿ ಅದನ್ನು ಮಾರಾಟ ಮಾಡುವುದು, ಅದರಿಂದ ಬರುವ ಅಲ್ಪ-ಸ್ವಲ್ಪ ದುಡ್ಡಿನಲ್ಲಿ ಹೊಟ್ಟೆ ಹೊರೆದುಕೊಳ್ಳುವುದು ಇದು ಅವನ ಪರಿಪಾಠವಾಗಿತ್ತು. ಇದೇ ಕೆಲಸ ಮಾಡಿ ಮಾಡಿ ಅವನಿಗೆ ಬದುಕೇ ಬೇಸರವೆನಿಸತೊಡಗಿತು. ಜತೆಗೆ, ವಯಸ್ಸೂ ಆಗುತ್ತಾ ಬಂದಿದ್ದರಿಂದ ಕೆಲಸ ಮಾಡಲು ಸ್ವಲ್ಪ ಕಷ್ಟವೆನಿಸ ತೊಡಗಿತು. ಒಂದು ದಿನ, ವಾಡಿಕೆಯಂತೆ ಕಟ್ಟಿಗೆ ತರಲು ಆತ ಕಾಡಿಗೆ ಹೋದ. ಆದರೆ, ಅಂದೇಕೋ ಅವನಿಗೆ ಕೆಲಸ ಮಾಡುವ ಉತ್ಸಾಹವೇ ಇರಲಿಲ್ಲ.
‘ಎಷ್ಟೊಂದು ದಿನದಿಂದ ಇದನ್ನೇ ಮಾಡುತ್ತಿರುವೆ, ಒಂದು ದಿನ ಸತ್ತು ಹೇಗೂ ಮಣ್ಣಿನಲ್ಲಿ ಸೇರುವುದು ಇದ್ದೇ ಇದೆ. ಅದಕ್ಕಾಗಿ ನಾನು ಇಷ್ಟೆಲ್ಲಾ ಏಕೆ ಕಷ್ಟಪಡಬೇಕು? ಈ ಜೀವನ ಯಾಕೋ ಸಾಕಾಗಿಹೋಗಿದೆ, ಮುಂದೊಂದು ದಿನ ಬರುವ ಸಾವು ಇಂದೇ ಏಕೆ ಬರಬಾ ರದು?’ ಎಂದು ನೊಂದುಕೊಂಡು, “ಓ ಸಾವೇ, ನೀನು ಇಂದೇ ಬರಬಾರದೇ? ನಾನು ಬಹಳ ನೊಂದಿರುವೆ, ಈ ಬದುಕು ನನಗೆ ಸಾಕಾಗಿಹೋಗಿದೆ. ಕೃಪೆಮಾಡಿ ನನಗೆ ಇದರಿಂದ ಮುಕ್ತಿ ಕೊಡು" ಎಂದುಬಿಟ್ಟ.
ಇದನ್ನೂ ಓದಿ: Roopa Gururaj Column: ಸಮರ್ಥ ರಾಮದಾಸರ 'ಸಮರ್ಥ' ಶಿಷ್ಯ
ಇದನ್ನು ಕೇಳಿಸಿ ಕೊಂಡ ಮೃತ್ಯದೇವತೆ ತಕ್ಷಣ ಅವನೆದುರು ಪ್ರಕಟಗೊಂಡು, “ನಾನು ಮೃತ್ಯುದೇವತೆ, ನೀನು ನನ್ನನ್ನು ಕರೆದೆಯೆಂದು ಬಂದೆ. ನನ್ನಿಂದ ನಿನಗೇನು ಆಗಬೇಕಿದೆ?" ಎಂದ. ಸೌದೆ ಒಡೆಯುವವನಿಗೆ ಉಸಿರುಗಟ್ಟಿದಂತಾಗಿ ಭಯ ದಿಂದ ನಡುಗಲಾರಂಭಿಸಿದ. ನಂತರ ಸಾವರಿಸಿಕೊಂಡು, ಉಗುಳು ನುಂಗುತ್ತಾ, “ಏನಿಲ್ಲಾ ಪ್ರಭೂ, ಈ ಕಟ್ಟಿಗೆಯ ಹೊರೆ ಯನ್ನು ನನ್ನೊಬ್ಬನಿಂದಲೇ ತಲೆಯ ಮೇಲೆ ಇಟ್ಟುಕೊಳ್ಳಲಾಗಲಿಲ್ಲ.
ಇಲ್ಲಿ ಯಾರೂ ಕಾಣಲಿಲ್ಲವಾದ್ದರಿಂದ ನಿಮ್ಮನ್ನು ಕರೆದೆ. ಕೃಪೆಮಾಡಿ ಈ ಕಟ್ಟಿಗೆ ಹೊರೆ ಯನ್ನು ತನ್ನ ತಲೆಯ ಮೇಲೆ ಹೊತ್ತುಕೊಳ್ಳಲು ನೆರವಾಗಿ" ಎಂದ! ಸಾಯುವ ಮಾತು ಆಗಾಗ್ಗೆ ಕೆಲವರ ಬಾಯಿಂದ ಸುಮ್ಮನೆ ಬರುತ್ತಲೇ ಇರುತ್ತದೆ; ಆದರೆ ಸಾಯುವ ಆಕಾಂಕ್ಷೆ ಯಾರಿಗೂ ಇರುವುದಿಲ್ಲ. ಎಲ್ಲರ ಮನದಲ್ಲೂ ಇರುವುದು ಜೀವಿಸುವ ಆಕಾಂಕ್ಷೆಯೇ.
ಆದರೆ ನಾವು ಯಾವಾಗಲಾದರೊಮ್ಮೆ ನೊಂದುಕೊಂಡಾಗ, ನಮ್ಮ ಆಸೆಗಳು ನೆರವೇರ ದಿದ್ದಾಗ ಈ ಬದುಕು ಸಾಕಪ್ಪಾ ಸಾಕು ಎನಿಸಿ ‘ಅತ್ಲಾಗೆ ಸತ್ತರೆ ಸಾಕು’ ಎಂದು ಉದ್ಗರಿಸಿ ಬಿಡುತ್ತೇವೆ!
ಸಂಕಷ್ಟವನ್ನು ನಿಭಾಯಿಸಲು ಆಗದಿದ್ದಾಗ, ಈ ರೀತಿ ವ್ಯರ್ಥಜೀವನ ನಡೆಸುವುದಕ್ಕಿಂತ ಸಾವೇ ಎಷ್ಟೋ ಮೇಲು ಎನಿಸುವುದು ಸಹಜ. ಆದರೆ ನಿಜವಾಗಿಯೂ ಸಾಯಬೇಕೆಂಬ ಆಸೆ ಯಾರಿಗೂ ಇರುವುದಿಲ್ಲ, ‘ಬದುಕಿರಬೇಕು’ ಎಂಬುದನ್ನೇ ಎಲ್ಲರೂ ಬಯಸುವುದು. ನಮ್ಮ ಲ್ಲಿ ಕೆಲವರು, “ಕಷ್ಟಗಳನ್ನು ತಡೆದುಕೊಳ್ಳಲಾಗದೆ ಸತ್ತುಹೋಗಿಬಿಡಬೇಕು ಅನ್ನಿಸ್ತಿದೆ" ಎನ್ನುವುದನ್ನು ಕೇಳಿರುತ್ತೇವೆ.
ಆಗ ಅವರಿಗೆ ಬೈದು ಸಮಾಧಾನವನ್ನೂ ಮಾಡಿರುತ್ತೇವೆ. ಆದರೆ ಕೆಲವರಿಗೆ ಹೀಗೆ ಮಾತನಾ ಡುವುದು, ಎಲ್ಲದರಲ್ಲೂ ನಕಾರಾತ್ಮಕ ವಿಷಯಗಳನ್ನು ಹುಡುಕುವುದು ಅದೆಷ್ಟು ಅಭ್ಯಾಸ ವಾಗಿರುತ್ತದೆಯೆಂದರೆ, ಮತ್ತೊಬ್ಬರ ಗಮನ ಸೆಳೆದು ಸಹಾನುಭೂತಿಯನ್ನು ಗಳಿಸಲು ಮತ್ತೆ ಮತ್ತೆ ಹೀಗೆ ಮಾತನಾಡುತ್ತಿರುತ್ತಾರೆ. ಅವರನ್ನು ಸಮಾಧಾನ ಪಡಿಸಲು ನಾವು ಹೋ ದರೆ ಸ್ವತಃ ಖಿನ್ನತೆಗೆ ಜಾರುವ ಸಾಧ್ಯತೆಯಿರುತ್ತದೆ; ಅಂಥವರನ್ನು ಚಿಂತೆಯ ಕೂಪ ದಿಂದ ಹೊರತರುವುದಿರಲಿ, ಸ್ವತಃ ಅದರೊಳಗೆ ಬಿದ್ದುಬಿಡುತ್ತೇವೆ.
ಆದ್ದರಿಂದ, ಹೇಳಿದ ಬುದ್ಧಿಮಾತನ್ನು ಸ್ವೀಕರಿಸುವ ಮನಸ್ಥಿತಿ ಇಲ್ಲದವರಿಗೆ, ತಿದ್ದಿಕೊಳ್ಳಲು ಮನಸ್ಸು ಮಾಡದವರಿಗೆ, ಬುದ್ಧಿವಾದ ಹೇಳಲು ಹೋಗಬಾರದು. ಏಕೆಂದರೆ, ಅಂಥವರಿಗೆ ಪರಿಹಾರ ಬೇಕಿರುವುದಿಲ್ಲ, ಪರರೊಂದಿಗೆ ತಮ್ಮ ಸಂಕಟವನ್ನು ತೋಡಿಕೊಳ್ಳುವುದರಲ್ಲೇ ಅವರು ಸುಖಿಸುತ್ತಾರೆ!
ಜೀವನ್ಮುಖಿಯಾದ ನಾವು ಅವರನ್ನು ಸರಿಪಡಿಸಲು ಹೋದರೆ, ನಮ್ಮ ಸಮಯವೂ ವ್ಯರ್ಥವಾಗುತ್ತದೆ. ನಮ್ಮ ಒಳ್ಳೆಯತನ, ಉಪಕಾರಬುದ್ಧಿ ಎಂದಿಗೂ ಅಪಾತ್ರದಾನವಾಗ ಬಾರದು. ನನ್ನ ಚೈತನ್ಯವು ಎಂದಿಗೂ ಕುಗ್ಗಬಾರದು. ಈ ಸೂಕ್ಷ್ಮವನ್ನು ಅರಿತು, ಯಾರಿಗೆ ಸಹಾಯಮಾಡಬೇಕು, ಎಷ್ಟು ಬುದ್ಧಿಹೇಳಿ ಸರಿಪಡಿಸಬೇಕು ಎಂಬ ವಿವೇಚನೆಯನ್ನು ರೂಢಿಸಿಕೊಳ್ಳಬೇಕು.