ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Manju Pavagada: ಮಂಜು ನನ್ನ ಜೊತೆ 13 ಫಸ್ಟ್ ನೈಟ್ ಸ್ಕಿಟ್ ಮಾಡಿದಾರೆ: ಪತ್ನಿ ಎದುರೇ ಗಂಡನ ಬಣ್ಣ ಬಯಲು ಮಾಡಿದ ಪಿಕೆ

ಮಜಾ ಟಾಕೀಸ್ ಮತ್ತು ಬಾಯ್ಸ್ Vs ಗರ್ಲ್ಸ್ನ ಮಹಾ ಮಿಲನ ಶೋಗೆ ಮಂಜು ಪಾವಾಗಡ ಅವರ ಪತ್ನಿ ಕೂಡ ದಿಢೀರ್ ಆಗಿ ಆಗಮನಿಸಿದರು. ಇವರು ವೇದಿಕೆ ಮೇಲೆ ಬಂದಿದ್ದೇ ತಡ ಇತರೆ ಮಹಿಳಾ ಸ್ಪರ್ಧಿಗಳು ಮಂಜು ಅವರನ್ನು ಪತ್ನಿಯ ಎದುರೇ ಬೆಂಡೆತ್ತಿದ್ದಾರೆ.

ಮಂಜು ನನ್ನ ಜೊತೆ 13 ಫಸ್ಟ್ ನೈಟ್ ಸ್ಕಿಟ್ ಮಾಡಿದಾರೆ ಎಂದ ಪಿಕೆ

Mahamilana

Profile Vinay Bhat Feb 25, 2025 7:16 AM

ಕಲರ್ಸ್ ಕನ್ನಡ ಎರಡು ಅತಿ ದೊಡ್ಡ ಷೋಗಳಾದ ಮಜಾ ಟಾಕೀಸ್ ಮತ್ತು ಬಾಯ್ಸ್ Vs ಗರ್ಲ್ಸ್​ನ ಮಹಾ ಮಿಲನ ಶನಿವಾರ ಮತ್ತು ಭಾನುವಾರ ಅದ್ಧೂರಿಯಾಗಿ ಪ್ರಸಾರ ಕಂಡಿದೆ. ವೀಕ್ಷಕರಿಗೆ ಭರ್ಜರಿ ಮಜಾ ಮತ್ತು ನಾನ್ ಸ್ಟಾಪ್ ಎಂಟರ್​ಟೈನ್ಮೆಂಟ್ ಸಿಕ್ಕಿದೆ. ಯೋಗರಾಜ್ ಭಟ್ ಮತ್ತು ಸೃಜನ್ ಲೋಕೇಶ್ ಕಾರ್ಯಕ್ರಮದ ಜಡ್ಜ್ ಆಗಿ ಹೊಸ ಬಗೆಯ ತೀರ್ಪು ಬರೆದರು. ಎರಡೂ ಷೋಗಳ ದೈತ್ಯ ಪ್ರತಿಭೆಗಳು ತಮ್ಮ ಸ್ಕಿಟ್ಸ್, ಗಿಮಿಕ್, ಡಾನ್ಸ್ ಮೂಲಕ ಜನರ ಮನ ಕದ್ದರು.

ವಿಶೇಷ ಎಂದರೆ ಈ ಶೋಗೆ ಮಂಜು ಪಾವಾಗಡ ಅವರ ಪತ್ನಿ ಕೂಡ ದಿಢೀರ್ ಆಗಿ ಆಗಮನಿಸಿದರು. ಇವರು ವೇದಿಕೆ ಮೇಲೆ ಬಂದಿದ್ದೇ ತಡ ಇತರೆ ಮಹಿಳಾ ಸ್ಪರ್ಧಿಗಳು ಮಂಜು ಅವರನ್ನು ಪತ್ನಿಯ ಎದುರೇ ಬೆಂಡೆತ್ತಿದ್ದಾರೆ. ಎಲ್ಲರ ಮಾತು ಕೇಳಿ ಮಂಜು ಗಲಿಬಿಲಿಗೊಂಡ್ರೆ, ಪಕ್ಕದಲ್ಲಿದ್ದ ಅವರ ಧರ್ಮ ಪತ್ನಿ ನಂದಿನಿ ಮಾತ್ರ ಕೂಲಾಗಿ ಎಲ್ಲವನ್ನೂ ಸ್ವೀಕರಿಸಿದರು. ಅಷ್ಟೇ ಅಲ್ಲ, ವೇದಿಕೆ ಮೇಲೆ ಪತಿಯನ್ನು ಹೊಗಳಿದ್ದಾರೆ.

ರಿಯಲ್ ಲೈಫ್​ಗೂ, ರೀಲ್ ಲೈಫ್​ಗೂ ಮಂಜು ಹೇಗಿರುತ್ತಾರೆ ಅಂತ ಉಳಿದ ಸದಸ್ಯರು ಹೇಳಿದ್ದಾರೆ. ಇದೇವೇಳೆ ಪತ್ನಿ ನಂದಿನಿ ಮುಂದೆಯೇ ಮಂಜು ಪಾವಗಡ ಅವರ ಹಳೆ ಕಥೆಯನ್ನು ಒಂದೊಂದಾಗಿ ಬಿಚ್ಚಿಟ್ಟಿದ್ದಾರೆ. ಮಜಾ ಭಾರತ ಖ್ಯಾತಿಯ ನಟಿ ಪಿಕೆ ಅಲಿಯಾಸ್ ಪ್ರಿಯಾಂಕ ಕಾಮಂತ್, ಮಂಜು ದೊಡ್ಡ ಮಳ್ಳ, ಕಳ್ಳ, ಸುಳ್ಳ, ಇವನು ನನ್ನ ಜೊತೆ 13 ಫಸ್ಟ್ ನೈಟ್ ಸ್ಕಿಟ್ ಮಾಡಿದ್ದಾರೆ ಎಂದಿದ್ದಾರೆ, ಇದಾದ ಬಳಿಕ ಅಗ್ನಿಸಾಕ್ಷಿ ಸೀರಿಯಲ್​ ಖ್ಯಾತಿಯ ಪ್ರಿಯಾಂಕ, ರೀಲ್ಸ್ ಮಾಡೋಕೆ ಮಾತ್ರ ಮಂಜು ನನ್ನ ಹತ್ರ ಬರ್ತಾರೆ ಎಂದು ಆರೋಪ ಮಾಡಿದ್ದಾರೆ.

ಹುಡುಗಿಯರ ಎಲ್ಲ ಆರೋಪ ಕೇಳಿದ ನಂದಿನಿ, ಇವ್ರು ಹೇಳಿದ್ದೆಲ್ಲ ಸುಳ್ಳು, ನನ್ನ ಗಂಡ ಒಳ್ಳೆಯವರು ಎನ್ನುತ್ತಾರೆ. ಅಷ್ಟೇ, ಪತ್ನಿ ಮಾತು ಕೇಳಿ ಖುಷಿಯಾಗೋ ಮಂಜು, ಐ ಲವ್ ಯು ನಂದಿನಿ ಅಂತ ಹಗ್ ಮಾಡ್ತಾರೆ. ಆದ್ರೆ ಮಂಜು ಈ ಮಾತನ್ನೂ ಸ್ಪರ್ಧಿಗಳು ಸತ್ಯ ಅಂತ ನಂಬ್ತಿಲ್ಲ. ಮಂಜು ಪತ್ನಿಗೆ ಐ ಲವ್ ಯೂ ಹೇಳಿದ್ದೂ ಸ್ಕಿಟ್ ಅಂದಿದ್ದಾರೆ. ಮಂಜು ಕಳೆದ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಪಾವಗಡದಲ್ಲಿ ಮದುವೆ ನಡೆದಿತ್ತು. ನಂದಿನಿ ಬೆಂಗಳೂರಿನಲ್ಲಿ ಕೆಲಸ ಮಾಡ್ತಿದ್ದು, ಆಗಾಗ ಮಂಜು ಜೊತೆ ಕ್ಯಾಮರಾ ಕಣ್ಣಿಗೆ ಸೆರೆಯಾಗ್ತಿರುತ್ತಾರೆ.



ಮಹಾ ಶಿವರಾತ್ರಿ ಪ್ರಯುಕ್ತ ಕಲರ್ಸ್ ಕನ್ನಡದಲ್ಲಿ ಈ ವಿಶೇಷ ಮಹಾಮಿಲನ ಎಪಿಸೋಡ್ ನಡೆಸಲಾಗಿತ್ತು. ಇದರಲ್ಲಿ ಚಂದನಾ, ಐಶ್ವರ್ಯಾ ಸಿಂಧೋಗಿ ಮತ್ತು ಪ್ರಿಯಾಂಕಾ ಕಾಮತ್ ಇವರು ಕ್ರಮವಾಗಿ ಸತಿ, ಪಾರ್ವತಿ, ಕಾಳಿಯಾಗಿ ನರ್ತಿಸಿದರು. ಅಣ್ಣಯ್ಯ ಸಿನಿಮಾದ ಕಾಮಿಡಿ ಅಣಕವನ್ನು ಹಾಲಿವುಡ್ನ ಅವತಾರ್ ಚಿತ್ರದ ಮಾದರಿಯಲ್ಲಿ ತೋರಿಸಿ ಮನರಂಜಿಸಿದರು. ಜೊತೆಗೆ ಕಳೆದ ಎರಡು ವಾರಗಳಿಂದ ಬಾಯ್ಸ್ Vs ಗರ್ಲ್ಸ್ ಶೋನಲ್ಲಿ ಭಾಗವಹಿಸದ ಬಿಗ್ ಬಾಸ್ ಕನ್ನಡ ಸೀಸನ್ 11ರ ವಿನ್ನರ್ ಹನುಮಂತ ಕೂಡ ಕಾಣಿಸಿಕೊಂಡು ಕಚಗುಳಿ ನೀಡಿದರು.

Bhagya Lakshmi Serial: ಇಂದು ಭಾಗ್ಯ ಲಕ್ಷ್ಮೀ ಮಹಾಸಂಚಿಕೆ: ಈ ಒಂದು ಎಪಿಸೋಡ್​ಗಾಗಿ ಕಾದು ಕುಳಿತಿದ್ದಾರೆ ವೀಕ್ಷಕರು