ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Pat Cummins: ಕಪ್‌ ಗೆಲ್ಲಲು ಭಾರತಕ್ಕೆ ಹೆಚ್ಚಿನ ಅನುಕೂಲ; ಆಸೀಸ್‌ ನಾಯಕನ ಹೇಳಿಕೆ

Champions Trophy 2025: ಪ್ಯಾಟ್‌ ಕಮಿನ್ಸ್‌ ಕೌಟುಂಬಿಕ ಕಾರಣ ಹಾಗೂ ಗಾಯದಿಂದಾಗಿ ಈ ಬಾರಿಯ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಭಾಗವಹಿಸುತ್ತಿಲ್ಲ. ಅವರ ಅಲಭ್ಯತೆಯಲ್ಲಿ ಸ್ಟೀವನ್‌ ಸ್ಮಿತ್‌ ತಂಡವನ್ನು ಮುನ್ನಡೆಸುತ್ತಿದ್ದಾರೆ. ಸದ್ಯ ಗಾಯದಿಂದ ಚೇತರಿಸಿಕೊಂಡಿರುವ ಕಮಿನ್ಸ್‌ ಮಾರ್ಚ್‌ 22 ರಿಂದ ಆರಂಭವಾಗಲಿರುವ ಐಪಿಎಲ್‌ ಟೂರ್ನಿಯಲ್ಲಿ ಆಡುವುದನ್ನು ಖಚಿತಪಡಿಸಿದ್ದಾರೆ.

ಕಪ್‌ ಗೆಲ್ಲಲು ಭಾರತಕ್ಕೆ ಹೆಚ್ಚಿನ ಅನುಕೂಲ; ಪ್ಯಾಟ್‌ ಕಮಿನ್ಸ್‌

Profile Abhilash BC Feb 25, 2025 12:23 PM

ಸಿಡ್ನಿ: ಪ್ರಸಕ್ತ ಸಾಗುತ್ತಿರುವ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ(Champions Trophy 2025) ಭಾರತ ಮತ್ತು ನ್ಯೂಜಿಲ್ಯಾಂಡ್‌ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸೆಮಿಫೈನಲ್‌ ಪ್ರವೇಶಿಸಿದೆ. ಬಿ ಗುಂಪಿನಿಂದ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಸೆಮಿ ಪ್ರವೇಶಿಸುವ ಸಾಧ್ಯತೆ ಇದೆ. ಇದೀಗ ಆಸೀಸ್‌ ನಾಯಕ ಪ್ಯಾಟ್‌ ಕಮಿನ್ಸ್‌(Pat Cummins) ಭಾರತಕ್ಕೆ ಟ್ರೋಫಿ ಗೆಲ್ಲುವ ಅನುಕೂಲ ಹೆಚ್ಚು ಎಂದಿದ್ದಾರೆ. ಜತೆಗೆ ಇದಕ್ಕೆ ಕಾರಣವನ್ನು ಕೂಡ ತಿಳಿಸಿದ್ದಾರೆ.

ಸ್ಪೋರ್ಟ್ ಆಸ್ಟ್ರೇಲಿಯಾದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಕಮಿನ್ಸ್‌, ಭಾರತಕ್ಕೆ ಈ ಬಾರಿ ಹೆಚ್ಚಿನ ಅನುಕೂಲವಾಗಿದೆ. ಏಕೆಂದರೆ ಎಲ್ಲಾ ಪಂದ್ಯಗಳನ್ನು ಒಂದೇ ತಾಣವಾದ ದುಬೈನಲ್ಲಿ ಆಡುತ್ತಿದೆ. ಯಾವುದೇ ಒಂದು ತಂಡ ಒಂದೇ ಮೈದಾನದಲ್ಲಿ ಪಂದ್ಯಗಳನ್ನು ಆಡುತ್ತಿದ್ದರೆ ಅಲ್ಲಿನ ವಾತಾವರಣಕ್ಕೆ ಬೇಗನೆ ಹೊಂದಿಕೊಳ್ಳುತ್ತಾರೆ. ಜತೆಗೆ ಪಿಚ್‌ ವರ್ತನೆ ಬಗ್ಗೆ ಯಾವುದೇ ಗೊಂದಲ ಇರುವುದಿಲ್ಲ. ಈ ಲಾಭ ಭಾರತಕ್ಕೆ ಲಭಿಸಿದೆ. ಹೀಗಾಗಿ ರೋಹಿತ್‌ ಪಡೆಗೆ ಕಪ್‌ ಗೆಲ್ಲುವ ಅವಕಾಶ ಹೆಚ್ಚು ಎಂದು ಹೇಳಿದ್ದಾರೆ.

ಇದನ್ನೂ ಓದಿ 1998 ICC Knock Out Trophy: ಚೋಕರ್ಸ್‌ ದಕ್ಷಿಣ ಆಫ್ರಿಕಾ ಚೊಚ್ಚಲ ಚಾಂಪಿಯನ್‌

ಪ್ಯಾಟ್‌ ಕಮಿನ್ಸ್‌ ಕೌಟುಂಬಿಕ ಕಾರಣ ಹಾಗೂ ಗಾಯದಿಂದಾಗಿ ಈ ಬಾರಿಯ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಭಾಗವಹಿಸುತ್ತಿಲ್ಲ. ಅವರ ಅಲಭ್ಯತೆಯಲ್ಲಿ ಸ್ಟೀವನ್‌ ಸ್ಮಿತ್‌ ತಂಡವನ್ನು ಮುನ್ನಡೆಸುತ್ತಿದ್ದಾರೆ. ಸದ್ಯ ಗಾಯದಿಂದ ಚೇತರಿಸಿಕೊಂಡಿರುವ ಕಮಿನ್ಸ್‌ ಮಾರ್ಚ್‌ 22 ರಿಂದ ಆರಂಭವಾಗಲಿರುವ ಐಪಿಎಲ್‌ ಟೂರ್ನಿಯಲ್ಲಿ ಆಡುವುದನ್ನು ಖಚಿತಪಡಿಸಿದ್ದಾರೆ. ಅವರು ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ನಾಯಕನಾಗಿದ್ದಾರೆ. ಕಳೆದ ಆವೃತ್ತಿಯಲ್ಲಿ ತಂಡ ಫೈನಲ್‌ ಪ್ರವೇಶಿಸಿತ್ತು. ಆದರೆ ಕೆಕೆಆರ್‌ ವಿರುದ್ಧ ಸೋತು ರನ್ನರ್‌ ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.

ಇಂದು ದಕ್ಷಿಣ ಆಫ್ರಿಕಾ-ಆಸೀಸ್‌ ಪಂದ್ಯ

ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ(AUS vs SA) ತಂಡಗಳು ಇಂದು(ಮಂಗಳವಾರ) ಸೆಣಸಾಟ ನಡೆಸಲಿದೆ. ಯಾರೇ ಗೆದ್ದರು, 'ಬಿ' ಗುಂಪಿನಿಂದ ಸೆಮಿಫೈನಲ್‌ ಟಿಕೆಟ್‌ ಒಂದನ್ನು ಬಹುತೇಕ ಖಾತ್ರಿಪಡಿಸಲಿದ್ದಾರೆ.

ಉಭಯ ತಂಡಗಳ ಬ್ಯಾಟಿಂಗ್‌ ಲೈನ್‌ ಅಪ್‌ ತುಂಬಾನೇ ಬಲಿಷ್ಠವಾಗಿ ಗೋಚರಿಸಿದೆ. ಆಸೀಸ್‌ ಪರ ಜೋಶ್‌ ಇಂಗ್ಲಿಸ್‌, ಮ್ಯಾಥ್ಯೂ ಶಾರ್ಟ್, ಅಲೆಕ್ಸ್‌ ಕ್ಯಾರಿ, ಗ್ಲೆನ್‌ ಮ್ಯಾಕ್ಸ್‌ವೆಲ್‌, ಡ್ರಾವಿಸ್‌ ಹೆಡ್‌ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಅತ್ತ ದಕ್ಷಿಣ ಆಫ್ರಿಕಾ ಪರವೂ ಯಾವುದೇ ಹಂತದಲ್ಲಿ ಸಿಡಿದು ನಿಂತು ಪಂದ್ಯ ಗೆಲ್ಲಿಸಬಲ್ಲ ಆಟಗಾರರಾದ ರಿಯಾನ್‌ ರಿಕಲ್ಟನ್‌, ರಸ್ಸಿ ವಾನ್‌ ಡರ್‌ ಡುಸ್ಸೆನ್‌, ಐಡೆನ್‌ ಮಾರ್ಕ್ರಮ್‌, ಡೇವಿಡ್‌ ಮಿಲ್ಲರ್‌ ಇದ್ದಾರೆ. ಜತೆಗೆ ತಾಳ್ಮೆಯು ಬ್ಯಾಟಿಂಗ್‌ ನಡೆಸುವ ನಾಯಕ ಟೆಂಬ ಬವುಮಾ ಬಲವೂ ಇದೆ.