ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Viral Video: ಮಸ್ತ್‌ ಪ್ಲ್ಯಾನ್‌ ಇದು! ಕುಂಭಮೇಳಕ್ಕೆ ಹೋಗದಿದ್ದರೇನಂತೆ? ಸ್ವಿಮ್ಮಿಂಗ್‌ಪೂಲ್‌ ಇದ್ಯಲ್ಲಾ?

ಉತ್ತರಪ್ರದೇಶದ ಪ್ರಯಾಗ್‍ರಾಜ್‍ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಭೇಟಿ ನೀಡಲು ಸಾಧ್ಯವಾಗದ ನೋಯ್ಡಾ ಸೊಸೈಟಿ ಸದಸ್ಯರು ತ್ರಿವೇಣಿ ಸಂಗಮದಿಂದ ತಂದ ಪವಿತ್ರ ನೀರನ್ನು ಈಜುಕೊಳಕ್ಕೆ ಸುರಿದು ಅದನ್ನೇ ತ್ರಿವೇಣಿ ಸಂಗಮ ಎಂದು ಪರಿಗಣಿಸಿ ಸೊಸೈಟಿಯ ಈಜುಕೊಳದಲ್ಲಿ ಸ್ನಾನ ಮಾಡಿದ ವಿಚಿತ್ರ ಘಟನೆ ನಡೆದಿದೆ. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ಸ್ವಿಮ್ಮಿಂಗ್‌ಪೂಲ್‌ನಲ್ಲೇ ಅಮೃತಸ್ನಾನ! ಫುಲ್‌ ವೈರಲಾಗ್ತಿದೆ ಈ ವಿಡಿಯೊ

Profile pavithra Feb 25, 2025 1:35 PM

ಲಖನೌ: ಪ್ರಯಾಗ್‍ರಾಜ್‍ನಲ್ಲಿ ಮಹಾಕುಂಭಮೇಳಕ್ಕೆ ನಾಳೆ ಕೊನೆಯಾಗಲಿದೆ. ಲಕ್ಷಾಂತರ ಜನರು ಭೇಟಿ ನೀಡಿ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ್ದಾರೆ. ಆದರೆ ಎಲ್ಲರಿಗೂ ಈ ಕುಂಭಮೇಳಕ್ಕೆ ಭೇಟಿ ನೀಡಲು ಸಾಧ್ಯವಾಗಿಲ್ಲ. ಹೀಗೆ ಕುಂಭಮೇಳಕ್ಕೆ ಹೋಗುವುದಕ್ಕೆ ಆಗದ ಒಂದಷ್ಟು ಜನ ಮಾಡಿದ ಪ್ಲ್ಯಾನ್‌ ಒಂದು ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಮಹಾಕುಂಭಮೇಳಕ್ಕೆ ಹಾಜರಾಗಲು ಸಾಧ್ಯವಾಗದ ನೋಯ್ಡಾ ಸೊಸೈಟಿ ಸದಸ್ಯರು ತ್ರಿವೇಣಿ ಸಂಗಮ ಎಂದು ಪರಿಗಣಿಸಿ ಸೊಸೈಟಿಯ ಈಜುಕೊಳದಲ್ಲಿ ಸ್ನಾನ ಮಾಡಿದ ವಿಚಿತ್ರ ಘಟನೆ ನಡೆದಿದೆ. ಅಲ್ಲದೇ ಸೊಸೈಟಿ ಸದಸ್ಯರು ಉತ್ತರ ಪ್ರದೇಶದ ಪ್ರಯಾಗ್‍ರಾಜ್‍ನ ತ್ರಿವೇಣಿ ಸಂಗಮದಿಂದ ತಂದ ಪವಿತ್ರ ನೀರನ್ನು ಈಜುಕೊಳಕ್ಕೆ ಸುರಿದು ಸ್ನಾನ ಮಾಡಿದ್ದಾರೆ ಎನ್ನಲಾಗಿದೆ. ಈ ಘಟನೆಯನ್ನು ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಲಾಗಿದ್ದು, ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ವೈರಲ್ ವಿಡಿಯೊದಲ್ಲಿ, ನೋಯ್ಡಾದ ಎಟಿಎಸ್ ಸೊಸೈಟಿಯ ಮಹಿಳೆಯರು ತ್ರಿವೇಣಿ ಸಂಗಮದ ಪವಿತ್ರ ನೀರನ್ನು ಈಜುಕೊಳದಲ್ಲಿ ಬೆರೆಸಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಕುಂಭಮೇಳಕ್ಕೆ ಇಲ್ಲಿಯವರೆಗೆ ಸುಮಾರು 60 ಕೋಟಿ ಯಾತ್ರಾರ್ಥಿಗಳು ಬಂದಿದ್ದು, ಎಲ್ಲರೂ ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿಯ ಪವಿತ್ರ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ.



ಸ್ಥಳೀಯ ಉದ್ಯಮಿ ದೀಪಕ್ ಗೋಯಲ್ ಅವರು ಮಹಾ ಕುಂಭ ಮೇಳಕ್ಕೆ ಭೇಟಿ ನೀಡಲು ಸಾಧ್ಯವಾಗದವರಿಗೆ ಡಿಜಿಟಲ್ ಸ್ನಾನಕ್ಕೆ ಅವಕಾಶ ಮಾಡಿಕೊಟ್ಟರು. ಈ ವಿಶಿಷ್ಟ ಸೇವೆಯನ್ನು ಪ್ರದರ್ಶಿಸುವ ವಿಡಿಯೊ ವೈರಲ್ ಆಗಿದ್ದು, ಇದು ಟೀಕೆ ಮತ್ತು ಕುತೂಹಲ ಎರಡಕ್ಕೂ ಕಾರಣವಾಗಿದೆ. ಕೆಲವು ನೆಟ್ಟಿಗರು ಈ ಕಲ್ಪನೆಯನ್ನು ಅಪಹಾಸ್ಯ ಮಾಡಿ, ಇದನ್ನು ನಂಬಿಕೆಯ ಶೋಷಣೆ ಎಂದು ಕರೆದರೆ, ಇತರರು ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಹಾ ಕುಂಭಮೇಳವನ್ನು ಪ್ರತಿ 12 ವರ್ಷಗಳಿಗೊಮ್ಮೆ ನಡೆಸಲಾಗುತ್ತದೆ ಮತ್ತು ಮಹಾಕುಂಭವು 12 ಕುಂಭಗಳ ನಂತರ ನಡೆಯುತ್ತದೆ. ಆದ್ದರಿಂದ 144 ವರ್ಷಗಳ ನಂತರ ಮಹಾ ಕುಂಭ ಬಂದಿದೆ. ಈ ಬಾರಿ, ಮಹಾ ಕುಂಭ ಸ್ನಾನವು ಜನವರಿ 13 ರಂದು ಶುರುವಾಗಿ ಮಹಾ ಶಿವರಾತ್ರಿಯ ಸಮಯದಲ್ಲಿ ಅಂದರೆ ಫೆಬ್ರವರಿ 26 ರಂದು ಕೊನೆಗೊಳ್ಳುತ್ತದೆ. ಸನಾತನ ಧರ್ಮದಲ್ಲಿ, ಜನರು ತಮ್ಮ ಪಾಪಗಳನ್ನು ತೊಳೆಯಲು ಮಹಾ ಕುಂಭದ ಸಮಯದಲ್ಲಿ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಬೇಕು ಎಂದು ನಂಬಲಾಗಿದೆ.

ಈ ಸುದ್ದಿಯನ್ನೂ ಓದಿ:Viral News: ತಾಯಿಯನ್ನು ಮನೆಯೊಳಗೆ ಕೂಡಿಹಾಕಿ ಹೆಂಡ್ತಿ ಮಕ್ಕಳನ್ನು ಕರ್ಕೊಂಡು ಕುಂಭಮೇಳಕ್ಕೆ ಹೋದ ಮಗ!

ಪ್ರತ್ಯೇಕ ಘಟನೆಯಲ್ಲಿ ಪುಣ್ಯಕ್ಷೇತ್ರದ ಯಾತ್ರೆಗೆ ಹೊರಟವರು ಹೆಚ್ಚಾಗಿ ತಮ್ಮ ತಂದೆ-ತಾಯಿಯನ್ನು ಕರೆದುಕೊಂಡು ಹೋಗುತ್ತಾರೆ. ಆದರೆ ಜಾರ್ಖಂಡ್‍ ರಾಮಗಢ ಜಿಲ್ಲೆಯಲ್ಲಿ ಮಗನೊಬ್ಬ ಅನಾರೋಗ್ಯದಿಂದ ಬಳಲುತ್ತಿರುವ ತಾಯಿಯನ್ನು ಮನೆಯಲ್ಲಿ ಲಾಕ್ ಮಾಡಿ ಪತ್ನಿ, ಮಕ್ಕಳು ಮತ್ತು ಅಳಿಯಂದಿರೊಂದಿಗೆ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲು ಹೋಗಿದ್ದಾನಂತೆ. ಮನೆಯಲ್ಲಿದ್ದ ತಾಯಿ ಹಸಿವಿನಿಂದ ಅಳುತ್ತಿದ್ದಾಗ ನೆರೆಹೊರೆಯವರು ಆಕೆಯ ಮಗಳಿಗೆ ಹೇಳಿದ್ದಾರಂತೆ. ಕೊನೆಗೆ ಪೊಲೀಸರು ಬಂದು ತಾಯಿಯನ್ನು ಕಾಪಾಡಿದ್ದಾರಂತೆ. ತನ್ನ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದರು. ಹಾಗಾಗಿ ಅವರಿಗೆ ಆಹಾರ ಮತ್ತು ಕುಡಿಯಲು ಎಲ್ಲಾ ವ್ಯವಸ್ಥೆಗಳನ್ನು ಮಾಡಿದ ನಂತರ ಪ್ರಯಾಗ್‍ರಾಜ್‍ಗೆ ಹೋಗಿರುವುದಾಗಿ ಕುಮಾರ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಈ ಸುದ್ದಿ ಇದೀಗ ಭಾರೀ ವೈರಲ್‌(Viral News) ಆಗಿದೆ.

ಮಹಿಳೆಯ ಮಗಳು ಚಾಂದಿನಿ ದೇವಿ, ನೆರೆಹೊರೆಯವರಿಂದ ಫೋನ್ ಮೂಲಕ ತನ್ನ ತಾಯಿಯ ಬಗ್ಗೆ ಮಾಹಿತಿ ಪಡೆದಿರುವುದಾಗಿ ತಿಳಿಸಿದ್ದಾಳೆ. ಪೊಲೀಸರು ಬೀಗ ಮುರಿದು ತಾಯಿಯನ್ನು ರಕ್ಷಿಸಿದ್ದಾರೆ. ನೆರೆಹೊರೆಯವರು ತಕ್ಷಣ ಅವಳಿಗೆ ಆಹಾರವನ್ನು ನೀಡಿದ್ದಾರೆ. ಆಕೆಗೆ ಔಷಧಿಗಳನ್ನು ಸಹ ನೀಡಲಾಯಿತು ಮತ್ತು ಸಿಸಿಎಲ್ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ದೇವಿ ಮಾಹಿತಿ ನೀಡಿದ್ದಾಳೆ.