Viral Video: ಶ್ವಾನವನ್ನು ಗೋಣಿಚೀಲದಲ್ಲಿ ಕಟ್ಟಿ ರೈಲಿನೊಳಗಿಟ್ಟ ಪಾಪಿಗಳು; ಮುಂದೇನಾಯ್ತು?
ಗೋಣಿಚೀಲದಲ್ಲಿ ಜೀವಂತ ನಾಯಿಯನ್ನು ತುಂಬಿ ರೈಲಿನಲ್ಲಿಟ್ಟು ಎಸೆಯಲಾಗಿದೆ. ಬೋಗಿಯಲ್ಲಿ ಇರಿಸಲಾಗಿದ್ದ ಚೀಲದಲ್ಲಿ ಚಲನೆ ಕಂಡು ಪ್ರಯಾಣಿಕರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿ ಅದನ್ನು ತೆರೆದಾಗ ಅದರಲ್ಲಿ ಜೀವಂತ ನಾಯಿ ಇರುವುದು ಕಂಡುಬಂದಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ಜನರ ಆಕ್ರೋಶಕ್ಕೆ ಕಾರಣವಾಗಿದೆ.


ಕೋಲ್ಕತಾ: ಸಾಕು ನಾಯಿಯೊಂದನ್ನು ಮಾಲೀಕನೊಬ್ಬ ಮಾರ್ಕೆಟ್‌ನಲ್ಲಿ ಬಿಟ್ಟುಹೋದ ಅಮಾನವೀಯ ಘಟನೆಯೊಂದು ಇತ್ತೀಚೆಗೆ ವೈರಲ್ ಆಗಿತ್ತು. ಇಂತಹದ್ದೇ ಮತ್ತೊಂದು ಘಟನೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವರದಿಯಾಗಿದೆ. ನಾಯಿಯೊಂದನ್ನು ಗೋಣಿಚೀಲದಲ್ಲಿ ತುಂಬಿಸಿ ರೈಲಿನಲ್ಲಿ ಎಸೆಯಲಾಗಿದೆ. ಬೋಗಿಯಲ್ಲಿ ಇರಿಸಲಾಗಿದ್ದ ಚೀಲದಲ್ಲಿ ಏನೋ ಒದ್ದಾಡುತ್ತಿರುವುದು ಕಂಡು ಬಂದಿತ್ತು. ರೈಲಿನಲ್ಲಿದ್ದ ಪ್ರಯಾಣಿಕನೊಬ್ಬ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಚೀಲ ತೆರೆದಾಗ ಅದರೊಳಗೆ ಜೀವಂತವಾದ ನಾಯಿ ಇರುವುದು ಕಂಡುಬಂದಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video)ಆಗಿದೆ.
ನಾಯಿಯನ್ನು ಗೋಣಿಚೀಲದಲ್ಲಿ ಹಾಕಿ ಅದನ್ನು ಬಿಗಿಯಾಗಿ ಕಟ್ಟಲಾಗಿತ್ತು. ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ಗೋಣಿಚೀಲದಲ್ಲಿ ಚಲನೆಯನ್ನು ಗಮನಿಸಿ ನಾಯಿಯ ಜೀವವನ್ನು ಉಳಿಸಿದ್ದಾನೆ. ಪಶ್ಚಿಮ ಬಂಗಾಳದ ಕೋಲ್ಕತಾದ ಬರಾಸತ್ ಜಂಕ್ಷನ್‍ನಲ್ಲಿ ಅಧಿಕಾರಿಗಳು ಬೋಗಿಗೆ ಪ್ರವೇಶಿಸಿ ನಾಯಿಯನ್ನು ರಕ್ಷಿಸಿದ್ದಾರೆ. ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
ನಾಯಿಯನ್ನು ಗೋಣಿಚೀಲದಲ್ಲಿ ತುಂಬಿಸಿ ರೈಲ್ವೆ ಬೋಗಿಯ ಮೇಲೆ ಎಸೆದ ಅಪರಾಧಿ ಯಾರೆಂಬುದು ತಿಳಿದುಬಂದಿಲ್ಲ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಈ ಕೃತ್ಯವನ್ನು ಮಾಡಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನೆಟ್ಟಿಗರು ಒತ್ತಾಯಿಸಿದ್ದಾರೆ. "ಇದರ ಮರಿಗಳನ್ನು ಕೊಂದಿರಬಹುದು. ಈ ಬಗ್ಗೆ ತನಿಖೆಯಾಗಬೇಕು" ಎಂದು ನೆಟ್ಟಿಗರೊಬ್ಬರು ಪೆಟಾ ಇಂಡಿಯಾವನ್ನು ಟ್ಯಾಗ್ ಮಾಡಿ ಕಾಮೆಂಟ್ ಮಾಡಿದ್ದಾರೆ. ನಾಯಿಯನ್ನು ಗೋಣಿಚೀಲದಿಂದ ಹೊರತೆಗೆಯಲು ಸಹಾಯ ಮಾಡಿದ ವ್ಯಕ್ತಿಯನ್ನು ದೇವರು ಕಾಪಾಡಲಿ ಎಂದು ಮತ್ತೊಬ್ಬರು ತಿಳಿಸಿದ್ದಾರೆ. ಪೊಲೀಸರನ್ನು ಎಚ್ಚರಿಸಿದ್ದಕ್ಕಾಗಿ ಮತ್ತು ಸಮಯಕ್ಕೆ ಸರಿಯಾಗಿ ಪ್ರಾಣಿಯನ್ನು ಗೋಣಿಚೀಲದಿಂದ ರಕ್ಷಿಸಿದ್ದಕ್ಕಾಗಿ ನೆಟ್ಟಿಗರು ಪ್ರಯಾಣಿಕನನ್ನು ಹೊಗಳಿದ್ದಾರೆ
ಈ ಸುದ್ದಿಯನ್ನೂ ಓದಿ:Viral Video: ಶ್ವಾನವನ್ನು ಮಾರ್ಕೆಟ್‌ನಲ್ಲಿ ಒಂಟಿಯಾಗಿ ಬಿಟ್ಟು ಹೋದ ಹೃದಯಹೀನ ಮಾಲೀಕ ; ಮುಂದೇನಾಯ್ತು ವಿಡಿಯೊ ನೋಡಿ
ತಾನೇ ಸಾಕಿದ ನಾಯಿಯನ್ನು ಮಾಲೀಕನೊಬ್ಬ ದೆಹಲಿಯ ಮಾರ್ಕೆಟ್‌ನಲ್ಲಿ ಬಿಟ್ಟು ಹೋದ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಮಾಲೀಕ ತನ್ನನ್ನು ಕರೆದುಕೊಂಡು ಹೋಗಲು ಬರಬಹುದು ಎಂದು ನಾಯಿ ಕಾಯುತ್ತ ಇರುವ ದೃಶ್ಯದ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ನಾಯಿ ಮಾಲೀಕನಿಗಾಗಿ ಇನ್ನೊಂದು ಸ್ಕೂಟರ್ ಹತ್ತಿ 8 ಗಂಟೆಗಳ ಕಾಲ ಕಾದಿದೆ. ಕೊನೆಗೆ ಒಂಟಿಯಾಗಿದ್ದ ನಾಯಿಯನ್ನು ಪ್ರಾಣಿಗಳ ಆಶ್ರಯ ಮನೆಗೆ ಕಳುಹಿಸಲಾಯಿತು.
ಮಾಲೀಕ ಜರ್ಮನ್ ಶಫರ್ಡ್ ಅನ್ನು ಸ್ಕೂಟರ್‌ನಲ್ಲಿ ಮಾರುಕಟ್ಟೆಗೆ ಕರೆದುಕೊಂಡು ಬಂದು ನಂತರ ಅದನ್ನು ಅಲ್ಲೇ ಬಿಟ್ಟು ಹೊರಟು ಹೋಗಿದ್ದಾನೆ. ಭರವಸೆ ಮತ್ತು ಹತಾಶೆಯಿಂದ ನಾಯಿ ತನ್ನ ಮಾಲೀಕ ಮರಳಿ ಬರುತ್ತಾನೆ ಎಂದು ಹಾತೊರೆಯುತ್ತಾ ಮತ್ತೊಂದು ಸ್ಕೂಟರ್ ಹತ್ತಿ 8 ಗಂಟೆಗಳ ಕಾಲ ಅಲ್ಲಿ ಕಾದಿತ್ತು. ದಾರಿಹೋಕರು ನಾಯಿಯ ದುಃಖವನ್ನು ಕಂಡು ಸಹಾಯಕ್ಕೆ ಮುಂದಾಗಿದ್ದಾರೆ. ಈ ನಡುವೆ ಪ್ರಾಣಿ ಪ್ರಿಯರು ನಾಯಿಯನ್ನು ರಕ್ಷಿಸುವ ಪ್ರಯತ್ನಗಳನ್ನು ಮಾಡಿದ್ದಾರೆ. ಸ್ವಯಂಸೇವಕರಲ್ಲಿ ಒಬ್ಬರು ನಾಯಿಯನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದರು. ಇನ್ನೊಬ್ಬರು ನಾಯಿಯನ್ನು ತನ್ನ ಮನೆಯಲ್ಲಿ ಇರಿಸಿಕೊಳ್ಳಲು ಮುಂದಾದರು. ಕೊನೆಗೆ ನಾಯಿಯನ್ನು ನೋಯ್ಡಾದ ವಿದಿತ್ ಶರ್ಮಾ ನಿರ್ವಹಿಸುತ್ತಿರುವ ಪ್ರಾಣಿಗಳ ಆಶ್ರಯ ಮನೆಗೆ ಕಳುಹಿಸಲಾಯಿತು.