China Population: ಸತತ ಮೂರನೇ ವರ್ಷವೂ ಚೀನಾ ಜನಸಂಖ್ಯೆ ಕುಸಿತ: ಕಾರಣವೇನು?
China Population: ವರ್ಷದ ಅಂತ್ಯದ ವೇಳೆಗೆ ಜನಸಂಖ್ಯೆಯು 1.408 ಶತಕೋಟಿಯಷ್ಟಿದೆ ಎಂದು ಬೀಜಿಂಗ್‌ನ ರಾಷ್ಟ್ರೀಯ ಅಂಕಿ ಅಂಶಗಳ ಬ್ಯೂರೋ ಹೇಳಿದೆ. ರಾಷ್ಟ್ರೀಯ ಅಂಕಿ-ಅಂಶಗಳ ಪ್ರಕಾರ, 2023ರಲ್ಲಿ140.9 ಕೋಟಿಯಷ್ಟಿದ್ದ ಜನಸಂಖ್ಯೆಯಲ್ಲಿ 13 ಲಕ್ಷದಷ್ಟು ಇಳಿಕೆಯಾಗಿದೆ. 2024ರ ವೇಳೆಗೆ ಚೀನಾ ಜನಸಂಖ್ಯೆ 140.8 ಕೋಟಿ ಆಂತರದಲ್ಲಿದ್ದು, ಅಂಕಿ-ಅಂಶಗಳ ಪ್ರಕಾರ ಚೀನಾದಲ್ಲಿ ಮಕ್ಕಳ ಜನನದ ಸಂಖ್ಯೆ ತೀವ್ರ ಇಳಿಮುಖವಾಗಿದೆ.
Source : NDTV
ಬೀಜಿಂಗ್, ಜ. 17, 2025: ವಿಶ್ವದಲ್ಲಿ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಚೀನಾದಲ್ಲಿ (China Population) ಇದೀಗ ಜನಸಂಖ್ಯೆ ತೀವ್ರಗತಿಯಲ್ಲಿ ಕಡಿಮೆಯಾಗುತ್ತಿದೆ. ಇದೀಗ ಸತತ ಮೂರನೇ ವರ್ಷವೂ ಜನಸಂಖ್ಯೆ ಕುಸಿತ ಮುಂದುವರಿದಿದೆ. ಚೀನಾ ದೇಶದ ಜನಸಂಖ್ಯೆ ಕಡಿಮೆ ಯಾಗುತ್ತಿರುವ ಬಗ್ಗೆ ತಜ್ಞರು ಆತಂಕ ವ್ಯಕ್ತಪಡಿಸಿದ್ದು, ಚೀನಾವು ದೊಡ್ಡ ಪ್ರಮಾಣದ ಜನಸಂಖ್ಯಾ ಬಿಕ್ಕಟ್ಟು ಎದುರಿಸುತ್ತಿದೆ.
ಕಳೆದ ವರ್ಷದ ಅಂತ್ಯದ ವೇಳೆಗೆ ಜನಸಂಖ್ಯೆಯು 1.408 ಶತಕೋಟಿಯಷ್ಟಿತ್ತು ಎಂದು ಬೀಜಿಂಗ್‌ನ ರಾಷ್ಟ್ರೀಯ ಅಂಕಿ-ಅಂಶಗಳ ಬ್ಯೂರೋ ಹೇಳಿದೆ. ರಾಷ್ಟ್ರೀಯ ಅಂಕಿ-ಅಂಶಗಳ ಪ್ರಕಾರ 2023ರಲ್ಲಿ 140.9 ಕೋಟಿಯಷ್ಟಿದ್ದ ಜನಸಂಖ್ಯೆಯಲ್ಲಿ 13 ಲಕ್ಷದಷ್ಟು ಇಳಿಕೆಯಾಗಿದೆ. 2024ರ ವೇಳೆಗೆ ಚೀನಾ ಜನಸಂಖ್ಯೆ 140.8 ಕೋಟಿ ಆಂತರದಲ್ಲಿದ್ದು, ಮಕ್ಕಳ ಜನನದ ಸಂಖ್ಯೆ ತೀವ್ರ ಇಳಿಮುಖವಾಗಿದೆ ಎಂದು ವರದಿಯಾಗಿದೆ.
1980ರಿಂದ 2015ರವರೆಗೆ ಜಾರಿಯಲ್ಲಿದ್ದ 'ಒಂದೇ ಮಗು ನೀತಿ' ಪರಿಣಾಮವಾಗಿ ಚೀನಾದಲ್ಲಿ ದಶಕಗಳಿಂದಲೂ ಜನನ ದರವು ಕುಸಿತದ ಹಾದಿ ಹಿಡಿದಿದೆ.ಈ ನಿಟ್ಟಿನಲ್ಲಿ ದುಡಿಯುವ ವರ್ಗದ ಸಂಖ್ಯೆ ಕ್ಷೀಣಿಸಿದ ಕಾರಣ ಈ ನಿಯಮವನ್ನು ಸಡಿಲಿಸಿದ ಚೀನಾ ಸರ್ಕಾರ 2021ರಲ್ಲಿ ಮೂರು ಮಕ್ಕಳನ್ನು ಹೊಂದಲು ಅವಕಾಶ ನೀಡಿತ್ತು.
ಚೀನಾದಲ್ಲಿ ಜನಸಂಖ್ಯೆ 2016ರಿಂದ ಕುಸಿತ ಕಾಣುತ್ತಿದೆ. ಮಕ್ಕಳನ್ನು ಬೆಳೆಸುವುದು ವೆಚ್ಚದಾಯಕವಾಗಿದ್ದು, ಜನರ ಜೀವನ ಶೈಲಿ ಬದಲಾಗುತ್ತಿದೆ. ಹೆಚ್ಚುತ್ತಿರುವ ಜೀವನ ವೆಚ್ಚ ಪರಿಣಾಮ ಜನನ ದರ ಕುಸಿಯುತ್ತಿವೆ. ಜೀವನೋಪಾಯದ ವೆಚ್ಚಗಳೂ ಏರಿಕೆಯಾಗುತ್ತಿರುವುದರಿಂದ, ಮಕ್ಕಳನ್ನು ಮಾಡಿಕೊಳ್ಳುವುದಕ್ಕೆ ತಡೆಯೊಡ್ಡುತ್ತಿದ್ದಾರೆ. ಜನನ ದರ ಕುಸಿಯಲು ಇವು ಪ್ರಮುಖ ಕಾರಣಗಳಾಗಿವೆ. ಜತೆಗೆ ಹೆಚ್ಚಿನ ಸಂಖ್ಯೆಯ ಮಹಿಳೆಯರು ಉದ್ಯೋಗ ಅರಸಿ ಹೋಗುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ: Viral Video: ಪ್ರಜ್ಞೆ ತಪ್ಪಿದ ಮರಿಯನ್ನು ಬಾಯಲ್ಲೇ ಹೊತ್ತುಕೊಂಡು ಕ್ಲಿನಿಕ್‍ಗೆ ಬಂದ ತಾಯಿ ಶ್ವಾನ; ಅದ್ಭುತ ವಿಡಿಯೊ ನೋಡಿ
ಒಂದು ಕಾಲದಲ್ಲಿ ಜನಸಂಖ್ಯೆಯಲ್ಲಿ ವಿಶ್ವದಲ್ಲೇ ನಂಬರ್ ಒನ್ ಆಗಿದ್ದ ಚೀನಾ ಅದನ್ನು ತಡೆಯಲು ಅತ್ಯಂತ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತಂದಿತ್ತು. ಇದೀಗ ಚೀನಾ ತನ್ನ ಪ್ರಜೆಗಳಿಗೆ ಹೆಚ್ಚು ಮಕ್ಕಳನ್ನು ಹೆರುವಂತೆ ಪ್ರೋತ್ಸಾಹಿಸುತ್ತಿದೆ. ಈ ಜನಸಂಖ್ಯೆಯ ತೀವ್ರ ಕುಸಿತವು ಆರ್ಥಿಕ ಕುಸಿತಕ್ಕೆ ಕೂಡ ಕಾರಣವಾಗಬಹುದು.