ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG Test Series: ಇಂಗ್ಲೆಂಡ್‌ ಸರಣಿಗೂ ಮುನ್ನ ಸಿದ್ಧಿವಿನಾಯಕನ ದರ್ಶನ ಪಡೆದ ಕೋಚ್‌ ಗಂಭೀರ್‌

ಭಾರತದ ಇಂಗ್ಲೆಂಡ್ ಪ್ರವಾಸವು ಜೂನ್ 20 ರಂದು ಲೀಡ್ಸ್‌ನ ಹೆಡಿಂಗ್ಲಿಯಲ್ಲಿ ಆರಂಭಿಕ ಟೆಸ್ಟ್‌ನೊಂದಿಗೆ ಆರಂಭವಾಗಲಿದೆ. ಎಡ್ಜ್‌ಬಾಸ್ಟನ್, ಲಾರ್ಡ್ಸ್, ಓಲ್ಡ್ ಟ್ರಾಫರ್ಡ್ ಮತ್ತು ಕೆನ್ನಿಂಗ್ಟನ್ ಓವಲ್ ಉಳಿದ ನಾಲ್ಕು ಟೆಸ್ಟ್‌ಗಳನ್ನು ಆಯೋಜಿಸಲಿವೆ. ಉಭಯ ತಂಡಗಳಿಗೂ ಇದು ಹೊಸ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಚಕ್ರದ ಆರಂಭಿಕ ಸರಣಿಯಾಗಿದೆ.

ಇಂಗ್ಲೆಂಡ್‌ ಸರಣಿಗೂ ಮುನ್ನ ಸಿದ್ಧಿವಿನಾಯಕನ ದರ್ಶನ ಪಡೆದ ಕೋಚ್‌ ಗಂಭೀರ್‌

Profile Abhilash BC May 16, 2025 12:53 PM

ಮುಂಬಯಿ: ಮುಂಬರುವ ಇಂಗ್ಲೆಂಡ್(IND vs ENG Test Series) ಪ್ರವಾಸಕ್ಕೆ ಆಟಗಾರರ ಆಯ್ಕೆ ಸಭೆಗೂ ಮುನ್ನ ಭಾರತ ತಂಡದ ಪ್ರಧಾನ ಕೋಚ್ ಗೌತಮ್ ಗಂಭೀರ್(Gautam Gambhir) ಅವರು ಮುಂಬೈನ ಸಿದ್ಧಿವಿನಾಯಕ ದೇವಸ್ಥಾನಕ್ಕೆ(Siddhivinayak temple) ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಗಂಭೀರ್ ತಮ್ಮ ಪತ್ನಿಯೊಂದಿಗೆ ಮುಂಬೈನ ಐತಿಹಾಸಿಕ ದೇವಸ್ಥಾನಕ್ಕೆ ಭೇಟಿ ನೀಡಿ ಗಣೇಶನಿಗೆ ಪ್ರಾರ್ಥನೆ ಸಲ್ಲಿಸಿದ ಫೋಟೊ ಮತ್ತು ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಅನುಭವಿಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಿವೃತ್ತರಾಗಿರುವುದರಿಂದ, ಯುವ ಭಾರತೀಯ ತಂಡದೊಂದಿಗೆ ಸವಾಲು ಎದುರಿಸಲು ಗಂಭೀರ್ ಸಜ್ಜಾಗಿದ್ದಾರೆ. ಇಂಗ್ಲೆಂಡ್ ಪ್ರವಾಸದಿಂದ ಪ್ರಾರಂಭವಾಗುವ ಟೆಸ್ಟ್‌ಗಳಲ್ಲಿ ಭಾರತೀಯ ಕ್ರಿಕೆಟ್ ತಂಡದ ಭವಿಷ್ಯದ ಬಗ್ಗೆ ನಿರ್ಧರಿಸಲು ಗಂಭೀರ್ ಶನಿವಾರ ಬಿಸಿಸಿಐ ಆಯ್ಕೆದಾರರೊಂದಿಗೆ ಮಹತ್ವದ ಸಭೆ ನಡೆಸುವ ನಿರೀಕ್ಷೆಯಿದೆ. ವರದಿಗಳ ಪ್ರಕಾರ, ಟೆಸ್ಟ್‌ಗಳಲ್ಲಿ ಹೊಸ ಭಾರತೀಯ ನಾಯಕ ಮತ್ತು ಐದು ಪಂದ್ಯಗಳ ಸರಣಿಗೆ ತಂಡವನ್ನು ನಿರ್ಧರಿಸಲು ಗಂಭೀರ್ ಮತ್ತು ಆಯ್ಕೆದಾರರು ಸಭೆ ಸೇರಲಿದ್ದಾರೆ.

ಭಾರತದ ಇಂಗ್ಲೆಂಡ್ ಪ್ರವಾಸವು ಜೂನ್ 20 ರಂದು ಲೀಡ್ಸ್‌ನ ಹೆಡಿಂಗ್ಲಿಯಲ್ಲಿ ಆರಂಭಿಕ ಟೆಸ್ಟ್‌ನೊಂದಿಗೆ ಆರಂಭವಾಗಲಿದೆ. ಎಡ್ಜ್‌ಬಾಸ್ಟನ್, ಲಾರ್ಡ್ಸ್, ಓಲ್ಡ್ ಟ್ರಾಫರ್ಡ್ ಮತ್ತು ಕೆನ್ನಿಂಗ್ಟನ್ ಓವಲ್ ಉಳಿದ ನಾಲ್ಕು ಟೆಸ್ಟ್‌ಗಳನ್ನು ಆಯೋಜಿಸಲಿವೆ.



ಸರಣಿ ಆರಂಭಕ್ಕೂ ಮುನ್ನ ಇಂಗ್ಲೆಂಡ್‌ನ‌ಲ್ಲಿ ಭಾರತ ಎ ತಂಡ 3 ಚತುರ್ದಿನ ಪಂದ್ಯಗಳಲ್ಲಿ ಆಡಲಿದೆ. ಈ ತಂಡದೊಂದಿಗೆ ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಗೌತಮ್‌ ಗಂಭೀರ್‌ ಕೂಡ ತೆರಳಲಿದ್ದಾರೆ ಎನ್ನಲಾಗಿದೆ. ಮುಂಚಿತವಾಗಿಯೇ ಇಂಗ್ಲೆಂಡ್‌ ಪರಿಸ್ಥಿತಿಯನ್ನು ಅಧ್ಯಯನ ಮಾಡುವುದು, ಮೀಸಲು ಕ್ರಿಕೆಟಿಗರ ಪ್ರತಿಭೆಗಳನ್ನು ತಿಳಿದುಕೊಳ್ಳುವುದು ಗಂಭೀರ್‌ ಉದ್ದೇಶ ಎನ್ನಲಾಗಿದೆ.