ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನ ಗಂಗರೆಕಾಲುವೆ ನಾರಾಯಣಸ್ವಾಮಿಗೆ ನೀಡಿ ; ಕುರುಬ ಸಮಾಜದ ಮುಖಂಡರ ಮನವಿ

ಗಂಗರೆಕಾಲುವೆ ನಾರಾಯಣಸ್ವಾಮಿಯವರು ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾಗಿ ಸಮಾಜ ಸೇವಕರಾಗಿ, ಕ್ಷೇತ್ರದಲ್ಲಿ ತಮ್ಮದೇ ಆದ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ. ತಮಗೆ ಅಧಿಕಾರವಿರಲಿ, ಇಲ್ಲದಿರಲಿ ಪಕ್ಷ ಸಂಘಟನೆಗೆ ಸದಾ ಮುಂದಿರುತ್ತಾರೆ. ಉಚಿತ ಸಾಮೂಹಿಕ ವಿವಾಹಗಳು, ಮಹಿಳೆಯರಿಗೆ  ದೇವಾಲಯ ದರ್ಶನ, ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮ, ಹಸಿದವರಿಗೆ ಉಚಿತ ಅನ್ನದಾನ, ಹೀಗೆ ನಾನಾ ಕಾರ್ಯ ಕ್ರಮಗಳ ಮೂಲಕ ಕ್ಷೇತ್ರದಲ್ಲಿ ಜನಜನಿತರಾಗಿದ್ದಾರೆ.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನ ಗಂಗರೆಕಾಲುವೆ ನಾರಾಯಣಸ್ವಾಮಿಗೆ ನೀಡಿ

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನ ಗಂಗರೆಕಾಲುವೆ ನಾರಾಯಣಸ್ವಾಮಿಗೆ ನೀಡಬೇಕು ಎಂದು ಕುರುಬ ಸಮಾಜದ ಮುಖಂಡರು ಕಾಂಗ್ರೆಸ್ ಪಕ್ಷದ ಮುಖಂಡರಲ್ಲಿ ಮನವಿ ಮಾಡಿದರು.

Profile Ashok Nayak Jul 13, 2025 9:48 PM

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನವನ್ನು ಈ ಬಾರಿ ಅಹಿಂದ ಸಮುದಾಯಕ್ಕೆ ನೀಡುವ ಮೂಲಕ ಸಾಮಾಜಿಕ ನ್ಯಾಯಪಾಲನೆ ಮಾಡಬೇಕು.ಅದರಲ್ಲಿಯೂ ಕೂಡ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಗಂಗರೆಕಾಲುವೆ ನಾರಾಯಣಸ್ವಾಮಿ ಅವರಿಗೆ ಜವಾಬ್ದಾರಿ ನೀಡಿದ್ದೇ ಆದಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಸದೃಢವಾಗಿ ಬೆಳೆಯಲಿದೆ ಎಂದು  ಕುರುಬ ಸಮುದಾಯದ ಮುಖಂಡರು ಪಕ್ಷದ ವರಿಷ್ಠರನ್ನು ಒತ್ತಾಯಿಸಿದರು.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಭಾನುವಾರ ಕುರುಬರ ಸಮಾಜದ ಮುಖಂಡರಾದ ಮಾಜಿ ನಗರಸಭಾ ಸದಸ್ಯ ನರೇಂದ್ರಬಾಬು,ಡೈರಿ ಗೋಪಿ,ಕಾಳೇಗೌಡ ಹಾಗೂ ಆಕಲಹಳ್ಳಿ ಶಿವಕುಮಾರ್ ನೇತೃತ್ವದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮುಖಂಡರು ಮಾತನಾಡಿದರು.

ಮುಖಂಡ ಕಾಳೇಗೌಡ ಮಾತನಾಡಿ ಕಾಂಗ್ರೆಸ್ ಪಕ್ಷವು ಸಾಮಾಜಿಕ ನ್ಯಾಯ ಪರಿಪಾಲನೆ ಮಾಡುವ ಪಕ್ಷವಾಗಿದೆ. ಚಿಕ್ಕಬಳ್ಳಾಪುರ ಜಿಲ್ಲಾ ಕಾಂಗ್ರೆಸ್ ಇತಿಹಾಸದಲ್ಲಿ ಈವರೆಗೆ ಒ.ಬಿ.ಸಿ ಸಮುದಾಯಕ್ಕೆ ಜಿಲ್ಲಾಧ್ಯಕ್ಷ ಸ್ಥಾನ ನೀಡಿಲ್ಲ. ಈ ಬಾರಿ ಅಂತಹ ಸದಾವಕಾಶ ಬಂದಿದ್ದು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಮನಸ್ಸು ಮಾಡಿ ಪಕ್ಷದ ನಿಷ್ಠಾವಂತ ಮುಖಂಡರಾದ ಗಂಗರೆಕಾಲುವೆ ನಾರಾಯಣಸ್ವಾಮಿ ಅವರಿಗೆ ಒಂದು ಅವಕಾಶವನ್ನು ನೀಡಬೇಕೆಂದು ಮನವಿ ಮಾಡಿದರು.

ಗಂಗರೆಕಾಲುವೆ ನಾರಾಯಣಸ್ವಾಮಿಯವರು ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾಗಿ ಸಮಾಜ ಸೇವಕರಾಗಿ, ಕ್ಷೇತ್ರದಲ್ಲಿ ತಮ್ಮದೇ ಆದ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ. ತಮಗೆ ಅಧಿಕಾರವಿರಲಿ, ಇಲ್ಲದಿರಲಿ ಪಕ್ಷ ಸಂಘಟನೆಗೆ ಸದಾ ಮುಂದಿರುತ್ತಾರೆ. ಉಚಿತ ಸಾಮೂಹಿಕ ವಿವಾಹಗಳು, ಮಹಿಳೆಯರಿಗೆ  ದೇವಾಲಯ ದರ್ಶನ, ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮ, ಹಸಿದವರಿಗೆ ಉಚಿತ ಅನ್ನದಾನ, ಹೀಗೆ ನಾನಾ ಕಾರ್ಯ ಕ್ರಮಗಳ ಮೂಲಕ ಕ್ಷೇತ್ರದಲ್ಲಿ ಜನಜನಿತರಾಗಿದ್ದಾರೆ. ವಿಧಾನ ಸಭಾ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್‌ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಇಂತಹ ಸಂಘಟನಾ ಚತುರರಿಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡಿದ್ದೇ ಆದಲ್ಲಿ ಪಕ್ಷದ ಬಲವರ್ಧನೆಗೆ ಅಡಿಪಾಯ ಹಾಕಿದಂತಾಗುತ್ತದೆ. ಕೆ.ಪಿ.ಸಿ.ಸಿ ಅಧ್ಯಕ್ಷರು ಇವನ್ನೆಲ್ಲಾ ಮನಗಂಡು ನಮ್ಮ ನಾಯಕರಾದ ಗಂಗರೆಕಾಲುವೆ ನಾರಾಯಣ ಸ್ವಾಮಿಯವರಿಗೆ ಈ ಬಾರಿ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.

ಮುಖಂಡರಾದ ಆಕಲಹಳ್ಳಿ ಶಿವಕುಮಾರ್ ಮಾತನಾಡಿ ಸರಳ ಸಜ್ಜನಿಕೆಯ ಗಂಗರೆಕಾಲುವೆ ನಾರಾಯಣಸ್ವಾಮಿ ಅವರಿಗೆ ಎಲ್ಲರನ್ನು ಒಗ್ಗೂಡಿಸಿ ಮುನ್ನಡೆಸುವ ಶಕ್ತಿಯಿದೆ. ಅವರು ಹಲವಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಯಾವುದೇ ಅಧಿಕಾರಕ್ಕೆ ಆಸೆ ಪಡದೆ ತಮ್ಮದೇ ಆದ ರೀತಿಯಲ್ಲಿ ಕಾಂಗ್ರೆಸ್ ಪಕ್ಷದ ಕಟ್ಟಾಳುವಾಗಿ ದುಡಿಯುತ್ತಿರುವ ಗಂಗರೆಕಾಲುವೆ ನಾರಾಯಣಸ್ವಾಮಿ ಅವರು ಪ್ರತಿ ಚುನಾವಣೆಯಲ್ಲೂ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಿದ್ದಾರೆ. ಹಾಗಾಗಿ ನಾರಾಯಣಸ್ವಾಮಿ ಅವರಿಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನ ನೀಡಬೇಕೆಂದು ಸಿ.ಎಂ ಸಿದ್ದರಾಮಯ್ಯ,ಡಿಸಿಎಂ ಡಿ ಕೆ ಶಿವಕುಮಾರ್,ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಶಾಸಕ ಪ್ರದೀಪ್ ಈಶ್ವರ್ ಅವರಲ್ಲಿ ಮನವಿ ಮಾಡಿದರು.

ನಗರಸಭೆ ಸದಸ್ಯ ಚಂದ್ರಶೇಖರ ಮಾಜಿ ಸದಸ್ಯ ನರೇಂದ್ರ ಬಾಬು ಕೂಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪಿದರು ಪಕ್ಷದ ಅಭ್ಯರ್ಥಿಯ ಗೆಲುವಿಗೆ ಹಗಲಿರುಳು ಶ್ರಮಿಸಿದ್ದಾರೆ.ಗಂಗರೆಕಾಲುವೆ ನಾರಾಯಣಸ್ವಾಮಿ ಅವರ ಸಾಮಾಜಿಕ ಸೇವೆಗಳು ಜಿಲ್ಲೆಯಲ್ಲಿ ಜನಜನಿತವಾಗಿವೆ.ಇವರಿಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡಿದರೆ ಜಿಲ್ಲೆಯಲ್ಲಿ ಪಕ್ಷವನ್ನು ಸಧೃಡವಾಗಿ ಕಟ್ಟಲಿದ್ದಾರೆ. ಪಕ್ಷದ ವರಿಷ್ಠರು ನಮ್ಮ ಸಮುದಾಯಕ್ಕೆ ಸೇರಿದ ಗಂಗರೆಕಾಲುವೆ ನಾರಾಯಣಸ್ವಾಮಿ ಅವರಿಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಕೆ ಆರ್ ವೇಣುಗೋಪಾಲ್(ಡೈರಿ ಗೋಪಿ),ಮೋಹನ್,ಮುನಿರಾಜು,ವೆಂಕಟರಮಣಪ್ಪ,ಮೇಸ್ತ್ರಿ ನಾರಾಯಣಸ್ವಾಮಿ,ರಮೇಶ್ ಬಾಬು,ಕಾಚೂರು,ಜಯರಾಂ,ಇತರರು ಉಪಸ್ಥಿತರಿದ್ದರು.