ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Radhika Yadav Murder Case: "ನನ್ನನ್ನು ಗಲ್ಲಿಗೇರಿಸಿ"; ಮಗಳನ್ನು ಕೊಂದು ಪಶ್ಚಾತಾಪ ಪಡುತ್ತಿರುವ ರಾಧಿಕಾ ಯಾದವ್ ತಂದೆ

ಮಗಳು ರಾಧಿಕಾ ಯಾದವ್ (Radhika Yadav Murder Case) ಅವರನ್ನು ಕೊಂದ ಬಳಿಕ ಆಕೆಯ ತಂದೆ ದೀಪಕ್ ಯಾದವ್ ಅವರಿಗೆ ಆಘಾತವಾಗಿದೆ ಮತ್ತು ಪಶ್ಚಾತಾಪದಲ್ಲಿದ್ದಾರೆ. ಯಾವ ಪ್ರಶ್ನೆಗೂ ಸರಿಯಾಗಿ ಉತ್ತರಿಸೋದಿಲ್ಲ. ಜನರು ಮಗಳ ಸಂಪಾದನೆಯಲ್ಲಿ ನಾನು ಬದುಕುತ್ತಿದ್ದೇನೆ ಎಂದು ಹೇಳಿದ್ದರಿಂದ ನನಗೆ ಅವಮಾನವಾಗಿದೆ. ಹೀಗಾಗಿ ಮಗಳನ್ನು ಹತ್ಯೆ ಮಾಡಿರುವುದಾಗಿ ದೀಪಕ್ ಯಾದವ್ ತನಿಖೆ ವೇಳೆ ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

ನನ್ನನ್ನು ಗಲ್ಲಿಗೇರಿಸಿ ಎಂದ ರಾಧಿಕಾ ಯಾದವ್ ತಂದೆ!

ಗುರುಗ್ರಾಮ: ಮಗಳನ್ನು ಕೊಂದಿರುವ (Radhika Yadav Murder Case) ನನ್ನನ್ನು ಗಲ್ಲಿಗೇರಿಸಿ ಎಂದು ಟೆನಿಸ್ ಆಟಗಾರ್ತಿ ರಾಧಿಕಾ ಯಾದವ್ (Tennis player Radhika Yadav) ಅವರನ್ನು ಗುಂಡಿಕ್ಕಿ ಕೊಂದಿರುವ ಅವರ ತಂದೆ ದೀಪಕ್ ಯಾದವ್ (Deepak yadav) ಹೇಳಿದ್ದಾರೆ. ಮಗಳನ್ನು ಕೊಂದ ಬಳಿಕ ಅವರಿಗೆ ಆಘಾತವಾಗಿದೆ ಮತ್ತು ಪಶ್ಚಾತಾಪದಲ್ಲಿದ್ದಾರೆ. ಯಾವ ಪ್ರಶ್ನೆಗೂ ಸರಿಯಾಗಿ ಉತ್ತರಿಸೋದಿಲ್ಲ. ಜನರು ಮಗಳ ಸಂಪಾದನೆಯಲ್ಲಿ ನಾನು ಬದುಕುತ್ತಿದ್ದೇನೆ ಎಂದು ಹೇಳಿದ್ದರಿಂದ ನನಗೆ ಅವಮಾನವಾಗಿದೆ. ಹೀಗಾಗಿ ಮಗಳನ್ನು ಹತ್ಯೆ ಮಾಡಿರುವುದಾಗಿ ದೀಪಕ್ ಯಾದವ್ ತನಿಖೆ ವೇಳೆ ಪೊಲೀಸರಿಗೆ ತಿಳಿಸಿದ್ದಾರೆ.

ರಾಷ್ಟ್ರ ಮಟ್ಟದ ಟೆನಿಸ್ ಆಟಗಾರ್ತಿ ರಾಧಿಕಾ ಯಾದವ್ ಅವರನ್ನು ಜುಲೈ 10 ರಂದು ಗುರುಗ್ರಾಮದಲ್ಲಿರುವ ಅವರ ಮನೆಯಲ್ಲೇ ತಂದೆ ದೀಪಕ್ ಯಾದವ್ ಗುಂಡಿಕ್ಕಿ ಹತ್ಯೆ ಮಾಡಿದ್ದರು. ಟೆನಿಸ್ ಅಕಾಡೆಮಿ ನಡೆಸುತ್ತಿದ್ದ ರಾಧಿಕಾ ತಮ್ಮ ಮೂರು ಅಂತಸ್ತಿನ ಮನೆಯ ಅಡುಗೆ ಕೋಣೆಯಲ್ಲಿ ಕೆಲಸ ಮಾಡುತ್ತಿದ್ದಾಗ ಹಿಂದಿನಿಂದ ಬಂದ ತಂದೆ ಮೂರು ಬಾರಿ ಅವರ ಮೇಲೆ ಗುಂಡು ಹಾರಿಸಿದ್ದರು. ಬಳಿಕ ಕೂಡಲೇ ಪೊಲೀಸರು ಅವರನ್ನು ಬಂಧಿಸಿದ್ದರು.

ಸಂಬಂಧಿಕರನ್ನು ಜೈಲಿನಲ್ಲಿ ಭೇಟಿಯಾದ ಬಳಿಕ ದೀಪಕ್ ಯಾದವ್ ದಂಗಾಗಿದ್ದಾರೆ. ತಮ್ಮ ಮಗಳನ್ನು ಕೊಂದಿದ್ದಕ್ಕಾಗಿ ತನಗೆ ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಕುರಿತು ಮಾತನಾಡಿರುವ ರಾಧಿಕಾ ಅವರ ಚಿಕ್ಕಪ್ಪ ವಿಜಯ್ ಯಾದವ್, ತನ್ನ ಮಗಳನ್ನೇ ದೀಪಕ್ ಹತ್ಯೆ ಮಾಡಿದ್ದಾನೆ. ಪೊಲೀಸ್ ಠಾಣೆಯಲ್ಲಿ ನೇಣು ಹಾಕುವ ನಿಯಮವಿದ್ದರೆ ಅವನನ್ನು ಕೂಡಲೇ ಗಲ್ಲಿಗೇರಿಸಿ ಎಂದು ಹೇಳಿದ್ದಾರೆ.



ವಿಚಾರಣೆ ವೇಳೆ ದೀಪಕ್ ಸರಿಯಾಗಿ ಮಾತನಾಡುತ್ತಿಲ್ಲ. ಕೇಳುವ ಪ್ರಶ್ನೆಗಳಿಗೆ ಕಡಿಮೆ ಉತ್ತರವನ್ನಷ್ಟೇ ನೀಡುತ್ತಿದ್ದಾರೆ. ಸೀಮಿತ ಮಾಹಿತಿಯನ್ನು ಮಾತ್ರ ಹಂಚಿಕೊಂಡಿದ್ದಾರೆ. ಬಹುಶಃ ಅವರು ಆಘಾತಕ್ಕೊಳಗಾಗಿದ್ದಾರೆ ಅಥವಾ ಪಶ್ಚಾತಾಪದಲ್ಲಿದ್ದಾರೆ. ಜನರು ತನ್ನ ಮಗಳ ಸಂಪಾದನೆಯಲ್ಲಿ ಬದುಕುತ್ತಿದ್ದಾರೆ ಎಂದು ಅನುಮಾನ ಮಾಡಿದ್ದರು. ಇದರಿಂದ ನನಗೆ ಬಹಳ ಮುಜುಗರವಾಗಿತ್ತು ಎಂದು ದೀಪಕ್ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮಗಳ ಸಂಪಾದನೆಯಿಂದ ಬದುಕುತ್ತಿರುವುದಾಗಿ ಕೆಲವರು ಹೇಳಿದರು. ಇದರಿಂದ ನನ್ನ ಗೌರವಕ್ಕೆ ಧಕ್ಕೆಯಾಗಿದೆ. ನಾನು ಕಳೆದ 15 ದಿನಗಳಿಂದ ಖಿನ್ನತೆಗೆ ಒಳಗಾಗಿದ್ದೇನು ಎಂದು ದೀಪಕ್ ತನಿಖೆ ವೇಳೆ ಬಹಿರಂಗ ಪಡಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ರಾಧಿಕಾ ಅವರ ತಾಯಿ ಮಂಜು ಯಾದವ್‌ಗೆ ಕ್ಲೀನ್ ಚಿಟ್ ನೀಡಲಾಗಿದೆ. ಮಗಳನ್ನು ಕೊಲೆ ಮಾಡುವ ದೀಪಕ್ ಯೋಜನೆ ಬಗ್ಗೆ ಅವರಿಗೆ ತಿಳಿದಿಲ್ಲ ಹಾಗೂ ಅವರು ರಾಧಿಕಾ ಮೇಲೆ ದಾಳಿಯಾಗಿದ್ದನ್ನೂ ನೋಡಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: Viral Video: ಸ್ಮಶಾನದಲ್ಲಿ ವಿವಾಹಿತ ಮಹಿಳೆಯೊಂದಿಗೆ ಬಿಜೆಪಿ ನಾಯಕನ ರಾಸಲೀಲೆ; ಕ್ಯಾಮರಾ ಕಣ್ಣಲ್ಲಿ ಸೆರೆ

ಮೊದಲು ರಾಧಿಕಾ ಕೊಲೆಯಲ್ಲಿ ತಾಯಿಯ ಕೈವಾಡ ಇರುವ ಬಗ್ಗೆ ಶಂಕೆ ವ್ಯಕ್ತವಾಗಿತ್ತು. ಆದರೆ ಅದಕ್ಕೆ ಪೂರಕವಾಗಿ ಯಾವುದೇ ಸಾಕ್ಷಿ ಲಭ್ಯವಾಗಿಲ್ಲ. ರಾಧಿಕಾ ಕೊಲೆಯಲ್ಲಿ ದೀಪಕ್ ಒಬ್ಬನೇ ಭಾಗಿಯಾಗಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಗುರುಗ್ರಾಮ್ ಪೊಲೀಸರ ಸಾರ್ವಜನಿಕ ಸಂಪರ್ಕ ಅಧಿಕಾರಿ ಸಂದೀಪ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.