Metro In Dino: "ಮೆಟ್ರೋ ಇನ್ ಡಿನೋ" ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್: ಎರಡನೇ ವಾರದಲ್ಲೂ ಬಾಕ್ಸ್ ಆಫೀಸ್‌ನಲ್ಲಿ ಮಿಂಚಿದ ಸಿನಿಮಾ
"ಮೆಟ್ರೋ ಇನ್ ಡಿನೋ" ಚಿತ್ರವು ಬಿಡುಗಡೆ ಆಗಿ ಎರಡನೇ ವಾರಕ್ಕೆ ಕಾಲಿಟ್ಟರೂ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಸಕ್ಸಸ್ ಕಾಣುತ್ತಿದೆ.. ಚಿತ್ರ ಬಿಡುಗ ಡೆಯ ಮೊದಲ ದಿನವೇ ಬಾಕ್ಸ್ ಆಫೀಸ್ ನಲ್ಲಿ 4.05 ಕೋಟಿ ರೂ. ಗಳಿಸಿದ್ದು 9 ನೇ ದಿನಕ್ಕೆ ಸುಮಾರು ರೂ. 4.65 ಕೋಟಿ ರೂ. ಗಳಿಕೆಯೊಂದಿಗೆ ಸಕ್ಸಸ್ ಕಾಣುತ್ತಿದೆ

Metro In Dino

ಮುಂಬೈ: ಅನುರಾಗ್ ಬಸು ನಿರ್ದೇಶನದ "ಮೆಟ್ರೋ ಇನ್ ಡಿನೋ" (Metro In Dino) ಚಿತ್ರವು ಬಿಡುಗಡೆ ಆಗಿ ಎರಡನೇ ವಾರಕ್ಕೆ ಕಾಲಿಟ್ಟರೂ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಸಕ್ಸಸ್ ಕಾಣುತ್ತಿದೆ. ಚಿತ್ರ ಬಿಡುಗಡೆಯ ಮೊದಲ ದಿನವೇ ಬಾಕ್ಸ್ ಆಫೀಸ್ ನಲ್ಲಿ 4.05 ಕೋಟಿ ರೂ. ಗಳಿಸಿದ್ದು 9 ನೇ ದಿನಕ್ಕೆ ಸುಮಾರು ರೂ. 4.65 ಕೋಟಿ ರೂ. ಗಳಿಕೆಯೊಂದಿಗೆ ಸಕ್ಸಸ್ ಕಾಣುತ್ತಿದೆ. ಚಿತ್ರದ 2D ಹಿಂದಿ ಆವೃತ್ತಿಯ ಶೋಗಳ ಆಕ್ಯುಪೆನ್ಸಿಯು ಬೆಳಿಗ್ಗೆ 18.63% ರಿಂದ ಮಧ್ಯಾಹ್ನಕ್ಕೆ 47.86% ಆಗಿ, ಸಂಜೆ 56.28% ನಷ್ಟು ತಲುಪಿದ್ದು, ಸಿನಿ ಪ್ರಿಯರ ಕುತೂಹಲಕ್ಕೆ ಸಾಕ್ಷಿಯಾಗಿದೆ.
ಅನುರಾಗ್ ಬಸು ನಿರ್ದೇಶನದ ಮೆಟ್ರೋ 'ಇನ್ ಡಿನೋ', 2007ರ ಸಿನಿಮಾ ಲೈಫ್ ಇನ್ ಎ' ಮೆಟ್ರೋ'ದ ಮುಂದುವರಿದ ಭಾಗವಾಗಿದೆ. ಈ ಚಿತ್ರದಲ್ಲಿ ಅನುಪಮ್ ಖೇರ್, ನೀನಾ ಗುಪ್ತಾ, ಪಂಕಜ್ ತ್ರಿಪಾಠಿ, ಕೊಂಕಣ ಸೇನ್ ಶರ್ಮಾ, ಅಲಿ ಫಜಲ್, ಫಾತಿಮಾ ಸನಾ ಶೇಖ್, ಆದಿತ್ಯ ರಾಯ್ ಕಪೂರ್ ಮತ್ತು ಸಾರಾ ಅಲಿ ಖಾನ್ ಅವರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾವು ಜುಲೈ 4ರಂದು ದೇಶಾದ್ಯಂತ ಬಿಡುಗಡೆಯಾಗಿದ್ದು ಹೆಚ್ಚಿನ ಪ್ರಚಾರವಿಲ್ಲದೆ ಇದ್ದರೂ ಜುರಾಸಿಕ್ ವರ್ಲ್ಡ್: ರಿಬರ್ತ್ ನಂತಹ ಹಾಲಿವುಡ್ ಚಿತ್ರಗಳ ಎದುರಿನಲ್ಲೂ ತನ್ನ ಪ್ರಭಾವವನ್ನು ಮೆರೆದಿದೆ. ಸಿನಿಮಾ ಬಿಡುಗಡೆಯ ಮೊದಲ ದಿನದ 3.5 ಕೋಟಿ ಕಲೆಕ್ಷನ್ ನಿಂದ ಹಿಡಿದು ಮೊದಲ ವಾರಾಂತ್ಯದ ರೂ 16.17 ಕೋಟಿ ಗಳಿಕೆಗೆ ಕಾರಣವಾಗಿದ್ದು ಚಿತ್ರತಂಡಕ್ಕೆ ಖುಷಿ ನೀಡಿದೆ.
ಮೆಟ್ರೋ ಇನ್ ಡಿನೋ’ ಚಿತ್ರವು ಪ್ರೇಮ, ನಿಷ್ಠೆ ಮತ್ತು ಆಧುನಿಕ ಸಂಬಂಧಗಳನ್ನು ಸ್ಪರ್ಶಿಸುವ ನಾಲ್ಕು ವಿಭಿನ್ನ ಕಥೆಗಳ ಸಿನಿಮಾವಾಗಿದೆ. ಗುಲ್ಷನ್ ಕುಮಾರ್ ಅವರ ಟಿ ಸಿರೀಸ್, ಅನುರಾಗ್ ಬಸು ಪ್ರೊಡಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ಅವರೊಂದಿಗೆ ಸಹಯೋಗದಲ್ಲಿ ಈ ಚಿತ್ರವನ್ನು ಪ್ರಸ್ತುತ ಪಡಿಸಿದ್ದಾರೆ. ಅನುರಾಗ್ ಬಸು ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಪ್ರಥಮ್ ಸಂಗೀತ ಸಂಯೋಜಿಸಿದ್ದು, ಭೂಷಣ್ ಕುಮಾರ್, ಕೃಷ್ಣ ಕುಮಾರ್, ಅನುರಾಗ್ ಬಸು ಮತ್ತು ತಾನಿ ಬಸು ನಿರ್ಮಾಪಕರಾಗಿದ್ದಾರೆ.